Ashes 2023 Schedule: ಆ್ಯಶಸ್ ಸರಣಿ ವೇಳಾಪಟ್ಟಿ: ಯಾವ ಚಾನೆಲ್​ನಲ್ಲಿ ನೇರ ಪ್ರಸಾರ? ಇಲ್ಲಿದೆ ಮಾಹಿತಿ

Ashes 2023 Schedule: 1882 ರಲ್ಲಿ ಶುರುವಾದ ಈ ಟೆಸ್ಟ್ ಫೈಟ್​ನಲ್ಲಿ ಇದುವರೆಗೆ 72 ಸರಣಿಗಳನ್ನು ಆಡಲಾಗಿದೆ. ಇದರಲ್ಲಿ 34 ಬಾರಿ ಆಸ್ಟ್ರೇಲಿಯಾ ತಂಡ ಗೆದ್ದರೆ, 32 ಬಾರಿ ಇಂಗ್ಲೆಂಡ್ ತಂಡ ಸರಣಿ ಜಯಿಸಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Jun 15, 2023 | 9:58 PM

Ashes 2023 Schedule: ಟೆಸ್ಟ್ ಕ್ರಿಕೆಟ್​ನ ಮದಗಜಗಳ ಕಾಳಗ ಎಂದೇ ಪ್ರಸಿದ್ಧಿ ಪಡೆದಿರುವ ಪ್ರತಿಷ್ಠಿತ ಆ್ಯಶಸ್ ಸರಣಿಗೆ ಕೌಂಟ್​ ಡೌನ್ ಶುರುವಾಗಿದೆ. ಇಂಗ್ಲೆಂಡ್​-ಆಸ್ಟ್ರೇಲಿಯಾ ನಡುವಣ ಈ ಟೆಸ್ಟ್​ ಸರಣಿಯು ನಾಳೆಯಿಂದ ಆರಂಭವಾಗಲಿದ್ದು, ಈ ಸರಣಿಯಲ್ಲಿ ಒಟ್ಟು 5 ಪಂದ್ಯಗಳನ್ನಾಡಲಾಗುತ್ತದೆ.

1 / 9
1882 ರಲ್ಲಿ ಶುರುವಾದ ಈ ಟೆಸ್ಟ್ ಫೈಟ್​ನಲ್ಲಿ ಇದುವರೆಗೆ 72 ಸರಣಿಗಳನ್ನು ಆಡಲಾಗಿದೆ. ಇದರಲ್ಲಿ 34 ಬಾರಿ ಆಸ್ಟ್ರೇಲಿಯಾ ತಂಡ ಗೆದ್ದರೆ, 32 ಬಾರಿ ಇಂಗ್ಲೆಂಡ್ ತಂಡ ಸರಣಿ ಜಯಿಸಿದೆ.

2 / 9
ವಿಶೇಷ ಎಂದರೆ ಈ 72 ಸರಣಿಗಳಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದ ಸರಣಿಯನ್ನು ಡ್ರಾನಲ್ಲಿ ಅಂತ್ಯಗೊಳಿಸಿದ್ದು ಕೇವಲ 6 ಬಾರಿ ಮಾತ್ರ. ಅಂದರೆ ಆ್ಯಶಸ್ ಸರಣಿಯಲ್ಲಿ ಫಲಿತಾಂಶ ಹೊರಬೀಳುವುದು ಖಚಿತ.

