The Ashes, 2023: ಇಂದಿನಿಂದ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವೆ ಪ್ರತಿಷ್ಠಿತ ಆ್ಯಶಸ್ ಸರಣಿ ಆರಂಭ: ಭಾರತದಲ್ಲಿ ಹೇಗೆ ವೀಕ್ಷಿಸುವುದು?

|

Updated on: Jun 16, 2023 | 8:55 AM

England vs Australia, 1st Test: ಹಾಲಿ ವಿಶ್ವ ಟೆಸ್ಟ್​ ಚಾಂಪಿಯನ್​ (WTC) ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ ಕ್ರಿಕೆಟ್​ ತಂಡಗಳ ನಡುವಿನ ಈ ಐತಿಹಾಸಿಕ ಪ್ರತಿಷ್ಠಿತ ಆ್ಯಶಸ್ ಸರಣಿಗಾಗಿ ಇಡೀ ಕ್ರಿಕೆಟ್ ಜಗತ್ತು ಕಾದು ಕುಳಿತಿದೆ.

The Ashes, 2023: ಇಂದಿನಿಂದ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವೆ ಪ್ರತಿಷ್ಠಿತ ಆ್ಯಶಸ್ ಸರಣಿ ಆರಂಭ: ಭಾರತದಲ್ಲಿ ಹೇಗೆ ವೀಕ್ಷಿಸುವುದು?
Ashes 2023 ENG vs AUS
Follow us on

ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ (England vs Australia) ನಡುವಣ ಪ್ರತಿಷ್ಠಿತ ಆ್ಯಶಸ್ ಟೆಸ್ಟ್‌ ಸರಣಿಗೆ ಇಂದು ಚಾಲನೆ ಸಿಗಲಿದೆ. ಉಭಯ ತಂಡಗಳು ಶುಕ್ರವಾರದಿಂದ ಬರ್ಮಿಂಗ್‌ಹ್ಯಾಮ್​ನ ಎಜ್‌ಬಾಸ್ಟನ್‌ನಲ್ಲಿ ಆರಂಭವಾಗುವ ಮೊದಲನೇ ಟೆಸ್ಟ್‌ನಲ್ಲಿ ಕಣಕ್ಕೆ ಇಳಿಯಲಿದೆ. ಹಾಲಿ ವಿಶ್ವ ಟೆಸ್ಟ್​ ಚಾಂಪಿಯನ್​ (WTC) ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ ಕ್ರಿಕೆಟ್​ ತಂಡಗಳ ನಡುವಿನ ಈ ಐತಿಹಾಸಿಕ ಸರಣಿಗಾಗಿ ಇಡೀ ಕ್ರಿಕೆಟ್ ಜಗತ್ತು ಕಾದು ಕುಳಿತಿದೆ. ಆತಿಥೇಯ ಇಂಗ್ಲೆಂಡ್​ ಆಟಗಾರರು 2021- 22ರ ಸರಣಿಯಲ್ಲಿ 4-0 ಅಂತರದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದರೆ ಇತ್ತ ಕಾಂಗರೂ ಪಡೆ 22 ವರ್ಷಗಳ ನಂತರ ಇಂಗ್ಲೆಂಡ್‌ನಲ್ಲಿ ತಮ್ಮ ಮೊದಲ ಆ್ಯಶಸ್ (Ashes 2023) ಗೆಲ್ಲುವ ಇರಾದೆಯಲ್ಲಿದೆ.

1882 ರಲ್ಲಿ ಶುರುವಾದ ಈ ಟೆಸ್ಟ್ ಫೈಟ್​ನಲ್ಲಿ ಇದುವರೆಗೆ 72 ಸರಣಿಗಳನ್ನು ಆಡಲಾಗಿದೆ. ಇದರಲ್ಲಿ 34 ಬಾರಿ ಆಸ್ಟ್ರೇಲಿಯಾ ತಂಡ ಗೆದ್ದರೆ, 32 ಬಾರಿ ಇಂಗ್ಲೆಂಡ್ ತಂಡ ಸರಣಿ ಜಯಿಸಿದೆ. ಆ್ಯಶಸ್ ಸರಣಿಯು 4 ವರ್ಷಗಳ ಬಳಿಕ ಬ್ರಿಟೀಷರ ನಾಡಿನಲ್ಲಿ ನಡೆಯುತ್ತಿದೆ. 2019ರಲ್ಲಿ ಕೊನೆಯ ಬಾರಿ ತವರಿನಲ್ಲಿ ನಡೆದಾಗ, ಸರಣಿಯು 2-2 ರಿಂದ ಸಮಬಲಗೊಂಡಿತ್ತು. ಸದ್ಯ ಟೆಸ್ಟ್‌ಚಾಂಪಿಯನ್‌ ಆಸೀಸ್‌ಗೆ ತವರಿನಲ್ಲಿ ಪ್ರಬಲ ಪೈಪೋಟಿ ನೀಡಲು ಇಂಗ್ಲೀಷರು ಸಜ್ಜಾಗಿದ್ದಾರೆ.

