ಕೊನೆಯ ಟೆಸ್ಟ್ನಲ್ಲಿ ಜಿಮ್ಮಿ ಆ್ಯಂಡರ್ಸನ್ ಆಡುತ್ತಾರೋ ಇಲ್ಲವೋ ಅನ್ನೋದೇ ಚರ್ಚೆಯ ವಿಷಯವಾಗಿದೆ
ಹಾಗೆ ನೋಡಿದರೆ, ಜಿಮ್ಮಿಗೆ ಓವಲ್ ಟೆಸ್ಟ್ ಪಂದ್ಯಕ್ಕೆ ರೆಸ್ಟ್ ಸಿಗಬೇಕಿತ್ತು. ಆದರೆ, ಭಾರತ ವಿರುದ್ಧ ನಡೆಯುವ ಸರಣಿಗೆ ಆಂಗ್ಲರು ದಿ ಆ್ಯಶಸ್ನಷ್ಟೇ ಮಹತ್ವ ನೀಡುತ್ತಿರುವುದರಿಂದ ಈಸಿಬಿ ಚಾನ್ಸ್ ತೆಗೆದುಕೊಳ್ಳುವುದು ಬೇಡ ಅಂತ ನಿರ್ಧರಿಸಿ ಅವರನ್ನು ಆಡಿಸಿತು.

ಮೂರನೇ ಟೆಸ್ಟ್ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿ ಇನ್ನಿಂಗ್ಸ್ ಅಂತರದಿಂದ ಪಂದ್ಯ ಸೋತಿದ್ದ ಟೀಮ್ ಇಂಡಿಯ ಲಂಡನ್ ದಿ ಓವಲ್ ಮೈದಾನದಲ್ಲಿ ಸೋಮವಾರ ಕೊನೆಗೊಂಡ ನಾಲ್ಕನೇ ಪಂದ್ಯದಲ್ಲಿ ಅಸಾಧಾರಣ ರೀತಿಯ ಕಮ್ ಬ್ಯಾಕ್ ಸರಣಿಯಲ್ಲಿ ಎರಡನೇ ಬಾರಿಗೆ ಮೇಲುಗೈ ಸಾಧಿಸಿದೆ. ಸರಣಿಯ ಐದನೇ ಮತ್ತು ಕೊನೆಯ ಟೆಸ್ಟ್ ಸೆಪ್ಟೆಂಬರ್ 10 ರಿಂದ 14ರ ವರಗೆ ಮ್ಯಾಂಚೆಸ್ಟರ್ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯಲಿದೆ.
ಕ್ರಿಕೆಟ್ ತಜ್ಞರ ಪ್ರಕಾರ ಸರಣಿಯ ಕೊನೆಯ ಟೆಸ್ಟ್ನಲ್ಲಿ ಟೀಮ್ ಇಂಡಿಯ ನಾಯಕ ಮತ್ತು ಇಂಗ್ಲೆಂಡ್ ಅಗ್ರಮಾನ್ಯ ಮತ್ತು ದಣಿವರಿಯದ ವೇಗದ ಬೌಲರ್ ಜಿಮ್ಮಿ ಆ್ಯಡರ್ಸನ್ ನಡುವೆ ಶ್ರೇಷ್ಠತೆಗಾಗಿ ಮತ್ತೊಂದು ಕಾಳಗ ನಡೆಯುವ ಲಕ್ಷಣಗಳಿಲ್ಲ. ವೇಗದ ಬೌಲರ್ಗಳಿಗೆ ಸೂಕ್ತ ವಿಶ್ರಾಂತಿ ಸಿಗುವಂತಾಗಲು ಇಂಗ್ಲಿಷ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ಈಸಿಬಿ) ರೋಟೇಶನ್ ನಿಯಮ ಜಾರಿಯಲ್ಲಿಟ್ಟಿದೆ.
