10 ಬೌಂಡರಿ, 3 ಸಿಕ್ಸರ್‌, ಅಜೇಯ 90 ರನ್; ಭಾರತ ಕ್ರಿಕೆಟ್ ತೊರೆದ ಉನ್ಮುಕ್ತ್ ಚಾಂದ್ ಅಮೇರಿಕದಲ್ಲಿ ಫುಲ್ ಶೈನ್

ಇದರ ನಂತರ ಉನ್ಮುಕ್ತ್ ಚಂದ್ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರು 63 ಎಸೆತಗಳಲ್ಲಿ 10 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ನೆರವಿನಿಂದ ಅಜೇಯ 90 ರನ್ ಗಳಿಸಿದರು, ತಂಡಕ್ಕೆ ಒಂಬತ್ತು ವಿಕೆಟ್ ಜಯವನ್ನು ನೀಡಿದರು.

10 ಬೌಂಡರಿ, 3 ಸಿಕ್ಸರ್‌, ಅಜೇಯ 90 ರನ್; ಭಾರತ ಕ್ರಿಕೆಟ್ ತೊರೆದ ಉನ್ಮುಕ್ತ್ ಚಾಂದ್ ಅಮೇರಿಕದಲ್ಲಿ ಫುಲ್ ಶೈನ್
ಉನ್ಮುಕ್ತ್ ಚಾಂದ್
Follow us
TV9 Web
| Updated By: ಪೃಥ್ವಿಶಂಕರ

Updated on: Sep 08, 2021 | 3:43 PM

2012 ರಲ್ಲಿ ತನ್ನ ನಾಯಕತ್ವದಲ್ಲಿ ಭಾರತ ಅಂಡರ್ -19 ವಿಶ್ವಕಪ್ ಗೆದ್ದ ಕ್ಯಾಪ್ಟನ್ ಉನ್ಮುಕ್ತ್ ಚಾಂದ್ ಭಾರತವನ್ನು ತೊರೆದು ಅಮೆರಿಕಾ ಪರ ಆಡುತ್ತಿದ್ದಾರೆ. ಅವರು ಪ್ರಸ್ತುತ ಮೈನರ್ ಕ್ರಿಕೆಟ್ ಲೀಗ್‌ನಲ್ಲಿ ಸಿಲಿಕಾನ್ ವ್ಯಾಲಿ ಸ್ಟ್ರೈಕರ್ಸ್ ಪರ ಆಡುತ್ತಿದ್ದಾರೆ. ಚಾಂದ್ ಇಲ್ಲಿ ತಮ್ಮ ಬಿರುಗಾಳಿಯ ಬ್ಯಾಟಿಂಗ್‌ಗೆ ಉತ್ತಮ ಉದಾಹರಣೆ ನೀಡಿದ್ದಾರೆ. ಉನ್ಮುಕ್ತ್ ಚಿಕಾಗೋ ಬ್ಲಾಸ್ಟರ್ಸ್ ಪರ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ ಮತ್ತು ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಈ ಪಂದ್ಯವನ್ನು ಗೆಲ್ಲಲು ಸ್ಟ್ರೈಕರ್‌ ತಂಡಕ್ಕೆ 20 ಓವರ್‌ಗಳಲ್ಲಿ 169 ರನ್ ಬೇಕಿತ್ತು. ಸ್ಟ್ರೈಕರ್ಸ್ ಕೇವಲ ಒಂದು ವಿಕೆಟ್ ಕಳೆದುಕೊಂಡು ಈ ಗುರಿಯನ್ನು ಸಾಧಿಸಿತು. ಉನ್ಮುಕ್ತ್ ಚಾಂದ್ ಅವರ ಅರ್ಧಶತಕ ಇದರಲ್ಲಿ ಸಾಕಷ್ಟು ಕೊಡುಗೆ ನೀಡಿದೆ.

ಉನ್ಮುಕ್ತ್ ಅವರು ಇನಿಂಗ್ಸ್ ಅನ್ನು ಶೆಹಾನ್ ಜಯಸೂರ್ಯ ಅವರೊಂದಿಗೆ ಆರಂಭಿಸಿದರು. ಸ್ಟ್ರೈಕರ್‌ ತಂಡ ಐದನೇ ಓವರ್‌ನಲ್ಲಿ 44 ರನ್ ಇದ್ದಾಗ ಜಯಸೂರ್ಯ ಅವರ ವಿಕೆಟ್ ಕಳೆದುಕೊಂಡಿತು. ಇದರ ನಂತರ ಉನ್ಮುಕ್ತ್ ಚಂದ್ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರು 63 ಎಸೆತಗಳಲ್ಲಿ 10 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ನೆರವಿನಿಂದ ಅಜೇಯ 90 ರನ್ ಗಳಿಸಿದರು, ತಂಡಕ್ಕೆ ಒಂಬತ್ತು ವಿಕೆಟ್ ಜಯವನ್ನು ನೀಡಿದರು. ಚಾಂದ್ ಜೊತೆಗೆ ನಿಂತ ನರಸಿಂಹ ದೇವನೇರನ್ 30 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ನೆರವಿನಿಂದ 51 ರನ್ ಗಳಿಸಿದರು.

