IND vs ENG: ಭಾರತ- ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಗೆ ಸ್ಥಳ ನಿಗದಿಪಡಿಸಿದ ಇಸಿಬಿ

IND vs ENG: 2025 ರಲ್ಲಿ ಟೀಂ ಇಂಡಿಯಾ 5 ಟೆಸ್ಟ್ ಪಂದ್ಯಗಳ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಮಾಡಲಿದೆ. ಈ ಸರಣಿಗಾಗಿ ಇಸಿಬಿ ಇದೀಗ ಸ್ಥಳಗಳನ್ನು ನಿಗದಿಪಡಿಸಿದೆ.

|

Updated on:Jun 15, 2023 | 3:25 PM

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಸತತ ಎರಡನೇ ಬಾರಿಗೆ ಸೋತು ಖಾಲಿ ಕೈಯಲ್ಲಿ ತವರಿಗೆ ಮರಳಿರುವ ಟೀಂ ಇಂಡಿಯಾ ಸದ್ಯ 1 ತಿಂಗಳ ವಿಶ್ರಾಂತಿಯಲ್ಲಿರಲಿದೆ. ಆ ನಂತರ ರೋಹಿತ್ ಬಳಗ ಟೆಸ್ಟ್, ಏಕದಿನ, ಟಿ20 ಸರಣಿಗಾಗಿ ವಿಂಡೀಸ್ ಪ್ರವಾಸ ಮಾಡಲಿದೆ. ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಟೀಂ ಇಂಡಿಯಾ ತನ್ನ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಅಭಿಯಾನ ಆರಂಭಿಸಲಿದೆ.

1 / 5
ಈಗಾಗಲೇ 3ನೇ ಆವೃತ್ತಿಯ ಟೆಸ್ಟ್ ಚಾಂಪಿಯನ್​ಶಿಪ್​ಗೆ ಐಸಿಸಿ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಇದರಡಿಯಲ್ಲಿ ಭಾರತ ಈ ಆವೃತ್ತಿಯಲ್ಲಿ ಬರೋಬ್ಬರಿ 19 ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಪ್ರಮುಖವಾಗಿ 6 ದೇಶಗಳನ್ನು ಭಾರತ ಎದುರಿಸಲಿದೆ.

2 / 5
ಈ 6 ಟೆಸ್ಟ್ ಸರಣಿಗಳಲ್ಲಿ ಟೀಂ ಇಂಡಿಯಾ 3 ಸರಣಿಗಳನ್ನು ತವರಿನಲ್ಲಿ ಆಡಲಿದ್ದು, ಇನ್ನುಳಿದ 3 ಸರಣಿಗಳನ್ನು ವಿದೇಶದಲ್ಲಿ ಆಡಲಿದೆ. ಇದರಲ್ಲಿ ಭಾರತ, ವೆಸ್ಟ್ ಇಂಡೀಸ್, ಇಂಗ್ಲೆಂಡ್, ಬಾಂಗ್ಲಾದೇಶ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸೌತ್ ಆಫ್ರಿಕಾ ತಂಡಗಳನ್ನು ಎದುರಿಸಲಿದೆ.

3 / 5
ಇದರೊಂದಿಗೆ ಟೀಂ ಇಂಡಿಯಾದ 2023- 25ರ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ವೇಳಾಪಟ್ಟಿ ಪೂರ್ಣಗೊಳ್ಳಲಿದೆ. ಆದರೆ ಈ ನಡುವೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು 2025-2031 ರ ನಡುವಿನ ಅಂದರೆ, 2025 ರ ನಂತರದ ಮುಂದಿನ ಏಳು ವರ್ಷಗಳ ತನ್ನ ಕ್ರಿಕೆಟ್​ ಕ್ಯಾಲೆಂಡರ್​ನಲ್ಲಿ ನಡೆಯಲ್ಲಿರುವ ಪಂದ್ಯಗಳ ಸ್ಥಳಗಳನ್ನು ಅಂತಿಮಗೊಳಿಸಿದೆ. ಇದರಲ್ಲಿ ಟೀಂ ಇಂಡಿಯಾ ಆಡಲ್ಲಿರುವ ಟೆಸ್ಟ್ ಸರಣಿಯ ಬಗ್ಗೆಯೂ ಮಾಹಿತಿ ಹೊರಬಿದ್ದಿದೆ.

4 / 5
2025 ರಲ್ಲಿ ಟೀಂ ಇಂಡಿಯಾ 5 ಟೆಸ್ಟ್ ಪಂದ್ಯಗಳ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಮಾಡಲಿದೆ. ಈ ಸರಣಿಗಾಗಿ ಇಸಿಬಿ ಇದೀಗ ಸ್ಥಳಗಳನ್ನು ನಿಗದಿಪಡಿಸಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಪ್ರಕಟಣೆಯ ಪ್ರಕಾರ, ಲಾರ್ಡ್ಸ್, ದಿ ಓವಲ್ (ಲಂಡನ್‌ನಲ್ಲಿ ಎರಡೂ), ಎಡ್ಜ್‌ಬಾಸ್ಟನ್ (ಬರ್ಮಿಂಗ್ಹ್ಯಾಮ್), ಹೆಡಿಂಗ್ಲೆ (ಲೀಡ್ಸ್), ಮತ್ತು ಓಲ್ಡ್ ಟ್ರಾಫರ್ಡ್ (ಮ್ಯಾಂಚೆಸ್ಟರ್) ನಂತಹ ಐಕಾನಿಕ್ ಸ್ಥಳಗಳಲ್ಲಿ ಭಾರತ ಟೆಸ್ಟ್ ಸರಣಿಯನ್ನು ಆಡಲಿದೆ.

5 / 5

Published On - 3:21 pm, Thu, 15 June 23

Follow us