AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shreyas Iyer: ನಾಯಕನ ಮಾತು ಎಂದರೆ ಇದು: ಪಂದ್ಯ ಮುಗಿದ ಬಳಿಕ ಶ್ರೇಯಸ್ ಅಯ್ಯರ್ ಏನು ಹೇಳಿದ್ರು ಕೇಳಿ

CSK vs KKR, IPL 2022: ಶ್ರೇಯಸ್ ಅಯ್ಯರ್​ಗೆ ನೂತನ ನಾಯಕನಾದ ಮೊದಲ ಪಂದ್ಯದಲ್ಲೇ ಗೆಲುವು ದಕ್ಕಿದರೆ, ರವೀಂದ್ರ ಜಡೇಜಾ ನಾಯಕತ್ವ ಕಮಾಲ್ ಮಾಡಲಿಲ್ಲ. ಪಂದ್ಯ ಮುಗಿದ ಬಳಿಕ ಉಭಯ ತಂಡದ ನಾಯಕರು ಮಾತನಾಡಿದ್ದು ಅವರು ಏನು ಹೇಳಿದ್ದಾರೆ ಎಂಬುದನ್ನು ನೋಡೋಣ.

Shreyas Iyer: ನಾಯಕನ ಮಾತು ಎಂದರೆ ಇದು: ಪಂದ್ಯ ಮುಗಿದ ಬಳಿಕ ಶ್ರೇಯಸ್ ಅಯ್ಯರ್ ಏನು ಹೇಳಿದ್ರು ಕೇಳಿ
Shreyas and Jadeja post-match presentation
TV9 Web
| Updated By: Vinay Bhat|

Updated on: Mar 27, 2022 | 11:20 AM

Share

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯ ಮೊದಲ ಪಂದ್ಯ ಅಂದುಕೊಂಡಷ್ಟು ಮಟ್ಟಿಗೆ ರೋಚಕವಾಗಿ ಇರಲಿಲ್ಲ. ಸಿಎಸ್​ಕೆ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅಜೇಯ ಅರ್ಧಶತಕದ ನಡುವೆಯೂ ಸಾಂಘಿಕ ಪ್ರದರ್ಶನ ನೀಡಿದ ಕೊಲ್ಕತ್ತಾ ನೈಟ್‌ ರೈಡರ್ಸ್‌, ಐಪಿಎಲ್‍ 2022ರ (IPL 2022) ಚೊಚ್ಚಲ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (CSK vs KKR) ತಂಡವನ್ನ ಮಣಿಸುವ ಮೂಲಕ ಶುಭಾರಂಭ ಮಾಡಿತು. ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ನೀಡಿದ 132 ರನ್‍ಗಳ ಟಾರ್ಗೆಟ್‍ ಬೆನ್ನತ್ತಿದ ಕೆಕೆಆರ್‌ 18.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 133 ರನ್‌ ಸಿಡಿಸಿ ಗೆದ್ದು ಬೀಗಿತು. ಶ್ರೇಯಸ್ ಅಯ್ಯರ್​ಗೆ (Shreyas Iyer) ನೂತನ ನಾಯಕನಾದ ಮೊದಲ ಪಂದ್ಯದಲ್ಲೇ ಗೆಲುವು ದಕ್ಕಿದರೆ, ರವೀಂದ್ರ ಜಡೇಜಾ ನಾಯಕತ್ವ ಕಮಾಲ್ ಮಾಡಲಿಲ್ಲ. ಪಂದ್ಯ ಮುಗಿದ ಬಳಿಕ ಉಭಯ ತಂಡದ ನಾಯಕರು ಮಾತನಾಡಿದ್ದು ಅವರು ಏನು ಹೇಳಿದ್ದಾರೆ ಎಂಬುದನ್ನು ನೋಡೋಣ.

ಸಿಎಸ್​ಕೆ ತಂಡದ ನಾಯಕ ರವೀಂದ್ರ ಜಡೇಜಾ ಮಾತನಾಡಿ, “ಈ ಟೂರ್ನಿಯಲ್ಲೂ ಡ್ಯೂ ಪ್ರಮುಖ ಪಾತ್ರ ವಹಿಸುತ್ತದೆ. ಟಾಸ್ ಗೆದ್ದ ತಂಡ ಖಚಿತವಾಗಿ ಬೌಲಿಂಗ್ ಆಯ್ಕೆ ಮಾಡಿಕೊಳ್ಳಬೇಕು. ಮೊದಲ 6-7 ಓವರ್​ಗಳಲ್ಲಿ ವಿಕೆಟ್ ತುಂಬಾನೆ ತೇವವಾಗಿತ್ತು. ಬಳಿಕ ಬ್ಯಾಟ್​ಗೆ ಚೆನ್ನಾಗಿ ಬರಲಾರಂಭಿಸಿತು. ಕೊನೇ ಹಂತದವರೆಗೆ ಪಂದ್ಯವನ್ನು ಕೊಂಡೊಯ್ಯಲು ನಾವು ಯೋಚನೆ ಮಾಡಿದ್ದೆವು. ಎಲ್ಲ ಬೌಲರ್​ಗಳು ಉತ್ತಮ ಪ್ರದರ್ಶನ ನೀಡದ್ದಾರೆ. ಪ್ರಮುಖವಾಗಿ ಬ್ರಾವೋ ಬೌಲಿಂಗ್ ಅದ್ಭುತವಾಗಿತ್ತು,” ಎಂದು ಹೇಳಿದ್ದಾರೆ.

