Emerging Teams Asia Cup 2023: ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ; ವಿಶ್ವಕಪ್ ಹೀರೋಗೆ ತಂಡದ ನಾಯಕತ್ವ..!

Emerging Teams Asia Cup 2023: ಶ್ರೀಲಂಕಾದಲ್ಲಿ ನಡೆಯಲಿರುವ 2023 ರ ಉದಯೋನ್ಮುಖ ತಂಡಗಳ ಏಷ್ಯಾಕಪ್‌ಗೆ ಭಾರತ-ಎ ತಂಡವನ್ನು ಪ್ರಕಟಿಸಲಾಗಿದೆ. ಅಂಡರ್ 19 ವಿಶ್ವಕಪ್ ತಂಡದ ನಾಯಕತ್ವವಹಿಸಿದ್ದ ಯಶ್ ಧುಲ್ ಅವರಿಗೆ ತಂಡದ ಕಮಾಂಡ್ ನೀಡಲಾಗಿದೆ.

Emerging Teams Asia Cup 2023: ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ; ವಿಶ್ವಕಪ್ ಹೀರೋಗೆ ತಂಡದ ನಾಯಕತ್ವ..!
ಯಶ್ ಧುಲ್Image Credit source: insidesport
Follow us
ಪೃಥ್ವಿಶಂಕರ
|

Updated on: Jul 05, 2023 | 7:06 AM

ಶ್ರೀಲಂಕಾದಲ್ಲಿ ನಡೆಯಲಿರುವ 2023 ರ ಉದಯೋನ್ಮುಖ ತಂಡಗಳ ಏಷ್ಯಾಕಪ್‌ಗೆ (Emerging Teams Asia Cup 2023) ಭಾರತ-ಎ ತಂಡವನ್ನು ಪ್ರಕಟಿಸಲಾಗಿದೆ. ಅಂಡರ್ 19 ವಿಶ್ವಕಪ್ ತಂಡದ ನಾಯಕತ್ವವಹಿಸಿದ್ದ ಯಶ್ ಧುಲ್ (Yash Dhull) ಅವರಿಗೆ ತಂಡದ ಕಮಾಂಡ್ ನೀಡಲಾಗಿದ್ದು, ಪಂಜಾಬ್ ಆಲ್ ರೌಂಡರ್ ಅಭಿಷೇಕ್ ಶರ್ಮಾ (Abhishek Sharma) ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಉದಯೋನ್ಮುಖ ತಂಡಗಳ ಏಷ್ಯಾಕಪ್ ಜುಲೈ 13 ರಿಂದ ಶ್ರೀಲಂಕಾದಲ್ಲಿ ಪ್ರಾರಂಭವಾಗಲಿದ್ದು, ಲೀಗ್​ನ ಫೈನಲ್ ಪಂದ್ಯ ಜುಲೈ 23 ರಂದು ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತವಲ್ಲದೆ ಪಾಕಿಸ್ತಾನ, ಶ್ರೀಲಂಕಾ, ಯುಎಇ, ನೇಪಾಳ, ಬಾಂಗ್ಲಾದೇಶ, ಓಮನ್ ಮತ್ತು ಅಫ್ಘಾನಿಸ್ತಾನ ತಂಡಗಳು ಭಾಗವಹಿಸಲಿವೆ.

ಜೂನಿಯರ್ ಕ್ರಿಕೆಟ್ ಸಮಿತಿಯು ಮಂಗಳವಾರ ಭಾರತ-ಎ ತಂಡವನ್ನು ಆಯ್ಕೆ ಮಾಡಿದ್ದು, ಐಪಿಎಲ್ 2023 ಮತ್ತು ಟಿಎನ್‌ಪಿಎಲ್‌ನಲ್ಲಿ ರನ್ ಮಳೆಗೈದ ಎಡಗೈ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಹರಿಯಾಣದ ಆಲ್ ರೌಂಡರ್ ನಿಶಾಂತ್ ಸಿಂಧು, ಪಂಜಾಬ್ ವಿಕೆಟ್ ಕೀಪರ್ ಪ್ರಭಾಸಿಮ್ರಾನ್ ಸಿಂಗ್, ಧ್ರುವ್ ಜುರೆಲ್ ಕೂಡ ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದಾರೆ.

