Duleep Trophy 2024: ದುಲೀಪ್ ಟ್ರೋಫಿ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
Duleep Trophy 2024: ಭಾರತ ಟೆಸ್ಟ್ ತಂಡದ ಬಹುತೇಕ ಆಟಗಾರರು ಈ ಬಾರಿಯ ದುಲೀಪ್ ಟ್ರೋಫಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿರುವ ಆಟಗಾರರು ದೇಶೀಯ ಟೂರ್ನಿ ಆಡುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ. ಇದಾಗ್ಯೂ ಟೀಮ್ ಇಂಡಿಯಾದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್ ಹಾಗೂ ಜಸ್ಪ್ರೀತ್ ಬುಮ್ರಾಗೆ ಅವರಿಗೆ ವಿನಾಯಿತಿ ನೀಡಲಾಗಿದೆ.
ಬಹುನಿರೀಕ್ಷಿತ ದುಲೀಪ್ ಟ್ರೋಫಿ ಟೆಸ್ಟ್ ಟೂರ್ನಿಯು ಗುರುವಾರದಿಂದ (ಸೆ.4) ಶುರುವಾಗಲಿದೆ. ನಾಲ್ಕು ತಂಡಗಳ ನಡುವಣ ಈ ಟೂರ್ನಿಯಲ್ಲಿ ಈ ಬಾರಿ ಟೀಮ್ ಇಂಡಿಯಾ ಆಟಗಾರರು ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇಲ್ಲಿ ಆಟಗಾರರನ್ನು A,B,C ಮತ್ತು D ತಂಡಗಳಾಗಿ ವಿಂಗಡಿಸಲಾಗಿದ್ದು, ಅದರಂತೆ ಎ ತಂಡವನ್ನು ಶುಭ್ಮನ್ ಗಿಲ್ ಮುನ್ನಡೆಸಲಿದ್ದಾರೆ. ಇನ್ನು ಬಿ ತಂಡಕ್ಕೆ ಅಭಿಮನ್ಯು ಮಿಥುನ್ ನಾಯಕನಾದರೆ, ಸಿ ತಂಡಕ್ಕೆ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ ಆಗಿದ್ದಾರೆ. ಹಾಗೆಯೇ ಡಿ ತಂಡವನ್ನು ರುತುರಾಜ್ ಗಾಯಕ್ವಾಡ್ ಮುನ್ನಡೆಸಲಿದ್ದಾರೆ.
ಹೇಗಿರಲಿದೆ ದುಲೀಪ್ ಟ್ರೋಫಿ?
ಈ ಬಾರಿಯ ದುಲೀಪ್ ಟ್ರೋಫಿ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಅಂದರೆ ಇಲ್ಲಿ ಪ್ರತಿ ತಂಡಗಳು ಮೂರು ಪಂದ್ಯಗಳನ್ನಾಡಲಿದೆ. ಆ ಬಳಿಕ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಅಂದರೆ ಇಲ್ಲಿ ಯಾವುದೇ ಸೆಮಿಫೈನಲ್ ಮತ್ತು ಫೈನಲ್ ಪಂದ್ಯವಿರುವುದಿಲ್ಲ.
ಇದನ್ನೂ ಓದಿ: 2 ವರ್ಷ ಬೆಂಚ್ ಕಾಯಿಸಿದ RCBಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ ಮನೋಜ್ ಭಾಂಡಗೆ
ಅಂದಹಾಗೆ ದುಲೀಪ್ ಟ್ರೋಫಿ ಟೆಸ್ಟ್ ಮಾದರಿಯಲ್ಲಿ ನಡೆಯುತ್ತಿದ್ದರೂ, ಈ ಪಂದ್ಯವು ನಾಲ್ಕು ದಿನದಾಟಗಳಿಗೆ ಸೀಮಿತವಾಗಿರಲಿದೆ. ಹೀಗಾಗಿ ಇಲ್ಲಿ ಗೆಲುವಿನ ಜೊತೆಗೆ ಡ್ರಾ ಲೆಕ್ಕಾಚಾರಗಳು ಕೂಡ ಸಹ ಮುಖ್ಯವಾಗುತ್ತದೆ. ಅದರಂತೆ ಈ ಬಾರಿಯ ದುಲೀಪ್ ಟ್ರೋಫಿಯ ವೇಳಾಪಟ್ಟಿ ಈ ಕೆಳಗಿನಂತಿದೆ…
ದಿನಾಂಕ | ತಂಡಗಳು | ಸಮಯ | ಸ್ಥಳ |
ಗುರುವಾರ, ಸೆಪ್ಟೆಂಬರ್ 5 ರಿಂದ 8 ರವರೆಗೆ | ಟೀಮ್ A vs ಟೀಮ್ B | 9:00 AM | ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು |
ಗುರುವಾರ, ಸೆಪ್ಟೆಂಬರ್ 5 ರಿಂದ 8 ರವರೆಗೆ | ಟೀಮ್ C vs ಟೀಮ್ D | 9:00 AM | ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಂ, ಅನಂತಪುರ |
ಗುರುವಾರ, ಸೆಪ್ಟೆಂಬರ್ 12 ರಿಂದ 15 ರವರೆಗೆ | ಟೀಮ್ A vs ಟೀಮ್ D | 9:00 AM | ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಂ, ಅನಂತಪುರ |
ಗುರುವಾರ, ಸೆಪ್ಟೆಂಬರ್ 12 ರಿಂದ 15 ರವರೆಗೆ | ಟೀಮ್ B vs ಟೀಮ್ C | 9:00 AM | ಎಸಿಎ ಎಡಸಿಎ ಮೈದಾನ, ಅನಂತಪುರ |
ಗುರುವಾರ, ಸೆಪ್ಟೆಂಬರ್ 19 ರಿಂದ 22 ರವರೆಗೆ | ಟೀಮ್ B vs ಟೀಮ್ D | 9:00 AM | ಎಸಿಎ ಎಡಸಿಎ ಮೈದಾನ, ಅನಂತಪುರ |
ಗುರುವಾರ, ಸೆಪ್ಟೆಂಬರ್ 19 ರಿಂದ 22 ರವರೆಗೆ | ಟೀಮ್ A vs ಟೀಮ್ C | 9:00 AM | ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಂ, ಅನಂತಪುರ |