ಹಾಗೆ ನೋಡಿದರೆ, ಜಿಮ್ಮಿಗೆ ಓವಲ್ ಟೆಸ್ಟ್ ಪಂದ್ಯಕ್ಕೆ ರೆಸ್ಟ್ ಸಿಗಬೇಕಿತ್ತು. ಆದರೆ, ಭಾರತ ವಿರುದ್ಧ ನಡೆಯುವ ಸರಣಿಗೆ ಆಂಗ್ಲರು ದಿ ಆ್ಯಶಸ್ನಷ್ಟೇ ಮಹತ್ವ ನೀಡುತ್ತಿರುವುದರಿಂದ ಈಸಿಬಿ ಚಾನ್ಸ್ ತೆಗೆದುಕೊಳ್ಳುವುದು ಬೇಡ ಅಂತ ನಿರ್ಧರಿಸಿ ಅವರನ್ನು ಆಡಿಸಿತು.
ಕೊನೆಯ ಮೂರು ಟೆಸ್ಟ್ಗಳ ನಡುವೆ ಹೆಚ್ಚು ದಿನಗಳ ಅಂತರ ಇಲ್ಲದಿರುವ ಕಾರಣ ಎರಡೂ ತಂಡದ ವೇಗದ ಬೌಲರ್ಗಳು ದಣಿಯುತ್ತಿದ್ದಾರೆ. ಮೊಹಮ್ಮದ್ ಶಮಿಯನ್ನು ಇದೇ ಕಾರಣಕ್ಕೆ 4ನೇ ಟೆಸ್ಟ್ ಗೆ ರೆಸ್ಟ್ ನೀಡಲಾಯಿತು ಎಂದು ಹೇಳಲಾಗುತ್ತಿದೆ.
ಇಂಗ್ಲೆಂಡ್ ಹೆಡ್ ಕೋಚ್ ಕ್ರಿಸ್ ಸಿಲ್ವರ್ವುಡ್ ವೇಗದ ಬೌಲರ್ಗಳ ಫಿಟ್ನೆಸ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದ ವಿರುದ್ಧ ಸರಣಿಯ ನಂತರ ಇಂಗ್ಲೆಂಡ್ ಆ್ಯಶಸ್ ಸರಣಿ ಆಡಲಿದೆ. ಜಿಮ್ಮಿ ಮತ್ತು ಅವರ ಜೊತೆ ವೇಗದ ಬೌಲರ್ ಒಲ್ಲೀ ರಾಬಿನ್ಸನ್ ಮೇಲೆ ಹೆಚ್ಚಿನ ವರ್ಕ್ಲೋಡ್ ಬೀಳುತ್ತಿದೆ ಎಂದು ಅವರು ಹೇಳಿದ್ದಾರೆ.
ಎರಡೂ ತಂಡಗಳ ಆಟಗಾರರ ಪೈಕಿ ಅತಿ ಹಿರಿಯರಾಗಿರುವ ಜಿಮ್ಮಿ ಸರಣಿಯಲ್ಲಿ ಇಂಗ್ಲೆಂಡ್ ಪರ ಅತಿ ಹೆಚ್ಚು ಓವರ್ಗಳನ್ನು ಎಸೆದಿರುವ ಬೌಲರ್ಗಳಲ್ಲಿ ಎರಡನೇಯವರಾಗಿದ್ದಾರೆ. ಕೇವಲ ರಾಬಿನ್ಸನ್ ಮಾತ್ರ ಅವರಿಗಿಂತ ಎರಡೂವರೆ ಓವರ್ಗಳನ್ನು ಮಾತ್ರ ಹೆಚ್ಚು ಬೌಲ್ ಮಾಡಿದ್ದಾರೆ.
