ಫೈನಲ್ ಟೆಸ್ಟ್ಗೆ ಇಂಗ್ಲೆಂಡ್ ತಂಡ ಪ್ರಕಟ: ಟೀಮ್ ಇಂಡಿಯಾವನ್ನು ಕಾಡಿದ ಸ್ಪಿನ್ನರ್ಗೆ ಸ್ಥಾನ
India vs England 5th Test: 30 ವರ್ಷದ ಜ್ಯಾಕ್ ಲೀಚ್ ಇಂಗ್ಲೆಂಡ್ ಪರ ಇದುವರೆಗೆ 16 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 62 ವಿಕೆಟ್ ಪಡೆದಿದ್ದಾರೆ. ಹಾಗೆಯೇ ಎರಡು ಬಾರಿ 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
India vs England 5th Test: ಸೆಪ್ಟೆಂಬರ್ 10 ರಂದು ಮ್ಯಾಚೆಂಸ್ಟರ್ನ ಓಲ್ಡ್ ಟ್ರಾಫರ್ಡ್ (Old Trafford) ಮೈದಾನದಲ್ಲಿ ನಡೆಯಲಿರುವ ಭಾರತದ (India) ವಿರುದ್ದ ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ (England squad) 16 ಸದಸ್ಯರ ಬಳಗವನ್ನು ಪ್ರಕಟಿಸಿದೆ. ಈ ಬಾರಿ ಎರಡು ಬದಲಾವಣೆ ಮಾಡಲಾಗಿದ್ದು, ಅದರಂತೆ ವೈಯುಕ್ತಿಕ ಕಾರಣಗಳಿಂದ 4ನೇ ಟೆಸ್ಟ್ನಿಂದ ಹೊರಗುಳಿದಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ (Jos Buttler) ತಂಡಕ್ಕೆ ಹಿಂತಿರುಗಿದ್ದಾರೆ. ಹಾಗೆಯೇ ಎಡಗೈ ಸ್ಪಿನ್ನರ್ ಜಾಕ್ ಲೀಚ್ಗೂ (Jack Leach) ತಂಡದಲ್ಲಿ ಸ್ಥಾನ ನೀಡಲಾಗಿದೆ. ಈ ಹಿಂದೆ ಟೀಮ್ ಇಂಡಿಯಾ (Team India) ವಿರುದ್ದ ಲೀಚ್ ಉತ್ತಮ ಪ್ರದರ್ಶನ ನೀಡಿದ್ದರು. ಇದೀಗ ಕೊನೆಯ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿರುವ ಇಂಗ್ಲೆಂಡ್ ವಿಶೇಷ ಸ್ಪಿನ್ನರ್ನನ್ನು ತಂಡಕ್ಕೆ ಕರೆಸಿಕೊಂಡಿದೆ.
ಇನ್ನು ಜೋಸ್ ಬಟ್ಲರ್ ಆಗಮನದೊಂದಿಗೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸ್ಯಾಮ್ ಬಿಲ್ಲಿಂಗ್ಸ್ (Sam Billings) ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಇನ್ನು ಪ್ರಸ್ತುತ ತಂಡದಲ್ಲಿ ಮೊಯೀನ್ ಅಲಿ ಹಾಗೂ ಜೋ ರೂಟ್ ಸ್ಪಿನ್ ವಿಭಾಗವನ್ನು ಮುನ್ನಡೆಸುತ್ತಿದ್ದು, ಇದೀಗ ಸಂಪೂರ್ಣ ಸ್ಪಿನ್ನರ್ರೊಬ್ಬರನ್ನು ಇಂಗ್ಲೆಂಡ್ ತಂಡ ಆಯ್ಕೆ ಮಾಡಿರುವುದು ಕುತೂಹಲ ಮೂಡಿಸಿದೆ. ಹೀಗಾಗಿ ಜಾಕ್ ಲೀಚ್ ಐದನೇ ಟೆಸ್ಟ್ನಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ ಎನ್ನಬಹುದು. ಇದಕ್ಕೆ ಬಹುಮುಖ್ಯ ಕಾರಣವೆಂದರೆ ಲೀಚ್ ಅವರ ಭಾರತದ ವಿರುದ್ದದ ಪ್ರದರ್ಶನ.
ಹೌದು, ಎಡಗೈ ಸ್ಪಿನ್ ಬೌಲರ್ ಜಾಕ್ ಲೀಚ್ ಭಾರತದಲ್ಲಿ ಫೆಬ್ರವರಿ-ಮಾರ್ಚ್ ನಲ್ಲಿ ನಡೆದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು. 4 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಲೀಚ್ ಒಟ್ಟು 18 ವಿಕೆಟ್ ಉರುಳಿಸಿದ್ದರು. ಇದೀಗ ಭಾರತದಲ್ಲಿ ಟೀಮ್ ಇಂಡಿಯಾವನ್ನು ಕಾಡಿದ್ದ ಲೀಚ್ ಅವರನ್ನು ಇಂಗ್ಲೆಂಡ್ ಆಯ್ಕೆ ಮಾಡಿಕೊಂಡಿದೆ. ಅತ್ತ 5ನೇ ಟೆಸ್ಟ್ ನಡೆಯಲಿರುವ ಮ್ಯಾಚೆಂಸ್ಟರ್ನಲ್ಲಿ ಪಂದ್ಯದ ನಡುವೆ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ ಅಂತಿಮ ಪಂದ್ಯದ ವೇಳೆ ಮೋಡ ಮುಸುಕಿದ ವಾತಾವರಣ ಕೂಡ ಇರಲಿದ್ದು, ಇದು ಪಿಚ್ ಮೇಲ್ಮೈ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಮ್ಯಾಚೆಂಸ್ಟರ್ ಓಲ್ಡ್ ಟ್ರಾಫರ್ಡ್ ಪಿಚ್ ಸ್ಪಿನ್ ಬೌಲಿಂಗ್ ಸಹಕಾರಿಯಾಗುವ ನಿರೀಕ್ಷೆಯಿದೆ. ಇದೇ ಕಾರಣಕ್ಕಾಗಿ ಜಾಕ್ ಲೀಚ್ರನ್ನು ಇಂಗ್ಲೆಂಡ್ ಆಯ್ಕೆ ಮಾಡಿಕೊಂಡಿದೆ ಎಂದು ಹೇಳಲಾಗಿದೆ.
30 ವರ್ಷದ ಜ್ಯಾಕ್ ಲೀಚ್ ಇಂಗ್ಲೆಂಡ್ ಪರ ಇದುವರೆಗೆ 16 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 62 ವಿಕೆಟ್ ಪಡೆದಿದ್ದಾರೆ. ಹಾಗೆಯೇ ಎರಡು ಬಾರಿ 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಪ್ರಥಮ ದರ್ಜೆ ಕ್ರಿಕೆಟ್ ನ 105 ಪಂದ್ಯಗಳಲ್ಲಿ 339 ವಿಕೆಟ್ ಪಡೆದಿದ್ದಾರೆ. ಈ ವೇಳೆ 22 ಬಾರಿ 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದೀಗ ವೇಗದ ಅಸ್ತ್ರಗಳನ್ನು ಪ್ರಯೋಗಿಸಿ 2 ಟೆಸ್ಟ್ ಪಂದ್ಯಗಳನ್ನು ಸೋತಿರುವ ಇಂಗ್ಲೆಂಡ್ ಸ್ಪಿನ್ ಅಸ್ತ್ರದ ಬಳಕೆಗೆ ಮುಂದಾಗುತ್ತಿರುವುದು ವಿಶೇಷ.
ಇಂಗ್ಲೆಂಡ್ ತಂಡ ಹೀಗಿದೆ (England squad): ಜೋ ರೂಟ್ (ನಾಯಕ), ಮೊಯೀನ್ ಅಲಿ, ಜೇಮ್ಸ್ ಆಂಡರ್ಸನ್, ಜಾನಿ ಬೈರ್‌ಸ್ಟೊ, ರೋರಿ ಬರ್ನ್ಸ್, ಜೋಸ್ ಬಟ್ಲರ್, ಸ್ಯಾಮ್ ಕರನ್, ಹಸೀಬ್ ಹಮೀದ್, ಡಾನ್ ಲಾರೆನ್ಸ್, ಡೇವಿಡ್ ಮಲಾನ್, ಜಾಕ್ ಲೀಚ್, ಕ್ರೇಗ್ ಓವರ್‌ಟನ್, ಒಲ್ಲಿ ಪೋಪ್ , ಓಲ್ಲಿ ರಾಬಿನ್ಸನ್, ಕ್ರಿಸ್ ವೋಕ್ಸ್ ಮತ್ತು ಮಾರ್ಕ್ ವುಡ್.
ಡ್ರಾ ಸಾಧಿಸಿದ್ರೆ ಸರಣಿ ವಶ:
ಮ್ಯಾಂಚೆಸ್ಟರ್ನಲ್ಲಿ ನಡೆಯಲಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಡ್ರಾ ಸಾಧಿಸಿದರೆ ಸರಣಿ ಕೊಹ್ಲಿ ಪಡೆಯ ವಶವಾಗಲಿದೆ. ಈಗಾಗಲೇ ಐದು ಪಂದ್ಯಗಳ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ ಅಂತಿಮ ಪಂದ್ಯದಲ್ಲಿ ಜಯ ಅಥವಾ ಡ್ರಾ ಸಾಧಿಸಿ ಸರಣಿ ಗೆಲ್ಲುವ ತವಕದಲ್ಲಿದೆ. ಅತ್ತ ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಇಂಗ್ಲೆಂಡ್ ತಂಡ ಸರಣಿಯನ್ನು ಸಮಬಲಗೊಳಿಸಬಹುದು. ಹೀಗಾಗಿ ಅಂತಿಮ ಪಂದ್ಯವು ಫೈನಲ್ ಕದನವಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ: ಕುಡುಕರ ಗಮನಕ್ಕೆ: ಪ್ರತಿದಿನ ಬಿಯರ್ ಕುಡಿಯುವುದು ಒಳ್ಳೆದಂತೆ
ಇದನ್ನೂ ಓದಿ: ಒಂದೇ ಒಂದು ರನ್ ನೀಡಲಿಲ್ಲ: 10 ಓವರ್ ಮೇಡನ್ ಮಾಡಿ ದಾಖಲೆ ಬರೆದ ಸ್ಪಿನ್ನರ್
ಇದನ್ನೂ ಓದಿ: ಮೊಬೈಲ್ ಬಳಕೆದಾರರ ಗಮನಕ್ಕೆ: ಇನ್ಮುಂದೆ ಈ ಫೋನ್ಗಳಲ್ಲಿ ವಾಟ್ಸ್ಆ್ಯಪ್ ಕಾರ್ಯ ನಿರ್ವಹಿಸುವುದಿಲ್ಲ
(Jos Buttler, Jack Leach return as England squad for fifth Test against India)