
ದೇಶೀಯ ಅಂಗಳದ ಟೆಸ್ಟ್ ಟೂರ್ನಿ ದುಲೀಪ್ ಟ್ರೋಫಿ (Duleep Trophy 2025) ಪಂದ್ಯಾವಳಿ ಇಂದಿನಿಂದ (ಆಗಸ್ಟ್ 28) ಶುರುವಾಗಲಿದೆ. ನಾಕೌಟ್ ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಮೆಂಟ್ ನಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿ ಎರಡು ಟೀಮ್ಗಳು ಈಗಾಗಲೇ ಸೆಮಿ ಫೈನಲ್‌ಗೆ ಪ್ರವೇಶಿಸಿದೆ.
ಈ ಬಾರಿಯ ದುಲೀಪ್ ಟ್ರೋಫಿ ನಡೆಯುತ್ತಿರುವುದು ನಾಕೌಟ್ ಮಾದರಿಯಲ್ಲಿ. ಇಲ್ಲಿ ಮೊದಲ ಸುತ್ತಿನಲ್ಲಿ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿದೆ. ಆರು ತಂಡಗಳನ್ನು ಕ್ವಾರ್ಟರ್ ಫೈನಲ್ ನಲ್ಲಿ ಮುಖಾಮುಖಿಯಾಗಿಸಲು ಸಾಧ್ಯವಿಲ್ಲ. ಹೀಗಾಗಿ 4 ತಂಡಗಳನ್ನು ಮೊದಲ ಸುತ್ತಿನಲ್ಲಿ ಕಣಕ್ಕಿಳಿಸಿ ಮತ್ತೆರಡು ತಂಡಗಳಿಗೆ ನೇರವಾಗಿ ಸೆಮಿಫೈನಲ್ ಅರ್ಹತೆ ನೀಡಲಾಗಿದೆ.
ಇಲ್ಲಿ ಸೆಮಿಫೈನಲ್ಗೆ ಪ್ರವೇಶಿಸಿರುವ ತಂಡಗಳು 2023 ರ ದುಲೀಪ್ ಟ್ರೋಫಿಯಲ್ಲಿ ಫೈನಲ್ ಆಡಿದ ಟೀಮ್ ಗಳು. ಅಂದರೆ ಕೊನೆಯ ಬಾರಿ ನಡೆದ ವಲಯವಾರು ದುಲೀಪ್ ಟ್ರೋಫಿಯಲ್ಲಿ ಫೈನಲ್ ಆಡಿದ ತಂಡಗಳನ್ನು ನೇರವಾಗಿ ಸೆಮಿಫೈನಲ್ಗೆ ಆಯ್ಕೆ ಮಾಡಲಾಗಿದೆ.
ಅದರಂತೆ ಈ ಬಾರಿಯ ದುಲೀಪ್ ಟ್ರೋಫಿ ಟೂರ್ನಿಯ ಸೆಮಿಫೈನಲ್ ನಲ್ಲಿ ದಕ್ಷಿಣ ವಲಯ ಹಾಗೂ ಪಶ್ಚಿಮ ವಲಯ ತಂಡಗಳು ಕಣಕ್ಕಿಳಿಯಲಿವೆ.
ದುಲೀಪ್ ಟ್ರೋಫಿಯು ಭಾರತದಲ್ಲಿ ಆಡಲಾಗುವ ದೇಶೀಯ ಟೆಸ್ಟ್ ಕ್ರಿಕೆಟ್ ಟೂರ್ನಿ. ಈ ಟೂರ್ನಿಗೆ ಮಾಜಿ ಆಟಗಾರ ದುಲೀಪ್‌ಸಿನ್‌ಜಿ ಅವರ ಹೆಸರನ್ನು ಇಡಲಾಗಿದೆ.
ದುಲೀಪ್ ಟ್ರೋಫಿಯನ್ನು 1961-62 ರಲ್ಲಿ ಮೊದಲ ಬಾರಿಗೆ ಆಡಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಭಾರತದ ವಿವಿಧ ಭೌಗೋಳಿಕ ವಲಯಗಳನ್ನು ಪ್ರತಿನಿಧಿಸುವ ತಂಡಗಳು ಕಣಕ್ಕಿಳಿಯುತ್ತವೆ.
ಈ ಟೂರ್ನಿಯಲ್ಲಿ ಒಟ್ಟು 6 ವಲಯ ತಂಡಗಳು ಕಣಕ್ಕಿಳಿಯುತ್ತವೆ. ಇಲ್ಲಿ ಆಯಾ ವಲಯಗಳನ್ನು ಆಯಾ ಭಾಗದ ರಾಜ್ಯಗಳ ಆಟಗಾರರು ಪ್ರತಿನಿಧಿಸುತ್ತಾರೆ.
ಇದನ್ನೂ ಓದಿ: Duleep Trophy 2025: ದುಲೀಪ್ ಟ್ರೋಫಿ ಟೂರ್ನಿಗೆ ಎಲ್ಲಾ ತಂಡಗಳು ಪ್ರಕಟ
ಈ ರಾಜ್ಯಗಳ ಆಟಗಾರರು ಆಯಾ ವಲಯಗಳ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಹಿಂದೆ ಈ ವಲಯಗಳ ತಂಡಗಳನ್ನು ಎಲೈಟ್ ಹಾಗೂ ಇಂಡಿಯಾ ರೆಡ್, ಬ್ಲೂ, ಗ್ರೀನ್… ಹೆಸರಿನಲ್ಲಿ ಕಣಕ್ಕಿಳಿಸಲಾಗಿತ್ತು. ಹಾಗೆಯೇ ಇಂಡಿಯಾ A,B,C,D,E,F ಎಂದು ಹೆಸರಿನೊಂದಿಗೆ ಸಹ ಆಡಲಾಗಿತ್ತು. ಆದರೆ ಈ ಬಾರಿ ಮತ್ತೆ ವಲಯ ತಂಡಗಳಾಗಿ ಟೂರ್ನಿಯನ್ನು ಆಡಲಾಗುತ್ತದೆ.
| ಹಂತ | ಪಂದ್ಯ | ದಿನಾಂಕ | ಸ್ಥಳ |
| ಕ್ವಾರ್ಟರ್-ಫೈನಲ್ 1 | ಉತ್ತರ ವಲಯ vs ಪೂರ್ವ ವಲಯ | ಆಗಸ್ಟ್ 28-31 | ಬಿಸಿಸಿಐ ಸಿಒಇ ಮೈದಾನ 1, ಬೆಂಗಳೂರು |
| ಕ್ವಾರ್ಟರ್-ಫೈನಲ್ 2 | ಕೇಂದ್ರ ವಲಯ vs ಈಶಾನ್ಯ ವಲಯ | ಆಗಸ್ಟ್ 28-31 | ಬಿಸಿಸಿಐ ಸಿಒಇ ಮೈದಾನ 2, ಬೆಂಗಳೂರು |
| ಸೆಮಿಫೈನಲ್ 1 | ಪಶ್ಚಿಮ ವಲಯ vs QF1 ವಿಜೇತ | ಸೆಪ್ಟೆಂಬರ್ 4-7 | ಬಿಸಿಸಿಐ ಸಿಒಇ ಮೈದಾನ 1, ಬೆಂಗಳೂರು |
| ಸೆಮಿಫೈನಲ್ 2 | ದಕ್ಷಿಣ ವಲಯ vs QF2 ವಿಜೇತ | ಸೆಪ್ಟೆಂಬರ್ 4-7 | ಬಿಸಿಸಿಐ ಸಿಒಇ ಮೈದಾನ 2, ಬೆಂಗಳೂರು |
| ಫೈನಲ್ | ಸೆಮೀಸ್ 1 ವಿಜೇತ vs ಸೆಮೀಸ್ ವಿಜೇತ 2 | ಸೆಪ್ಟೆಂಬರ್ 11-15 | ಬಿಸಿಸಿಐ ಸಿಒಇ ಮೈದಾನ 1, ಬೆಂಗಳೂರು |