Rishabh Pant: ರಿಷಭ್ ಪಂತ್ ಚೇತರಿಕೆ ಕಂಡು ಶಾಕ್ ಆದ ಬಿಸಿಸಿಐ: ಏಕದಿನ ವಿಶ್ವಕಪ್ನಲ್ಲಿ ಕಣಕ್ಕೆ?
ರಿಷಭ್ ಪಂತ್ ಬಗ್ಗೆ ವಿಶೇಷ ಕಾಳಜಿ ವಹಿಸಿರುವ ಬಿಸಿಸಿಐ 2023ರ ಏಕದಿನ ವಿಶ್ವಕಪ್‌ಗೆ ಫಿಟ್‌ಗೊಳಿಸುವ ಪ್ರಯತ್ನವಾಗಿ, ಎನ್‌ಸಿಎನಲ್ಲಿ ಅವರ ಪುನರ್ವಸತಿಯನ್ನು ವೇಗವಾಗಿ ಟ್ರ್ಯಾಕ್ ಮಾಡಲು ಯೋಜಿಸುತ್ತಿದೆ.
ಕಳೆದ ವರ್ಷ ಡಿಸೆಂಬರ್ 30ರಂದು ನಡೆದ ಭೀಕರ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಭಾರತ ತಂಡದ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ (Rishabh Pant) ಇದೀಗ ವೇಗವಾಗಿ ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಸ್ವತಃ ಪಂತ್ ಮಾಹಿತಿ ನೀಡಿದ್ದು, ಯಾವುದೇ ಬೆಂಬಲವಿಲ್ಲದೆ ಮೆಟ್ಟಿಲುಗಳನ್ನು ಏರುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ (Team India) ಆಯ್ಕೆಗಾರರಿಗೆ ಹಾಗೂ ಅಭಿಮಾನಿಗಳಿಗೆ ಖುಷಿಯ ಸುದ್ದಿಯನ್ನು ನೀಡಿದ್ದಾರೆ. ಪಂತ್ ಅವರ ಚೇತರಿಕೆ ಕಂಡು ಬಿಸಿಸಿಐ (BCCI), 2023ರ ಅಂತ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ತಂಡಕ್ಕೆ ಅವರನ್ನು ಆಯ್ಕೆ ಮಾಡುವ ಯೋಜನೆ ಹಾಕಿಕೊಂಡಿದೆ ಎಂಬುದಾಗಿ ವರದಿಯಾಗಿದೆ.
ಪಂತ್ ಬಗ್ಗೆ ವಿಶೇಷ ಕಾಳಜಿ ವಹಿಸಿರುವ ಬಿಸಿಸಿಐ 2023ರ ಏಕದಿನ ವಿಶ್ವಕಪ್‌ಗೆ ಫಿಟ್‌ಗೊಳಿಸುವ ಪ್ರಯತ್ನವಾಗಿ, ಎನ್‌ಸಿಎನಲ್ಲಿ ಅವರ ಪುನರ್ವಸತಿಯನ್ನು ವೇಗವಾಗಿ ಟ್ರ್ಯಾಕ್ ಮಾಡಲು ಯೋಜಿಸುತ್ತಿದೆ. ರಿಷಭ್ ಪಂತ್ ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ನಡೆಸುತ್ತಿದ್ದಾರೆ. ಎನ್‌ಸಿಎಯಲ್ಲಿ ಪಂತ್ ಜೊತೆ ಸಹ ಆಟಗಾರರಾದ ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಮತ್ತು ಪ್ರಸಿದ್ಧ್ ಕೃಷ್ಣ ಕೂಡ ಇದ್ದಾರೆ.
Ashes 2023 Schedule: ಆ್ಯಶಸ್ ಸರಣಿ ವೇಳಾಪಟ್ಟಿ: ಯಾವ ಚಾನೆಲ್ನಲ್ಲಿ ನೇರ ಪ್ರಸಾರ? ಇಲ್ಲಿದೆ ಮಾಹಿತಿ
Not bad yaar Rishabh ❤️❤️?. Simple things can be difficult sometimes ? pic.twitter.com/XcF9rZXurG
— Rishabh Pant (@RishabhPant17) June 14, 2023
ಎನ್‌ಸಿನಲ್ಲಿ ಕೋಲಿನ ಸಹಾಯದಿಂದ ಸ್ವಲ್ಪ ಸ್ಟ್ರೆಚಿಂಗ್ ಮಾಡುತ್ತಿರುವ ಸ್ಟೋರಿ ಮತ್ತು ಫೋಟೋಗಳನ್ನು ಪಂತ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ವಿಡಿಯೋಗೆ ಶೀರ್ಷಿಕೆಯೊಂದನ್ನು ಬರೆದಿರುವ ಪಂತ್ ಅವರು ಶೀಘ್ರವಾಗಿ ಚೇತರಿಸಿಕೊಂಡಿದ್ದಕ್ಕಾಗಿ ತನ್ನನ್ನು ಅನೇಕರು ಶ್ಲಾಘಿಸಿದ್ದಾರೆ ಮತ್ತು ಮೆಟ್ಟಿಲುಗಳನ್ನು ಹತ್ತುವಂತಹ ಸರಳ ಕೆಲಸಗಳನ್ನು ಮಾಡುವುದು ಸಹ ಈಗ ಕಷ್ಟಕರವಾಗಿದೆ ಎಂದು ಹೇಳಿದ್ದಾರೆ.
Rishabh pant on a recovery mode …. pic.twitter.com/HAm1A8ipWx
— Ankit (@ankitmahato23) June 14, 2023
ಡಿಸೆಂಬರ್ 30, 2022 ರಂದು, ಮುಂಜಾನೆ 5:30 ರ ಸುಮಾರಿಗೆ, ಪಂತ್ ಅವರು ತಮ್ಮ ತವರು ರೂರ್ಕಿಗೆ ಹೋಗುತ್ತಿರುವಾಗ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಅವರ ಮರ್ಸಿಡಿಸ್ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಾಗ ಅದೃಷ್ಟವಶಾತ್ ಬದುಕುಳಿದಿದ್ದರು. ಕಾರು ಅಪಘಾತದ ವೇಳೆ ಯುವ ಬ್ಯಾಟರ್ ಅನೇಕ ಗಾಯಗಳಿಗೆ ಒಳಗಾಗಿದ್ದರು. ಹೀಗಾಗಿ 2023ರಲ್ಲಿ ಸಂಪೂರ್ಣ ಕ್ರಿಕೆಟ್ ಆಟವನ್ನು ಕಳೆದುಕೊಳ್ಳುವ ನಿರೀಕ್ಷೆಯಿತ್ತು. ಆದರೆ, ಪಂತ್ ಚೇತರಿಕೆಯ ವೇಗ ಕಂಡು ಮುಂಬರುವ ಏಕದಿನ ವಿಶ್ವಕಪ್‌ಗೆ ಇವರು ಟೀಮ್ ಇಂಡಿಯಾ ಪರ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