Breaking News: ಗುಜರಾತ್ ತಂಡದಿಂದ ಹೊರಬಿದ್ರಾ ಗಿಲ್? ಕುತೂಹಲ ಹುಟ್ಟಿಸಿದ ಫ್ರಾಂಚೈಸಿಯ ಟ್ವೀಟ್..!

Shubman Gill: ಶನಿವಾರ ಸಂಜೆ ಗುಜರಾತ್ ಫ್ರಾಂಚೈಸಿ ಅಚ್ಚರಿಯ ಟ್ವೀಟ್ ಮಾಡಿದ್ದು, ಈ ಟ್ವೀಟ್ ನೋಡಿದವರೆಲ್ಲ ಗಿಲ್ ಜತೆಗಿನ ಸಂಬಂಧವನ್ನು ಗುಜರಾತ್ ಕಡಿದುಕೊಂಡಿದೆ ಎಂದು ಭಾವಿಸುತ್ತಿದ್ದಾರೆ.

Breaking News: ಗುಜರಾತ್ ತಂಡದಿಂದ ಹೊರಬಿದ್ರಾ ಗಿಲ್? ಕುತೂಹಲ ಹುಟ್ಟಿಸಿದ ಫ್ರಾಂಚೈಸಿಯ ಟ್ವೀಟ್..!
Shubman Gill
Follow us
TV9 Web
| Updated By: ಪೃಥ್ವಿಶಂಕರ

Updated on:Sep 17, 2022 | 7:28 PM

ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್​ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರವೇ. ಪ್ರತಿಯೊಬ್ಬ ಕ್ರಿಕೆಟಿಗನು ಈ ಟೂರ್ನಿಯಲ್ಲಿ ಆಡಬೇಕೆಂಬ ಹೆಬ್ಬಯಕೆಯನ್ನು ಹೊಂದಿರುತ್ತಾನೆ. ಅದಕ್ಕೆ ಕಾರಣಗಳು ಹಲವಿವೆ. ಮೊದಲನ್ನೇಯದ್ದು, ಈ ಟೂರ್ನಿಯಲ್ಲಿ ಆಡುವ ಆಟಗಾರನ ಮೇಲೆ ಹಣದ ಮಳೆಯೇ ಹರಿದರೆ, ಎರಡನೇಯದ್ದು, ಈ ಟೂರ್ನಿಯಲ್ಲಿ ಮಿಂಚುವ ಆಟಗಾರನಿಗೆ ಟೀಂ ಇಂಡಿಯಾ ಕದ ತೆರೆಯುವುದು ಗ್ಯಾರಂಟಿ. ಪ್ರತಿ ವರ್ಷದಂತೆ ಈ ವರ್ಷವೂ ಐಪಿಎಲ್ (IPL-2022) ಅತ್ಯಂತ ಯಶಸ್ವಿಯಾಗಿ ನಡೆಯಿತು. ಆದರೆ ಈ ಟೂರ್ನಿಯಲ್ಲಿ ನಡೆದ ಅಚ್ಚರಿಯೆಂದರೆ, ಮೊದಲ ಬಾರಿಗೆ ಐಪಿಎಲ್ ಲೋಕಕ್ಕೆ ಕಾಲಿಟ್ಟಿದ್ದ ಗುಜರಾತ್ ಟೈಟಾನ್ಸ್ (Gujarat Titans) ತಂಡ ತನ್ನ ಮೊದಲ ಸೀಸನ್​ನಲ್ಲೇ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಪಾಂಡ್ಯ ನಾಯಕತ್ವದಲ್ಲಿ ಈ ತಂಡ ಟ್ರೋಪಿ ಗೆದ್ದಿತ್ತಾದರೂ, ಈ ತಂಡದ ಗೆಲುವಿಗೆ ಪ್ರಮುಖ ಕಾರಣ ಈ ತಂಡದಲ್ಲಿದ್ದ ಪ್ರತಿಯೊಬ್ಬ ಆಟಗಾರನು ನೀಡಿದ 100 ಪ್ರತಿಶತ ಪ್ರದರ್ಶನ. ಅಂತಹ ಆಟಗಾರರ ಪೈಕಿ ಟೀಂ ಇಂಡಿಯಾದ ಯುವ ಓಪನರ್ ಶುಭ್​ಮನ್ ಗಿಲ್ ಒಬ್ಬರು. ಈ ಮೂಲಕ ಈ ತಂಡದಲ್ಲಿ ದೀರ್ಘ ಸಮಯದವರೆಗೆ ಆಡುವ ಆಟಗಾರರಲ್ಲಿ ಗಿಲ್ ಕೂಡ ಸೇರಿದ್ದರು. ಆದರೆ ಗುಜರಾತ್ ಫ್ರಾಂಚೈಸ್ ಶನಿವಾರ ಮಾಡಿರುವ ಟ್ವೀಟ್​ನಿಂದ ಇಡೀ ಕ್ರಿಕೆಟ್ ಅಭಿಮಾನಿಗಳು ಶಾಕ್​ಗೆ ಒಳಗಾಗಿದ್ದಾರೆ.