3 / 9
ಇನ್ನು ಈ ಬಾರಿಯ ಆ್ಯಶಸ್ ಸರಣಿ ನಡೆಯುತ್ತಿರುವುದು ಇಂಗ್ಲೆಂಡ್​ನಲ್ಲಿ. 2019 ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದ ಸರಣಿಯನ್ನು ಆಸ್ಟ್ರೇಲಿಯಾ ಡ್ರಾ ಮಾಡಿಕೊಂಡಿತ್ತು. ಅಲ್ಲದೆ ಆಂಗ್ಲರ ನಾಡಲ್ಲಿ ಆಸೀಸ್ ಪಡೆ ಆ್ಯಶಸ್ ಸರಣಿ ಗೆದ್ದು ಬರೋಬ್ಬರಿ 26 ವರ್ಷಗಳೇ ಕಳೆದಿವೆ. ಅಂದರೆ 1997 ರಲ್ಲಿ ಕೊನೆಯ ಬಾರಿ ಇಂಗ್ಲೆಂಡ್​ನಲ್ಲಿ ಆಸ್ಟ್ರೇಲಿಯಾ ಸರಣಿ ಜಯಿಸಿತ್ತು.

4 / 9
ಅತ್ತ ಕಳೆದ ಬಾರಿ ಕಾಂಗರೂಗಳ ನಾಡಿನಲ್ಲಿ ಇಂಗ್ಲೆಂಡ್​ ತಂಡವನ್ನು 4-0 ಅಂತರದಿಂದ ಬಗ್ಗು ಬಡಿದಿರುವ ಆಸ್ಟ್ರೇಲಿಯಾ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಗೆದ್ದ ಹುಮ್ಮಸ್ಸಿನಲ್ಲಿದೆ.

5 / 9
ಮತ್ತೊಂದೆಡೆ ಇಂಗ್ಲೆಂಡ್ ತಂಡವು ಕಳೆದ ಬಾರಿಯ ಹೀನಾಯ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಹೀಗಾಗಿ ಈ ಬಾರಿ ಕೂಡ ಉಭಯ ತಂಡಗಳಿಂದ ಜಿದ್ದಾಜಿದ್ದಿನ ಪೈಪೋಟಿಯನ್ನು ನಿರೀಕ್ಷಿಸಬಹುದು.

6 / 9
ಇನ್ನು ಈ ಬಾರಿಯ ಆಶ್ಯಸ್ ಸರಣಿಯ ನೇರ ಪ್ರಸಾರವನ್ನು ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಹಾಗೆಯೇ ಪಂದ್ಯಗಳ ಲೈವ್ ಸ್ಟ್ರೀಮಿಂಗ್​ ಲೈವ್ ಸ್ಟ್ರೀಮಿಂಗ್ SonyLIV ಮತ್ತು JioTV ಆ್ಯಪ್​ಗಳಲ್ಲಿ ಇರಲಿದೆ. ಈ ಸರಣಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ.

7 / 9
ಮೊದಲ ಟೆಸ್ಟ್ ಪಂದ್ಯ-ಎಡ್ಜ್​ಬಾಸ್ಟನ್ ಸ್ಟೇಡಿಯಂ(ಜೂ. 16 ರಿಂದ ಜೂ. 20), ಎರಡನೇ ಟೆಸ್ಟ್ ಪಂದ್ಯ- ಲಾರ್ಡ್ಸ್​ ಸ್ಟೇಡಿಯಂ (ಜೂ. 28 ರಿಂದ ಜುಲೈ 2), ಮೂರನೇ ಟೆಸ್ಟ್ ಪಂದ್ಯ- ಹೆಂಡಿಗ್ಲಿ ಸ್ಟೇಡಿಯಂ (ಜುಲೈ 6 ರಿಂದ ಜುಲೈ 10).

8 / 9
ನಾಲ್ಕನೇ ಟೆಸ್ಟ್ ಪಂದ್ಯ- ಓಲ್ಡ್ ಟ್ರಾಫರ್ಡ್ ಸ್ಟೇಡಿಯಂ (ಜುಲೈ 19 ರಿಂದ ಜುಲೈ 23), ಐದನೇ ಟೆಸ್ಟ್ ಪಂದ್ಯ- ಓವಲ್ ಸ್ಟೇಡಿಯಂ (ಜುಲೈ 27 ರಿಂದ ಜುಲೈ 31). ಈ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 3.30 ರಿಂದ ಶುರುವಾಗಲಿದೆ.

9 / 9
Follow us
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?

ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ

ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ

ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ

ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!

ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ

ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು

ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ

ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು

ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