AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಳೆಯರನ್ನು ತುಳಿದು ಬೆಳೆಯಬೇಕೆಂಬ ದುರಾಸೆ ನನಗಿಲ್ಲ; ರಾಹುಲ್- ಪಂತ್ ವಿಚಾರದಲ್ಲಿ ಸಂಜು ಹೇಳಿದ್ದಿದು

Sanju Samson: ನಾನು ನನ್ನದೇ ತಂಡದ ಸಹ ಆಟಗಾರರೊಂದಿಗೆ ಸ್ಪರ್ಧಿಸಿದರೆ, ಅದು ನಾನು ನನ್ನ ದೇಶದ ಗೌರವವನ್ನು ಕಡಿಮೆ ಮಾಡಿದಂತೆ ಎಂದಿದ್ದಾರೆ.

ಗೆಳೆಯರನ್ನು ತುಳಿದು ಬೆಳೆಯಬೇಕೆಂಬ ದುರಾಸೆ ನನಗಿಲ್ಲ; ರಾಹುಲ್- ಪಂತ್ ವಿಚಾರದಲ್ಲಿ ಸಂಜು ಹೇಳಿದ್ದಿದು
Sanju Samson
TV9 Web
| Updated By: ಪೃಥ್ವಿಶಂಕರ|

Updated on:Sep 17, 2022 | 5:13 PM

Share

ಟೀಂ ಇಂಡಿಯಾದ (Team India) ನತದೃಷ್ಟ ಕ್ರಿಕೆಟಿಗನೆಂದರೆ ಅದು ಸಂಜು ಸ್ಯಾಮ್ಸನ್ (Sanju Samson). ಕ್ರಿಕೆಟ್ ಪುಸ್ತಕದ ಎಲ್ಲಾ ಎಬಿಸಿಡಿಗಳನ್ನು ಕರಗತ ಮಾಡಿಕೊಂಡಿದ್ದರು ಅದ್ಯಾಕೋ ಸಂಜುಗೆ ಟೀಂ ಇಂಡಿಯಾ ಕದ ಹೆಚ್ಚಾಗಿ ತೆರೆಯಲೇ ಇಲ್ಲ. ಆಗೊಮ್ಮೆ ಈಗೊಮ್ಮೆ ತಂಡದಲ್ಲಿ ಕೆಲವೊಂದು ಅವಕಾಶಗಳು ಸಿಕ್ಕಿದ್ದು ಬಿಟ್ಟರೆ ಸಂಜುಗೆ ಕಾಯಂ ಸ್ಥಾನ ಎಂಬುದು ಸಿಗಲೇ ಇಲ್ಲ. ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾವನ್ನು ಪ್ರಕಟಿಸಿದಾಗ ಹಲವು ಕ್ರಿಕೆಟ್ ಪಂಡಿತರು ಸಂಜುಗೆ ಸ್ಥಾನ ಸಿಗಬೇಕೆಂದು ಅಭಿಪ್ರಾಯಪಟ್ಟಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಸಂಜು ಬೆಂಬಲಿಸಿ ಹಲವರು ಟ್ವೀಟ್ ಮಾಡಿದ್ದರು. ರಿಷಬ್ ಪಂತ್ (Rishabh Pant) ಬದಲು ಸಂಜುಗೆ ತಂಡದಲ್ಲಿ ಅವಕಾಶ ಸಿಗಬೇಕಿತ್ತು ಎಂದು ಕೆಲವರು ಟ್ವೀಟ್​ನಲ್ಲಿ ಹೇಳಿಕೊಂಡಿದ್ದರು. ಆದರೆ ಈ ಎಲ್ಲಾ ವಿಷಯಗಳ ಬಗ್ಗೆ ಸಂಜು ಈಗ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಸಂಜು ಬಗ್ಗೆ ಬಿಸಿಸಿಐ ನಿರ್ಲಕ್ಷ್ಯ ತೋರುತ್ತಿದೆ ಎಂಬ ಆರೋಪಗಳು ನಿರಂತರವಾಗಿ ಕೇಳಿಬರುತ್ತಿವೆ. ತಂಡವು ಪಂತ್‌ಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಿದ್ದು, ಸಂಜು ಅವರನ್ನು ನಿರ್ಲಕ್ಷಿಸುತ್ತಿದೆ ಎಂದು ಹಲವರು ಆರೋಪಿಸುತ್ತಿದ್ದಾರೆ. ಆದಾಗ್ಯೂ, ಸಂಜುಗೆ, ಬಿಸಿಸಿಐ ಕೆಲವು ಅವಕಾಶಗಳನ್ನು ನೀಡಿತ್ತಾದರೂ ಅವುಗಳಲ್ಲಿ ಸಂಜು ಅಷ್ಟಾಗಿ ಯಶಸ್ವಿಯಾಗಲಿಲ್ಲ.ಆದರೀಗ ಸಂಜುಗೆ ಶುಕ್ರದೆಸೆ ಆರಂಭವಾಗಿದ್ದು, ನ್ಯೂಜಿಲೆಂಡ್-ಎ ವಿರುದ್ಧ ಮೈದಾನಕ್ಕಿಳಿಯಲಿರುವ ಭಾರತ-ಎ ತಂಡದ ನಾಯಕತ್ವವನ್ನು ಅವರಿಗೆ ಬಿಸಿಸಿಐ ವಹಿಸಿದೆ.

