Duleep Trophy: ಪೃಥ್ವಿ ಶಾ ಅಬ್ಬರದ ಶತಕ; ಕೊನೆಯ ದಿನದಲ್ಲಿ 468 ರನ್ ಟಾರ್ಗೆಟ್ ಹೊತ್ತ ಕೇಂದ್ರ ವಲಯ

Duleep Trophy: ದಿನದಾಟದ ಅಂತ್ಯಕ್ಕೆ ಕೇಂದ್ರ ವಲಯ 33 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟ ಹೆಚ್ಚಿಸಿಕೊಂಡಿದೆ. ತಂಡ 9.2 ಓವರ್‌ಗಳಲ್ಲಿ ಆರಂಭಿಕರಾದ ಹಿಮಾಂಶು ಮಂತ್ರಿ (18) ಮತ್ತು ಯಶ್ ದುಬೆ (14) ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು.

Duleep Trophy: ಪೃಥ್ವಿ ಶಾ ಅಬ್ಬರದ ಶತಕ; ಕೊನೆಯ ದಿನದಲ್ಲಿ 468 ರನ್ ಟಾರ್ಗೆಟ್ ಹೊತ್ತ ಕೇಂದ್ರ ವಲಯ
ಪೃಥ್ವಿ ಶಾ
Follow us
TV9 Web
| Updated By: ಪೃಥ್ವಿಶಂಕರ

Updated on:Sep 17, 2022 | 9:18 PM

ಎಸ್‌ಎನ್‌ಆರ್ ಕಾಲೇಜಿನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿಯ (Duleep Trophy) ಸೆಮಿಫೈನಲ್ ಪಂದ್ಯದಲ್ಲಿ ಪಶ್ಚಿಮ ವಲಯ ತಂಡ ಕೇಂದ್ರ ವಲಯದ ಎದುರು 501 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ. ಈ ಗುರಿ ಬೆನ್ನತ್ತಿದ ಕೇಂದ್ರ ವಲಯ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೂರನೇ ದಿನವಾದ ಶನಿವಾರದ ಆಟದ ಅಂತ್ಯಕ್ಕೆ 33 ರನ್‌ಗಳಿಗೆ ತನ್ನ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿದೆ. ಪಶ್ಚಿಮ ವಲಯದ ಬ್ಯಾಟ್ಸ್‌ಮನ್‌ಗಳಿಂದ ಹಿಡಿದು ಬೌಲರ್‌ಗಳವರೆಗೆ ಕೇಂದ್ರ ವಲಯ ತಂಡ ಡಾಮಿನೆಟ್ ಮಾಡಿತು. ಪೃಥ್ವಿ ಶಾ (Prithvi Shaw) ಪಶ್ಚಿಮ ವಲಯ ಪರ ಅದ್ಭುತ ಇನ್ನಿಂಗ್ಸ್ ಆಡಿದರಿಂದ ಇದರ ಆಧಾರದ ಮೇಲೆ ಕೇಂದ್ರ ವಲಯಕ್ಕೆ ಪರ್ವತದಂತಹ ಪ್ರಬಲ ಗುರಿಯನ್ನು ನೀಡಲು ಸಾಧ್ಯವಾಯಿತು.

ಪೃಥ್ವಿ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿ 142 ರನ್‌ಗಳ ಇನಿಂಗ್ಸ್‌ ಆಡಿದರು. ಅವರಲ್ಲದೆ, ಪಟೇಲ್ (67) ಮತ್ತು ಅರ್ಮಾನ್ ಜಾಫರ್ (49) ಅವರ ಉಪಯುಕ್ತ ಕೊಡುಗೆಯೊಂದಿಗೆ ಪಶ್ಚಿಮ ವಲಯ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 371 ರನ್ ಗಳಿಸಿತು. ಕೇಂದ್ರ ವಲಯ ತಂಡ ಸದ್ಯ ಗುರಿಗಿಂತ 468 ರನ್ ಹಿಂದಿದ್ದು, ಈ ತಂಡಕ್ಕೆ ಗೆಲ್ಲಲು ಒಂದು ದಿನ ಮಾತ್ರ ಉಳಿದಿದೆ.