ಚಿಕಾಗೋದ ಇನಿಂಗ್ಸ್ ಹೀಗಿತ್ತು ಈ ಮೊದಲು ಕಮ್ರಾನ್ ಶೇಖ್ ಅರ್ಧಶತಕದ ನೆರವಿನಿಂದ ಚಿಕಾಗೊ ನಿಗದಿತ 20 ಓವರ್​ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ತಂಡವು ಉತ್ತಮ ಆರಂಭವನ್ನು ಪಡೆಯಲಿಲ್ಲ. ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ನಾಲ್ಕು ರನ್ ಗಳಿಸಿದ ನಂತರ ಅನಿರುದ್ ಜೊನವಿತುಲಾ ಔಟಾದರು. ಎರಡನೇ ಓಪನರ್ ಶಹೀರ್ ಹಸನ್ ಕೂಡ ಆರು ರನ್ ದಾಟಲು ಸಾಧ್ಯವಾಗಲಿಲ್ಲ. ಅಶ್ರಾರ್ ಮೆಹದಿ 19 ರನ್ ಗಳಿಸಿದ ನಂತರ ಗಾಯಗೊಂಡರು. ನಂತರ 31 ರನ್ ಗಳಿಸಿದ ಕಮ್ರಾನ್ ಮತ್ತು ಅಬ್ದುಲ್ ಹಸನ್ ರಾಜು 72 ರನ್​ಗಳನ್ನು ಹಂಚಿಕೊಳ್ಳುವ ಮೂಲಕ ತಂಡವನ್ನು ಬಲಪಡಿಸಿದರು. ಕಮ್ರಾನ್ ತಂಡದ ಮೊತ್ತ 137 ಇದ್ದಾಗ ಔಟಾದರು. ಕೊನೆಯಲ್ಲಿ, ನಜಮ್ ಇಕ್ಬಾಲ್ 16 ರನ್ ಬಾರಿಸಿ ತಂಡವನ್ನು ಒಟ್ಟು 168 ಸ್ಕೋರ್‌ಗೆ ಕೊಂಡೊಯ್ದರು.

ಭಾರತ ತೊರೆದಿದ್ದು ಈ ಕಾರಣಕ್ಕಾಗಿ ಉನ್ಮುಕ್ತ್ ಚಾಂದ್ ಅವರನ್ನು ಭಾರತದ ಅತ್ಯುತ್ತಮ ಪ್ರತಿಭಾವಂತ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. 2012 ರ ಅಂಡರ್ -19 ವಿಶ್ವಕಪ್ ನಂತರ ಅವರನ್ನು ಮುಂದಿನ ವಿರಾಟ್ ಕೊಹ್ಲಿ ಎಂದು ಕರೆಯಲಾಯಿತು. ಆದರೆ ಅವರು ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ದೇಶೀಯ ಕ್ರಿಕೆಟ್​ನಿಂದ ಐಪಿಎಲ್ ವರೆಗೆ, ಅವರು ಪ್ರಭಾವಶಾಲಿಯಾಗಲು ವಿಫಲರಾದರು. ದೇಶೀಯ ಕ್ರಿಕೆಟ್​ನಲ್ಲಿ, ಅವರು ದೆಹಲಿಗಾಗಿ ಆಡುತ್ತಿದ್ದರು ಆದರೆ ನಂತರ ಅವರು ಉತ್ತರಾಖಂಡಕ್ಕೆ ತೆರಳಿದರು. ನಂತರ ದೆಹಲಿಗೆ ಮರಳಿ ಬಂದಿದ್ದರೂ, ಕಳೆದ ಋತುವಿನಲ್ಲಿ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಅವರಿಗೆ ಸಿಗಲಿಲ್ಲ. ಇದಾದ ನಂತರ, ಕೆಲವು ದಿನಗಳ ಹಿಂದೆ, ಆತ ಭಾರತವನ್ನು ಬಿಟ್ಟು ಅಮೆರಿಕಕ್ಕೆ ಹೋಗಿ ಅಲ್ಲಿ ಕ್ರಿಕೆಟ್ ಆಡುವುದಾಗಿ ನಿರ್ಧರಿಸಿದ್ದರು.

ಇದನ್ನೂ ಓದಿ:ಅವಕಾಶಗಳ ಕೊರತೆ; ಭಾರತಕ್ಕೆ ವಿಶ್ವಕಪ್​ ಗೆಲ್ಲಿಸಿಕೊಟ್ಟಿದ್ದ ನಾಯಕ ಕ್ರಿಕೆಟ್​ನಿಂದ ನಿವೃತ್ತಿ! ಅಮೆರಿಕಾ ಪರ ಆಡುವ ಒಲವು

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