ಆ.28 ರಿಂದ ದುಲೀಪ್ ಟ್ರೋಫಿ ಬೆಂಗಳೂರಿನಲ್ಲಿ ಆರಂಭ; ವೇಳಾಪಟ್ಟಿ, ಆರು ತಂಡಗಳ ವಿವರ ಇಲ್ಲಿದೆ
Duleep trophy 2025: 2025ರ ದುಲೀಪ್ ಟ್ರೋಫಿ ಆಗಸ್ಟ್ 28ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಈ ಟೂರ್ನಮೆಂಟ್‌ನಲ್ಲಿ ಆರು ವಲಯಗಳ ತಂಡಗಳು ಪಾಲ್ಗೊಳ್ಳಲಿವೆ. ಪಶ್ಚಿಮ ಮತ್ತು ದಕ್ಷಿಣ ವಲಯಗಳು ಸೆಮಿಫೈನಲ್‌ಗೆ ನೇರ ಪ್ರವೇಶ ಪಡೆದಿವೆ. ಉಳಿದ ತಂಡಗಳು ಕ್ವಾರ್ಟರ್ ಫೈನಲ್‌ನಲ್ಲಿ ಸ್ಪರ್ಧಿಸಲಿವೆ. ಇದರಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರು ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತೀಯ ತಂಡದಲ್ಲಿ ಸ್ಥಾನ ಪಡೆಯಬಹುದು.

2025ರ ದುಲೀಪ್ ಟ್ರೋಫಿ (Duleep trophy 2025) ಇದೇ ಗುರುವಾರದಿಂದ ಅಂದರೆ ಆಗಸ್ಟ್ 28 ರಿಂದ ಆರಂಭವಾಗಲಿದೆ. ಈ ಟೂರ್ನಮೆಂಟ್ಗಾಗಿ ಎಲ್ಲಾ 6 ತಂಡಗಳನ್ನು ಪ್ರಕಟಿಸಲಾಗಿದೆ. ಎಲ್ಲಾ ತಂಡಗಳಲ್ಲಿ ಅನೇಕ ಸ್ಟಾರ್ ಆಟಗಾರರು ಸ್ಥಾನ ಪಡೆದಿದ್ದಾರೆ. ಈ ಟೂರ್ನಮೆಂಟ್ನ ಎಲ್ಲಾ ಪಂದ್ಯಗಳು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ನಡೆಯಲಿವೆ. ಈ ದುಲೀಪ್ ಟ್ರೋಫಿ ಸೀಸನ್ ಎಲ್ಲಾ ಆಟಗಾರರಿಗೆ ಬಹಳ ಮುಖ್ಯವಾಗಲಿದೆ. ಏಕೆಂದರೆ ಇದರಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರು ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತೀಯ ತಂಡದಲ್ಲಿ ಸ್ಥಾನ ಪಡೆಯಬಹುದು.
ದುಲೀಪ್ ಟ್ರೋಫಿ ವೇಳಾಪಟ್ಟಿ
2025 ರ ದುಲೀಪ್ ಟ್ರೋಫಿಯಲ್ಲಿ 6 ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ. ಈ ತಂಡಗಳ ಹೆಸರುಗಳು ಉತ್ತರ ವಲಯ, ದಕ್ಷಿಣ ವಲಯ, ಪಶ್ಚಿಮ ವಲಯ, ಪೂರ್ವ ವಲಯ, ಮಧ್ಯ ವಲಯ ಮತ್ತು ಈಶಾನ್ಯ ವಲಯ. 2025 ರ ದುಲೀಪ್ ಟ್ರೋಫಿಯಲ್ಲಿ ಒಟ್ಟು 5 ಪಂದ್ಯಗಳು ನಡೆಯಲಿವೆ. ಇವುಗಳಲ್ಲಿ 2 ಕ್ವಾರ್ಟರ್ ಫೈನಲ್‌ಗಳು, 2 ಸೆಮಿಫೈನಲ್‌ಗಳು ಮತ್ತು 1 ಫೈನಲ್ ಪಂದ್ಯ ಇರುತ್ತದೆ. ಎಲ್ಲವೂ ನಾಕೌಟ್ ಪಂದ್ಯಗಳಾಗಿದ್ದು, ಸೋತ ತಂಡವು ಪಂದ್ಯಾವಳಿಯಿಂದ ಹೊರಗುಳಿಯುತ್ತದೆ. ಈ ಪಂದ್ಯಾವಳಿಯ ಕೊನೆಯ ಆವೃತ್ತಿಯನ್ನು ದಕ್ಷಿಣ ವಲಯ ಗೆದ್ದುಕೊಂಡಿತು. ಕಳೆದ ಬಾರಿಯ ಫೈನಲ್‌ನಲ್ಲಿ ಪಶ್ಚಿಮ ವಲಯ ತಂಡವನ್ನು ದಕ್ಷಿಣ ವಲಯ ತಂಡ 75 ರನ್‌ಗಳಿಂದ ಸೋಲಿಸಿತ್ತು. ಈ ಕಾರಣಕ್ಕಾಗಿ, ಪಶ್ಚಿಮ ವಲಯ ಮತ್ತು ದಕ್ಷಿಣ ವಲಯ ತಂಡಗಳು 2025 ರ ದುಲೀಪ್ ಟ್ರೋಫಿಯಲ್ಲಿ ನೇರವಾಗಿ ಸೆಮಿಫೈನಲ್‌ಗೆ ಪ್ರವೇಶ ಪಡೆದಿವೆ.