ಸರಣಿ ಆರಂಭಕ್ಕೆ ಮೊದಲು ಎಲ್ಲ 5 ಟೆಸ್ಟ್ ಗಳಲ್ಲಿ ಆಡುವುದಾಗಿ ಜಿಮ್ಮಿ ಹೇಳಿದ್ದರು ಲಾರ್ಡ್ಸ್ನಲ್ಲಿ ಎರಡನೇ ಪಂದ್ಯಕ್ಕೆ ಮೊದಲು ಅವರು ಗಾಯಗೊಂಡಿದ್ದರೂ ಆಡಿ ಉತ್ತಮ ಪ್ರದರ್ಶನ ಮೆರೆದರು. ಹೆಡಿಂಗ್ಲೀಯಲ್ಲಿ ನಡೆದ ಮೂರನೇ ಟೆಸ್ಟ್ ನಲ್ಲಂತೂ ಅವರು ಉತ್ಕೃಷ್ಟ ಪ್ರದರ್ಶನ ನೀಡಿದರು.
ಆದರೆ, ದಿ ಆ್ಯಶಸ್ ಸರಣಿಯ ಹಿನ್ನೆಲೆಯಲ್ಲಿ ಮತ್ತು ಈ ಸರಣಿಗೂ ತಂಡದ ಮತ್ತೊಬ್ಬ ಚಾಂಪಿಯನ್ ವೇಗದ ಬೌಲರ್ ಜೊಫ್ರಾ ಆರ್ಚರ್ ಅವರ ಲಭ್ಯತೆ ಅನುಮಾನಾಸ್ಪದವಾಗಿ ಕಾಣುತ್ತಿರುವುದರಿಂದ ಜಿಮ್ಮಿ ಮೇಲಿನ ವರ್ಕ್ಲೋಡ್ ಕಡಿಮೆ ಮಾಡಲು ಅವರನ್ನು ಭಾರತ ವಿರುದ್ಧ ನಡೆಯುವ ಕೊನೆ ಟೆಸ್ಟ್ಗೆ ವಿಶ್ರಾಂತಿ ನೀಡುವ ಸಾಧ್ಯತೆ ದಟ್ಟವಾಗಿದೆ.
ಆದರೆ, ಸರಣಿಯಲ್ಲಿ ಅತಿಥೇಯರು ಹಿನ್ನಡೆ ಸಾಧಿಸಿರುವುದರಿಂದ ಖುದ್ದು ಜಿಮ್ಮಿಯೇ ಆಡುವ ಉತ್ಸುಕತೆ ತೋರಿದರೆ ಅಚ್ಚರಿಯಿಲ್ಲ. ಗಮನಿಸಬೇಕಿರುವ ಮತ್ತೊಂದು ಸಂಗತಿಯೆಂದರೆ, ಓಲ್ಡ್ ಟ್ರಾಫರ್ಡ್ ಜಿಮ್ಮಿಯ ಹೋಮ್ ಗ್ರೌಂಡ್ ಅಗಿದೆ.
ಸೆಂಟಿಮೆಂಟ್ ಬದಿಗಿಟ್ಟು ಜಿಮ್ಮಿ ಆಡದಿರುವ ನಿರ್ಧಾರ ತಗೆದುಕೊಂಡರೆ ಅವರ ಯೋಗ್ಯ ರಿಪ್ಲೇಸ್ಮೆಂಟ್ ಹುಡುಕುವುದು ಇಂಗ್ಲೆಂಡ್ಗೆ ಕಷ್ಟವಾಗಲಿದೆ. ಸ್ಯಾಮ್ ಕರನ್ ಫಾರ್ಮ್ನಲ್ಲಿಲ್ಲ. ಹಾಗಾಗಿ, ಮಾರ್ಕ್ ವುಡ್ ಅವರನ್ನೇ ವಾಪಸ್ಸು ತರಬೇಕಾಗುತ್ತದೆ.
ಇದನ್ನೂ ಓದಿ: ಯುವ ಆಟಗಾರರ ಹುಮ್ಮಸ್ಸು ಟೀಮ್ ಇಂಡಿಯಾಗೆ ಓವರ್ಸೀಸ್ ಟೆಸ್ಟ್ಗಳನ್ನು ಗೆಲ್ಲಲು ನೆರವಾಗುತ್ತಿದೆ: ಇಂಜಮಾಮ್ ಉಲ್ ಹಕ್
