Emerging Asia Cup 2023: ಕೇವಲ 42 ರನ್​ಗಳಿಗೆ ಆಲೌಟ್: ಶ್ರೀಲಂಕಾಗೆ ಭರ್ಜರಿ ಜಯ

Emerging Teams Asia Cup 2023: ಶ್ರೀಲಂಕಾ ಪರ ಚಾಮಿಕಾ ಕರುಣಾರತ್ನೆ 3 ವಿಕೆಟ್ ಪಡೆದು ಮಿಂಚಿದರೆ, ದುನಿತ್ ವೆಲ್ಲಲಾಗೆ, ಪ್ರಮೋದ್ ಮದುಶನ್ ಹಾಗೂ ಲಹಿರು ಸಮರಕೋನ್ ತಲಾ 2 ವಿಕೆಟ್ ಕಬಳಿಸಿದರು.

Emerging Asia Cup 2023: ಕೇವಲ 42 ರನ್​ಗಳಿಗೆ ಆಲೌಟ್: ಶ್ರೀಲಂಕಾಗೆ ಭರ್ಜರಿ ಜಯ
Sri Lanka A vs Oman A
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 19, 2023 | 2:59 PM

Emerging Teams Asia Cup 2023: ಉದಯೋನ್ಮುಖ ತಂಡಗಳ ಏಷ್ಯಾ ಕಪ್​ ಟೂರ್ನಿಯ 10 ಪಂದ್ಯದಲ್ಲಿ ಶ್ರೀಲಂಕಾ ಎ ತಂಡವು 217 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಇಲ್ಲಿ ಲಂಕಾ ತಂಡ ಅಮೋಘ ಗೆಲುವಿಗಿಂತ ಹೆಚ್ಚು ಸುದ್ದಿಯಾಗಿರುವುದು ಒಮಾನ್ ಎ ತಂಡದ ಪ್ರದರ್ಶನ. ಏಕೆಂದರೆ ಈ ಪಂದ್ಯದಲ್ಲಿ ಟಾಸ್ ಗೆದ್ದ ಒಮಾನ್ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಅದರಂತೆ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಎ ತಂಡದ ಪರ ಪಸಿಂದು ಸೂರಿಯಬಂಡಾರ (60) ಅರ್ಧಶತಕ ಬಾರಿಸಿ ಮಿಂಚಿದರೆ, ಸಹನ್ ಅರಚ್ಚಿಗೆ 48 ರನ್​ಗಳ ಕಾಣಿಕೆ ನೀಡಿದರು. ಈ ಮೂಲಕ ಶ್ರೀಲಂಕಾ ತಂಡವು ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 259 ರನ್ ಕಲೆಹಾಕಿತು.

260 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಒಮಾನ್ ತಂಡವು ಮೊದಲ ಓವರ್​ನಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ಅಲ್ಲಿಂದ ಶುರುವಾದ ಪೆವಿಲಿಯನ್ ಪೆರೇಡ್ ಬಂದು ನಿಂತಿದ್ದು 42 ರನ್​ಗಳಿಗೆ. ಅಂದರೆ 17.1 ಓವರ್​ಗಳಲ್ಲಿ ಕೇವಲ 42 ರನ್​ಗಳಿಸಿ ಒಮಾನ್ ತಂಡವು ಆಲೌಟ್ ಆಗಿತ್ತು.

ಒಮಾನ್ ಪರ ಕಶ್ಯಪ್ ಪ್ರಜಾಪತಿ 18 ರನ್​ಗಳಿಸಿದರೆ, ಸೂರಜ್ ಕುಮಾರ್ 10 ರನ್ ಕಲೆಹಾಕಿದರು. ಇನ್ನುಳಿದವರ ಸ್ಕೋರ್​ ಕಾರ್ಡ್​…0, 1, 1, 0, 6, 2, 0, 2, 1. ಅಂದರೆ 9 ಬ್ಯಾಟರ್​ಗಳು ಜೊತೆಗೂಡಿ ಕಲೆಹಾಕಿದ್ದು ಕೇವಲ 13 ರನ್​ಗಳು ಮಾತ್ರ.

ಇನ್ನು ಶ್ರೀಲಂಕಾ ಪರ ಚಾಮಿಕಾ ಕರುಣಾರತ್ನೆ 3 ವಿಕೆಟ್ ಪಡೆದು ಮಿಂಚಿದರೆ, ದುನಿತ್ ವೆಲ್ಲಲಾಗೆ, ಪ್ರಮೋದ್ ಮದುಶನ್ ಹಾಗೂ ಲಹಿರು ಸಮರಕೋನ್ ತಲಾ 2 ವಿಕೆಟ್ ಕಬಳಿಸಿದರು.

ಶ್ರೀಲಂಕಾ ಪ್ಲೇಯಿಂಗ್ 11: ಅವಿಷ್ಕ ಫೆರ್ನಾಂಡೋ , ಲಸಿತ್ ಕ್ರೂಸ್ಪುಲ್ಲೆ , ಮಿನೋದ್ ಭಾನುಕ (ವಿಕೆಟ್ ಕೀಪರ್) , ಪಸಿಂದು ಸೂರಿಯಬಂಡಾರ , ಸಹನ್ ಅರಚ್ಚಿಗೆ , ಅಶೇನ್ ಬಂಡಾರ , ದುನಿತ್ ವೆಲ್ಲಲಾಗೆ (ನಾಯಕ) , ಚಾಮಿಕ ಕರುಣಾರತ್ನೆ , ದುಶನ್ ಹೇಮಂತ , ಪ್ರಮೋದ್ ಮಧುಶನ್ , ಲಹಿರು ಸಮರಕೋನ್.

ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾಗೆ 3 ಗುಡ್​ ನ್ಯೂಸ್

ಒಮಾನ್ ಪ್ಲೇಯಿಂಗ್ 11: ಕಶ್ಯಪ್ ಪ್ರಜಾಪತಿ , ಜತೀಂದರ್ ಸಿಂಗ್ , ಅಕಿಬ್ ಇಲ್ಯಾಸ್ (ನಾಯಕ) , ಅಯಾನ್ ಖಾನ್ , ಶೋಯೆಬ್ ಖಾನ್ , ವಾಸಿಂ ಅಲಿ , ಸೂರಜ್ ಕುಮಾರ್ (ವಿಕೆಟ್ ಕೀಪರ್) , ರಫಿಯುಲ್ಲಾ , ಸಮಯ್ ಶ್ರೀವಾಸ್ತವ , ಜೇ ಒಡೆದ್ರಾ , ಕಲೀಮುಲ್ಲಾ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್