Emerging Asia Cup 2023: ಲಂಕಾ ತಂಡವನ್ನು ಮಣಿಸಿ ಏಷ್ಯಾಕಪ್ ಫೈನಲ್​ಗೆ ಲಗ್ಗೆಯಿಟ್ಟ ಪಾಕಿಸ್ತಾನ..!

Emerging Asia Cup 2023: ಉದಯೋನ್ಮುಖ ಏಷ್ಯಾಕಪ್​ನಲ್ಲಿ ಇಂದು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಎ ತಂಡವನ್ನು 60 ರನ್​ಗಳಿಂದ ಮಣಿಸಿದ ಪಾಕಿಸ್ತಾನ ಎ ತಂಡ ಸತತ ಎರಡನೇ ಬಾರಿಗೆ ಏಷ್ಯಾಕಪ್ ಫೈನಲ್​ಗೆ ಲಗ್ಗೆ ಇಟ್ಟಿದೆ.

Emerging Asia Cup 2023: ಲಂಕಾ ತಂಡವನ್ನು ಮಣಿಸಿ ಏಷ್ಯಾಕಪ್ ಫೈನಲ್​ಗೆ ಲಗ್ಗೆಯಿಟ್ಟ ಪಾಕಿಸ್ತಾನ..!
ಪಾಕಿಸ್ತಾನ ಎ ತಂಡ
Follow us
|

Updated on:Jul 21, 2023 | 6:19 PM

ಉದಯೋನ್ಮುಖ ಏಷ್ಯಾಕಪ್​ನಲ್ಲಿ (Emerging Asia Cup 2023) ಇಂದು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಎ ತಂಡವನ್ನು 60 ರನ್​ಗಳಿಂದ ಮಣಿಸಿದ ಪಾಕಿಸ್ತಾನ ಎ (Pakistan A vs Sri Lanka A) ತಂಡ ಸತತ ಎರಡನೇ ಬಾರಿಗೆ ಏಷ್ಯಾಕಪ್ ಫೈನಲ್​ಗೆ ಲಗ್ಗೆ ಇಟ್ಟಿದೆ. ಇದೀಗ ಭಾರತ ಎ ಹಾಗೂ ಬಾಂಗ್ಲಾದೇಶ ಎ (India A vs Bangladesh A) ತಂಡಗಳ ನಡುವೆ ನಡೆಯುತ್ತಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದ ತಂಡ ಫೈನಲ್​ನಲ್ಲಿ ಪಾಕಿಸ್ತಾನ ಎ ವಿರುದ್ಧ ಸೆಣಸಾಡಲಿದೆ. ಇನ್ನು ಈ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ 322 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಶ್ರೀಲಂಕಾ ಎ ತಂಡ ಆವಿಷ್ಕಾ ಫರ್ನಾಂಡೋ ಅವರ 97 ರನ್​ಗಳ ಏಕಾಂಗಿ ಹೋರಾಟದ ಹೊರತಾಗಿಯೂ ಗುರಿ ತಲುಪಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಆತಿಥೇಯ ತಂಡ 46ನೇ ಓವರ್​ನಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 262 ರನ್ ಕಲೆಹಾಕಲಷ್ಟೇ ಶಕ್ತವಾಗಿ ಏಷ್ಯಾಕಪ್​ನಿಂದ ಹೊರಬಿತ್ತು.

