India vs England: ಭಾರತದ ದಾಖಲೆಯ ಗೆಲುವಿಗೆ ಇಂಗ್ಲೆಂಡ್ ನಾಯಕ ರೂಟ್ ನೀಡಿದ ಕಾರಣವೇನು ಕೇಳಿ

Team India: ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾದ ಗೆಲುವಿನ ಬಗ್ಗೆ ಮಾತನಾಡಿರುವ ಇಂಗ್ಲೆಂಡ್ ನಾಯಕ ಜೋ ರೂಟ್, ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲ್ಲಲು ವೇಗಿಗಳು ನೀಡಿದ ಪ್ರದರ್ಶನ ಮುಖ್ಯವಾಗಿತ್ತು ಎಂದು ಹೇಳಿದ್ದಾರೆ.

India vs England: ಭಾರತದ ದಾಖಲೆಯ ಗೆಲುವಿಗೆ ಇಂಗ್ಲೆಂಡ್ ನಾಯಕ ರೂಟ್ ನೀಡಿದ ಕಾರಣವೇನು ಕೇಳಿ
Joe Root
TV9kannada Web Team

| Edited By: Vinay Bhat

Sep 07, 2021 | 7:38 AM

ಲಂಡನ್​ನ ಕೆನ್ನಿಂಗ್ಟನ್ ಓವಲ್ (Oval)​ ಮೈದಾನದಲ್ಲಿ ಮುಕ್ತಾಯಗೊಂಡ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ (India vs England) ಅಮೋಘ ಗೆಲುವು ಕಂಡು ದಾಖಲೆ ಬರೆದಿದೆ. ಎರಡನೇ ಇನ್ನಿಂಗ್ಸ್​ನಲ್ಲಿ ಇಂಡಿಯನ್ ಬೌಲಿಂಗ್ ದಾಳಿಕೆ ತರಗೆಲೆಯಂತೆ ಉರುಳಿದ ಇಂಗ್ಲೆಂಡ್ ವಿಕೆಟ್​ಗಳು ಕನಿಷ್ಠ ಡ್ರಾ ಮಾಡುವಲ್ಲೂ ವಿಫಲರಾದರು. ಟೀಮ್ ಇಂಡಿಯಾ 157 ರನ್​ಗಳ ಭರ್ಜರಿ ಜಯದೊಂದಿಗೆ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಅಂಕಗಳ ಮುನ್ನಡೆ ಪಡೆದುಕೊಂಡಿದೆ. ಈ ಗೆಲುವಿನೊಂದಿಗೆ 50 ವರ್ಷಗಳ ಬಳಿಕ ಭಾರತ ತಂಡವು (Team India) ಓವಲ್​ ಮೈದಾನದಲ್ಲಿ ಗೆಲುವಿನ ರುಚಿ ನೋಡಿದೆ. ಈ ಮೈದಾನದಲ್ಲಿ ಕೊನೆಯ ಬಾರಿ ಭಾರತ ಗೆದ್ದಿದ್ದು 1971 ರಲ್ಲಿ.

ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾದ ಗೆಲುವಿನ ಬಗ್ಗೆ ಮಾತನಾಡಿರುವ ಇಂಗ್ಲೆಂಡ್ ನಾಯಕ ಜೋ ರೂಟ್, ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲ್ಲಲು ವೇಗಿಗಳು ನೀಡಿದ ಪ್ರದರ್ಶನ ಮುಖ್ಯವಾಗಿತ್ತು ಎಂದು ಹೇಳಿದ್ದಾರೆ. “ಭಾರತೀಯ ವೇಗಿಗಳು ರಿವರ್ಸ್ವಿಂಗ್ ಎಸೆತಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಿದ್ದು ಪಂದ್ಯದ ಗತಿಯನ್ನೇ ಬದಲಿಸಿಬಿಟ್ಟಿತು. ಈ ಮೂಲಕ ಭಾರತ ಇಂಗ್ಲೆಂಡ್ ತಂಡವನ್ನು ಐದನೇ ದಿನದಾಟದಲ್ಲಿ ಮೇಲುಗೈ ಸಾಧಿಸಿತು.”

“ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗದ್ದಕ್ಕೆ ಬಹಳ ನೋವಾಗಿದೆ. ನಾವು ಗೆಲ್ಲುವ ಅವಕಾಶವಿದೆ ಎಂದು ಭಾವಿಸಿದ್ದೆವು. ಆದರೆ ಇದೆ ಶ್ರೇಯಸ್ಸು ಭಾರತಕ್ಕೆ ಸಲ್ಲಬೇಕು. ಅವರು ಚೆಂಡನ್ನು ರಿವರ್ಸ್ ಮಾಡುವಲ್ಲಿ ಯಶಸ್ವಿಯಾದರು. ಅದು ಪಂದ್ಯಕ್ಕೆ ತಿರುವು ನೀಡಿತು. ಅದರಲ್ಲೂ ಜಸ್​ಪ್ರೀತ್ ಬುಮ್ರಾ ಬೌಲಿಂಗ್ ದಾಳಿ ತುಂಬಾನೆ ಪರಿಣಾಮಕಾರಿಯಾಗಿತ್ತು” ಎಂದು ಜೋ ರೂಟ್ ವಿವರಿಸಿದ್ದಾರೆ.

