T20 World Cup 2022: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ನ 20ನೇ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಐರ್ಲೆಂಡ್ (England vs Ireland) ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಮೊದಲು ಬೌಲಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಐರ್ಲೆಂಡ್ ತಂಡಕ್ಕೆ ನಾಯಕ ಆಂಡ್ರ್ಯೂ ಬಲ್ಬಿರ್ನಿ ಉತ್ತಮ ಆರಂಭ ಒದಗಿಸಿದ್ದರು. 47 ಎಸೆತಗಳನ್ನು ಎದುರಿಸಿದ ಬಲ್ಬಿರ್ನಿ 2 ಸಿಕ್ಸ್ ಹಾಗೂ 5 ಫೋರ್ನೊಂದಿಗೆ 62 ರನ್ ಬಾರಿಸಿ ಮಿಂಚಿದ್ದರು. ಈ ಇನಿಂಗ್ಸ್ ನಡುವೆ ಬಲ್ಬಿರ್ನಿ ಬಾರಿಸಿದ ಸಿಕ್ಸ್ವೊಂದು ಎಲ್ಲರನ್ನು ನಗೆಗಡಲಲ್ಲಿ ತೇಲಿಸಿತ್ತು. ಪಂದ್ಯದ 15ನೇ ಓವರ್ನ 4ನೇ ಎಸೆತದಲ್ಲಿ ಬಲ್ಬಿರ್ನಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ್ದರು.
ಚೆಂಡು ಗ್ಯಾಲರಿ ಸ್ಟ್ಯಾಂಡ್ನತ್ತ ಹೋಗುತ್ತಿದ್ದಂತೆ ಪ್ರೇಕ್ಷಕರೊಬ್ಬರು ಕ್ಯಾಚ್ ಹಿಡಿಯಲು ಮುಂದಾಗಿದ್ದರು. ಆದರೆ ಕ್ಯಾಚ್ ಹಿಡಿಯುವ ಯತ್ನದಲ್ಲಿ ಆಯಾ ತಪ್ಪಿ ಕುರ್ಚಿಗಳ ಎಡೆಯಲ್ಲಿ ಬಿದ್ದುಬಿಟ್ಟರು. ಇತ್ತ ಕ್ಯಾಮೆರಾಮ್ಯಾನ್ ಈ ಫನ್ನಿ ವಿಡಿಯೋವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಮೂಲಕ ಎಲ್ಲರಿಗೂ ಬಿಟ್ಟಿ ಮನರಂಜನೆ ಒದಗಿಸಿದರು. ಇದೀಗ ಈ ವಿಡಿಯೋವನ್ನು ಐಸಿಸಿ ಕೂಡ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರೀ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡವು 19.2 ಓವರ್ಗಳಲ್ಲಿ 157 ರನ್ಗಳಿಗೆ ಆಲೌಟ್ ಆಯಿತು. 158 ರನ್ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು 14.3 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 105 ರನ್ ಕಲೆಹಾಕಿದ್ದ ವೇಳೆ ಮಳೆ ಸುರಿಯಲಾರಂಭಿಸಿತು.
ಇದಾದ ಬಳಿಕ ಪಂದ್ಯವನ್ನು ಮುಂದುವರೆಸಲು ಸಾಧ್ಯವಾಗದ ಕಾರಣ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶವನ್ನು ನಿರ್ಧರಿಸಲಾಯಿತು. ಅದರಂತೆ ಇಂಗ್ಲೆಂಡ್ಗಿಂತ 5 ರನ್ಗಳ ಮುನ್ನಡೆ ಹೊಂದಿದ್ದ ಐರ್ಲೆಂಡ್ ತಂಡವನ್ನು ವಿಜಯಿ ಎಂದು ಘೋಷಿಸಲಾಗಿದೆ.