ಬೃಹತ್ ಟಾರ್ಗೆಟ್ ಸೆಟ್ ಮಾಡಿದ ಪಾಕ್

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಎ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 24 ರನ್​ಗಳಿದ್ದಾಗ ಮೊದಲ ವಿಕೆಟ್ ಪತನವಾಯಿತು. ಆ ಬಳಿಕ ಉತ್ತಮ ಜೊತೆಯಾಟ ಕಟ್ಟಿದ ಸೈಮ್ ಅಯೂಬ್ ಹಾಗೂ ಒಮೈರ್ ಯೂಸುಫ್ ತಂಡದ ಮೊತ್ತವನ್ನು 60 ರ ಗಡಿ ದಾಟಿಸಿದರು. ಆದರೆ ಉತ್ತಮ ಜೊತೆಯಾಟ ಕಟ್ಟುವ ಹಂತದಲ್ಲಿ ಅಯೂಬ್ 22 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಆ ಬಳಿಕ ಒಂದಾದ ಒಮೈರ್ ಯೂಸುಫ್ (88) ಹಾಗೂ ನಾಯಕ ಮೊಹಮ್ಮದ್ ಹ್ಯಾರಿಸ್ (52) ತಲಾ ಅರ್ಧಶತಕ ಸಿಡಿಸಿ ತಂಡಕ್ಕೆ ಬೃಹತ್ ಮುನ್ನಡೆ ತಂದುಕೊಟ್ಟರು. ಆದರೆ ಶತಕದಂಚಲ್ಲಿ ಎಡವಿದ ಯೂಸುಫ್ 88 ರನ್​ಗಳಿಗೆ ಪೆವಿಲಿಯನ್​ ಸೇರಿಕೊಂಡರು. ಈ ವಿಕೆಟ್ ನಂತರ ಬಂದ ಮುಬಾಸಿರ್ ಖಾನ್ 42 ರನ್​ಗಳ ಕೊಡುಗೆ ನೀಡಿದರು. ಅಂತಿಮವಾಗಿ ಪಾಕ್ ಪಡೆ 50 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 322 ರನ್ ಕಲೆಹಾಕಿತು.

ಲಂಕಾ ತಂಡದ ಕಳಪೆ ಆರಂಭ

ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ಎ ತಂಡದ ಆರಂಭ ಕೂಡ ಉತ್ತಮವಾಗಿರಲಿಲ್ಲ. ಕೇವಲ 12 ರನ್​ ಆಗುವಷ್ಟರಲ್ಲೇ ತಂಡದ ಎರಡು ವಿಕೆಟ್ ಪತನಗೊಂಡವು. ಆರಂಭಿಕ ಲಸಿತ್ ಕ್ರೂಸ್ಪುಲ್ಲೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಮಿನೋದ್ ಭಾನುಕಾ ಕೇವಲ 1 ರನ್​ಗಳಿಸಲಷ್ಟೇ ಶಕ್ತರಾದರು. 4ನೇ ಕ್ರಮಾಂಕದಲ್ಲಿ ಬಂದ ಪಸಿಂದು ಸೂರಿಯಬಂಡಾರ ಕೂಡ 10 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರು. ಆದರೆ ಒಂದು ಬದಿಯಲ್ಲಿ ಭದ್ರವಾಗಿ ಬೇರೂರಿದ್ದ ಆವಿಷ್ಕಾ ಫರ್ನಾಂಡೋಗೆ, ಸಹನ್ ಅರಚ್ಚಿಗೆ ಅದ್ಭುತ ಸಾಥ್ ನೀಡಿದರು. ಹೀಗಾಗಿ 4ನೇ ಜೊತೆಯಾಟಕ್ಕೆ ಈ ಇಬ್ಬರು 128 ರನ್​ ಕಲೆಹಾಕಿದರು. ಆದರೆ ಇಬ್ಬರೂ ಸಹ ತಲಾ 97 ರನ್​ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಶತಕ ವಂಚಿತರಾದರು.

5 ವಿಕೆಟ್ ಪಡೆದ  ಅರ್ಷದ್ ಇಕ್ಬಾಲ್

ಈ ಇಬ್ಬರ ವಿಕೆಟ್ ಬಳಿಕ ಬಂದ ಲಂಕಾ ಬಾಲಂಹಗೋಚಿಗಳು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಂತು ಗೆಲುವಿಗಾಗಿ ಹೋರಾಡಲಿಲ್ಲ. ಹೀಗಾಗಿ ಭಿಗಿ ದಾಳಿ ನೆಡೆಸಿದ ಪಾಕಿಸ್ತಾನ, ಲಂಕಾ ತಂಡವನ್ನು ಅಲ್ಪ ರನ್​ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಪಾಕ್ ಪರ ಬೌಲಿಂಗ್​ನಲ್ಲಿ ಮಿಂಚಿದ ಅರ್ಷದ್ ಇಕ್ಬಾಲ್ 5 ವಿಕೆಟ್ ಪಡೆದರೆ, ಮುಬಾಸಿರ್ ಖಾನ್ ಹಾಗೂ ಸೂಫಿಯಾನ್ ಮುಖೀಮ್ ತಲಾ 2 ವಿಕೆಟ್ ಪಡೆದರು. ನಿರ್ಣಾಯಕ ಪಂದ್ಯದಲ್ಲಿ 5 ವಿಕೆಟ್ ಉರುಳಿಸಿ ತಂಡದ ಗೆಲುವಿನ ಹೀರೋ ಎನಿಸಿಕೊಂಡ ಅರ್ಷದ್ ಇಕ್ಬಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:56 pm, Fri, 21 July 23

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಯಾರೆಂದು ನಾಳೆ ಫೈನಲ್
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಯಾರೆಂದು ನಾಳೆ ಫೈನಲ್
ರೈಲು ಅಪಘಾತದಿಂದ 60 ಆನೆಗಳ ರಕ್ಷಣೆ; ಲೋಕೋ ಪೈಲಟ್ ಕಾರ್ಯಕ್ಕೆ ಮೆಚ್ಚುಗೆ
ರೈಲು ಅಪಘಾತದಿಂದ 60 ಆನೆಗಳ ರಕ್ಷಣೆ; ಲೋಕೋ ಪೈಲಟ್ ಕಾರ್ಯಕ್ಕೆ ಮೆಚ್ಚುಗೆ
ತೆಲಂಗಾಣದಲ್ಲಿ ಉತ್ಖನನದ ವೇಳೆ ಆಂಜನೇಯನ ಪ್ರತಿಮೆ ಪತ್ತೆ
ತೆಲಂಗಾಣದಲ್ಲಿ ಉತ್ಖನನದ ವೇಳೆ ಆಂಜನೇಯನ ಪ್ರತಿಮೆ ಪತ್ತೆ
ಮನೆ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್, ಎಲ್ಲರೂ ಎಲಿಮಿನೇಟ್?
ಮನೆ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್, ಎಲ್ಲರೂ ಎಲಿಮಿನೇಟ್?
ಈಡಿ ವ್ಯಾಪ್ತಿಯನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ: ಸಚಿವ
ಈಡಿ ವ್ಯಾಪ್ತಿಯನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ: ಸಚಿವ
ಬೆಂಗಳೂರು: ಜಿಟಿ ಜಿಟಿ ಮಳೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡ ಮುದ್ದಾದ ಜೋಡಿ
ಬೆಂಗಳೂರು: ಜಿಟಿ ಜಿಟಿ ಮಳೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡ ಮುದ್ದಾದ ಜೋಡಿ
Bangalore Rains: ಬೆಂಗಳೂರಿನಲ್ಲಿ ಮತ್ತೆ ಮಳೆ, ಧರೆಗುರುಳಿದ ಮರಗಳು
Bangalore Rains: ಬೆಂಗಳೂರಿನಲ್ಲಿ ಮತ್ತೆ ಮಳೆ, ಧರೆಗುರುಳಿದ ಮರಗಳು
ಲೋಕಸಭಾ ಚುನಾವಣೆಯಲ್ಲಿ ಸೋಲ್ತೀನಿ ಅಂತ ನನಗೆ ಗೊತ್ತಿತ್ತು: ಕೆಎಸ್ ಈಶ್ವರಪ್ಪ
ಲೋಕಸಭಾ ಚುನಾವಣೆಯಲ್ಲಿ ಸೋಲ್ತೀನಿ ಅಂತ ನನಗೆ ಗೊತ್ತಿತ್ತು: ಕೆಎಸ್ ಈಶ್ವರಪ್ಪ
ವಂಚನೆ ಕೇಸ್​ನಲ್ಲಿ ಪ್ರಲ್ಹಾದ್ ಜೋಶಿ ಪಾತ್ರ ಏನೂ ಇಲ್ಲ: ದೂರುದಾರೆ ಸ್ಪಷ್ಟನೆ
ವಂಚನೆ ಕೇಸ್​ನಲ್ಲಿ ಪ್ರಲ್ಹಾದ್ ಜೋಶಿ ಪಾತ್ರ ಏನೂ ಇಲ್ಲ: ದೂರುದಾರೆ ಸ್ಪಷ್ಟನೆ
ಯಾರೇ ಗಣತಿ ಮಾಡಿಸಿದರೂ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು: ಶಾಸಕ
ಯಾರೇ ಗಣತಿ ಮಾಡಿಸಿದರೂ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು: ಶಾಸಕ