Duleep Trophy 2023: ಉತ್ತರ ವಲಯ ತಂಡಕ್ಕೆ 511 ರನ್ಗಳ ಆಮೋಘ ಜಯ
Duleep Trophy 2023: ಈ ಹಂತದಲ್ಲಿ ಫಾಲೋಆನ್ ಹೇರದೆ ಮತ್ತೆ 2ನೇ ಇನಿಂಗ್ಸ್ ಆರಂಭಿಸಿದ ಉತ್ತರ ವಲಯವು 6 ವಿಕೆಟ್ ನಷ್ಟಕ್ಕೆ 259 ರನ್ಗಳಿಸಿ ಡಿಕ್ಲೇರ್ ಘೋಷಿಸಿತು.
Duleep Trophy 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ದುಲೀಪ್ ಟ್ರೋಫಿಯ (Duleep Trophy 2023) 2ನೇ ಕ್ವಾರ್ಟರ್ ಫೈನಲ್ನಲ್ಲಿ ಉತ್ತರ ವಲಯ ತಂಡವು (North Zone) ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಈಶಾನ್ಯ ವಲಯ ತಂಡವು (North East Zone) ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಪ್ರಥಮ ಇನಿಂಗ್ಸ್ನ ಆರಂಭಿಸಿದ ಉತ್ತರ ವಲಯ ಪರ ಆರಂಭಿಕ ಆಟಗಾರ ಧ್ರುವ ಶೋರೆ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಕಲಾತ್ಮಕ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಧ್ರುವ, ಈಶಾನ್ಯ ವಲಯದ ಬೌಲರ್ಗಳ ಎಲ್ಲಾ ತಂತ್ರಗಳಿಗೂ ಮರುತ್ತರವಾಗಿ ಕ್ರೀಸ್ ಕಚ್ಚಿ ನಿಂತರು. ಅಲ್ಲದೆ 211 ಎಸೆತಗಳಲ್ಲಿ 22 ಫೋರ್ನೊಂದಿಗೆ 135 ರನ್ ಬಾರಿಸಿ ಕಿಶನ್ ಸಿಂಘಾಗೆ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ದಿಢೀರ್ ಕುಸಿತಕ್ಕೊಳಗಾದ ಉತ್ತರ ವಲಯ ತಂಡಕ್ಕೆ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಶಾಂತ್ ಸಿಂಧು ಆಸರೆಯಾದರು. ಸ್ಪೋಟಕ ಇನಿಂಗ್ಸ್ಗೆ ಒತ್ತು ನೀಡಿದ ನಿಶಾಂತ್ ಈಶಾನ್ಯ ಬೌಲರ್ಗಳ ವಿರುದ್ಧ ಸೆಟೆದು ನಿಂತರು. ಪರಿಣಾಮ 245 ಎಸೆತಗಳಲ್ಲಿ 18 ಫೋರ್ ಹಾಗೂ 3 ಭರ್ಜರಿ ಸಿಕ್ಸ್ನೊಂದಿಗೆ ನಿಶಾಂತ್ ಸಿಂಧು 150 ರನ್ ಸಿಡಿಸಿದರು. ನಿಶಾಂತ್ ನಿರ್ಗಮನದ ಬೆನ್ನಲ್ಲೇ ಅಚ್ಚರಿಯ ಇನಿಂಗ್ಸ್ ಆಡಿ ಹರ್ಷೀತ್ ರಾಣಾ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.
9ನೇ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರಾಣಾ 9 ಭರ್ಜರಿ ಸಿಕ್ಸ್ ಹಾಗೂ 12 ಫೋರ್ನೊಂದಿಗೆ ಕೇವಲ 86 ಎಸೆತಗಳಲ್ಲಿ ಅಜೇಯ 122 ರನ್ ಚಚ್ಚಿದರು. ಈ ಮೂಲಕ 8 ವಿಕೆಟ್ ನಷ್ಟಕ್ಕೆ 540 ರನ್ಗಳಿಸಿದ ಉತ್ತರ ವಲಯ ತಂಡ ಮೊದಲ ಇನಿಂಗ್ಸ್ನಲ್ಲಿ ಡಿಕ್ಲೇರ್ ಘೋಷಿಸಿತು.
ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಈಶಾನ್ಯ ವಲಯವು ಸಿದ್ಧಾರ್ಥ್ ಕೌಲ್ (3 ವಿಕೆಟ್) ಹಾಗೂ ಪುಲ್ಕಿತ್ ನಾರಂಗ್ (3 ವಿಕೆಟ್) ದಾಳಿಗೆ ತತ್ತರಿಸಿತು. ಪರಿಣಾಮ ಕೇವಲ 134 ರನ್ಗಳಿಗೆ ಆಲೌಟ್ ಆಯಿತು. ಈ ಹಂತದಲ್ಲಿ ಫಾಲೋಆನ್ ಹೇರದೆ ಮತ್ತೆ 2ನೇ ಇನಿಂಗ್ಸ್ ಆರಂಭಿಸಿದ ಉತ್ತರ ವಲಯವು 6 ವಿಕೆಟ್ ನಷ್ಟಕ್ಕೆ 259 ರನ್ಗಳಿಸಿ ಡಿಕ್ಲೇರ್ ಘೋಷಿಸಿತು.
ಮೊದಲ ಇನಿಂಗ್ಸ್ನ 406 ರನ್ಗಳ ಹಿನ್ನಡೆಯೊಂದಿಗೆ ಈಶಾನ್ಯ ವಲಯವು ದ್ವಿತೀಯ ಇನಿಂಗ್ಸ್ನಲ್ಲಿ 666 ರನ್ಗಳ ಟಾರ್ಗೆಟ್ ಪಡೆಯಿತು. ಆದರೆ ಮತ್ತೊಮ್ಮೆ ಪುಲ್ಕಿತ್ ನಾರಂಗ್ (4 ವಿಕೆಟ್) ದಾಳಿಗೆ ಪೆವಿಲಿಯನ್ ಪೆರೇಡ್ ನಡೆಸಿದ ಈಶಾನ್ಯ ವಲಯವು 154 ರನ್ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಉತ್ತರ ವಲಯ ತಂಡ ಬರೋಬ್ಬರಿ 511 ರನ್ಗಳ ಅಮೋಘ ಗೆಲುವು ತನ್ನದಾಗಿಸಿಕೊಂಡಿತು.
ಉತ್ತರ ವಲಯ ಪ್ಲೇಯಿಂಗ್ 11: ಧ್ರುವ ಶೋರೆ , ಪ್ರಶಾಂತ್ ಚೋಪ್ರಾ , ಅಂಕಿತ್ ಕುಮಾರ್ , ನಿಶಾಂತ್ ಸಿಂಧು , ಬಲ್ತೇಜ್ ಸಿಂಗ್ , ಹರ್ಷಿತ್ ರಾಣಾ , ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್) , ಅಂಕಿತ್ ಕಲ್ಸಿ , ಜಯಂತ್ ಯಾದವ್ (ನಾಯಕ) , ಸಿದ್ದಾರ್ಥ್ ಕೌಲ್ , ಪುಲ್ಕಿತ್ ನಾರಂಗ್.
ಈಶಾನ್ಯ ವಲಯ ಪ್ಲೇಯಿಂಗ್ 11: ಕಿಶನ್ ಲಿಂಗ್ಡೋಹ್ , ನಿಲೇಶ್ ಲಾಮಿಚಾನೆ , ರೊಂಗ್ಸೆನ್ ಜೊನಾಥನ್ (ನಾಯಕ) , ಲ್ಯಾಂಗ್ಲೋನ್ಯಾಂಬಾ ಕೀಶಾಂಗ್ಬಾಮ್ , ಜೋಸೆಫ್ ಲಾಲ್ತಾನ್ಖುಮಾ , ಕಿಶನ್ ಸಿಂಘಾ , ಪ್ರಫುಲ್ಲೋಮಣಿ ಸಿಂಗ್ (ವಿಕೆಟ್ ಕೀಪರ್) , ಪಾಲ್ಝೋರ್ ತಮಾಂಗ್ , ಇಮ್ಲಿವಾಟಿ ಲೆಮ್ತೂರ್ , ಫೀರೋಯಿಜಮ್ ಜೋಟಿನ್, ಡಿಪ್ಪು ಸಂಗ್ಮಾ.