IPL 2023: ಐಪಿಎಲ್​ಗೆ ಗುಡ್​ಬೈ ಹೇಳಿದ ಡ್ವೇನ್ ಬ್ರಾವೋ! ಹೊಸ ಹುದ್ದೆ ನೀಡಿದ ಸಿಎಸ್​ಕೆ

| Updated By: ಪೃಥ್ವಿಶಂಕರ

Updated on: Dec 02, 2022 | 3:47 PM

IPL 2023: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ನಂಬರ್ ಒನ್ ಆಗಿರುವ ಬ್ರಾವೋ ಇದೀಗ ಚೆನ್ನೈನಲ್ಲಿ ಬೌಲಿಂಗ್ ಕೋಚ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

IPL 2023: ಐಪಿಎಲ್​ಗೆ ಗುಡ್​ಬೈ ಹೇಳಿದ ಡ್ವೇನ್ ಬ್ರಾವೋ! ಹೊಸ ಹುದ್ದೆ ನೀಡಿದ ಸಿಎಸ್​ಕೆ
Dwayne Bravo
Follow us on

16ನೇ ಅವೃತ್ತಿಯ ಐಪಿಎಲ್ (IPL) ಆರಂಭಕ್ಕೂ ಮುನ್ನ ಈ ಮಿಲಿಯನ್ ಡಾಲರ್ ಟೂರ್ನಿಗೆ ಸಿಎಸ್​ಕೆ (Chennai Super Kings) ಆಲ್‌ರೌಂಡರ್ ಡ್ವೇನ್ ಬ್ರಾವೋ (Dwayne Bravo) ಗುಡ್​ ಬೈ ಹೇಳಿದ್ದಾರೆ. ಆದರೆ ಈ ನಡುವೆ ತಂಡದೊಂದಿಗೆ ಸಾಕಷ್ಟು ವರ್ಷ ಕ್ರಿಕೆಟ್ ಆಡಿದ ಬ್ರಾವೋರನ್ನು ಸಿಎಸ್​ಕೆ ಫ್ರಾಂಚೈಸಿ ಮತ್ತೆ ತಂಡಕ್ಕೆ ವಾಪಸ್ಸಾತಿ ಮಾಡಿಕೊಂಡಿದೆ. ಆದರೆ ಈ ಬಾರಿ ಬ್ರಾವೋ ಆಟಗಾರನಿಗೆ ಕಾಣಿಸಿಕೊಳ್ಳುವ ಬದಲು ತಂಡದ ಬೌಲಿಂಗ್ ಕೋಚ್​ ಆಗಿ ತಂಡಕ್ಕೆ ಎಂಟ್ರಿಕೊಟ್ಟಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ನಂಬರ್ ಒನ್ ಆಗಿರುವ ಬ್ರಾವೋ ಇದೀಗ ಚೆನ್ನೈನಲ್ಲಿ ಬೌಲಿಂಗ್ ಕೋಚ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ತಂಡದ ಬೌಲಿಂಗ್ ಕೋಚ್ ಆಗಿದ್ದ ಲಕ್ಷ್ಮೀಪತಿ ಬಾಲಾಜಿ (Lakshmipathy Balaji) ಮುಂದಿನ ಆವೃತ್ತಿಯ ಐಪಿಎಲ್​ನಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿರುವುದರಿಂದ ಅವರ ಸ್ಥಾನಕ್ಕೆ ಬ್ರಾವೋ ಆಯ್ಕೆಯಾಗಿದ್ದಾರೆ.

