AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರದಿಂದ ಸಂಬಳ ತಗೊಂತಿರ ಸ್ವಲ್ಪನಾದ್ರೂ ಮಾನ ಮರ್ಯಾದೆ ಬೇಡ್ವಾ -ಅಧಿಕಾರಿಗಳಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ತರಾಟೆ

‘ನೀವು ಇರುವ ದಾಖಲೆಗಳನ್ನು ಕಳೆದುಕೊಂಡಿದ್ದೀರಿ’. ಜನರು ಕೇಳಿದರೆ ಸುಲಿಗೆ ಮಾಡುತ್ತೀರಾ ಎಂದು ಸರ್ವೆ ಇಲಾಖೆ ಸೂಪರ್‌ವೈಸರ್ ಸುರೇಶ್‌ಗೆ ಶ್ರೀಕಂಠಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೂ ಇದೇ ವೇಳೆ ಕರೆ ಮಾಡಿ ಹಿರಿಯ ಅಧಿಕಾರಿಗಳ ವಿರುದ್ಧವೂ ಕಿಡಿ ಕಾರಿದ್ದಾರೆ.

ಸರ್ಕಾರದಿಂದ ಸಂಬಳ ತಗೊಂತಿರ ಸ್ವಲ್ಪನಾದ್ರೂ ಮಾನ ಮರ್ಯಾದೆ ಬೇಡ್ವಾ -ಅಧಿಕಾರಿಗಳಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ತರಾಟೆ
ಶಾಸಕ ರವೀಂದ್ರ ಶ್ರೀಕಂಠಯ್ಯ
TV9 Web
| Edited By: |

Updated on:Sep 07, 2021 | 9:42 AM

Share

ಮಂಡ್ಯ: ‘ಸರ್ಕಾರದಿಂದ ಸಂಬಳವನ್ನು ತೆಗೆದುಕೊಳ್ಳುತ್ತಿದ್ದೀರಿ’ ‘ನಿಮಗೆ ಸ್ವಲ್ಪನಾದ್ರೂ ಮಾನ ಮರ್ಯಾದೆ ಬೇಡ್ವಾ’ ಎಂದು ಅಧಿಕಾರಿಗಳಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕ ರವೀಂದ್ರ ಶ್ರೀಕಂಠಯ್ಯ ಶ್ರೀರಂಗಪಟ್ಟಣ ತಾಲೂಕು ಕಚೇರಿಗೆ ಭೇಟಿ ನೀಡಿದ್ದ ವೇಳೆ ಸರ್ವೆ ಇಲಾಖೆ ಸೂಪರ್ ವೈಸರ್ ಸುರೇಶ್ಗೆ ಪ್ರಶ್ನೆ ಕೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ.

‘ನೀವು ಇರುವ ದಾಖಲೆಗಳನ್ನು ಕಳೆದುಕೊಂಡಿದ್ದೀರಿ’. ಜನರು ಕೇಳಿದರೆ ಸುಲಿಗೆ ಮಾಡುತ್ತೀರಾ ಎಂದು ಸರ್ವೆ ಇಲಾಖೆ ಸೂಪರ್‌ವೈಸರ್ ಸುರೇಶ್‌ಗೆ ಶ್ರೀಕಂಠಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೂ ಇದೇ ವೇಳೆ ಕರೆ ಮಾಡಿ ಹಿರಿಯ ಅಧಿಕಾರಿಗಳ ವಿರುದ್ಧವೂ ಕಿಡಿ ಕಾರಿದ್ದಾರೆ. ಹಿರಿಯ ಅಧಿಕಾರಿಗಳಾಗಿ ನೀವು ಏನು ಮಾಡುತ್ತಿದ್ದೀರಿ? ನಿಮ್ಮ ಸಿಬ್ಬಂದಿಯನ್ನ ದರೋಡೆ ಮಾಡಲು ಜನರ ಮೇಲೆ ಬಿಟ್ಟಿದ್ದೀರಾ? ನೀವು ಕೇಂದ್ರ ಕಚೇರಿಯಲ್ಲಿ ಕುಳಿತು ಏನು ಮಾಡುತ್ತಿದ್ದೀರಿ. ತಾಲೂಕು ಕಚೇರಿಗೆ ಒಮ್ಮೆಯಾದ್ರೂ ಭೇಟಿ ನೀಡಿದ್ದೀರಾ? ನೀವು ಭೇಟಿ ನೀಡಿ ಪರಿಶೀಲನೆ ನಡೆಸಿದ್ರೆ ಹೀಗೆ ಆಗುತ್ತಿತ್ತಾ ಎಂದು ಹಿರಿಯ ಅಧಿಕಾರಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇನ್ನು ಇದೇ ವೇಳೆ ಶೌಚಾಲಯ ವಿಷಯವಾಗಿ ಶಾಸಕ ರವೀಂದ್ರ ಶ್ರೀಕಂಠಯ್ಯ ಗರಂ ಆಗಿದ್ದಾರೆ. ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಮಾಡಿರೋದು. ಅದಕ್ಕೆ ಬೀಗ ಹಾಕಿದ್ರೆ ಏನು ಅರ್ಥವೆಂದು ಹಿರಿಯ ಅಧಿಕಾರಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರಶ್ನೆ ಮಾಡಿದ್ದಾರೆ. ಆಗ ಅಧಿಕಾರಿಗಳು ಶೌಚಾಲಯ ಬೀಗ ಓಪನ್ ಮಾಡಿಸುತ್ತೇವೆ ಎಂದರು. ಅದಕ್ಕೆ ಮತ್ತೆ ಗರಂ ಆದ ಶಾಸಕರು, ಓಪನ್ ಮಾಡ್ಸೋದು ಅಲ್ಲ ಸ್ವಚ್ಚವಾಗಿಟ್ಟುಕೊಳ್ಳಿ. ಈ ರೀತಿ ಆಗ ಬಾರ್ದು ಎಂದು ಸೂಚಿಸಿದರು.

ಇದನ್ನೂ ಓದಿ: ಕಾಲ್ಬೆರಳುಗಳಿಂದ ಬರೆಯಲು ಕಲಿತಳು ಬಾಲಕಿ; ಶಿಕ್ಷಕಿಯಾಗುವ ಕನಸು ಹೊತ್ತು ಎಲ್ಲರಿಗೂ ಮಾದರಿಯಾದಳು ತನು ಕುಮಾರಿ

Published On - 9:41 am, Tue, 7 September 21