ಕ್ವಾರ್ಟರ್ ಫೈನಲ್ 1: ಉತ್ತರ ವಲಯ vs ಪೂರ್ವ ವಲಯ – ಆಗಸ್ಟ್ 28 ರಿಂದ ಆಗಸ್ಟ್ 31, ಬೆಂಗಳೂರು
ಕ್ವಾರ್ಟರ್ ಫೈನಲ್ 2: ಕೇಂದ್ರ ವಲಯ vs ಈಶಾನ್ಯ ವಲಯ – ಆಗಸ್ಟ್ 28 ರಿಂದ ಆಗಸ್ಟ್ 31, ಬೆಂಗಳೂರು
ಸೆಮಿಫೈನಲ್ 1: ದಕ್ಷಿಣ ವಲಯ vs (QF-1 ವಿಜೇತ) – ಸೆಪ್ಟೆಂಬರ್ 4 ರಿಂದ ಸೆಪ್ಟೆಂಬರ್ 7 – ಬೆಂಗಳೂರು
ಸೆಮಿಫೈನಲ್ 2: ಪಶ್ಚಿಮ ವಲಯ vs (QF-2 ವಿಜೇತ) – ಸೆಪ್ಟೆಂಬರ್ 4 ರಿಂದ ಸೆಪ್ಟೆಂಬರ್ 7 – ಬೆಂಗಳೂರು
ಫೈನಲ್: ಸೆಮಿಫೈನಲ್ ವಿಜೇತ ತಂಡಗಳ ನಡುವೆ- ಸೆಪ್ಟೆಂಬರ್ 11 ರಿಂದ ಸೆಪ್ಟೆಂಬರ್ 15 – ಬೆಂಗಳೂರು
ದುಲೀಪ್ ಟ್ರೋಫಿಯಲ್ಲಿ ಆರು ತಂಡಗಳು
ಕೇಂದ್ರ ವಲಯ: ಧ್ರುವ್ ಜುರೆಲ್ (ನಾಯಕ, ವಿಕೆಟ್ ಕೀಪರ್), ರಜತ್ ಪಾಟಿದಾರ್, ಆರ್ಯನ್ ಜುಯಲ್, ಆಯುಷ್ ಪಾಂಡೆ, ಡ್ಯಾನಿಶ್ ಮಾಲೆವಾರ್, ಶುಭಂ ಶರ್ಮಾ, ಸಂಚಿತ್ ದೇಸಾಯಿ, ಯಶ್ ರಾಥೋಡ್, ಕುಲದೀಪ್ ಯಾದವ್, ಹರ್ಷ್ ದುಬೆ, ಆದಿತ್ಯ ಠಾಕ್ರೆ, ಮಾನವ್ ಸುತಾರ್, ದೀಪಕ್ ಚಹರ್, ಸರಾನ್ಶ್ ಜೈನ್, ಆಯುಷ್ ಪಾಂಡೆ, ಖಲೀಲ್ ಅಹ್ಮದ್.
ಪೂರ್ವ ವಲಯ: ಇಶಾನ್ ಕಿಶನ್ (ನಾಯಕ), ಅಭಿಮನ್ಯು ಈಶ್ವರನ್ (ಉಪನಾಯಕ), ಸಂದೀಪ್ ಪಟ್ನಾಯಕ್, ವಿರಾಟ್ ಸಿಂಗ್, ಡ್ಯಾನಿಶ್ ದಾಸ್, ಶ್ರೀದಂ ಪಾಲ್, ಶರಣದೀಪ್ ಸಿಂಗ್, ಕುಮಾರ್ ಕುಶಾಗ್ರಾ, ರಿಯಾನ್ ಪರಾಗ್, ಉತ್ಕರ್ಷ್ ಸಿಂಗ್, ಮನೀಷಿ, ಸೂರಜ್ ಸಿಂಧು ಜೈಸ್ವಾಲ್, ಮುಖೇಶ್ ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಶಮಿ.