“ನಾವು ಮೊದಲ ಇನ್ನಿಂಗ್ಸ್‌ನಲ್ಲಿ ಎಡವಿದೆವು. ಆದಷ್ಟು ಹೆಚ್ಚಿನ ಲೀಡ್ ಪಡೆಯಬೇಕಾಗಿತ್ತು. ವಿಶ್ವ ದರ್ಜೆಯ ಆಟಗಾರರ ಮುಂದೆ ನೀವು ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಉತ್ತಮ ದಾರಿಯನ್ನು ಕಂಡುಕೊಳ್ಳಬೇಕು. ಆದರೆ ವಾಸ್ತವದ ಅರಿವಿರಬೇಕು” ಎಂಬುದು ರೂಟ್ ಮಾತು.

ಗೆಲುವಿಗೆ 368 ರನ್ನುಗಳ ಕಠಿನ ಗುರಿ ಪಡೆದಿದ್ದ ಇಂಗ್ಲೆಂಡ್‌, ಲಾರ್ಡ್ಸ್‌ ಟೆಸ್ಟ್‌ ರೀತಿಯಲ್ಲೇ ನಾಟಕೀಯ ಕುಸಿತ ಅನುಭವಿಸಿ 210 ರನ್​ಗೆ ಸರ್ವಪತನ ಕಂಡಿತು. ಬುಮ್ರಾ, ಜಡೇಜ, ಠಾಕೂರ್‌, ಉಮೇಶ್‌ ಯಾದವ್‌ ಸೇರಿಕೊಂಡು ಆಂಗ್ಲರ ಬ್ಯಾಟಿಂಗ್‌ ಸರದಿಯನ್ನು ಸೀಳಿದರು. ಜೋ ರೂಟ್‌ ಅವರ ಬಿಗ್‌ ವಿಕೆಟ್‌ ಕಿತ್ತ ಠಾಕೂರ್‌ ಹೀರೋ ಎನಿಸಿದರು.

ಸಂಕ್ಷಿಪ್ತ ಸ್ಕೋರ್:

ಭಾರತ ಮೊದಲ ಇನ್ನಿಂಗ್ಸ್: 191/10 (61.3) (ಶಾರ್ದೂಲ್ ಠಾಕೂರ್ 57, ವಿರಾಟ್ ಕೊಹ್ಲಿ 50, ಕ್ರಿಸ್ ವೋಕ್ಸ್ 55/4, ರಾಬಿನ್ಸನ್ 38/3)

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: 290/10 (84) (ಓಲಿ ಪೋಪ್ 81, ಕ್ರಿಸ್ ವೋಕ್ಸ್ 50, ಉಮೇಶ್ ಯಾದವ್ 76/3, ಜಸ್​ಪ್ರೀತ್ ಬುಮ್ರಾ 67/2)

ಭಾರತ ಎರಡನೇ ಇನ್ನಿಂಗ್ಸ್: 466/10 (148.2) (ರೋಹಿತ್ ಶರ್ಮಾ 127, ಶಾರ್ದೂಲ್ ಠಾಕೂರ್ 60, ಕ್ರಿಸ್ ವೋಕ್ಸ್ 83/3, ರಾಬಿನ್ಸನ್ 105/2).

ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್: 210/10 (92.2) (ಹಸೀಬ್ ಹಮೀದ್ 63, ರಾರಿ ಬರ್ನ್ಸ್ 50, ಉಮೇಶ್ ಯಾದವ್ 60/3, ಜಸ್​ಪ್ರೀತ್ ಬುಮ್ರಾ 27/2)

ಅಂತಿಮ ಟೆಸ್ಟ್​ ಗೆದ್ದು 19 ವರ್ಷಗಳ ಹಿಂದಿನ ಇತಿಹಾಸವನ್ನು ಮರುಕಳಿಸುವಂತೆ ಮಾಡುತ್ತಾ ಆಂಗ್ಲರ ಪಡೆ?

ಸಿರಾಜ್ ನೆಲಸಮಗೊಳಿಸಿದ ಹಮೀದ್ ನೀಡಿದ ಕ್ಯಾಚ್ ಕಷ್ಟಕರವಾಗೇನೂ ಇರಲಿಲ್ಲ: ಶೇನ್ ವಾರ್ನ್

(India vs England Team India seamers used the reverse swing to great effect on Day 5 Joe Root)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada