2022ರ ದುಲೀಪ್ ಟ್ರೋಫಿಯ ಫೈನಲ್ (Duleep Trophy 2022 Final) ಪಂದ್ಯದಲ್ಲಿ ದಕ್ಷಿಣ ವಲಯದ (South Zone) ವಿರುದ್ಧ ಭರ್ಜರಿ ಜಯ ಸಾಧಿಸಿ ಪಶ್ಚಿಮ ವಲಯ (West Zone) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೊಯಮತ್ತೂರಿನ ಎಸ್ಎನ್ಆರ್ ಕಾಲೇಜು ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಪಶ್ಚಿಮ ವಲಯದ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಪಶ್ಚಿಮ ವಲಯದ ಪರ ಮೊದಲ ಇನಿಂಗ್ಸ್ನಲ್ಲಿ ಹೆಟ್ ಪಟೇಲ್ 98 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ವೆಸ್ಟ್ ಝೋನ್ (ಪಶ್ಚಿಮ ವಲಯ) 270 ರನ್ ಕಲೆಹಾಕಿತು. ಈ ಗುರಿಯೊಂದಿಗೆ ಮೊದಲ ಇನಿಂಗ್ಸ್ ಆರಂಭಿಸಿದ ದಕ್ಷಿಣ ವಲಯದ ಪರ ಬಾಬಾ ಇಂದ್ರಜಿತ್ (118) ಭರ್ಜರಿ ಶತಕ ಸಿಡಿಸಿದರು. ಪರಿಣಾಮ ಮೊದಲ ಇನಿಂಗ್ಸ್ನಲ್ಲಿ ದಕ್ಷಿಣ ವಲಯ 327 ರನ್ ಕಲೆಹಾಕಿತು.
57 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಪಶ್ಚಿಮ ವಲಯ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (265) ದ್ವಿಶತಕ ಸಿಡಿಸಿ ಮಿಂಚಿದರೆ, ಶ್ರೇಯಸ್ ಅಯ್ಯರ್ 71 ರನ್ ಬಾರಿಸಿದರು. ಇನ್ನು ಸರ್ಫರಾಜ್ ಖಾನ್ (127) ಬಿರುಸಿನ ಶತಕ ಸಿಡಿಸುವ ಮೂಲಕ 2ನೇ ಇನಿಂಗ್ಸ್ನಲ್ಲಿ ಬೃಹತ್ ಮೊತ್ತ ಪೇರಿಸಲು ನೆರವಾದರು. ಅದರಂತೆ 4 ವಿಕೆಟ್ ನಷ್ಟಕ್ಕೆ 585 ರನ್ಗಳಿಸಿ ಪಶ್ಚಿಮ ವಲಯ ಡಿಕ್ಲೇರ್ ಘೋಷಿಸಿತು.
ಕೊನೆಯ ಇನಿಂಗ್ಸ್ನಲ್ಲಿ ಬೃಹತ್ ಟಾರ್ಗೆಟ್ ಪಡೆದ ದಕ್ಷಿಣ ವಲಯದ ಪರ ಆರಂಭಿಕ ಆಟಗಾರ ರೋಹನ್ (93) ಉತ್ತಮ ಇನಿಂಗ್ಸ್ ಆಡಿದರೂ, ಉಳಿದ ಬ್ಯಾಟ್ಸ್ಮನ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 234 ರನ್ಗಳಿಗೆ ಸೌತ್ ಝೋನ್ (ದಕ್ಷಿಣ ವಲಯ) ಆಲೌಟ್ ಆಯಿತು. ಇದರೊಂದಿಗೆ 294 ರನ್ಗಳ ಭರ್ಜರಿ ಜಯ ಸಾಧಿಸಿ ಪಶ್ಚಿಮ ವಲಯ ಚಾಂಪಿಯನ್ ಪಟ್ಟ ಅಲಂಕರಿಸಿತು.
ಫೈನಲ್ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಬಾರಿಸಿದ ಯಶಸ್ವಿ ಜೈಸ್ವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಜಯದೇವ್ ಉನದ್ಕಟ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
That Winning Feeling! ? ?
West Zone beat South Zone by 294 runs and clinch the #DuleepTrophy title. ? ? #Final | #WZvSZ | @mastercardindia
Scorecard ▶️ https://t.co/NAjd4WfQDJ pic.twitter.com/UhZTUhYfSp
— BCCI Domestic (@BCCIdomestic) September 25, 2022
ದಕ್ಷಿಣ ವಲಯ ಪ್ಲೇಯಿಂಗ್ ಇಲೆವೆನ್: ರೋಹನ್ ಕುನ್ನುಮ್ಮಳ್ , ಮಯಾಂಕ್ ಅಗರ್ವಾಲ್ , ಬಾಬಾ ಇಂದ್ರಜಿತ್ , ಹನುಮ ವಿಹಾರಿ (ನಾಯಕ) , ಮನೀಶ್ ಪಾಂಡೆ , ರಿಕಿ ಭುಯಿ ( ವಿಕೆಟ್ ಕೀಪರ್ ) , ಕೃಷ್ಣಪ್ಪ ಗೌತಮ್ , ಸಾಯಿ ಕಿಶೋರ್ , ಬೆಸಿಲ್ ಥಂಪಿ , ತೆಲುಕುಪಲ್ಲಿ ರವಿತೇಜ , ಚೀಪುರಪಲ್ಲಿ ಸ್ಟೀಫನ್.
ಪಶ್ಚಿಮ ವಲಯ ಪ್ಲೇಯಿಂಗ್ ಇಲೆವೆನ್: ಅಜಿಂಕ್ಯ ರಹಾನೆ (ನಾಯಕ) , ಶ್ರೇಯಸ್ ಅಯ್ಯರ್ , ಸರ್ಫರಾಜ್ ಖಾನ್ , ಅತಿತ್ ಶೇತ್ , ಶಮ್ಸ್ ಮುಲಾನಿ , ಹೆಟ್ ಪಟೇಲ್ ( ವಿಕೆಟ್ ಕೀಪರ್ ) , ತನುಷ್ ಕೋಟ್ಯಾನ್ , ಜಯದೇವ್ ಉನದ್ಕಟ್ , ಚಿಂತನ್ ಗಜಾ
Published On - 1:32 pm, Sun, 25 September 22