ಇನ್ನು ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮಾತನಾಡಿ, “ಎಂ ಎಸ್ ಧೋನಿ ಬ್ಯಾಟಿಂಗ್​ನಲ್ಲಿ ಇರುವಾಗ ಎದುರಾಳಿಗೆ ತಲೆನೋವು ಇದ್ದೇ ಇರುತ್ತದೆ. ಆರಂಭದಲ್ಲಿ ಇಬ್ಬನಿ ಇದ್ದ ಕಾರಣ ನಂತರ ಪಂದ್ಯ ಅವರ ಕಡೆಗೆ ತಿರುಗುತ್ತದೆ ಎಂದು ತಿಳಿದಿತ್ತು. ಚೆಂಡನ್ನು ಹಿಡಿಯುವುದು ಕೂಡ ಕಷ್ಟವಾಗಿತ್ತು. ಸದ್ಯ ಹೊಸ ಫ್ರಾಂಚೈಸಿಯಲ್ಲಿ ಎಂಜಾಯ್ ಮಾಡುತ್ತಿದ್ದೇನೆ. ಇಲ್ಲಿನ ಮ್ಯಾನೇಜ್ಮೆಂಟ್, ಸಿಇಒ, ಸಹ ಸದಸ್ಯರೆಲ್ಲ ಉತ್ತಮವಾಗಿದ್ದಾರೆ. ಇದೇ ವೈಬ್ ಅನ್ನು ಮುಂದುವರೆಸುಕೊಂಡು ಹೋಗುತ್ತೇವೆ. ನಾನು ಆಟವಾಡಲು ಇಷ್ಟ ಪಡುವ ಜಾಗದಲ್ಲಿ ಇದುಕೂಡ ಒಂದು. ನಾನು ಇಲ್ಲೇ ಬೆಳೆದಿದ್ದು, ಈ ಪಿಚ್ ಬಗ್ಗೆ ಚೆನ್ನಾಗಿ ತಿಳಿದಿದೆ. ನಾವು ಹೊಂದಿದ್ದ ಬೌಲಿಂಗ್ ಪಡೆಗೆ ಇದು ತುಂಬಾನೆ ಸುಲಭವಾಯಿತು. ಉಮೇಶ್ ಯಾದವ್ ನೆಟ್​ನಲ್ಲಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಅಭ್ಯಾಸ ಪಂದ್ಯದಲ್ಲೂ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಅವರ ಇಂದಿನ ಬೌಲಿಂಗ್ ಕಂಡು ಖಷಿಯಾಗಿದೆ,” ಎಂಬುದು ಅಯ್ಯರ್ ಮಾತು.

4 ಓವರ್​​ಗೆ ಕೇವಲ 20 ರನ್ ನೀಡಿ 2 ವಿಕೆಟ್ ಕಿತ್ತ ಉಮೇಶ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು. ನಂತರ ಮಾತನಾಡಿದ ಉಮೇಶ್, “ಎರಡು ವರ್ಷಗಳ ಬಳಿಕ ಈರೀತಿಯ ಪ್ರದರ್ಶನ ನೀಡಿರುವುದು ಸಂತಸ ತಂದಿದೆ. ತುಂಬಾ ಸಮಯದಿಂದ ನಾನು ವೈಟ್ ಬಾಲ್ ಕ್ರಿಕೆಟ್ ಆಡಿರಲಿಲ್ಲ. ಆದರೂ ಹೆಡ್ ಕೋಚ್, ನಾಯಕ ನನ್ನ ಮೇಲೆ ನಂಬಿಕೆಯಿಟ್ಟು ಆಡುವ 11ರ ಬಳಗದಲ್ಲಿ ಅವಕಾಶ ಕೊಟ್ಟರು. ನಾನು ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದರಿಂದ ಟಿ20 ಕ್ರಿಕೆಟ್​ಗೆ ಸಾಕಷ್ಟು ತಯಾರಾಗಬೇಕಿತ್ತು. ಅದನ್ನು ಮಾಡಿದೆ. ಮೊದಲ ಓವರ್​​ನಲ್ಲೇ ವಿಕೆಟ್ ಪಡೆದಾಗ ಖುಷಿ ಆಗುತ್ತದೆ, ಎದುರಾಳಿಗೆ ಮತ್ತಷ್ಟು ಒತ್ತಡ ಹೇರಬಹುದು,” ಎಂದು ಹೇಳಿದ್ದಾರೆ.

India vs South Africa Women: ಮಿಥಾಲಿ, ಸ್ಮೃತಿ, ಶಫಾಲಿ ಅರ್ಧಶತಕ: ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಭಾರತ ಸವಾಲಿನ ಮೊತ್ತ

IPL 2022: ಐಪಿಎಲ್​​ನಲ್ಲಿಂದು ಡಬಲ್ ಧಮಾಕ: ಶುಭಾರಂಭ ಮಾಡುವುದೇ ಆರ್​ಸಿಬಿ?, ರೋಹಿತ್ ಮೇಲೆ ಎಲ್ಲರ ಕಣ್ಣು

ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಕೊಪ್ಪಳದಲ್ಲಿ ಯೂರಿಯಾಗಾಗಿ ಒಂದು ಕಿಮೀ ವರೆಗೂ ಸರತಿ ಸಾಲಿನಲ್ಲಿ ನಿಂತ ರೈತರು‌
ಕೊಪ್ಪಳದಲ್ಲಿ ಯೂರಿಯಾಗಾಗಿ ಒಂದು ಕಿಮೀ ವರೆಗೂ ಸರತಿ ಸಾಲಿನಲ್ಲಿ ನಿಂತ ರೈತರು‌
ಚುನಾವಣಾ ಆಯೋಗದಿಂದ ನೋಟಿಸ್, ಬಿಹಾರ ಡಿಸಿಎಂ ವಿಜಯ್ ಹೇಳಿದ್ದೇನು?
ಚುನಾವಣಾ ಆಯೋಗದಿಂದ ನೋಟಿಸ್, ಬಿಹಾರ ಡಿಸಿಎಂ ವಿಜಯ್ ಹೇಳಿದ್ದೇನು?
Assembly Session Live: ವಿಧಾನಸಭೆ ಅಧಿವೇಶನ ನೇರಪ್ರಸಾರ
Assembly Session Live: ವಿಧಾನಸಭೆ ಅಧಿವೇಶನ ನೇರಪ್ರಸಾರ
ಭೀಮ ಹೆಸರಿಗೆ ತಕ್ಕಂತೆ ಗಜಪಡೆಯಲ್ಲಿ ಎಲ್ಲರಿಗಿಂತ ಹೆಚ್ಚು ತೂಕದ ಆನೆ
ಭೀಮ ಹೆಸರಿಗೆ ತಕ್ಕಂತೆ ಗಜಪಡೆಯಲ್ಲಿ ಎಲ್ಲರಿಗಿಂತ ಹೆಚ್ಚು ತೂಕದ ಆನೆ
‘ನನ್ನ ಅಮೂಲ್ಯ 8 ವರ್ಷ ವ್ಯರ್ಥವಾಗಿದೆ’; ಧ್ರುವ ಬಗ್ಗೆ ರಾಘವೇಂದ್ರ ಹೊಸ ಆರೋಪ
‘ನನ್ನ ಅಮೂಲ್ಯ 8 ವರ್ಷ ವ್ಯರ್ಥವಾಗಿದೆ’; ಧ್ರುವ ಬಗ್ಗೆ ರಾಘವೇಂದ್ರ ಹೊಸ ಆರೋಪ
ಮೈಮೇಲೆಲ್ಲಾ ಕಚ್ಚಿದ ಗಾಯ, ಡೇ ಕೇರ್ನಲ್ಲಿರುವ ಮಗುವಿನ ಸ್ಥಿತಿ ಏನಾಗಿದೆ ನೋಡಿ
ಮೈಮೇಲೆಲ್ಲಾ ಕಚ್ಚಿದ ಗಾಯ, ಡೇ ಕೇರ್ನಲ್ಲಿರುವ ಮಗುವಿನ ಸ್ಥಿತಿ ಏನಾಗಿದೆ ನೋಡಿ
ಅಪಘಾತದಲ್ಲಿ ಮೃತಪಟ್ಟ ಪತ್ನಿಯನ್ನು ಬೈಕ್​ನಲ್ಲಿ ಕಟ್ಟಿ ಹೊತ್ತೊಯ್ದ ಪತಿ
ಅಪಘಾತದಲ್ಲಿ ಮೃತಪಟ್ಟ ಪತ್ನಿಯನ್ನು ಬೈಕ್​ನಲ್ಲಿ ಕಟ್ಟಿ ಹೊತ್ತೊಯ್ದ ಪತಿ