ನಮಗೆ ಊಟದ್ದೇ ಚಿಂತೆ; ಪಾಕ್ ಪ್ರವಾಸಕ್ಕೆ ಬಾಣಸಿಗರನ್ನು ನೇಮಿಸಿಕೊಂಡ ಇಂಗ್ಲೆಂಡ್ ತಂಡ..!

Eng Vs Pak: ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಆಂಗ್ಲ ತಂಡದಲ್ಲಿನ ಹಲವು ಆಟಗಾರರು ಪಾಕ್ ಊಟವನ್ನು ಇಷ್ಟಪಟ್ಟಿರಲಿಲ್ಲ. ಹೀಗಾಗಿ ಇಂಗ್ಲೆಂಡ್ ತಂಡ ತನ್ನೊಂದಿಗೆ ಬಾಣಸಿಗರನ್ನು ಪಾಕಿಸ್ತಾನಕ್ಕೆ ಕರೆದೊಯ್ಯಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ನಮಗೆ ಊಟದ್ದೇ ಚಿಂತೆ; ಪಾಕ್ ಪ್ರವಾಸಕ್ಕೆ ಬಾಣಸಿಗರನ್ನು ನೇಮಿಸಿಕೊಂಡ ಇಂಗ್ಲೆಂಡ್ ತಂಡ..!
England Team
Follow us
TV9 Web
| Updated By: ಪೃಥ್ವಿಶಂಕರ

Updated on:Nov 22, 2022 | 5:09 PM

ಪಾಕಿಸ್ತಾನದ ಕಳಪೆ ಭದ್ರತಾ ವ್ಯವಸ್ಥೆಯ ನಂತರ, ಈಗ ಅಲ್ಲಿ ಲಭ್ಯವಿರುವ ಆಹಾರದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ವಾಸ್ತವವಾಗಿ ಇಂಗ್ಲೆಂಡ್ (England ) ತಂಡ ತೆಗೆದುಕೊಂಡಿರುವ ನಿರ್ಧಾರವೊಂದು ಇದೀಗ ಪಾಕಿಸ್ತಾನವನ್ನು ವಿಶ್ವದ ಮುಂದೆ ಮುಜುಗರಕ್ಕೀಡುಮಾಡಿದೆ. ಹಾಲಿ ಟಿ20 ಚಾಂಪಿಯನ್ ಇಂಗ್ಲೆಂಡ್, ಡಿಸೆಂಬರ್ 1 ರಿಂದ ಪಾಕಿಸ್ತಾನದಲ್ಲಿ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು (Test series) ಆಡಬೇಕಿದೆ. ಟಿ20 ವಿಶ್ವಕಪ್‌ಗೂ ಮುನ್ನ ಪಾಕ್ ಪ್ರವಾಸ ಮಾಡಿದ್ದ ಇಂಗ್ಲೆಂಡ್ ತಂಡ ಬರೋಬ್ಬರಿ 7 ಟಿ20 ಪಂದ್ಯಗಳನ್ನಾಡಿತ್ತು. ಆಗ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಆಂಗ್ಲ ತಂಡದಲ್ಲಿನ ಹಲವು ಆಟಗಾರರು ಪಾಕ್ ಊಟವನ್ನು ಇಷ್ಟಪಟ್ಟಿರಲಿಲ್ಲ. ಹೀಗಾಗಿ ಇಂಗ್ಲೆಂಡ್ ತಂಡ ತನ್ನೊಂದಿಗೆ ಬಾಣಸಿಗರನ್ನು ಪಾಕಿಸ್ತಾನಕ್ಕೆ ಕರೆದೊಯ್ಯಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ದಿ ಟೆಲಿಗ್ರಾಫ್ ವರದಿ ಪ್ರಕಾರ ಇಂಗ್ಲೆಂಡ್ ತಂಡ ತಮ್ಮ ಬಾಣಸಿಗರೊಂದಿಗೆ ಪಾಕಿಸ್ತಾನ ಪ್ರವಾಸಕ್ಕೆ ತೆರಳಲಿದೆ ಎಂದು ವರದಿಯಾಗಿದೆ. ಕೆಲ ಆಟಗಾರರಿಗೆ ಅಲ್ಲಿನ ಆಹಾರ ಇಷ್ಟವಾಗದೆ ಟಿ20 ಸರಣಿಯ ವೇಳೆ ಹೊಟ್ಟೆನೋವು ಕೂಡ ಕಾಣಿಸಿಕೊಂಡಿತ್ತು. ಹೀಗಾಗಿ ಈ ನಿರ್ಧಾರಕ್ಕೆ ಇಂಗ್ಲೆಂಡ್ ಮಂಡಳಿ ಬಂದಂತೆ ತೋರುತ್ತಿದೆ. ಈಗ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಈ ನಿರ್ಧಾರವು ಪಾಕಿಸ್ತಾನದಲ್ಲಿ ಆಟಗಾರರಿಗೆ ನೀಡುವ ಆಹಾರದ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಆಹಾರದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ಮೊಯಿನ್ ಅಲಿ

ಪಾಕಿಸ್ತಾನ ವಿರುದ್ಧದ ಟಿ20 ಸರಣಿಯ ವೇಳೆ ಮೊಯಿನ್ ಅಲಿ ಅಲ್ಲಿ ಬಡಿಸಿದ ಆಹಾರದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಕರಾಚಿಯಲ್ಲಿ ನೀಡಿದ್ದ ಆಹಾರ ಉತ್ತಮವಾಗಿತ್ತು. ಆದರೆ ಲಾಹೋರ್‌ನಲ್ಲಿ ನೀಡಿದ ಆಹಾರ ನನಗೆ ಇಷ್ಟವಾಗಲಿಲ್ಲ ಎಂದು ಮೊಯಿನ್ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ನಂತರ 17 ವರ್ಷಗಳ ನಂತರ ಪಾಕಿಸ್ತಾನ ಪ್ರವಾಸಕ್ಕೆ ತೆರಳಿದ್ದ ಇಂಗ್ಲೆಂಡ್ ತಂಡಕ್ಕೆ ಆತಿಥ್ಯ ಕೊರತೆಯಾಗಿರುವುದು ಸ್ಪಷ್ಟವಾಗಿತ್ತು.

ಮೊದಲು ಭಯೋತ್ಪಾದಕರ ಭಯ, ಈಗ ಆಹಾರದ ಬಗ್ಗೆ ಪ್ರಶ್ನೆ

ಪಾಕಿಸ್ತಾನದಲ್ಲಿ ಕಳಪೆ ಭದ್ರತಾ ವ್ಯವಸ್ಥೆ ಮತ್ತು ಭಯೋತ್ಪಾದಕ ಘಟನೆಗಳಿಂದಾಗಿ ಹಲವು ವರ್ಷಗಳವರೆಗೆ ಬೇರೆ ತಂಡಗಳು ಆ ದೇಶಕ್ಕೆ ಭೇಟಿ ನೀಡಲು ಹಿಂದೇಟು ಹಾಕಿದ್ದವು. ಅಂದ್ಹಾಗೆ, ಈಗ ಆಸ್ಟ್ರೇಲಿಯಾ, ಇಂಗ್ಲೆಂಡ್‌ನಂತಹ ತಂಡಗಳು ಪಾಕಿಸ್ತಾನದಲ್ಲಿ ಸರಣಿಗಳನ್ನು ಆಡಲಾರಂಭಿಸಿವೆ. ಬಹುಶಃ ಅವರಿಗೆ ಅಲ್ಲಿನ ಭದ್ರತಾ ವ್ಯವಸ್ಥೆಯ ಮೇಲೆ ನಂಬಿಕೆ ಇದೆ, ಆದರೆ ಈಗ ಪಾಕಿಸ್ತಾನದ ಆಹಾರದ ಮೇಲೆ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಇಂಗ್ಲೆಂಡ್-ಪಾಕಿಸ್ತಾನ ಟೆಸ್ಟ್ ಸರಣಿ ವೇಳಾಪಟ್ಟಿ

17 ವರ್ಷಗಳ ನಂತರ ಇಂಗ್ಲೆಂಡ್ ತಂಡ ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿಯನ್ನು ಆಡಲಿದೆ. ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 1 ರಿಂದ ರಾವಲ್ಪಿಂಡಿಯಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಡಿಸೆಂಬರ್ 9 ರಿಂದ ಮುಲ್ತಾನ್‌ನಲ್ಲಿ ನಡೆಯಲಿದೆ. ಮೂರನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಡಿಸೆಂಬರ್ 17 ರಿಂದ 21 ರವರೆಗೆ ಕರಾಚಿಯಲ್ಲಿ ನಡೆಯಲಿದೆ.

Published On - 5:05 pm, Tue, 22 November 22

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