IPL 2022: ಐಪಿಎಲ್ನ ಸರ್ವಶ್ರೇಷ್ಠ ದಾಖಲೆಯನ್ನು ಸರಿಗಟ್ಟಿದ ಬ್ರಾವೊ
Dwayne Bravo: ಒಟ್ಟಾರೆ ಟಿ20 ಕ್ರಿಕೆಟ್ ದಾಖಲೆ ನೋಡುವುದಾದರೆ, ಡ್ವೇನ್ ಬ್ರಾವೊ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
ಐಪಿಎಲ್ ಸೀಸನ್ 15 ಆರಂಭದಲ್ಲೇ ದಾಖಲೆಗಳು ನಿರ್ಮಾಣವಾಗಿದೆ. 200 ಪಂದ್ಯಗಳ ಬಳಿಕ ನಾಯಕನಾಗುವ ರವೀಂದ್ರ ಜಡೇಜಾ ದಾಖಲೆ ಬರೆದರೆ 3 ವಿಕೆಟ್ ಉರುಳಿಸಿ ಡ್ವೇನ್ ಬ್ರಾವೊ ವಿಶೇಷ ಸಾಧನೆಯನ್ನು ಸರಿಗಟ್ಟಿದರು. ಇದಕ್ಕೂ ಮುನ್ನ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಈ ಪಂದ್ಯದಲ್ಲಿ ಟಾಸ್ ಗೆದ್ದ KKR ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದರು. ಅಲ್ಲದೆ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸುವ ಮೂಲಕ ಸಿಎಸ್ಕೆ ತಂಡವನ್ನು ಕೇವಲ 131 ರನ್ಗಳಿಗೆ ನಿಯಂತ್ರಿಸಿದರು. ಇದಕ್ಕೆ ಉತ್ತರವಾಗಿ ಕೆಕೆಆರ್ 18.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಈ ಸೋಲಿನ ಹೊರತಾಗಿಯೂ ಸಿಎಸ್ಕೆ ಪರ ಮಹೇಂದ್ರ ಸಿಂಗ್ ಧೋನಿ ಅರ್ಧಶತಕ ಬಾರಿಸಿದ್ರೆ, ಡ್ವೇನ್ ಬ್ರಾವೊ 3 ವಿಕೆಟ್ ಉರುಳಿಸಿ ಮಿಂಚಿದ್ದರು.
ಈ ಮೂರು ವಿಕೆಟ್ನೊಂದಿಗೆ ಇದೀಗ ಬ್ರಾವೊ ಐಪಿಎಲ್ನಲ್ಲಿ 170 ವಿಕೆಟ್ ಕಬಳಿಸಿದಂತಾಗಿದೆ. ಇದರೊಂದಿಗೆ ಐಪಿಎಲ್ನ ಸರ್ವಶ್ರೇಷ್ಠ ದಾಖಲೆ ಬರೆದಿರುವ ಲಸಿತ್ ಮಾಲಿಂಗ ಅವರ ದಾಖಲೆಯನ್ನು ಬ್ರಾವೊ ಸರಿಗಟ್ಟಿದ್ದಾರೆ. ಮಾಲಿಂಗ ಐಪಿಎಲ್ನಲ್ಲಿ 170 ವಿಕೆಟ್ ಕಬಳಿಸುವ ಮೂಲಕ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಬರೆದಿಟ್ಟಿದ್ದಾರೆ. ಇದೀಗ ಈ ಸರ್ವಶ್ರೇಷ್ಠ ದಾಖಲೆಯನ್ನು ಡ್ವೇನ್ ಬ್ರಾವೊ ಸರಿಗಟ್ಟಿದ್ದಾರೆ. ಈ ಮೂಲಕ ಮುಂದಿನ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸುವತ್ತ ಹೆಜ್ಜೆಯಿಟ್ಟಿದ್ದಾರೆ.
ಇನ್ನು ಐಪಿಎಲ್ನಲ್ಲಿ ಕೇವಲ 5 ಬೌಲರುಗಳು ಮಾತ್ರ 150 ಕ್ಕೂ ಅಧಿಕ ವಿಕೆಟ್ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಇದೀಗ ಲಸಿತ್ ಮಾಲಿಂಗ ಹಾಗೂ ಡ್ವೇನ್ ಬ್ರಾವೊ 170 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಅಮಿತ್ ಮಿಶ್ರಾ ಇದ್ದು, ಮಿಶ್ರಾ ಒಟ್ಟು 166 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 157 ವಿಕೆಟ್ ಪಡೆದಿಯುವ ಪಿಯುಷ್ ಚಾವ್ಲಾ ನಂತರದ ಸ್ಥಾನದಲ್ಲಿದ್ದಾರೆ. ಇನ್ನು ಹರ್ಭಜನ್ ಸಿಂಗ್ ಕೂಡ 150 ಪಡೆಯುವ ಮೂಲಕ ಈ ಪಟ್ಟಿಯಲ್ಲಿದ್ದಾರೆ.
ಬ್ರಾವೋ ಹೆಸರಿನಲ್ಲಿದೆ ವಿಶ್ವ ದಾಖಲೆ: ಸದ್ಯ ಲಸಿತ್ ಮಾಲಿಂಗ ದಾಖಲೆ ಮುರಿಯಲು ಬ್ರಾವೊಗೆ 1 ವಿಕೆಟ್ ಅಗತ್ಯವಿದೆ. ಇದಾಗ್ಯೂ ಒಟ್ಟಾರೆ ಟಿ20 ಕ್ರಿಕೆಟ್ ದಾಖಲೆ ನೋಡುವುದಾದರೆ, ಡ್ವೇನ್ ಬ್ರಾವೊ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಇದುವರೆಗೆ 522 ಟಿ20 ಪಂದ್ಯಗಳಲ್ಲಿ 571 ವಿಕೆಟ್ ಪಡೆದು ಬ್ರಾವೊ ವಿಶ್ವ ದಾಖಲೆ ಬರೆದಿಟ್ಟಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಇಮ್ರಾನ್ ತಾಹಿರ್ 451 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ರಶೀದ್ ಖಾನ್ 435 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?
ಇದನ್ನೂ ಓದಿ: IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು
(Dwayne Bravo equals Lasith Malinga’s all-time record for most IPL wickets)