ಟೀಮ್ ಇಂಡಿಯಾ ವಿರುದ್ಧ ಹೊಸ ಇತಿಹಾಸ ನಿರ್ಮಿಸಿದ ಯುವ ಸ್ಪಿನ್ನರ್ ದುನಿತ್
Dunith Wellalage: ಮೊದಲ ವಿಕೆಟ್ಗೆ 80 ರನ್ಗಳ ಜೊತೆಯಾಟವಾಡುವ ಮೂಲಕ ಈ ಜೋಡಿಯು ಬೃಹತ್ ಮೊತ್ತ ಪೇರಿಸುವ ಭರವಸೆ ಮೂಡಿಸಿದ್ದರು. ಆದರೆ 12ನೇ ಓವರ್ನಲ್ಲಿ ದಾಳಿಗಿಳಿದ 20 ರ ಹರೆಯದ ಯುವ ಸ್ಪಿನ್ನರ್ ದುನಿತ್ ವೆಲ್ಲಾಲಗೆ ಇಡೀ ಪಂದ್ಯದ ಚಿತ್ರಣ ಬದಲಿಸಿದರು.

ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆದ ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ತಂಡದ ಯುವ ಸ್ಪಿನ್ನರ್ ದುನಿತ್ ವೆಲ್ಲಾಲಗೆ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಭಾರತ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು.
ಮೊದಲ ವಿಕೆಟ್ಗೆ 80 ರನ್ಗಳ ಜೊತೆಯಾಟವಾಡುವ ಮೂಲಕ ಈ ಜೋಡಿಯು ಬೃಹತ್ ಮೊತ್ತ ಪೇರಿಸುವ ಭರವಸೆ ಮೂಡಿಸಿದ್ದರು. ಆದರೆ 12ನೇ ಓವರ್ನಲ್ಲಿ ದಾಳಿಗಿಳಿದ 20 ರ ಹರೆಯದ ಯುವ ಸ್ಪಿನ್ನರ್ ದುನಿತ್ ವೆಲ್ಲಾಲಗೆ ಇಡೀ ಪಂದ್ಯದ ಚಿತ್ರಣ ಬದಲಿಸಿದರು.
ಮೊದಲ ಎಸೆತದಲ್ಲೇ ಶುಭ್ಮನ್ ಗಿಲ್ (19) ಅವರನ್ನು ಬೌಲ್ಡ್ ಮಾಡಿದ ದುನಿತ್, ಮರು ಓವರ್ನಲ್ಲೇ ವಿರಾಟ್ ಕೊಹ್ಲಿಯ (3) ವಿಕೆಟ್ ಪಡೆದರು. ಇದರ ಬೆನ್ನಲ್ಲೇ ಅರ್ಧಶತಕ ಬಾರಿಸಿದ್ದ ರೋಹಿತ್ ಶರ್ಮಾ (53) ವೆಲ್ಲಾಲಗೆ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಆ ಬಳಿಕ ಕೆಎಲ್ ರಾಹುಲ್ (39) ಹಾಗೂ ಹಾರ್ದಿಕ್ ಪಾಂಡ್ಯ (5) ವಿಕೆಟ್ ಕಬಳಿಸಿದರು. ಇದರೊಂದಿಗೆ ಶ್ರೀಲಂಕಾ ಪರ 5 ವಿಕೆಟ್ ಕಬಳಿಸಿದ ಅತ್ಯಂತ ಕಿರಿಯ ಬೌಲರ್ ಎಂಬ ದಾಖಲೆ ದುನಿತ್ ವೆಲ್ಲಾಲಗೆ ಪಾಲಾಯಿತು.
ಇದಕ್ಕೂ ಮುನ್ನ ಈ ದಾಖಲೆ ಚರಿತ ಬುದ್ಧಿಕ ಹೆಸರಿನಲ್ಲಿತ್ತು. 2001 ರಲ್ಲಿ ಝಿಂಬಾಬ್ವೆ ವಿರುದ್ಧ 21 ವರ್ಷ ಚರಿತ 5 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ್ದರು. ಇದೀಗ 20 ವರ್ಷ ದುನಿತ್ ವೆಲ್ಲಾಲಗೆ ಈ ದಾಖಲೆಯನ್ನು ಮುರಿದಿದ್ದಾರೆ.
ಟೀಮ್ ಇಂಡಿಯಾ ವಿರುದ್ಧ 10 ಓವರ್ಗಳಲ್ಲಿ 40 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಶ್ರೀಲಂಕಾ ಪರ ಐದು ವಿಕೆಟ್ಗಳ ಸಾಧನೆ ಮಾಡಿದ ಅತ್ಯಂತ ಕಿರಿಯ ಬೌಲರ್ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕಿಂಗ್ ಕೊಹ್ಲಿಯ 1 ಶತಕಕ್ಕೆ 10 ದಾಖಲೆಗಳು ಉಡೀಸ್..!
ಶ್ರೀಲಂಕಾ ಪರ 5 ವಿಕೆಟ್ ಕಬಳಿಸಿದ ಕಿರಿಯ ಬೌಲರ್ಗಳ ಪಟ್ಟಿ ಹೀಗಿದೆ:
- ದುನಿತ್ ವೆಲ್ಲಲಾಗೆ (20 ವರ್ಷ, 246 ದಿನಗಳು) vs ಭಾರತ- 2023
- ಚರಿತ ಬುದ್ಧಿಕ (21 ವರ್ಷ, 65 ದಿನಗಳು) vs ಝಿಂಬಾಬ್ವೆ- 2001
- ತಿಸರ ಪೆರೇರಾ (21 ವರ್ಷ, 141 ದಿನಗಳು) vs ಭಾರತ- 2010
- ತಿಸರ ಪೆರೇರಾ (21 ವರ್ಷ, 241 ದಿನಗಳು) vs ಆಸ್ಟ್ರೇಲಿಯಾ- 2010
- ಉವೈಸ್ ಕರ್ನೈನ್ (21 ವರ್ಷ, 233 ದಿನಗಳು) vs ನ್ಯೂಝಿಲೆಂಡ್- 1984
Published On - 8:56 pm, Tue, 12 September 23
