ಆಂಗ್ಲರ ನೆಲದಲ್ಲಿ ಏಕದಿನ, ಟಿ-20 ಸರಣಿ ಆಡಲಿದೆ ಭಾರತ! ವೇಳಾಪಟ್ಟಿ ಪ್ರಕಟಿಸಿದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ

| Updated By: ಪೃಥ್ವಿಶಂಕರ

Updated on: Sep 08, 2021 | 5:00 PM

ಎರಡು ತಂಡಗಳ ನಡುವೆ ಸೀಮಿತ ಓವರ್‌ಗಳ ಸರಣಿಯನ್ನು ಆಡಲಾಗುತ್ತದೆ. ಭಾರತವು ಮುಂದಿನ ವರ್ಷ ಜುಲೈ ತಿಂಗಳನ್ನು ಇಂಗ್ಲೆಂಡ್‌ನಲ್ಲಿ ಕಳೆಯಲಿದೆ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯ ಜೊತೆಗೆ ಅದೇ ಸಂಖ್ಯೆಯ ಟಿ 20 ಪಂದ್ಯಗಳನ್ನು ಆಡಲಿದೆ.

ಆಂಗ್ಲರ ನೆಲದಲ್ಲಿ ಏಕದಿನ, ಟಿ-20 ಸರಣಿ ಆಡಲಿದೆ ಭಾರತ! ವೇಳಾಪಟ್ಟಿ ಪ್ರಕಟಿಸಿದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ
ಇಂಗ್ಲೆಂಡ್​ - ಟೀಂ ಇಂಡಿಯಾ ಆಟಗಾರರು
Follow us on

ಭಾರತ ತಂಡ ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಸರಣಿಯ ನಾಲ್ಕು ಪಂದ್ಯಗಳನ್ನು ಆಡಲಾಗಿದ್ದು ಕೊನೆಯ ಟೆಸ್ಟ್ ಪಂದ್ಯ ಬಾಕಿ ಉಳಿದಿದೆ. ಈ ಪ್ರವಾಸದಲ್ಲಿ ಭಾರತ ಏಕದಿನ ಮತ್ತು ಟಿ 20 ಆಡುತ್ತಿಲ್ಲ. ಆದರೆ ಮುಂದಿನ ವರ್ಷ ಜುಲೈನಲ್ಲಿ ಭಾರ ಮತ್ತೆ ಇಂಗ್ಲೆಂಡಿಗೆ ಬರಲಿದೆ. ನಂತರ ಎರಡು ತಂಡಗಳ ನಡುವೆ ಸೀಮಿತ ಓವರ್‌ಗಳ ಸರಣಿಯನ್ನು ಆಡಲಾಗುತ್ತದೆ. ಭಾರತವು ಮುಂದಿನ ವರ್ಷ ಜುಲೈ ತಿಂಗಳನ್ನು ಇಂಗ್ಲೆಂಡ್‌ನಲ್ಲಿ ಕಳೆಯಲಿದೆ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯ ಜೊತೆಗೆ ಅದೇ ಸಂಖ್ಯೆಯ ಟಿ 20 ಪಂದ್ಯಗಳನ್ನು ಆಡಲಿದೆ. ಪ್ರವಾಸವು ಟಿ 20 ಸರಣಿಯೊಂದಿಗೆ ಆರಂಭವಾಗುತ್ತದೆ ಮತ್ತು ನಂತರ ಏಕದಿನ ಸರಣಿಯೊಂದಿಗೆ ಮುಕ್ತಾಯವಾಗಲಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಬುಧವಾರ ದೇಶೀಯ ಸೀಸನ್ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಜುಲೈ 1 ರಂದು ಮ್ಯಾಂಚೆಸ್ಟರ್‌ನಲ್ಲಿ ಟಿ 20 ಸರಣಿಯ ಮೊದಲ ಪಂದ್ಯ ನಡೆಯಲಿದೆ. ಒಂದು ದಿನದ ನಂತರ ಅಂದರೆ ಜುಲೈ 3 ರಂದು ಎರಡನೇ ಟಿ 20 ಪಂದ್ಯ ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆಯಲಿದೆ. ಜುಲೈ 6 ರಂದು ಸೌತಾಂಪ್ಟನ್‌ನಲ್ಲಿ ಸರಣಿಯ ಕೊನೆಯ ಪಂದ್ಯ ನಡೆಯಲಿದೆ. ಇದಲ್ಲದೇ, ಭಾರತವು ಜುಲೈ 9 ರಿಂದ ಆರಂಭವಾಗಲಿರುವ ಏಕದಿನ ಸರಣಿಯನ್ನೂ ಆಡಲಿದೆ, 50 ಓವರ್‌ಗಳ ಸರಣಿಯ ಮೊದಲ ಪಂದ್ಯ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ. ಜುಲೈ 12 ರಂದು, ಲಂಡನ್‌ನ ಓವಲ್​ನಲ್ಲಿ ಎರಡನೇ ಏಕದಿನ ಪಂದ್ಯವನ್ನು ಆಯೋಜಿಸುತ್ತದೆ. ಜುಲೈ 14 ರಂದು, ಮೂರನೇ ಏಕದಿನ ಪಂದ್ಯ ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ.

ನ್ಯೂಜಿಲೆಂಡ್ ಟೆಸ್ಟ್ ಸರಣಿಯನ್ನು ಆಡಲಿದೆ
ಭಾರತವಲ್ಲದೆ, ನ್ಯೂಜಿಲ್ಯಾಂಡ್ 2022 ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಭಾರತ ಇಂಗ್ಲೆಂಡ್‌ಗೆ ಹೋಗುವ ಮುನ್ನ, ನ್ಯೂಜಿಲ್ಯಾಂಡ್ ಅಲ್ಲಿಗೆ ಹೋಗಿ ಮೂರು ಟೆಸ್ಟ್‌ಗಳ ಸರಣಿಯನ್ನು ಆಡಲಿದೆ. ಈ ಸರಣಿಯ ಮೊದಲ ಟೆಸ್ಟ್ ಜೂನ್ 2 ರಿಂದ ಜೂನ್ 6 ರವರೆಗೆ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯವು ನಾಟಿಂಗ್ ಹ್ಯಾಮ್​ನಲ್ಲಿ ಜೂನ್ 10 ರಿಂದ ಜೂನ್ 14 ರವರೆಗೆ ನಡೆಯಲಿದೆ. ಲೀಡ್ಸ್​ನ ಹೆಡಿಂಗ್ಲೆ ಮೈದಾನವು ಸರಣಿಯ ಕೊನೆಯ ಪಂದ್ಯವನ್ನು ಜೂನ್ 23 ರಿಂದ ಜೂನ್ 27 ರವರೆಗೆ ಆಯೋಜಿಸುತ್ತದೆ.

ದಕ್ಷಿಣ ಆಫ್ರಿಕಾದ ಪೂರ್ಣ ಪ್ರವಾಸ
ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ಇಂಗ್ಲೆಂಡ್‌ನ ಸಂಪೂರ್ಣ ಪ್ರವಾಸವನ್ನು ಕೈಗೊಳ್ಳಲಿದ್ದು, ಅಲ್ಲಿ ಅವರು ಟೆಸ್ಟ್, ಏಕದಿನ ಮತ್ತು ಟಿ 20 ಸರಣಿಗಳನ್ನು ಆಡಲಿದ್ದಾರೆ. ಎಲ್ಲಾ ಮೂರು ಸ್ವರೂಪಗಳಲ್ಲಿ, ಎರಡೂ ತಂಡಗಳು ಮೂರು ಪಂದ್ಯಗಳ ಸರಣಿಯನ್ನು ಆಡಲಿವೆ. ಏಕದಿನ ಸರಣಿಯೊಂದಿಗೆ ಪ್ರವಾಸ ಆರಂಭವಾಗಲಿದೆ. ಜುಲೈ 19 ರಂದು ಡರ್ಹಾಮ್‌ನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಎರಡನೇ ಏಕದಿನ ಪಂದ್ಯ ಜುಲೈ 22 ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ. ಮೂರನೇ ಏಕದಿನ ಪಂದ್ಯ ಜುಲೈ 24 ರಂದು ಲೀಡ್ಸ್‌ನಲ್ಲಿ ನಡೆಯಲಿದೆ. ಇದರ ನಂತರ ಟಿ 20 ಸರಣಿ ಆರಂಭವಾಗಲಿದೆ. ಬ್ರಿಸ್ಟಲ್‌ನ ಕೌಂಟಿ ಮೈದಾನವು ಜುಲೈ 27 ರಂದು ಮೊದಲ ಟಿ 20 ಪಂದ್ಯವನ್ನು ಆಯೋಜಿಸುತ್ತದೆ. ಎರಡನೇ ಟಿ 20 ಮರುದಿನ ಕಾರ್ಡಿಫ್‌ನಲ್ಲಿ ನಡೆಯಲಿದೆ ಮತ್ತು ಮೂರನೇ ಟಿ 20 ಪಂದ್ಯವು ಜುಲೈ 31 ರಂದು ಸೌತಾಂಪ್ಟನ್‌ನಲ್ಲಿ ನಡೆಯಲಿದೆ. ಟೆಸ್ಟ್ ಸರಣಿಯು ಲಾರ್ಡ್ಸ್​ನಲ್ಲಿ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯವು ಆಗಸ್ಟ್ 17 ರಿಂದ 21 ರವರೆಗೆ ನಡೆಯಲಿದೆ. ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನವು ಎರಡನೇ ಟೆಸ್ಟ್ ಪಂದ್ಯವನ್ನು 25 ರಿಂದ 29 ರವರೆಗೆ ನಡೆಸಲಿದೆ. ಮೂರನೇ ಟೆಸ್ಟ್ ಸೆಪ್ಟೆಂಬರ್ 8 ರಿಂದ 12 ರವರೆಗೆ ಲಂಡನ್‌ನ ಓವಲ್‌ನಲ್ಲಿ ನಡೆಯಲಿದೆ.

ಇದನ್ನೂ ಓದಿ:ಫೈನಲ್ ಟೆಸ್ಟ್​ಗೆ ಇಂಗ್ಲೆಂಡ್ ತಂಡ ಪ್ರಕಟ: ಟೀಮ್ ಇಂಡಿಯಾವನ್ನು ಕಾಡಿದ ಸ್ಪಿನ್ನರ್​ಗೆ ಸ್ಥಾನ