Sheldon Jackson: ಶೆಲ್ಡನ್ ಜಾಕ್ಸನ್ ಮಿಂಚಿನ ಸ್ಟಂಪಿಂಗ್​​ಗೆ ಕ್ರಿಕೆಟ್ ಜಗತ್ತು ಶಾಕ್: ಇಲ್ಲಿದೆ ವೈರಲ್ ವಿಡಿಯೋ

Sheldon Jackson Stumping Video: ಐಪಿಎಲ್ 2022ರ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ ತಂಡದ ವಿಕೆಟ್ ಕೀಪರ್ ಬ್ಯಾಟರ್ ಶೆಲ್ಡನ್ ಜಾಕ್ಸನ್ ಮಾಡಿದ ಮಿಂಚಿನ ಸ್ಟಂಪ್ ಔಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

Sheldon Jackson: ಶೆಲ್ಡನ್ ಜಾಕ್ಸನ್ ಮಿಂಚಿನ ಸ್ಟಂಪಿಂಗ್​​ಗೆ ಕ್ರಿಕೆಟ್ ಜಗತ್ತು ಶಾಕ್: ಇಲ್ಲಿದೆ ವೈರಲ್ ವಿಡಿಯೋ
Sheldon Jackson Stumps IPL 2022
Follow us
TV9 Web
| Updated By: Vinay Bhat

Updated on: Mar 27, 2022 | 12:22 PM

ಐಪಿಎಲ್ 2022 (IPL 2022) ಟೂರ್ನಿ ಆರಂಭವಾಗಿದ್ದು ಮೊದಲ ಪಂದ್ಯ ರೋಚಕತೆಯಿಂದ ಕೂಡಿತ್ತು. ರವೀಂದ್ರ ಜಡೇಜಾ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ತಂಡ 6 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿತು. ಸಿಎಸ್​ಕೆ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ಅಜೇಯ ಅರ್ಧಶತಕದ ಹೋರಾಟ ತಂಡಕ್ಕೆ ಫಲ ನೀಡಲಿಲ್ಲ. ಇತ್ತ ಕೆಕೆಆರ್ ಬ್ಯಾಟರ್​ಗಳ ಸಂಘಟಿತ ಪ್ರದರ್ಶನದಿಂದ ಜಯ ಸಾಧಿಸಿದೆ. ಈ ಪಂದ್ಯ ಕೆಲ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಅದರಲ್ಲಿ ಪ್ರಮುಖವಾಗಿ ಕೆಕೆಆರ್​ನ ವಿಕೆಟ್ ಕೀಪರ್ ಬ್ಯಾಟರ್ ಶೆಲ್ಡನ್ ಜಾಕ್ಸನ್ (Sheldon Jackson) ಮಾಡಿದ ಸ್ಟಂಪ್ ಔಟ್. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇವರ ಈ ಮಿಂಚಿನ ಸ್ಟಂಪಿಂಗ್​ ಕಂಡು ಕ್ರಿಕೆಟ್ ಜಗತ್ತೇ ಶಾಕ್ ಆಗಿದೆ.

ಹೌದು, ಪಂದ್ಯದ 8ನೇ ಓವರ್ ಬೌಲಿಂಗ್ ಮಾಡಲು ವರುಣ್ ಚಕ್ರವರ್ತಿ ಬಂದರು. ಆ ಹೊತ್ತಿಗಾಗಲೇ ರಾಬಿನ್ ಉತ್ತಪ್ಪ ಅಪಾಯಕಾರಿಯಾಗಿ ಗೋಚರಿಸಿದ್ದರು. ಇವರ ವಿಕೆಟ್ ಕೀಳುವುದು ಕೆಕೆಆರ್​​ಗೆ ಮಖ್ಯವಾಗಿತ್ತು. ವರುಣ್ ತಮ್ಮ ಐದನೇ ಎಸೆತವನ್ನು ಲೆಗ್-ಸ್ಟಂಪ್‌ನ ಹೊರಗೆ ಹಾಕಿದರು. ಕ್ರೀಸ್ ಬಿಟ್ಟು ಮುಂದೆ ಬಂದಿದ್ದ ಉತ್ತಪ್ಪ ಬ್ಯಾಟ್​ಗೆ ಚೆಂಡು ತಾಗಲೇ ಇಲ್ಲ. ಇದನ್ನು ಅರಿತ ಕೀಪರ್ ಶೆಲ್ಡನ್ ಜಾಕ್ಸನ್ ಲೆಗ್-ಸ್ಟಂಪ್‌ನ ಹೊರಗೆ ಚೆಂಡು ಇದ್ದರೂ ರಾಬಿನ್ ಉತ್ತಪ್ಪ ಅವರ ಅದ್ಭುತ ಸ್ಟಂಪಿಂಗ್ ಮಾಡಿ ಅಮೋಘ ಪ್ರದರ್ಶನ ನೀಡಿದರು. ಸೌರಾಷ್ಟ್ರದ 35 ವರ್ಷದ ಆಟಗಾರ ಸ್ಟಂಪ್‌ ಹಿಂದೆ ಮಿಂಚಿನ ವೇಗದ ಪ್ರದರ್ಶನದಿಂದ ಎಲ್ಲರನ್ನೂ ಆಕರ್ಷಿಸಿದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಸಚಿನ್-ಯುವಿ ಪ್ರಶಂಸೆ:

ಶೆಲ್ಡನ್ ತಮ್ಮ ವಿಕೆಟ್ ಕೀಪಿಂಗ್ ಕೌಶಲ್ಯವನ್ನು ತೋರ್ಪಡಿಸಿ ಇದರಿಂದ ಪ್ರಭಾವಿತರಾಗಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ ಜೊತೆಗೆ ಹೋಲಿಕೆ ಮಾಡಿದ್ದಾರೆ. “ಇದೊಂದು ಅದ್ಭುತ ಸ್ಟಂಪಿಂಗ್, ಶೆಲ್ಡನ್ ಜಾಕ್ಸನ್ ಅವರ ಈ ವೇಗ ನನಗೆ ಧೋನಿಯನ್ನು ನೆನಪಿಸಿತು,” ಎಂದು ಸಚಿನ್ ತಮ್ಮ ಟ್ವಿಟರ್​​ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಗಾಳಿಯಂತೆ ವೇಗವಾಗಿ ಚೆಂಡು ಬ್ಯಾಟರ್​ನಿಂದ ತಪ್ಪಿಸಿಕೊಂಡು ಹಿಂದೆ ಚಿಮ್ಮಿದರೂ ಜಾಕ್ಸನ್ ಹೆಲ್ಮೆಟ್ ಅನ್ನು ಬಳಸಲಿಲ್ಲ. ಇದನ್ನು ನೋಡಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಗಾಯವನ್ನು ತಪ್ಪಿಸಲು ಸ್ಪಿನ್ನರ್‌ಗಳ ವಿರುದ್ಧ ಹೆಲ್ಮೆಟ್ ಧರಿಸಲು ಜಾಕ್ಸನ್ ಅವರಿಗೆ ಮನವಿ ಮಾಡಿದ್ದಾರೆ.

ಪಂದ್ಯ ಮುಗಿದ ಬಳಿಕ ಮಾತನಾಡಿದ ಶೆಲ್ಡನ್, “ಆರಂಭದಲ್ಲಿ ನನಗೆ ತುಂಬಾ ಆತಂಕವಿತ್ತು. ಆದರೆ, ಮ್ಯಾನೇಜ್ಮೆಂಟ್ ಮತ್ತು ಕೋಚ್​ಗಳು ಅತ್ಯುತ್ತಮವಾಗಿದ್ದಾರೆ. ಈ ಗೊಂದಲದಿಂದ ನನಗೆ ಹೊರಬರಲು ಅವರು ಸಹಾಯ ಮಾಡಿದರು. ನನ್ನ ಹಿಂದೆ ನಿಂತು ಸಹಕರಿಸಿದರು. ಎಂಎಸ್ ಧೋನಿ ಯಾವಾಗಲೂ ನನ್ನ ಸ್ಫೂರ್ತಿ. ಅವರನ್ನು ನೋಡಿ ಸಾಕಷ್ಟು ಕಲಿತಿದ್ದೇನೆ. ಅವರು ಏನೇ ಮಾಡಿದರು ಅದನ್ನು ನಾನು ಅನುಕರಿಸುತ್ತಿದ್ದೆ. ನಾನು ಅವರಿಂದ ಕಲಿಯಲು ಇನ್ನೂ ಸಾಕಷ್ಟಿದೆ. ಪ್ರಮುಖವಾಗಿ ಹೆಲಿಕಾಫ್ಟರ್ ಶಾಟ್,” ಎಂದು ಹೇಳಿದ್ದಾರೆ.

ವಾಂಖೆಡೆ ಸ್ಟೇಡಿಯಂನಲ್ಲಿ  ಐಪಿಎಲ್ 2022ರ ಮೊದಲ ಪಂದ್ಯದಲ್ಲಿ ಸರ್ವಾಂಗೀಣ ನಿರ್ವಹಣೆ ನೆರವಿನಿಂದ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿ ಶುಭಾರಂಭ ಕಂಡಿತು. ಇದರೊಂದಿಗೆ 2021ರ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅನುಭವಿಸಿದ ಸೋಲಿಗೆ ಮೊದಲ ಪಂದ್ಯದಲ್ಲೇ ಸೇಡು ಕೂಡ ತೀರಿಸಿಕೊಂಡಿತು. ಧೋನಿ ಉತ್ತರಾಧಿಕಾರಿಯಾಗಿರುವ ರವೀಂದ್ರ ಜಡೇಜಾ ನಾಯಕರಾಗಿ ಶುಭಾರಂಭ ಕಾಣಲು ವಿಲರಾದರು. ಶ್ರೇಯಸ್ ಅಯ್ಯರ್ ನಾಯಕನಾಗಿ ಭರವಸೆ ಮೂಡಿಸಿದ್ದಾರೆ.

Shreyas Iyer: ನಾಯಕನ ಮಾತು ಎಂದರೆ ಇದು: ಪಂದ್ಯ ಮುಗಿದ ಬಳಿಕ ಶ್ರೇಯಸ್ ಅಯ್ಯರ್ ಏನು ಹೇಳಿದ್ರು ಕೇಳಿ

India vs South Africa Women: ಮಿಥಾಲಿ, ಸ್ಮೃತಿ, ಶಫಾಲಿ ಅರ್ಧಶತಕ: ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಭಾರತ ಸವಾಲಿನ ಮೊತ್ತ

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು