ವಯಸ್ಸು ಕೇವಲ ನಂಬರ್ ಅಷ್ಟೇ…ಇದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ ಫಾಫ್ ಡುಪ್ಲೆಸಿಸ್ (Faf du Plessis). ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ SA20 ಲೀಗ್ನಲ್ಲಿ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿಯುವ ಮೂಲಕ 39 ವರ್ಷದ ಡುಪ್ಲೆಸಿಸ್ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಜೋಹಾನ್ಸ್ಬರ್ಗ್ನ ದಿ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ 4ನೇ ಪಂದ್ಯದಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್ ಹಾಗೂ ಎಂಐ ಕೇಪ್ಟೌನ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಜೋಬರ್ಗ್ ಸೂಪರ್ ಕಿಂಗ್ಸ್ ತಂಡವು ಎಂಐ ಕೇಪ್ಟೌನ್ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಕೇಪ್ಟೌನ್ ತಂಡಕ್ಕೆ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಹಾಗೂ ರಯಾನ್ ರಿಕೆಲ್ಟನ್ ಸ್ಪೋಟಕ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ 200 ರನ್ಗಳ ಜೊತೆಯಾಟವಾಡಿದ ಬಳಿಕ ರಯಾನ್ ರಿಕೆಲ್ಟನ್ (98) ಔಟಾದರು. ಈ ಹಂತದಲ್ಲಿ 3ನೇ ಕ್ರಮಾಂಕದಲ್ಲಿ ಡೆವಾಲ್ಡ್ ಬ್ರೆವಿಸ್ ಕಣಕ್ಕಿಳಿದರು.
ಲಿಝಾಡ್ ವಿಲಿಯಮ್ಸ್ ಎಸೆದ ಪಂದ್ಯದ 17ನೇ ಓವರ್ನ ನಾಲ್ಕನೇ ಎಸೆತದಲ್ಲಿ ಬ್ರೆವಿಸ್ ಭರ್ಜರಿ ಹೊಡೆತಕ್ಕೆ ಯತ್ನಿಸಿದ್ದರು. ಮಿಡ್ ಆಫ್ನತ್ತ ಚಿಮ್ಮಿದ ಚೆಂಡನ್ನು ಫಾಫ್ ಡುಪ್ಲೆಸಿಸ್ ಚೇಸ್ ಮಾಡಿದರು. ಅಲ್ಲದೆ ಅದ್ಭುತ ಡೈವಿಂಗ್ ಮೂಲಕ ಒಂದೇ ಕೈಯಲ್ಲಿ ಚೆಂಡನ್ನು ಹಿಡಿದರು.
ಇದೀಗ ಫಾಫ್ ಡುಪ್ಲೆಸಿಸ್ ಅವರ ಅತ್ಯದ್ಭುತ ಡೈವಿಂಗ್ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕ್ಯಾಚ್ನೊಂದಿಗೆ ವಯಸ್ಸು ಕೇವಲ ನಂಬರ್ ಅಷ್ಟೇ ಎಂಬುದನ್ನು ಫಾಫ್ ಡುಪ್ಲೆಸಿಸ್ ಮತ್ತೊಮ್ಮೆ ನಿರೂಪಿಸಿದ್ದಾರೆ.
Hey @Betway_za, doesn’t that @faf1307 catch deserve a share of the #Betway Catch 2 Million? 🤔#SA20 #WelcomeToIncredible #JSKvMICT pic.twitter.com/bVSd7TbHUx
— Betway SA20 (@SA20_League) January 13, 2024
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಂಐ ಕೇಪ್ಟೌನ್ ತಂಡದ ಪರ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ 50 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 104 ರನ್ ಬಾರಿಸಿದ್ದರು. ಈ ಭರ್ಜರಿ ಶತಕದ ನೆರವಿನಿಂದ ಎಂಐ ಕೇಪ್ಟೌನ್ ತಂಡವು 5 ವಿಕೆಟ್ ಕಳೆದುಕೊಂಡು 243 ರನ್ ಕಲೆಹಾಕಿತು.
244 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಜೋಬರ್ಗ್ ಸೂಪರ್ ