IPL 2022: ಇಂಗ್ಲೆಂಡ್ ಆಟಗಾರರಿಗೆ ‘ಐಪಿಎಲ್ ನಿರ್ಬಂಧ’ ಹೇರಲು ಮುಂದಾದ ಇಸಿಬಿ

TV9 Digital Desk

| Edited By: Zahir Yusuf

Updated on: Jan 13, 2022 | 5:33 PM

IPL 2022: ಹೊಸ ನಿಮಯಗಳನ್ನು ಜಾರಿಗೊಳಿಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮುಂದಾಗಿದೆ. ಆದರೆ ಆಟಗಾರರು ಮಂಡಳಿಯ ಈ ನಿರ್ಧಾರಕ್ಕೆ ವಿರುದ್ಧ ವ್ಯಕ್ತಪಡಿಸಬಹುದು.

IPL 2022: ಇಂಗ್ಲೆಂಡ್ ಆಟಗಾರರಿಗೆ 'ಐಪಿಎಲ್ ನಿರ್ಬಂಧ' ಹೇರಲು ಮುಂದಾದ ಇಸಿಬಿ
England Players

ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡದ ಇತ್ತೀಚಿನ ಪ್ರದರ್ಶನ ನಿರಾಶಾದಾಯಕವಾಗಿದೆ. ಆ್ಶಶಸ್ 2021 ರ ಸರಣಿಯಲ್ಲಿ ಅತ್ಯಂತ ಹೀನಾಯವಾಗಿ ಸೋತಿದ್ದಾರೆ. ಅಷ್ಟೇ ಅಲ್ಲದೆ ಭಾರತ ಪ್ರವಾಸದಲ್ಲಿ ಇಂಗ್ಲೆಂಡ್ ಸೋಲನುಭವಿಸಿತ್ತು. ಭಾರತ ವಿರುದ್ಧ ತನ್ನ ನೆಲದಲ್ಲಿ ನಡೆದ ಸರಣಿಯಲ್ಲಿ ಹಿನ್ನಡೆಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಇದೀಗ ತನ್ನ ಆಟಗಾರರಿಗೆ ಲಗಾಮು ಹಾಕಲು ಸಿದ್ಧತೆ ನಡೆಸಿದೆ. IPL 2022 ರಲ್ಲಿ ಇಂಗ್ಲೆಂಡ್ ಆಟಗಾರರನ್ನು ನಿರ್ಬಂಧಿಸಲು ಚರ್ಚಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇಂಗ್ಲೆಂಡ್ ಆಟಗಾರರು ಟೆಸ್ಟ್ ಕ್ರಿಕೆಟ್‌ಗೆ ನಿಗದಿತ ಅವಧಿಗೆ ಮಾತ್ರ ಐಪಿಎಲ್‌ನಲ್ಲಿ ಆಡಲು ಅನುಮತಿ ಸಿಗಬಹುದು.

ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಟೆಸ್ಟ್‌ನಲ್ಲಿ ತನ್ನ ತಂಡದ ಆಟವನ್ನು ಸುಧಾರಿಸಲು ಕೆಲವು ಸಲಹೆಗಳನ್ನು ಸ್ವೀಕರಿಸಿದೆ. ಇದರಲ್ಲಿ ಐಪಿಎಲ್‌ನಲ್ಲಿ ಆಟಗಾರರ ಭಾಗವಹಿಸುವಿಕೆಗೆ ಬಗ್ಗೆ ನಿಷೇಧ ಹೇರುವ ಸಲಹೆ ಕೂಡ ಇದರಲ್ಲೊಂದು. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಕ್ರಿಕೆಟ್ ಸಮಿತಿಯ ಮುಖ್ಯಸ್ಥ ಆಂಡ್ರ್ಯೂ ಸ್ಟ್ರಾಸ್ ಅವರಿಗೆ ಇಂಗ್ಲಿಷ್ ತಂಡದ ವ್ಯವಸ್ಥಾಪಕ ನಿರ್ದೇಶಕ ಆಶ್ಲೇ ಗೈಲ್ಸ್ ಅವರು ಈ ಸಲಹೆಗಳನ್ನು ನೀಡಿದ್ದಾರೆ. ಮುಂಬರುವ ಬೇಸಿಗೆ ಸೀಸನ್​ನ ಮೊದಲು ಇಂಗ್ಲೆಂಡ್‌ನ ಟೆಸ್ಟ್ ಆಟಗಾರರು ಉತ್ತಮ ತಯಾರಿ ಮಾಡಿಕೊಳ್ಳಲು ಈ ಶಿಫಾರಸುಗಳನ್ನು ನೀಡಲಾಗಿದೆ.

ಇಂಗ್ಲೆಂಡ್ ಕಳಪೆ ಪ್ರದರ್ಶನ: 2021 ರಲ್ಲಿಇಂಗ್ಲೆಂಡ್ ತಂಡದ ಅನೇಕ ಟೆಸ್ಟ್ ಆಟಗಾರರು ನ್ಯೂಜಿಲೆಂಡ್ ವಿರುದ್ಧದ ಸರಣಿ ವೇಳೆ ವಿಶ್ರಾಂತಿ ಪಡೆದರು. ಈ ಸಮಯದಲ್ಲಿ ಅನೇಕ ಆಟಗಾರರು ಐಪಿಎಲ್‌ನಲ್ಲಿ ಆಡುತ್ತಿದ್ದರು. ಈ ಕ್ರಮವನ್ನು ಇಂಗ್ಲೆಂಡ್‌ನ ವಿಶ್ರಾಂತಿ ಮತ್ತು ರೋಮಿಂಗ್ ನೀತಿಯ ಅಡಿಯಲ್ಲಿ ತೆಗೆದುಕೊಳ್ಳಲಾಗಿದೆ. ಆದರೆ ಈ ನೀತಿ ಫಲ ನೀಡಿಲ್ಲ ಎಂಬುದಕ್ಕೆ ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡದ ಪ್ರದರ್ಶನವೇ ಸಾಕ್ಷಿ. ಇಂಗ್ಲೆಂಡ್ ಕಳೆದ 15 ಟೆಸ್ಟ್‌ಗಳಲ್ಲಿ ನಾಲ್ಕರಲ್ಲಿ ಮಾತ್ರ ಜಯ ಸಾಧಿಸಿದೆ.

ಹೀಗಾಗಿ ಹೊಸ ನಿಮಯಗಳನ್ನು ಜಾರಿಗೊಳಿಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮುಂದಾಗಿದೆ. ಆದರೆ ಆಟಗಾರರು ಮಂಡಳಿಯ ಈ ನಿರ್ಧಾರಕ್ಕೆ ವಿರುದ್ಧ ವ್ಯಕ್ತಪಡಿಸಬಹುದು. ಏಕೆಂದರೆ ಇಂಗ್ಲೆಂಡ್ ಆಟಗಾರರು ಐಪಿಎಲ್​ನಿಂದ ಅತ್ಯುತ್ತಮ ಮೊತ್ತ ಪಡೆಯುತ್ತಿದ್ದಾರೆ. ಇಂಗ್ಲೆಂಡ್ ತಂಡದಲ್ಲಿರುವ ಬಹುತೇಕ ಸ್ಟಾರ್ ಆಟಗಾರರು ಐಪಿಎಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಐಪಿಎಲ್ ನಿರ್ಬಂಧವನ್ನು ಇಂಗ್ಲೆಂಡ್ ಆಟಗಾರರು ಕೂಡ ವಿರೋಧಿಸಬಹುದು.

ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್

ಇದನ್ನೂ ಓದಿ:  Sachin Tendulkar: ಆಲ್‌ ಟೈಮ್ ಬೆಸ್ಟ್‌ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(ECB Planning to Restrict England Players’ Participation in IPL)

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada