T20 World Cup 2026: ಟಿ20 ವಿಶ್ವಕಪ್ಗೆ 15 ಸದಸ್ಯರ ಇಂಗ್ಲೆಂಡ್ ತಾತ್ಕಾಲಿಕ ತಂಡ ಪ್ರಕಟ
England T20 World Cup 2026 Provisional Squad: ಇಂಗ್ಲೆಂಡ್ 2026ರ T20 ವಿಶ್ವಕಪ್‌ಗಾಗಿ ತನ್ನ ತಾತ್ಕಾಲಿಕ ತಂಡವನ್ನು ಪ್ರಕಟಿಸಿದೆ. ಹ್ಯಾರಿ ಬ್ರೂಕ್ ನಾಯಕರಾಗಿ ಆಯ್ಕೆಯಾಗಿದ್ದು, ಅಚ್ಚರಿ ಎಂದರೆ ಲಿಯಾಮ್ ಲಿವಿಂಗ್‌ಸ್ಟೋನ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಐಸಿಸಿ ನಿಯಮಗಳ ಪ್ರಕಾರ, ವಿಶ್ವಕಪ್‌ಗೂ ಮುನ್ನ ತಂಡದಲ್ಲಿ ಬದಲಾವಣೆ ಮಾಡಲು ಅವಕಾಶವಿದೆ. ಈ ತಂಡದಲ್ಲಿ ಬೆನ್ ಡಕೆಟ್, ಫಿಲ್ ಸಾಲ್ಟ್, ಜೋಫ್ರಾ ಆರ್ಚರ್ ಕೂಡ ಇದ್ದಾರೆ.

ಮುಂದಿನ ವರ್ಷ ಅಂದರೆ 2026 ರ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ (T20 World Cup 2026) ಇಂಗ್ಲೆಂಡ್ ತನ್ನ ತಾತ್ಕಾಲಿಕ ತಂಡವನ್ನು ಪ್ರಕಟಿಸಿದೆ. ತಾತ್ಕಾಲಿಕ ತಂಡ ಎಂದರೆ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಇಂಗ್ಲೆಂಡ್ ಈಗ ಆಯ್ಕೆ ಮಾಡಿರುವ ತಂಡದಲ್ಲಿ ಬದಲಾವಣೆಗಳನ್ನು ಮಾಡುವ ಅವಕಾಶ ಹೊಂದಿರುತ್ತದೆ. ಅಂದರೆ ಟಿ20 ವಿಶ್ವಕಪ್ಗೆ ಇದೇ ಅಂತಿಮ ತಂಡವಲ್ಲ. ವಾಸ್ತವವಾಗಿ ಐಸಿಸಿ (ICC) ನಿಯಮಗಳ ಪ್ರಕಾರ, ಎಲ್ಲಾ ತಂಡಗಳು ಪಂದ್ಯಾವಳಿಗೆ ಒಂದು ತಿಂಗಳ ಮೊದಲು ತಮ್ಮ ತಂಡಗಳನ್ನು ಘೋಷಿಸಬೇಕು. ಆ ಬಳಿಕ ತಮ್ಮ ತಮ್ಮ ತಂಡಗಳಲ್ಲಿ ಬದಲಾವಣೆ ಮಾಡಲು ಐಸಿಸಿ ಗಡುವು ನೀಡಿರುತ್ತದೆ. ಆ ಗಡುವಿಗೂ ಮೊದಲು ತಂಡಗಳು ಬದಲಾವಣೆಗಳನ್ನು ಮಾಡಬಹುದು. ಅದರಂತೆ ಇಂಗ್ಲೆಂಡ್ ಕೂಡ ಇದೀಗ ತಾತ್ಕಾಲಿಕ ತಂಡವನ್ನು ಪ್ರಕಟಿಸಿದ್ದು, ಆ ಬಳಿಕ ತಂಡದಲ್ಲಿ ಬದಲಾವಣೆ ಮಾಡುವ ಅವಕಾಶವನ್ನು ಹೊಂದಿರುತ್ತದೆ.
ಲಿವಿಂಗ್‌ಸ್ಟೋನ್ ಔಟ್
ಪ್ರಸ್ತುತ ಹ್ಯಾರಿ ಬ್ರೂಕ್ ನೇತೃತ್ವದಲ್ಲಿ ಇಂಗ್ಲೆಂಡ್ ಮಂಡಳಿ ಒಟ್ಟು 15 ಆಟಗಾರರನ್ನು ಆಯ್ಕೆ ಮಾಡಿದೆ. ಆದಾಗ್ಯೂ ಈ ತಂಡದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಲಿಯಾಮ್ ಲಿವಿಂಗ್‌ಸ್ಟೋನ್ ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ. ಲಿವಿಂಗ್‌ಸ್ಟೋನ್ ಮಾರ್ಚ್ 2025 ರಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿದ್ದಾರೆ. ಫೆಬ್ರವರಿ 2025 ರಲ್ಲಿ ಭಾರತದ ವಿರುದ್ಧ ಕೊನೆಯ ಪಂದ್ಯವನ್ನಾಡಿದ್ದ ಲಿವಿಂಗ್ಸ್ಟೋನ್ಗೆ ಆ ಬಳಿಕ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ತಮ್ಮ ಟಿ20 ವೃತ್ತಿಜೀವನದಲ್ಲಿ ಇದುವರೆಗೆ 60 ಪಂದ್ಯಗಳನ್ನಾಡಿರುವ ಲಿವಿಂಗ್‌ಸ್ಟೋನ್, 47 ಇನ್ನಿಂಗ್ಸ್‌ಗಳಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕಗಳು ಸೇರಿದಂತೆ 955 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ, ಅವರು 54 ಬೌಂಡರಿಗಳು ಮತ್ತು 59 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
View this post on Instagram
ಹ್ಯಾರಿ ಬ್ರೂಕ್ಗೆ ನಾಯಕತ್ವ
ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು 2026 ರ ಟಿ20 ವಿಶ್ವಕಪ್ಗೆ ಬಲಿಷ್ಠ ತಂಡವನ್ನೇ ಆಯ್ಕೆ ಮಾಡಿದೆ. ಇದರಲ್ಲಿ ಹ್ಯಾರಿ ಬ್ರೂಕ್ ಸೇರಿದಂತೆ, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಫಿಲ್ ಸಾಲ್ಟ್ ಮತ್ತು ಟಾಮ್ ಬ್ಯಾಂಟನ್ ಅವರಂತಹ ಆಟಗಾರರಿದ್ದು, ಜೋಫ್ರಾ ಆರ್ಚರ್ ತಂಡದ ವೇಗದ ದಾಳಿಯನ್ನು ಮುನ್ನಡೆಸಿದರೆ, ಆದಿಲ್ ರಶೀದ್ ಸ್ಪಿನ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಆಶಸ್ ಸರಣಿಯಲ್ಲಿ ಮಿಂಚಿದ ಜೋಶ್ ಟಂಗ್ ಅವರನ್ನು ಮೊದಲ ಬಾರಿಗೆ ಆಯ್ಕೆ ಮಾಡಲಾಗಿದೆ.
ಫೆ. 7 ರಿಂದ ಮಾ. 8 ರವರೆಗೆ ವಿಶ್ವಕಪ್
2026 ರ ಟಿ20 ವಿಶ್ವಕಪ್ ಫೆಬ್ರವರಿ 7 ರಂದು ಪ್ರಾರಂಭವಾಗಿ ಮಾರ್ಚ್ 8 ರವರೆಗೆ ನಡೆಯಲಿದೆ. ಎಲ್ಲಾ 20 ತಂಡಗಳನ್ನು ಐದು ಗುಂಪುಗಳಾಗಿ ವಿಂಗಡಿಸಲಾಗಿದೆ. ಇಂಗ್ಲೆಂಡ್ ತಂಡವು ಬಾಂಗ್ಲಾದೇಶ, ಇಟಲಿ, ವೆಸ್ಟ್ ಇಂಡೀಸ್ ಮತ್ತು ನೇಪಾಳದೊಂದಿಗೆ ಗ್ರೂಪ್ ಸಿ ನಲ್ಲಿದೆ.
U19 World Cup: ಅಂಡರ್-19 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡ ಪ್ರಕಟ
2026 ರ ಟಿ20 ವಿಶ್ವಕಪ್‌ಗಾಗಿ ಇಂಗ್ಲೆಂಡ್ ತಂಡ: ಹ್ಯಾರಿ ಬ್ರೂಕ್ (ನಾಯಕ), ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಫಿಲ್ ಸಾಲ್ಟ್, ಜೋಸ್ ಬಟ್ಲರ್, ಜಾಕೋಬ್ ಬೆಥೆಲ್, ಟಾಮ್ ಬ್ಯಾಂಟನ್, ರಿಯಾನ್ ಅಹ್ಮದ್, ಜೋಫ್ರಾ ಆರ್ಚರ್, ಜೋಶ್ ಟಂಗ್, ಲ್ಯೂಕ್ ವುಡ್, ಆದಿಲ್ ರಶೀದ್, ಸ್ಯಾಮ್ ಕರನ್, ಜೇಮೀ ಓವರ್ಟನ್, ಲಿಯಾಮ್ ಡಾಸನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:52 pm, Tue, 30 December 25