ಆ್ಯಶಸ್​ಗಾಗಿ ಇಂಗ್ಲೆಂಡ್‌ ಕೆಲ ಅಚ್ಚರಿ ನಿರ್ಧಾರ ತೆಗೆದುಕೊಂಡಿದೆ. ಇಸಿಬಿ ಮೊಯೀನ್‌ ಅಲಿ ಅವರನ್ನು ಟೆಸ್ಟ್‌ ನಿವೃತ್ತಿಯಿಂದ ಹೊರ ಬರುವಂತೆ ಮನವಿ ಮಾಡಿತ್ತು. ಅದರಂತೆ ಮೊಯೀನ್ ಈ ಬಾರಿ ಆ್ಯಶಸ್ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂಗ್ಲೆಂಡ್‌ ತಂಡದ ಕೀ ವೇಗಿಗಳಾದ ಜೇಮ್ಸ್ ಆಂಡರ್ಸನ್‌ ಮತ್ತು ಸ್ಟುವರ್ಟ್ ಬ್ರಾಡ್‌ ಕೂಡ ಇದ್ದಾರೆ. ಉಳಿದಂತೆ ಬೆನ್ ಡಕೆಟ್‌, ಒಲ್ಲಿ ಪೋಪ್‌, ಜೋ ರೂಟ್‌, ನಾಯಕ ಬೆನ್‌ ಸ್ಟೋಕ್ಸ್, ಜಾನಿ ಬೈರ್‌ಸ್ಟೋವ್‌ ತಂಡದಲ್ಲಿದ್ದಾರೆ.

ಇದನ್ನೂ ಓದಿ
Asia Cup 2023: ಟೀಮ್ ಇಂಡಿಯಾಗೆ ಬಂಪರ್ ಸುದ್ದಿ: ಬುಮ್ರಾ, ಶ್ರೇಯಸ್ ಅಯ್ಯರ್ ಕಮ್​ಬ್ಯಾಕ್​ಗೆ ವೇದಿಕೆ ಸಜ್ಜು
Duleep Trophy 2023: ದುಲೀಪ್ ಟ್ರೋಫಿ: 6 ತಂಡಗಳು ಪ್ರಕಟ
Ashes 2023 Schedule: ಆ್ಯಶಸ್ ಸರಣಿ ವೇಳಾಪಟ್ಟಿ: ಯಾವ ಚಾನೆಲ್​ನಲ್ಲಿ ನೇರ ಪ್ರಸಾರ? ಇಲ್ಲಿದೆ ಮಾಹಿತಿ
LPL 2023 Auction: ಎಲ್​ಪಿಎಲ್​ನಲ್ಲಿ ದುಬಾರಿ ಮೊತ್ತಕ್ಕೆ ಹರಾಜಾದ 6 ಆಟಗಾರರ ಪಟ್ಟಿ ಇಲ್ಲಿದೆ

Asia Cup 2023 Schedule: ಏಷ್ಯಾಕಪ್​ಗೆ ಡೇಟ್ ಫಿಕ್ಸ್

ಇತ್ತ ಇಂಗ್ಲೆಂಡ್‌ನಲ್ಲಿ ಆಸ್ಟ್ರೇಲಿಯಾ ಯಶಸ್ಸು ಕಂಡಿಲ್ಲ. ಹೀಗಾಗಿ ಸುದೀರ್ಘ ಸಮಯದ ನಂತರ ಈ ಬಾರಿ ಸರಣಿ ಗೆದ್ದು ಅಭಿಮಾನಿಗಳಿಗೆ ಸಿಹಿ ಹಂಚಲು ಸಜ್ಜಾಗಿದೆ. ಸದ್ಯ ಭಾರತ ವಿರುದ್ಧ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಗೆದ್ದ ಆತ್ಮವಿಶ್ವಾಸದಲ್ಲಿದೆ. ಪ್ಯಾಟ್ ಕಮ್ಮಿನ್ಸ್ ತಂಡವನ್ನು ಮುನ್ನಡೆಸುತ್ತಿದ್ದು, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೂನ್ ಗ್ರೀನ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್​ರಂತಹ ಅನುಭವಿಗಳ ದಂಡೇ ಇದೆ. ಜೊತೆಗೆ ಜೋಶ್ ಹ್ಯಾಜಲ್ವುಡ್, ನಾಥನ್ ಲಿಯಾನ್, ಮಿಚ್ ಮಾರ್ಷ್, ಮಿಚೆಲ್ ಸ್ಟಾರ್ಕ್ ರಂತಹ ಮಾರಕ ಬೌಲರ್​ಗಳಿದ್ದಾರೆ.

ಇನ್ನು ಈ ಬಾರಿಯ ಆಶ್ಯಸ್ ಸರಣಿಯ ನೇರ ಪ್ರಸಾರವನ್ನು ಭಾರತದಲ್ಲೂ ವೀಕ್ಷಿಸಬಹುದಾಗಿದೆ. ದೇಶದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಹಾಗೆಯೇ ಪಂದ್ಯಗಳ ಲೈವ್ ಸ್ಟ್ರೀಮಿಂಗ್​ ಲೈವ್ ಸ್ಟ್ರೀಮಿಂಗ್ SonyLIV ಮತ್ತು JioTV ಆ್ಯಪ್​ಗಳಲ್ಲಿ ಇರಲಿದೆ. ಭಾರತೀಯ ಕಾಲಮಾನದ ಪದೆಕಾರ ಈ ಪಂದ್ಯವು ಮಧ್ಯಾಹ್ನ 03:30ಕ್ಕೆ ಆರಂಭವಾಗುತ್ತದೆ. ಟಾಸ್ ಪ್ರಕ್ರಿಯೆಯು ಮಧ್ಯಾಹ್ನ 03:00 ಗಂಟೆಗೆ ನಡೆಯಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