ಹೊಸ ಪ್ರಯಾಣಕ್ಕೆ ಉತ್ಸುಕನಾಗಿದ್ದೇನೆ

ಈ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಹೇಳಿಕೆ ನೀಡುವ ಮೂಲಕ ಮಾಹಿತಿ ನೀಡಿದೆ. ಈ ಹೇಳಿಕೆಯಲ್ಲಿ, ಬ್ರಾವೋ, “ನಾನು ಈ ಹೊಸ ಪ್ರಯಾಣಕ್ಕಾಗಿ ಉತ್ಸುಕನಾಗಿದ್ದೇನೆ. ನಾನು ಬೌಲರ್‌ಗಳೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಹೀಗಾಗಿ ಈ ಪಾತ್ರದ ಬಗ್ಗೆ ನಾನು ಉತ್ಸುಕನಾಗಿದ್ದೇನೆ. ಆಟಗಾರನಿಂದ ಕೋಚ್‌ನವರೆಗಿನ ಪ್ರಯಾಣದಲ್ಲಿ, ನಾನು ಏನನ್ನೂ ಬದಲಾಯಿಸಬೇಕಾಗಿಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಾನು ಆಡುವಾಗಲೂ ಬೌಲರ್‌ಗಳೊಂದಿಗೆ ಕೆಲಸ ಮಾಡುತ್ತಿದ್ದೆ. ಒಂದೇ ವ್ಯತ್ಯಾಸವೆಂದರೆ ನಾನು ಇನ್ನು ಮುಂದೆ ಮಿಡ್-ಆನ್ ಅಥವಾ ಮಿಡ್-ಆಫ್‌ನಲ್ಲಿ ನಿಲ್ಲುವುದಿಲ್ಲ ಎಂದಿದ್ದಾರೆ.

ಬ್ರಾವೋ ಐಪಿಎಲ್‌ ವೃತ್ತಿ ಜೀವನ ಹೀಗಿತ್ತು

ಬ್ರಾವೋ ಐಪಿಎಲ್‌ನಲ್ಲಿ 161 ಪಂದ್ಯಗಳನ್ನು ಆಡಿದ್ದು, 183 ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಅವರು ಈ ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಆಗಿದ್ದಾರೆ. ಅಲ್ಲದೆ ಬ್ಯಾಟಿಂಗ್​ನಲ್ಲೂ ಕಮಾಲ್ ಮಾಡಿರುವ ಈ ಆಲ್‌ರೌಂಡರ್ 130 ಸ್ಟ್ರೈಕ್ ರೇಟ್‌ನಲ್ಲಿ 1560 ರನ್ ಗಳಿಸಿದ್ದಾರೆ. 2011 ರಿಂದ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಭಾಗವಾಗಿದ್ದ ಬ್ರಾವೋ 2011, 2018 ಮತ್ತು 2021 ರಲ್ಲಿ ಮೂರು ಬಾರಿ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದ್ದರು.

ಇದನ್ನೂ ಓದಿ: ಸಿಎಸ್​ಕೆ ತಂಡದಿಂದ ಗೇಟ್​ಪಾಸ್; 5 ದಿನಗಳಲ್ಲಿ ಸತತ 3ನೇ ಶತಕ ಸಿಡಿಸಿ ಮಿಂಚಿದ ಜಗದೀಸನ್..!

ಈ ಫ್ರಾಂಚೈಸಿಯ ಹೊರತಾಗಿ ಅವರು ಎರಡು ವರ್ಷಗಳ ಕಾಲ ಗುಜರಾತ್ ಲಯನ್ಸ್ ಪರ ಆಡಿದ್ದರು. ಮುಂಬೈ ಇಂಡಿಯನ್ಸ್‌ನೊಂದಿಗೆ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದ ಬ್ರಾವೋ ಚೆನ್ನೈ ಪರ 144 ಪಂದ್ಯಗಳನ್ನಾಡಿದ್ದು 168 ವಿಕೆಟ್ ಪಡೆದು 1556 ರನ್ ಗಳಿಸಿದ್ದಾರೆ. ಈ ನಡುವೆ 2013 ಮತ್ತು 2015 ರ ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆಯುವುದರೊಂದಿಗೆ ಪರ್ಪಲ್ ಕ್ಯಾಪ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಪ್ಲೇಆಫ್​ನಿಂದ ಹೊರಬಿದ್ದಿದ್ದ ಸಿಎಸ್​ಕೆ

ಚೆನ್ನೈ ಸೂಪರ್ ಕಿಂಗ್ಸ್ ಅತಿ ಹೆಚ್ಚು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿರುವ ತಂಡಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ತಂಡ ನಾಲ್ಕು ಬಾರಿ ಟ್ರೋಫಿ ಎತ್ತಿ ಹಿಡಿದಿದೆ. ಅದಾಗ್ಯೂ ಚೆನ್ನೈ ತಂಡ ಎರಡು ಬಾರಿ ಪ್ಲೇಆಫ್ ತಲುಪುವಲ್ಲಿ ವಿಫಲವಾಗಿದೆ. ಈ ತಂಡವು 2020 ಮತ್ತು ಕಳೆದ ವರ್ಷ ಪ್ಲೇಆಫ್ ತಲುಪಿರಲಿಲ್ಲ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:42 pm, Fri, 2 December 22