AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಭಾರತ ವಿರುದ್ಧದ ಟೆಸ್ಟ್, ಟಿ20 ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ; ವೇಳಾಪಟ್ಟಿ ಹೀಗಿದೆ

IND vs ENG: ಡಿಸೆಂಬರ್​ನಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ಸವಾಲನ್ನು ಎದುರಿಸಲಿದ್ದು, ಇದಕ್ಕಾಗಿ ಆಂಗ್ಲ ತಂಡ ಭಾರತ ಪ್ರವಾಸಕ್ಕೆ ಬರಲಿದೆ. ಡಿಸೆಂಬರ್ 6 ರಿಂದ ಆರಂಭವಾಗಲಿರುವ ಈ ಪ್ರವಾಸದಲ್ಲಿ 1 ಟೆಸ್ಟ್ ಪಂದ್ಯ ಹಾಗೂ 3 ಟಿ20 ಪಂದ್ಯಗಳು ನಡೆಯಲಿವೆ.

IND vs ENG: ಭಾರತ ವಿರುದ್ಧದ ಟೆಸ್ಟ್, ಟಿ20 ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ; ವೇಳಾಪಟ್ಟಿ ಹೀಗಿದೆ
ಭಾರತ- ಇಂಗ್ಲೆಂಡ್
ಪೃಥ್ವಿಶಂಕರ
|

Updated on: Nov 11, 2023 | 7:23 AM

Share

ಪ್ರಸ್ತುತ ಭಾರತದಲ್ಲಿ ಏಕದಿನ ವಿಶ್ವಕಪ್ (ICC World Cup 2023) ನಡೆಯುತ್ತಿದ್ದು, ಈ 10 ತಂಡಗಳ ಪಂದ್ಯಾವಳಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಲೀಗ್ ಸುತ್ತಿನ ಪಂದ್ಯಗಳು ಭಾಗಶಃ ಮುಗಿದಿದ್ದು, ಈಗ ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯಗಳು ಬಾಕಿ ಉಳಿದಿವೆ. ನವೆಂಬರ್ 19 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರಶಸ್ತಿ ಸುತ್ತಿನ ಪಂದ್ಯ ನಡೆಯುವುದರೊಂದಿಗೆ ಏಕದಿನ ವಿಶ್ವಕಪ್​ಗೆ ತೆರೆ ಬೀಳಲಿದೆ. ಆದರೆ ಆ ನಂತರವೂ ಟೀಂ ಇಂಡಿಯಾ ಇತರ ದ್ವಿಪಕ್ಷೀಯ ಸರಣಿಗಳಲ್ಲಿ ಬ್ಯುಸಿಯಾಗಲಿದೆ. ಇದರ ಪ್ರಯುಕ್ತ ಡಿಸೆಂಬರ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ (India vs England) ತಂಡಗಳು ಮುಖಾಮುಖಿಯಾಗುತ್ತಿದ್ದು, ಉಭಯ ತಂಡಗಳು ಟೆಸ್ಟ್ ಮತ್ತು ಟಿ20 ಸರಣಿಗಳನ್ನು ಆಡಲಿವೆ. ಈ ಎರಡೂ ಸರಣಿಗಳಿಗೆ ಈಗ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ.

ವಿಶ್ವಕಪ್ ನಂತರ, ಭಾರತೀಯ ಪುರುಷರ ತಂಡವು ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯನ್ನು ಆಡಲಿದ್ದರೆ, ಏಷ್ಯನ್ ಗೇಮ್ಸ್ ನಂತರ ಭಾರತೀಯ ಮಹಿಳಾ ತಂಡವೂ ಮೊದಲ ಬಾರಿಗೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಮರಳಲಿದೆ. ಡಿಸೆಂಬರ್​ನಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ಸವಾಲನ್ನು ಎದುರಿಸಲಿದ್ದು, ಇದಕ್ಕಾಗಿ ಆಂಗ್ಲ ತಂಡ ಭಾರತ ಪ್ರವಾಸಕ್ಕೆ ಬರಲಿದೆ. ಡಿಸೆಂಬರ್ 6 ರಿಂದ ಆರಂಭವಾಗಲಿರುವ ಈ ಪ್ರವಾಸದಲ್ಲಿ 1 ಟೆಸ್ಟ್ ಪಂದ್ಯ ಹಾಗೂ 3 ಟಿ20 ಪಂದ್ಯಗಳು ನಡೆಯಲಿವೆ.

ಸ್ಟಾರ್ ಆಲ್​ರೌಂಡರ್ ವಾಪಸಾತಿ

ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ನವೆಂಬರ್ 10 ಶುಕ್ರವಾರದಂದು ಈ ಪ್ರವಾಸಕ್ಕಾಗಿ ತಂಡವನ್ನು ಪ್ರಕಟಿಸಿದೆ. ಈ ಪ್ರವಾಸದಲ್ಲಿ ಸ್ಟಾರ್ ಸ್ಪಿನ್ನರ್ ಸೋಫಿ ಎಕ್ಲೆಸ್ಟನ್ ಲಭ್ಯರಾಗಿರುವುದು ಇಂಗ್ಲೆಂಡ್ ಪಾಲಿಗೆ ಸಮಾಧಾನದ ಸಂಗತಿ. ಎಡಗೈ ಸ್ಪಿನ್ ಆಲ್-ರೌಂಡರ್ ಎಕ್ಲೆಸ್ಟನ್ ಸೆಪ್ಟೆಂಬರ್‌ನಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿ ರಿಹ್ಯಾಬ್​ನಲ್ಲಿದ್ದರು. ಭಾರತ ಪ್ರವಾಸದೊಂದಿಗೆ ಅವರು ಮತ್ತೆ ಕ್ರಿಕೆಟ್ ಕ್ಷೇತ್ರಕ್ಕೆ ಮರಳಲಿದ್ದಾರೆ. ಏಕದಿನ ಹಾಗೂ ಟಿ20ಯಲ್ಲಿ ತನ್ನದೇ ಛಾಪು ಮೂಡಿಸಿರುವ ಯುವ ಸ್ಪಿನ್ ಆಲ್ ರೌಂಡರ್ ಆಲಿಸ್ ಕ್ಯಾಪ್ಸಿ ಟೆಸ್ಟ್ ತಂಡದಲ್ಲೂ ಸ್ಥಾನ ಪಡೆದಿದ್ದು, ಪದಾರ್ಪಣೆ ಮಾಡುವ ಸಾಧ್ಯತೆ ಇದೆ.