ರಿಯಾನ್ ಪರಾಗ್​ಗೂ ಅವಕಾಶ

ಭಾರತ-ಎ ತಂಡದ ಆಯ್ಕೆಯಲ್ಲಿ ಅತ್ಯಂತ ಅಚ್ಚರಿಯ ಸಂಗತಿ ಎಂದರೆ ರಿಯಾನ್ ಪರಾಗ್ ಅವರಿಗೂ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಐಪಿಎಲ್ 2023 ಮತ್ತು ದುಲೀಪ್ ಟ್ರೋಫಿಯಲ್ಲಿ ರಿಯಾನ್ ಪರಾಗ್ ವಿಫಲರಾದರೂ, ಅಸ್ಸಾಂನ ಈ ಆಲ್ ರೌಂಡರ್ ಭಾರತ-ಎ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ ತಮ್ಮ ಮೊದಲ ಐಪಿಎಲ್ ಸೀಸನ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನೆಹಾಲ್ ವಧೇರಾಗೆ ತಂಡದಲ್ಲಿ ಅವಕಾಶ ನೀಡಲಾಗಿಲ್ಲ. ಆದರೂ ಅವರನ್ನು ಸ್ಟ್ಯಾಂಡ್‌ಬೈ ಆಟಗಾರನಾಗಿ ತಂಡಕ್ಕೆ ಆಯ್ಕೆ ಮಾಡಲಾಗಿದೆ.

Asia Cup 2023 Schedule: ಭಾರತ- ಪಾಕ್ ಪಂದ್ಯದ್ದೇ ಚಿಂತೆ; ಏಷ್ಯಾಕಪ್ ವೇಳಾಪಟ್ಟಿ ವಿಳಂಬವಾಗಲು ಕಾರಣ ಬಹಿರಂಗ

ಭಾರತ ಎ ತಂಡ: ಯಶ್ ಧುಲ್ (ನಾಯಕ), ಅಭಿಷೇಕ್ ಶರ್ಮಾ (ಉಪನಾಯಕ), ಸಾಯಿ ಸುದರ್ಶನ್, ನಿಕಿನ್ ಜೋಸ್, ಪ್ರದೋಶ್ ರಂಜನ್ ಪೌಲ್, ರಿಯಾನ್ ಪರಾಗ್, ನಿಶಾಂತ್ ಸಿಂಧು, ಪ್ರಭಾಸಿಮ್ರಾನ್ ಸಿಂಗ್, ಧ್ರುವ್ ಜುರೆಲ್, ಮಾನವ್ ಸುತಾರ್, ಯುವರಾಜಸಿನ್ಹ ದೋಡಿಯಾ, ಹರ್ಷಿತ್ ರಾಣಾ, ಹರ್ಷಿತ್ ರಾಣಾ, ಆಕಾಶ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ರಾಜವರ್ಧನ್ ಹಂಗರ್ಗೇಕರ್.

ಸ್ಟ್ಯಾಂಡ್‌ಬೈ ಆಟಗಾರರು: ಹರ್ಷ್ ದುಬೆ, ನೆಹಾಲ್ ವಧೇರಾ, ಸ್ನೇಲ್ ಪಟೇಲ್ ಮತ್ತು ಮೋಹಿತ್ ರೆಡ್ಕರ್.

ಉದಯೋನ್ಮುಖ ತಂಡಗಳ ಏಷ್ಯಾಕಪ್‌ನಲ್ಲಿ ಒಟ್ಟು 8 ತಂಡಗಳು ಆಡಲಿದ್ದು, ಟೂರ್ನಿಯಲ್ಲಿ ಎರಡು ಗುಂಪುಗಳಿರುತ್ತವೆ. ಭಾರತ ತಂಡ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಟೀಂ ಇಂಡಿಯಾದೊಂದಿಗೆ ನೇಪಾಳ, ಯುಎಇ ಮತ್ತು ಪಾಕಿಸ್ತಾನ ತಂಡಗಳು ಈ ಗುಂಪಿನಲ್ಲಿ ಸ್ಥಾನ ಪಡೆದಿವೆ. ಮತ್ತೊಂದೆಡೆ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಒಮನ್ ಎ ಗುಂಪಿನಲ್ಲಿವೆ. ಎರಡೂ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ. ಸೆಮಿಫೈನಲ್‌ನಲ್ಲಿ, ಎ ಗುಂಪಿನ ಅಗ್ರಸ್ಥಾನ ಪಡೆದ ತಂಡವು ಬಿ ಗುಂಪಿನ ಎರಡನೇ ಸ್ಥಾನ ಪಡೆದ ತಂಡದೊಂದಿಗೆ ಸ್ಪರ್ಧಿಸುತ್ತದೆ. ಮತ್ತೊಂದೆಡೆ, ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡವು ಎ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡವನ್ನು ಎದುರಿಸಲಿದೆ.

ಉದಯೋನ್ಮುಖ ತಂಡಗಳ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾದ ವೇಳಾಪಟ್ಟಿ

ಭಾರತ-ಎ vs ಯುಎಇ-ಎ, 13 ಜುಲೈ ಭಾರತ ಎ vs ಪಾಕಿಸ್ತಾನ ಎ, 15 ಜುಲೈ ಭಾರತ-ಎ vs ನೇಪಾಳ, 18 ಜುಲೈ ಸೆಮಿಫೈನಲ್ 1 – 21 ಜುಲೈ ಸೆಮಿಫೈನಲ್ 2-21 ಜುಲೈ ಫೈನಲ್ ಪಂದ್ಯ – 23 ಜುಲೈ

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?