ಈಶಾನ್ಯ ವಲಯ: ರೊಂಗ್ಸೆನ್ ಜೊನಾಥನ್ (ನಾಯಕ), ಆಕಾಶ್ ಕುಮಾರ್ ಚೌಧರಿ, ಟೆಚಿ ಡೋರಿಯಾ, ಯುಮ್ನಮ್ ಕರ್ನಾಜಿತ್, ಸೆಡೆಝಾಲೀ ರುಪೆರೊ, ಆಶಿಶ್ ಥಾಪಾ, ಹೆಮ್ ಬಹದ್ದೂರ್ ಚೆಟ್ರಿ, ಜೆಹು ಆಂಡರ್ಸನ್, ಅರ್ಪಿತ್ ಸುಭಾಷ್ ಭತೇವಾರಾ, ಫೆರೋಯಿಜಮ್ ಜೋತಿನ್ ಸಿಂಗ್, ಪಾಲ್ಝೋರ್ ತಮಾಂಗ್, ಅಂಕುರ್ ಮಲಿಕ್, ಲಮಾಬಮ್ ಅಜಯ್ ಸಿಂಗ್, ಬಿಶ್ವರ್ಜಿತ್ ಸಿಂಗ್ ಕೊಂತೌಜಮ್, ಆರ್ಯನ್ ಬೋರಾಹ್.
ಉತ್ತರ ವಲಯ: ಶುಭ್ಮನ್ ಗಿಲ್ (ನಾಯಕ), ಶುಭಂ ಖಜುರಿಯಾ, ಅಂಕಿತ್ ಕುಮಾರ್ (ಉಪನಾಯಕ), ಆಯುಷ್ ಬದೋನಿ, ಯಶ್ ಧುಲ್, ಅಂಕಿತ್ ಕಲ್ಸಿ, ನಿಶಾಂತ್ ಸಿಂಧು, ಸಾಹಿಲ್ ಲೋತ್ರಾ, ಮಯಾಂಕ್ ದಾಗರ್, ಯುಧ್‌ವೀರ್ ಸಿಂಗ್ ಚರಕ್, ಅರ್ಷ್‌ದೀಪ್ ಸಿಂಗ್, ಹರ್ಷಿತ್ ರಾಣಾ, ಅನ್ಶುಲ್ ಕಾಂಬೋಜ್, ಅಖಿಬ್ ನಬಿ, ಕನ್ಹೈಯಾ ವಾಧ್ವಾನ್ (ವಿಕೆಟ್ ಕೀಪರ್).
ದಕ್ಷಿಣ ವಲಯ: ತಿಲಕ್ ವರ್ಮಾ (ನಾಯಕ), ಮೊಹಮ್ಮದ್ ಅಜರುದ್ದೀನ್ (ಉಪನಾಯಕ, ವಿಕೆಟ್ ಕೀಪರ್), ತನ್ಮಯ್ ಅಗರ್ವಾಲ್, ದೇವದತ್ ಪಡಿಕ್ಕಲ್, ಮೋಹಿತ್ ಕಾಳೆ, ಸಲ್ಮಾನ್ ನಿಜಾರ್, ಎನ್ ಜಗದೀಸನ್ (ವಿಕೆಟ್ ಕೀಪರ್), ಟಿ ವಿಜಯ್, ಆರ್ ಸಾಯಿ ಕಿಶೋರ್, ತನಯ್ ತ್ಯಾಗರಾಜನ್, ವೈಶಾಕ್ ವಿಜಯ್ಕುಮಾರ್, ಆರ್. ಗುರ್ಜಪ್ನೀತ್ ಸಿಂಗ್, ಸ್ನೇಹಲ್ ಕೌತಾಂಕರ್.
ಪಶ್ಚಿಮ ವಲಯ: ಶಾರ್ದೂಲ್ ಠಾಕೂರ್ (ನಾಯಕ), ಯಶಸ್ವಿ ಜೈಸ್ವಾಲ್, ಆರ್ಯ ದೇಸಾಯಿ, ಹಾರ್ವಿಕ್ ದೇಸಾಯಿ, ಶ್ರೇಯಸ್ ಅಯ್ಯರ್, ಸರ್ಫರಾಝ್ ಖಾನ್, ರುತುರಾಜ್ ಗಾಯಕ್ವಾಡ್, ಜಯಮೀತ್ ಪಟೇಲ್, ಮನನ್ ಹಿಂಗ್ರಾಜಿಯಾ, ಸೌರಭ್ ನವಲೆ, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಅರ್ಜಾನ್ ನಾಗವಾಸ್ವಾಲ, ದರ್ಮೇಂದ್ರ ಜಡೇಜಾ, ತುಷಾರ್ ದೇಶಪಾಂಡೆ.
Published On - 5:34 pm, Wed, 27 August 25