ಹೀದರ್ ನೈಟ್ ನಾಯಕತ್ವದ ಆಂಗ್ಲ ತಂಡವು ಭಾರತಕ್ಕೆ ಬರುವ ಮೊದಲು 15 ದಿನಗಳ ಕಾಲ ಓಮನ್ ಪ್ರವಾಸದಲ್ಲಿರಲಿದ್ದು, ಅಲ್ಲಿ ತಂಡವು ತರಬೇತಿ ಶಿಬಿರದಲ್ಲಿ ಭಾಗವಹಿಸಲಿದೆ. ಈ ಶಿಬಿರವು ನವೆಂಬರ್ 17 ರಿಂದ ಡಿಸೆಂಬರ್ 2 ರವರೆಗೆ ನಡೆಯಲಿದೆ. ಈ ಸರಣಿಯಲ್ಲದೆ, ಇಂಗ್ಲೆಂಡ್ ಎ ತಂಡವನ್ನು ಸಹ ಪ್ರಕಟಿಸಲಾಗಿದ್ದು, ಭಾರತ ಎ ವಿರುದ್ಧ 3 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಇನ್ನು ಭಾರತ ತಂಡಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮುಂದಿನ ದಿನಗಳಲ್ಲಿ ತಂಡವನ್ನು ಪ್ರಕಟಿಸಲಿದೆ.

ಇಂಗ್ಲೆಂಡ್ ತಂಡ

ಟೆಸ್ಟ್ ತಂಡ : ಹೀದರ್ ನೈಟ್ (ನಾಯಕ), ಟಮ್ಮಿ ಬ್ಯೂಮಾಂಟ್, ಲಾರೆನ್ ಬೆಲ್, ಆಲಿಸ್ ಕ್ಯಾಪ್ಸಿ, ಕೇಟ್ ಕ್ರಾಸ್, ಚಾರ್ಲಿ ಡೀನ್, ಸೋಫಿಯಾ ಡಂಕ್ಲಿ, ಸೋಫಿ ಎಕ್ಲೆಸ್ಟನ್, ಲಾರೆನ್ ಫೈಲರ್, ಬೆಸ್ ಹೀತ್, ಆಮಿ ಜೋನ್ಸ್, ಎಮ್ಮಾ ಲ್ಯಾಂಬ್, ನೇಟ್ ಸಿವರ್-ಬ್ರಂಟ್, ಡ್ಯಾನಿ ವ್ಯಾಟ್.

ಟಿ20 ತಂಡ: ಹೀದರ್ ನೈಟ್ (ನಾಯಕ), ಲಾರೆನ್ ಬೆಲ್, ಮಾಯಾ ಬೌಶಿಯರ್, ಆಲಿಸ್ ಕ್ಯಾಪ್ಸಿ, ಚಾರ್ಲಿ ಡೀನ್, ಸೋಫಿಯಾ ಡಂಕ್ಲಿ, ಸೋಫಿ ಎಕ್ಲೆಸ್ಟನ್, ಮಹಿಕಾ ಗೌರ್, ಡೇನಿಯಲ್ ಗಿಬ್ಸನ್, ಸಾರಾ ಗ್ಲೆನ್, ಬೆಸ್ ಹೀತ್, ಆಮಿ ಜೋನ್ಸ್, ಫ್ರೇಯಾ ಕ್ಯಾಂಪ್, ನೇಟ್ ಸಿವರ್-ಬ್ರಂಟ್, ಡ್ಯಾನಿ ವ್ಯಾಟ್

ಭಾರತ-ಇಂಗ್ಲೆಂಡ್ ಸರಣಿ ವೇಳಾಪಟ್ಟಿ

  • ಡಿಸೆಂಬರ್ 6- ಮೊದಲ ಟಿ20 ಪಂದ್ಯ, ವಾಂಖೆಡೆ ಸ್ಟೇಡಿಯಂ (ಮುಂಬೈ)
  • ಡಿಸೆಂಬರ್ 9 – 2 ನೇ ಟಿ20 ಪಂದ್ಯ, ವಾಂಖೆಡೆ ಸ್ಟೇಡಿಯಂ (ಮುಂಬೈ)
  • ಡಿಸೆಂಬರ್ 10- 3ನೇ ಟಿ20 ಪಂದ್ಯ, ವಾಂಖೆಡೆ ಸ್ಟೇಡಿಯಂ (ಮುಂಬೈ)
  • ಡಿಸೆಂಬರ್ 14 ರಿಂದ 17 – ಟೆಸ್ಟ್ ಪಂದ್ಯ, ಡಿವೈ ಪಾಟೀಲ್ ಸ್ಟೇಡಿಯಂ (ನವಿ ಮುಂಬೈ)

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