ದಿನದಾಟ ಹೀಗೆ ಪ್ರಾರಂಭವಾಯಿತು

ಮೂರು ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿದ್ದ ಪಶ್ಚಿಮ ವಲಯ ತಂಡ ಮೂರನೇ ದಿನದಾಟ ಆರಂಭಿಸಿತು. ಪೃಥ್ವಿ ತಮ್ಮ ಇನ್ನಿಂಗ್ಸ್ ಅನ್ನು 104 ರನ್‌ಗಳಿಂದ ವಿಸ್ತರಿಸಿದರು ಆದರೆ ಅವರಿಗೆ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. ಅವರು ತಮ್ಮ ಖಾತೆಗೆ 38 ರನ್ ಸೇರಿಸಿ, ಕರ್ಣ್ ಶರ್ಮಾಗೆ ಬಲಿಯಾದರು. ತಮ್ಮ ಇನ್ನಿಂಗ್ಸ್‌ನಲ್ಲಿ 140 ಎಸೆತಗಳನ್ನು ಎದುರಿಸಿದ ಪೃಥ್ವಿ, 15 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು. ಬಳಿಕ ಪೃಥ್ವಿ ನಿರ್ಗಮನದ ನಂತರವೂ, ಪಶ್ಚಿಮ ವಲಯ ತಂಡದ ಮಧ್ಯಮ ಕ್ರಮಾಂಕ, ಕೆಳ ಕ್ರಮಾಂಕ ಉತ್ತಮವಾಗಿ ಇನ್ನಿಂಗ್ಸ್ ಕಟ್ಟಿತು. ಪಟೇಲ್ 153 ಎಸೆತಗಳನ್ನು ಎದುರಿಸಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದರು.

ಪೃಥ್ವಿ ಔಟಾದ ನಂತರ, ಜಾಫರ್ ಮತ್ತು ಪಟೇಲ್ ಮಧ್ಯಮ ಫೀಲ್ಡ್ ಬೌಲರ್‌ಗಳಿಗೆ ತೊಂದರೆ ನೀಡುವುದನ್ನು ಮುಂದುವರೆಸಿದರು. ಇವರಿಬ್ಬರ ಹೊರತಾಗಿ ಕೆಳ ಕ್ರಮಾಂಕದಲ್ಲಿ ಶಾಮ್ಸ್ ಮುಲಾನಿ (29), ಅತಿತ್ ಸೇಠ್ (20) ಮತ್ತು ತನುಷ್ ಕೋಟ್ಯಾನ್ (28) ಉಪಯುಕ್ತ ಕೊಡುಗೆ ನೀಡಿ ತಂಡದ ಸ್ಕೋರ್ ಅನ್ನು 371 ರನ್ ಗಳಿಗೆ ಕೊಂಡೊಯ್ದರು. ಕುಮಾರ್ ಕಾರ್ತಿಕೇಯ ಅವರು ಕೇಂದ್ರ ವಲಯದ ಅತ್ಯಂತ ಯಶಸ್ವಿ ಬೌಲರ್ ಆದರು. ಎಡಗೈ ಬೌಲರ್ 105 ರನ್‌ಗಳಿಗೆ ಮೂರು ವಿಕೆಟ್ ಪಡೆದರು. ಅಲ್ಲದೆ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ್ದರು.

ಕೇಂದ್ರ ವಲಯದ ಬ್ಯಾಟಿಂಗ್ ವಿಫಲ

ದಿನದಾಟದ ಅಂತ್ಯಕ್ಕೆ ಕೇಂದ್ರ ವಲಯ 33 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟ ಹೆಚ್ಚಿಸಿಕೊಂಡಿದೆ. ತಂಡ 9.2 ಓವರ್‌ಗಳಲ್ಲಿ ಆರಂಭಿಕರಾದ ಹಿಮಾಂಶು ಮಂತ್ರಿ (18) ಮತ್ತು ಯಶ್ ದುಬೆ (14) ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ನಾಲ್ಕು ದಿನಗಳ ಪಂದ್ಯದ ಮೊದಲ ಎರಡು ದಿನಗಳಲ್ಲಿ, ಪಶ್ಚಿಮ ವಲಯ ಮೊದಲ ಇನ್ನಿಂಗ್ಸ್‌ನಲ್ಲಿ 257 ರನ್‌ಗಳಿಗೆ ಉತ್ತರವಾಗಿ, ಕೇಂದ್ರ ವಲಯದ ಮೊದಲ ಇನಿಂಗ್ಸ್ ಅನ್ನು 128 ರನ್‌ಗಳಿಗೆ ಆಲೌಟ್ ಆಗಿತ್ತು. ಬಳಿಕ ಪಶ್ಚಿಮ ವಲಯ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 129 ರನ್‌ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿತ್ತು.

Published On - 9:18 pm, Sat, 17 September 22

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