ಇದನ್ನೂ ಓದಿ
Image
T20 World Cup 2022: ಮೊದಲ ಸುತ್ತಿನಲ್ಲೇ ಹೊರ ಬೀಳಲಿದೆ ಪಾಕ್ ತಂಡ! ಭವಿಷ್ಯ ನುಡಿದ ಶೋಯೆಬ್ ಅಖ್ತರ್
Image
T20 World Cup: ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಏಷ್ಯನ್ ಚಾಂಪಿಯನ್ ಶ್ರೀಲಂಕಾ; ಯಾರಿಗೆಲ್ಲ ಸ್ಥಾನ?
Image
ಶಾಹೀನ್ ಚಿಕಿತ್ಸೆಗೆ ಪಾಕ್ ಕ್ರಿಕೆಟ್ ಮಂಡಳಿ ನಯಾ ಪೈಸೆ ನೀಡಿಲ್ಲ..! ಮಾವ ಅಫ್ರಿದಿ ಸ್ಫೋಟಕ ಹೇಳಿಕೆ

ರಾಹುಲ್- ಪಂತ್ ನನ್ನ ತಂಡಕ್ಕಾಗಿ ಆಡುತ್ತಿದ್ದಾರೆ- ಸಂಜು

ಪಂತ್ ಅಥವಾ ಕೆಎಲ್ ರಾಹುಲ್ ಬದಲಿಗೆ ಆಡಬೇಕು ಎಂದು ನನಗೆ ಅನಿಸುತ್ತಿಲ್ಲ ಎಂದು ಸಂಜು ಹೇಳಿದ್ದಾರೆ. ವರ್ಲ್ಡ್ ಕ್ರಿಕೆಟ್ ಚಾನೆಲ್‌ನಲ್ಲಿ ಮಾತನಾಡಿದ ಸಂಜು, “ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಸಂಜು ಬದಲಿಗೆ ಯಾರು ಆಡಬೇಕೆಂಬುದರ ಬಗ್ಗೆ ಮಾತನಾಡುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಂಜು, ರಾಹುಲ್- ಪಂತ್ ನನ್ನ ತಂಡಕ್ಕಾಗಿ ಆಡುತ್ತಿದ್ದಾರೆ. ಹೀಗಾಗಿ ನಾನು ನನ್ನದೇ ತಂಡದ ಸಹ ಆಟಗಾರರೊಂದಿಗೆ ಸ್ಪರ್ಧಿಸಿದರೆ, ಅದು ನಾನು ನನ್ನ ದೇಶದ ಗೌರವವನ್ನು ಕಡಿಮೆ ಮಾಡಿದಂತೆ ಎಂದಿದ್ದಾರೆ.

ಐದು ವರ್ಷಗಳ ಬಳಿಕ ಅವಕಾಶ ಸಿಕ್ಕಿದೆ

ಐದು ವರ್ಷಗಳ ನಂತರ ಟೀಂ ಇಂಡಿಯಾಕ್ಕೆ ಮರಳಿರುವುದು ನನ್ನ ಅದೃಷ್ಟ ಎಂದು ಸಂಜು ಹೇಳಿದ್ದಾರೆ. 15 ಆಟಗಾರರಲ್ಲಿ ನಾನೂ ಕೂಡ ಎಂಜಾಯ್ ಮಾಡುತ್ತಿದ್ದೇನೆ. ನಾನು ಐದು ವರ್ಷಗಳ ನಂತರ ಮರಳಿ ಬಂದಿರುವುದು ನನ್ನ ಅದೃಷ್ಟ. ಭಾರತ ತಂಡ ಐದು ವರ್ಷಗಳ ಹಿಂದೆ ನಂಬರ್-1 ಆಗಿತ್ತು ಮತ್ತು ಈಗಲೂ ಇದೆ. ಭಾರತ ತಂಡದ 15 ಆಟಗಾರರ ಪೈಕಿ ಆಯ್ಕೆಯಾಗಿರುವುದು ನನಗೆ ಹೆಮ್ಮೆ ಎನಿಸಿದೆ. ಆದರೆ ಅದೇ ಸಮಯದಲ್ಲಿ, ನೀವು ನಿಮ್ಮ ಬಗ್ಗೆ ಯೋಚಿಸಬೇಕು. ನೀವು ಸರಿಯಾದ ಮನಸ್ಥಿತಿಯಲ್ಲಿ ಉಳಿಯುವುದು ಮತ್ತು ಪಾಸಿಟಿವ್ ಆಗಿ ಯೋಚಿಸುವುದು ಬಹಳ ಮುಖ್ಯ ಎಂದು ಸಂಜು ಹೇಳಿಕೊಂಡಿದ್ದಾರೆ.

Published On - 5:11 pm, Sat, 17 September 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