ಸಿರಾಜ್ ನೆಲಸಮಗೊಳಿಸಿದ ಹಮೀದ್ ನೀಡಿದ ಕ್ಯಾಚ್ ಕಷ್ಟಕರವಾಗೇನೂ ಇರಲಿಲ್ಲ: ಶೇನ್ ವಾರ್ನ್

ಅಸಲಿಗೆ ಸಿರಾಜ್ ಬಾಲು ತಮ್ಮತ್ತ ಬರಬಹುದೆಂಬ ನಿರೀಕ್ಷೆಯಲ್ಲಿರಲಿಲ್ಲ. ಹಾಗಾಗೇ ಅವರು ಕೊಂಚ ಲೇಟಾಗಿ ರಿಯಾಕ್ಟ್ ಮಾಡಿದರು. ಸಿರಾಜ್ ತಡಬಡಾಯಿಸಿ ಚೆಂಡನ್ನು ಹಿಡಿದರಾದರೂ ಕ್ಯಾಚ್ ಅವರು ಸಂಪೂರ್ಣಗೊಳಿಸುವ ಮೊದಲೇ ಚೆಂಡು ಅವರು ಹೊಟ್ಟೆಗೆ ತಾಕಿ ನೆಲಕ್ಕೆ ಉರುಳಿತು.

ಸಿರಾಜ್ ನೆಲಸಮಗೊಳಿಸಿದ ಹಮೀದ್ ನೀಡಿದ ಕ್ಯಾಚ್ ಕಷ್ಟಕರವಾಗೇನೂ ಇರಲಿಲ್ಲ: ಶೇನ್ ವಾರ್ನ್
ಕ್ಯಾಚ್​ ಡ್ರಾಪ್ ಮಾಡುತ್ತಿರುವ ಸಿರಾಜ್
TV9kannada Web Team

| Edited By: Arun Belly

Sep 07, 2021 | 2:28 AM

ಸ್ಕೈ ಸ್ಪೋರ್ಟ್ಸ್ ವೀಕ್ಷಕ ವಿವರಣೆಕಾರರ ಪ್ಯಾನೆಲ್​​ನಲ್ಲಿರುವ ಆಸ್ಟ್ರೇಲಿಯಾದ ಲೆಜೆಂಡರಿ ಸ್ಪಿನ್ನರ್ ಶೇನ್ ವಾರ್ನ್ ಅವರು ಓವಲ್ ಟೆಸ್ಟ್ನಲ್ಲಿ ಇಂಗ್ಲೆಂಡ್ ಆರಂಭ ಆಟಗಾರ ಹಸೀಬ್ ಹಮೀದ್ ನೀಡಿದ ಕ್ಯಾಚನ್ನು ಹಿಡಿಯಲು ವಿಫಲರಾದ ಮೊಹಮ್ಮದ್ ಸಿರಾಜ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಆಗಷ್ಟೇ ಅರ್ಧ ಶತಕ ಪೂರೈಸಿದ್ದ ಹಮೀದ್ ರವಿಂದ್ರ ಜಡೇಜಾ ಅವರ ಎಸೆತವೊಂದನ್ನು ಎತ್ತಿ ಬಾರಿಸುವ ಪ್ರಯತ್ನದಲ್ಲಿ ಬಾಲನ್ನು ಗಾಳಿಯಲ್ಲಿ ನೇರವಾಗಿ ಸಿರಾಜ್ ಫೀಲ್ಡ್ ಮಾಡುತ್ತಿದ್ದ ಮಿಡ್ ಆಫ್ ಕಡೆ ಬಾರಿಸಿದರು. ಅದರೆ ಸಿರಾಜ್ ಅದನ್ನು ನೆಲಸಮಗೊಳಿಸಿದರು.

ಅಸಲಿಗೆ ಸಿರಾಜ್ ಬಾಲು ತಮ್ಮತ್ತ ಬರಬಹುದೆಂಬ ನಿರೀಕ್ಷೆಯಲ್ಲಿರಲಿಲ್ಲ. ಹಾಗಾಗೇ ಅವರು ಕೊಂಚ ಲೇಟಾಗಿ ರಿಯಾಕ್ಟ್ ಮಾಡಿದರು. ಸಿರಾಜ್ ತಡಬಡಾಯಿಸಿ ಚೆಂಡನ್ನು ಹಿಡಿದರಾದರೂ ಕ್ಯಾಚ್ ಅವರು ಸಂಪೂರ್ಣಗೊಳಿಸುವ ಮೊದಲೇ ಚೆಂಡು ಅವರು ಹೊಟ್ಟೆಗೆ ತಾಕಿ ನೆಲಕ್ಕೆ ಉರುಳಿತು.

