ಭಾರತ-ಇಂಗ್ಲೆಂಡ್ ಟೆಸ್ಟ್: ಬೆಟ್ಟಿಂಗ್​ನಲ್ಲಿ‌ ತೊಡಗಿದ್ದ ಇಬ್ಬರ ಬಂಧನ

India vs England: ಆರ್. ಆರ್. ನಗರ ಮತ್ತು ವೈಯಾಲಿಕಾವಲ್​ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಪಂದ್ಯದ ವೇಳೆ ಬೆಟ್ಟಿಂಗ್ ಆಡುತ್ತಿದ್ದಾರೆಂಬ ಖಚಿತ ಮಾಹಿತಿ ಪಡೆದು ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಭಾರತ-ಇಂಗ್ಲೆಂಡ್ ಟೆಸ್ಟ್: ಬೆಟ್ಟಿಂಗ್​ನಲ್ಲಿ‌ ತೊಡಗಿದ್ದ ಇಬ್ಬರ ಬಂಧನ
ಸಾಂದರ್ಭಿಕ ಚಿತ್ರ

ಬೆಂಗಳೂರು (ಸೆ. 07): ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಪಡೆ 157 ರನ್​ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಅಂತರದ ಮುನ್ನಡೆ ಪಡೆದುಕೊಂಡಿದೆ.

4ನೇ ಟೆಸ್ಟ್​ನ ಐದನೇ ದಿನದಾಟ ಸಾಕಷ್ಟು ರೋಚಕತೆ ಸೃಷ್ಟಿಸಿತು. ಇಂಗ್ಲೆಂಡ್ ಗೆಲುವಿಗೆ 291 ರನ್​ಗಳ ಅವಶ್ಯಕತೆಯಿತ್ತು. ಟೀಮ್ ಇಂಡಿಯಾ ಗೆಲುವಿಗೆ ಆಂಗ್ಲರ 10 ವಿಕೆಟ್​ಗಳು ಬೇಕಾಗಿದ್ದವು. ಹೀಗಾಗಿ ಗೆಲುವು ಯಾರಿಗೆ ಇರಬಹುದು ಎಂಬುದು ಕೋಟ್ಯಾಂತರ ಅಭಿಮಾನಿಗಳು ಕಾದುಕುಳಿತಿದ್ದರು. ಇದರ ನಡುವೆ ಇತ್ತ ಬೆಟ್ಟಿಂಗ್ ದಂಧೆ ಕೂಡ ಭರ್ಜರಿ ಆಗಿ ನಡೆಯುತ್ತಿತ್ತು.

ಇದನ್ನರಿತ ಸಿಸಿಬಿ‌ ಪೊಲೀಸರು ಇಬ್ಬರು ಆರೋಪಿಗಳು ಅರೆಸ್ಟ್ ಮಾಡಿದ್ದಾರೆ. ನಗರದ ಆರ್. ಆರ್. ನಗರ ಮತ್ತು ವೈಯಾಲಿಕಾವಲ್​ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಪಂದ್ಯದ ವೇಳೆ ಬೆಟ್ಟಿಂಗ್ ಆಡುತ್ತಿದ್ದಾರೆಂಬ ಖಚಿತ ಮಾಹಿತಿ ಪಡೆದು ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 6.5 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಕಲ್ಪತರು ನಾಡಿನಲ್ಲಿ ಮರ ಕಡಿಯುವ ಶಬ್ದ ಆಲಿಸಿಕೊಂಡು ಹೋಗಿ ಶ್ರೀ ಗಂಧ ಕಳ್ಳರ ಮೇಲೆ ಫೈರಿಂಗ್, ತಮಿಳುನಾಡಿನ ಮೂವರು ಅರೆಸ್ಟ್

ಸರ್ಕಾರದಿಂದ ಸಂಬಳ ತಗೊಂತಿರ ಸ್ವಲ್ಪನಾದ್ರೂ ಮಾನ ಮರ್ಯಾದೆ ಬೇಡ್ವಾ -ಅಧಿಕಾರಿಗಳಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ತರಾಟೆ

(India vs England Two arrested for betting in Bengaluru Rs 6 lakh seized)

Click on your DTH Provider to Add TV9 Kannada