ಶನಿವಾರ ಸಂಜೆ ಗುಜರಾತ್ ಫ್ರಾಂಚೈಸಿ ಅಚ್ಚರಿಯ ಟ್ವೀಟ್ ಮಾಡಿದ್ದು, ಈ ಟ್ವೀಟ್ ನೋಡಿದವರೆಲ್ಲ ಗಿಲ್ ಜತೆಗಿನ ಸಂಬಂಧವನ್ನು ಗುಜರಾತ್ ಕಡಿದುಕೊಂಡಿದೆ ಎಂದು ಭಾವಿಸುತ್ತಿದ್ದಾರೆ. ಗಿಲ್ ಕೂಡ ಈ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದು, “ಈ ಪ್ರಯಾಣವು ಸ್ಮರಣೀಯವಾಗಿದೆ ಎಂದು ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಗುಜರಾತ್ ಮಾಡಿರುವ ಟ್ವೀಟ್ ಏನೆಂದರೆ, ಇದು ನೆನಪಿಟ್ಟುಕೊಳ್ಳುವಂತಹ ಜರ್ನಿಯಾಗಿದೆ. ನಿಮ್ಮ ಮುಂದಿನ ಪ್ರಯತ್ನಕ್ಕೆ ನಾವು ಶುಭ ಹಾರೈಸುತ್ತೇವೆ ಶುಭಮನ್ ಗಿಲ್ ಎಂದು ಗುಜರಾತ್ ಟ್ವೀಟ್ ಮಾಡಿದೆ.

ಗೊಂದಲಕ್ಕೊಳಗಾದ ಅಭಿಮಾನಿಗಳು

ಗುಜರಾತ್‌ನ ಈ ಟ್ವೀಟ್‌ನಿಂದ ಫ್ರಾಂಚೈಸ್, ಗಿಲ್ ಜೊತೆಗಿನ ಸಂಬಂಧವನ್ನು ಮುರಿಯಲು ಮನಸ್ಸು ಮಾಡಿದ್ದು, ಗಿಲ್ ಅವರನ್ನು ಮತ್ತೊಂದು ಫ್ರಾಂಚೈಸಿಗೆ ಹಸ್ತಾಂತರಿಸಲು ಸಿದ್ಧವಾಗಿದೆ ಎಂದು ತೋರುತ್ತದೆ. ಇದೇ ವೇಳೆ ಗಿಲ್ ಕೂಡ ಈ ಟ್ವೀಟ್​ಗೆ ರಿಟ್ವೀಟ್ ಮಾಡಿದ್ದು, ಅವರು ಕೂಡ ಈ ನಿರ್ಧಾರವನ್ನು ಒಪ್ಪಿಕೊಂಡು ತಂಡವನ್ನು ತೊರೆಯಲು ಸಿದ್ಧರಾಗಿದ್ದಾರೆ ಎಂದು ತೋರುತ್ತದೆ. ಆದರೆ ಈ ವಿಷಯದ ವಾಸ್ತವ ಏನೆಂಬುದರ ಬಗ್ಗೆ ಇನ್ನು ಏನೂ ಸ್ಪಷ್ಟವಾಗಿಲ್ಲ. ಕೆಲವೊಮ್ಮೆ ಐಪಿಎಲ್ ಫ್ರಾಂಚೈಸಿಗಳು ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ಗೊಂದಲಕ್ಕೀಡು ಮಾಡುವ ಕೆಲಸಗಳನ್ನು ಹಾಗಾಗ್ಗೆ ಮಾಡುತ್ತಿರುತ್ತವೆ. ಈ ಹಿಂದೆ ಕಳೆದ ಐಪಿಎಲ್ ಆರಂಭಕ್ಕೂ ಮೊದಲು, ರಾಜಸ್ಥಾನ್ ರಾಯಲ್ಸ್ ಸಂಜು ಸ್ಯಾಮ್ಸನ್​ಗೆ ಸಂಬಂಧಿಸಿದಂತೆ ಇದೇ ರೀತಿಯ ಕೆಲಸವನ್ನು ಮಾಡಿತ್ತು. ಅಂದಹಾಗೆ, ಯಾವುದೇ ಫ್ರಾಂಚೈಸಿಯೂ ತನ್ನ ತಂಡದ ಆಟಗಾರನೊಂದಿಗಿನ ತನ್ನ ಒಪ್ಪಂದವನ್ನು ರದ್ದುಗೊಳಿಸಿದಾಗ ಅದು ಅಧಿಕೃತ ಹೇಳಿಕೆಯ ಮೂಲಕ ಈ ವಿಷಯವನ್ನು ಸ್ಪಷ್ಟವಾಗಿ ಹೇಳುತ್ತದೆ. ಆದರೆ ಇದುವರೆಗೆ ಗುಜರಾತ್ ಫ್ರಾಂಚೈಸಿ ಕಡೆಯಿಂದ ಆ ರೀತಿಯ ಯಾವುದೇ ಹೇಳಿಕೆ ಕಂಡುಬಂದಿಲ್ಲ.

Published On - 6:20 pm, Sat, 17 September 22

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