AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs South Africa Women: ರಣ ರೋಚಕ ಪಂದ್ಯದಲ್ಲಿ ಮಿಥಾಲಿ ಪಡೆಗೆ ಸೋಲು: ಭಾರತದ ವಿಶ್ವಕಪ್ ಅಭಿಯಾನ ಅಂತ್ಯ

Womens World Cup 2022, IND vs SA: ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ಧ ಭಾರತ ಮಹಿಳಾ ತಂಡ (India vs South Africa Women) ಕೊನೇ ಹಂತದಲ್ಲಿ ಎಡವಿದ ಪರಿಣಾಮ ಸೋಲು ಕಂಡಿದ್ದು ಸೆಮಿ ಫೈನಲ್​ ರೇಸ್​ನಿಂದ ಹೊರಬಿದ್ದಿದೆ. ಕೊನೇ 1 ಎಸೆತದಲ್ಲಿ ಆಫ್ರಿಕಾ ಗೆಲುವಿಗೆ 1 ರನ್ ಬೇಕಿದ್ದಾಗ ಮಿಗ್ನಾನ್‌ ಡು ಪ್ರೀಜ್ ಬೌಂಡರಿ ಬಾರಿಸಿ ಗೆಲುವು ತಂದಿಟ್ಟರು.

India vs South Africa Women: ರಣ ರೋಚಕ ಪಂದ್ಯದಲ್ಲಿ ಮಿಥಾಲಿ ಪಡೆಗೆ ಸೋಲು: ಭಾರತದ ವಿಶ್ವಕಪ್ ಅಭಿಯಾನ ಅಂತ್ಯ
INDW vs SAW Womens World Cup
TV9 Web
| Edited By: |

Updated on:Mar 27, 2022 | 2:31 PM

Share

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ (Womens World Cup 2022) ಇಂದು ನಡೆದ ರಣ ರೋಚಕ ಕದನದಲ್ಲಿ ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ಧ ಭಾರತ ಮಹಿಳಾ ತಂಡ (India vs South Africa Women) ಕೊನೇ ಹಂತದಲ್ಲಿ ಎಡವಿದ ಪರಿಣಾಮ ಸೋಲು ಕಂಡಿದ್ದು ಸೆಮಿ ಫೈನಲ್​ ರೇಸ್​ನಿಂದ ಹೊರಬಿದ್ದಿದೆ. ಇದು ಮಿಥಾಲಿ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಗೆದ್ದರೆ ಸೆಮಿ ಫೈನಲ್​ಗೆ ಪ್ರವೇಶ ಸೋತರೆ ಟೂರ್ನಿಯಿಂದ ಹೊರ ಬೀಳುವುದು ಖಚಿತ ಎಂಬಂತಾಗಿತ್ತು. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭಾರತೀಯ ಬ್ಯಾಟರ್​ಗಳಾದ ಸ್ಮೃತಿ ಮಂದಾನ, ಶಫಾಲಿ ವರ್ಮಾ, ಮಿಥಾಲಿ ರಾಜ್ ಮತ್ತು ಅಂತಿಮ ಹಂತದಲ್ಲಿ ಹರ್ಮನ್​ಪ್ರೀತ್ ಕೌರ್ (Harmanpreet Kaur) ಅಬ್ಬರಿಸಿದರೆ ಬೌಲಿಂಗ್​ನಲ್ಲಿ ಸಂಘಟಿತ ಪ್ರದರ್ಶನ ತೋರಿದರೂ ಅಂತಿಮ ಹಂತದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಕೊನೇ 1 ಎಸೆತದಲ್ಲಿ ಆಫ್ರಿಕಾ ಗೆಲುವಿಗೆ 1 ರನ್ ಬೇಕಿದ್ದಾಗ ಮಿಗ್ನಾನ್‌ ಡು ಪ್ರೀಜ್ ಬೌಂಡರಿ ಬಾರಿಸಿ ಗೆಲುವು ತಂದಿಟ್ಟರು. ಈ  ಮೂಲಕ ಈ ಬಾರಿ ಕಪ್ ಗೆಲ್ಲುವ ಭಾರತದ ಆಸೆ ನುಚ್ಚುನೂರಾಯಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ಗೆ ಇಳಿದ ಭಾರತ ಬೊಂಬಾಟ್ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಸ್ಮೃತಿ ಮಂದಾನ ಹಾಗೂ ಶೆಫಾಲಿ ವರ್ಮಾ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಅದರಲ್ಲೂ ಶಫಾಲಿ ತಮ್ಮದೇ ಶೈಲಿಯ ಬಿರುಸಿನ ಆಟವಾಡಿ ಅರ್ಧಶತಕ ಸಿಡಿಸಿದರು. ಮೊದಲ ವಿಕೆಟ್​​ಗೆ ಈ ಜೋಡಿ 91 ರನ್​ಗಳ ಕಾಣಿಕೆ ನೀಡಿತು. ಚೆನ್ನಾಗಗಿಯೇ ಆಡುತ್ತಿದ್ದ ಶಫಾಲಿ 53 ರನ್ ಗಳಿಸಿ ರನೌಟ್​ಗೆ ಬಲಿಯಾದರು. ಬಂದ ಬೆನ್ನಲ್ಲೇ ಯಸ್ತಿಕಾ ಭಾಟಿಯಾ ಕೇವಲ 2 ರನ್​ಗೆ ನಿರ್ಗಮಿಸಿದ್ದು ಹಿನ್ನಡೆಯಾಯಿತು.

ಆದರೆ, ಮೂರನೇ ವಿಕೆಟ್​ಗೆ ಸ್ಮೃತಿ ಜೊತೆಯಾದ ಮಿಥಾಲಿ ರಾಜ್ ನಾಯಕಿಯ ಆಟವಾಡಿದರು. ತಂಡಕ್ಕೆ ಆಧಾರವಾದ ಈ ಜೋಡಿ ರನ್ ಗಳಿಸುತ್ತಾ ಸಾಗಿತು. ಮಂದಾನ ಅರ್ಧಶತಕ ಸಿಡಿಸಿ ಬಿರುಸಿನ ಬ್ಯಾಟಿಂಗ್ ನಡೆಸಿದರು. ಇವರಿಬ್ಬರು 80 ರನ್​ಗಳ ಕೊಡುಗೆ ನೀಡಿದರು. ಮಂದಾನ 84 ಎಸೆಗಳಲ್ಲಿ 6 ಬೌಂಡರಿ, 1 ಸಿಕ್ಸರ್​ನೊಂದಿಗೆ 71 ರನ್ ಚಚ್ಚಿದರು. ಹರ್ಮನ್​ಪ್ರೀತ್ ಕೌರ್ ಜೊತೆ ಮಿಥಾಲಿ ಅರ್ಧಶತಕದ ಜೊತೆಯಾಟ ಆಡಿ ನಿರ್ಗಮಿಸಿದರು. 84 ಎಸೆತಗಳಲ್ಲಿ 8 ಫೋರ್​ನೊಂದಿಗೆ 68 ರನ್​​ ಗಳಿಸಿ ಮಿಥಾಲಿ ಔಟಾದರು. ಪೂಜಾ ವಸ್ತ್ರಾಕರ್ ಆಆಟ 3 ರನ್​ಗೆ ಅಂತ್ಯವಾಯಿತು.

ಭಾರತದ ಫಿನಿಶಿಂಗ್ ಜವಾಬ್ದಾರಿ ಹೊತ್ತ ಹರ್ಮನ್​ಪ್ರೀತ್ ಕೌರ್ ಅರ್ಧಶತಕದ ಅಂಚಿನಲ್ಲಿ ಎಡವಿದರೂ ತಂಡ ಸವಾಲಿನ ಮೊತ್ತ ಕಲೆಹಾಕುವಲ್ಲಿ ನೆರವಾದರು. ಇವರು 57 ಎಸೆತಗಳಲ್ಲಿ 4 ಫೋರ್​ನೊಂದಿಗೆ ಅಜೇಯ 48 ರನ್ ಸಿಡಿಸಿದರು. ಅಂತಿಮವಾಗಿ ಭಾರತ 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 274 ರನ್ ಬಾರಿಸಿತು. ಆಫ್ರಿಕಾ ಪರ ಮಸಬೆಟ ಕ್ಲಾಸ್ ಹಾಗೂ ಶಬ್ನಿಮ್‌ ಇಸ್ಮಾಯಿಲ್ ತಲಾ 2 ವಿಕೆಟ್ ಪಡೆದರು.

275 ರನ್​ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 14 ರನ್​ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ, ಎರಡನೇ ವಿಕೆಟ್​ಗೆ ಜೊತೆಯಾದ ಲೌರಾ ವೋಲ್ವರ್ಡ್‌ ಮತ್ತು ಲಾರಾ ಗುಡಾಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಭಾರತೀಯ ಬೌಲರ್​ಗಳನ್ನು ಕಾಡಿದ ಈ ಜೋಡಿ ಶತಕದ ಜೊತೆಯಾಟವಾಡಿ ಭಾರತದ ಗೆಲುವಿಗೆ ಅಡ್ಡವಾಗಿ ನಿಂತರು. ಆದರೆ, ರಾಜೇಶ್ವರಿ ಗಾಯಕ್ವಾಡ್ ಮತ್ತು ಹರ್ಮನ್​ಪ್ರೀತ್ ಓವರ್ ಪಂದ್ಯದ ಇಡೀ ಚಿತ್ರಣವನ್ನೇ ಬದಲಾಯಿಸಿತು.

ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದ ಲಾರಾ ಗುಡಾಲ್ 49 ರನ್ ಗಳಿಸಿದ್ದಾಗ ಗಾಯಕ್ವಾಡ್ ಬೌಲಿಂಗ್​ನಲ್ಲಿ ಸ್ಟಂಪ್​ ಔಟ್​ಗೆ ಬಲಿಯಾದರು. ಮುಂದಿನ ಓವರ್​ನ ಹರ್ಮನ್​ಪ್ರೀತ್ ಬೌಲಿಂಗ್​ನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಲೌರಾ ವೋಲ್ವರ್ಡ್‌ ಕ್ಲೀನ್ ಬೌಲ್ಡ್ ಆದರು. ವೋಲ್ವರ್ಡ್‌ 79 ಎಸೆತಗಳಲ್ಲಿ 11 ಬೌಂಡರಿಯೊಂದಿಗೆ 80 ರನ್​ಗೆ ಔಟಾದರು. ನಾಯಕಿ ಸುನೆ ಲೌಸ್ ಆಟ 22 ರನ್​ಗೆ ಅಂತ್ಯವಾಯಿತು. ಈ ಸಂದರ್ಭ ಮಿಗ್ನಾನ್‌ ಡು ಪ್ರೀಜ್ ಹಾಗೂ ಮರಿಜಾನೆ ಕ್ಯಾಪ್ (32) ಗೆಲುವಿಗೆ ಹೋರಾಟ ನಡೆಸಿದರು. ಪರಿಣಾಮ ಕೊನೇ ಓವರ್​ನಲ್ಲಿ ಆಫ್ರಿಕಾ ಗೆಲುವಿಗೆ 7 ರನ್​ಗಳು ಬೇಕಾಗಿತ್ತು. ಕೊನೇ ಎಸೆತದಲ್ಲಿ 1 ರನ್​ಗಳ ಅವಶ್ಯಕತೆಯಿತ್ತು. ಮಿಗ್ನಾನ್‌ ಡು (52*) ವಿನ್ನಿಂಗ್ ಶಾಟ್ ಹೊಡೆದು ಭಾರತವನ್ನು ವಿಶ್ವಕಪ್​ನಿಂದ ಹೊರದಬ್ಬಿತು. ಅಂತಿಮವಾಗಿ ದಕ್ಷಿಣ ಆಫ್ರಿಕಾ 50 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 275 ರನ್ ಬಾರಿಸಿ 3 ವಿಕೆಟ್​ಗಳ ಜಯ ಕಂಡಿತು. ಭಾರತ ಪರ ಹರ್ಮನ್​ಪ್ರೀತ್ ಕೌರ್ ಹಾಗೂ ರಾಜೇಶ್ವರಿ ಗಾಯಕ್ವಾಡ್ ತಲಾ 2 ವಿಕೆಟ್ ಪಡೆದರು.

Mithali Raj Fifty: ಎಲ್ಲ ದಾಖಲೆ ಉಡೀಸ್: ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ ನಾಯಕಿ ಮಿಥಾಲಿ ರಾಜ್

Sheldon Jackson: ಶೆಲ್ಡನ್ ಜಾಕ್ಸನ್ ಮಿಂಚಿನ ಸ್ಟಂಪಿಂಗ್​​ಗೆ ಕ್ರಿಕೆಟ್ ಜಗತ್ತು ಶಾಕ್: ಇಲ್ಲಿದೆ ವೈರಲ್ ವಿಡಿಯೋ

Published On - 2:13 pm, Sun, 27 March 22

Follow Us
TV9 Web
TV9 Web

TV9 Kannada

Read More
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!