‘ಟೆಸ್ಟ್ ಪಂದ್ಯಗಳ ಲೆವೆಲ್ನಲ್ಲಿ ನಾವು ನೋಡುವ ಕ್ಯಾಚ್ಗಳ ಹಿನ್ನೆಲೆಯನ್ನು ಗಮನಿಸಿದ್ದೇಯಾದರೆ, ಸಿರಾಜ್ ಅವರೆಡೆ ಹಾರಿದ ಕ್ಯಾಚ್ ಕಷ್ಟಕರವಾಗೇನೂ ಇರಲಿಲ್ಲ. ಆದರೆ ಅದನ್ನು ಡ್ರಾಪ್ ಮಾಡಿದ ಮುಜುಗರ ತಪ್ಪಿಸಿಕೊಳ್ಳುವುದು ಸಿರಾಜ್ ಗೆ ಅದಕ್ಕಿಂತ ಕಷ್ಟವಾಗಿರತ್ತೇನೋ. ಅದು ಸರಳವಾದ ಕ್ಯಾಚ್ ಆಗಿತ್ತು, ಅದರೆ ಅವರು ವಿನಾಕಾರಣ ಗಾಬರಿ ಬಿದ್ದು ಅದನ್ನು ಬಿಟ್ಟರು,’ ಎಂದು ವಾರ್ನ್ ಹೇಳಿದರು.

ಸಿರಾಜ್ ಕ್ಯಾಚ್ ಡ್ರಾಪ್ ಮಾಡಿದಾಗ ಪಂದ್ಯ ಬಹಲ ಕುತೂಹಲಕಾರಿ ಹಂತದಲ್ಲಿತ್ತು. ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ನ 48 ನೇ ಓವರ್ ಆಗ ಜಾರಯಲ್ಲಿತ್ತು ಮತ್ತು ಬಾರತೀಯರು ಆಗಷ್ಟೇ ರೋರಿ ಬರ್ನ್ಸ್ ಅವರನ್ನು ಔಟ್ ಮಾಡಿದ್ದರು. ಬರ್ನ್ಸ್ ಸಹ ಅರ್ಧ ಶತಕ ದಾಖಲಿಸಿ ಔಟಾದರು. ಸಿರಾಜ್ ಕ್ಯಾಚ್ ಡ್ರಾಪ್ ಮಾಡಿದಾಗ ಜಡೇಜಾ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ಮುಖದಲ್ಲಿ ಬೇಸರ ಎದ್ದು ಕಾಣುತಿತ್ತು.

ಹೊಟ್ಟೆಗೆ ಪೆಟ್ಟು ತಿಂದ ಕಾರಣ ಸಿರಾಜ್ ಟೀಮ್ ಫಿಯೋ ಅವರಿಂದ ಚಿಕಿತ್ಸೆ ಪಡೆದರು. ಅದೃಷ್ಟವಶಾತ್ ಪೆಟ್ಟು ಗಂಭೀರ ಸ್ರರೂಪದ್ದೇನೂ ಆಗಿರಲಿಲ್ಲ. ಹಮೀದ್ಗೆ ಸಿರಾಜ್ ನೀಡಿದ ಜೀವದಾನ ದುಬಾರಿಯಾಗೇನೂ ಪರಿಣಮಿಸಲಿಲ್ಲ. ಸ್ವಲ್ಪ ಸಮಯದ ನಂತರ ಜಡೇಜಾ ಹಮೀದ್ ರನ್ನು ಕ್ಲೀನ್ ಬೌಲ್ಡ್ ಮಾಡಿದರು.

ಸ್ಕೈ ಸ್ಪೋರ್ಟ್ಸ್ ವೀಕ್ಷಕ ವಿವರಣೆಕಾರರ ಪ್ಯಾನೆಲ್ನಲ್ಲಿರುವ ಮತ್ತೊಬ್ಬ ಕಾಮೆಂಟೇಟರ್ ಇಯಾನ್ ವಾರ್ಡ್ ಅವರು, ‘ಫಿಸಿಯೋ ಅವರಿಂದ ಸಿರಾಜ್ ಏನು ಚಿಕಿತ್ಸೆ ಪಡೆದರೆಂದು ನನಗೆ ಗೊತ್ತಾಗಲಿಲ್ಲ. ಹಮೀದ್ ಆ ಹೊಡೆತ ಬಾರಿಸಲು ಪ್ರಯತ್ನಿದ್ದು ನನಗೆ ಆಶ್ಚರ್ಯ ತರಿಸಿದೆ. ಯಾಕೆಂದರೆ ಅವರು ಅಂಥ ಹೊಡೆತಗಳನ್ನು ಆಡುವುದಿಲ್ಲ. ಅದರಲ್ಲೂ ಜಡೇಜಾ ಬೌಲ್ ಮಾಡುವ ಗತಿ ಮತ್ತು ಟ್ರಾಜೆಕ್ಟರಿಯನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಅವರ ಎಸೆತಗಳನ್ನು ಸ್ಲಾಗ್ ಸ್ವೀಪ್ ಮಾಡುವುದು ಸಾಧ್ಯವಿಲ್ಲ. ಬ್ಯಾಟ್ಸ್ಮನ್ಗಳು ಚಾನ್ಸ್ ತೆಗೆದುಕೊಳ್ಳಬೇಕು, ಅಷ್ಟೇ. ಹಮೀದ್ ಗೆ ಸಿಕ್ಕಿದ್ದು ಉಡುಗೊರೆಯಲ್ಲದೆ ಬೇರೇನೂ ಅಲ್ಲ,’ ಎಂದು ಹೇಳಿದರು.

ಇದನ್ನೂ ಓದಿ:  Rohit Sharma: ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದ ರೋಹಿತ್ ಶರ್ಮಾ-ಉಮೇಶ್ ಯಾದವ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada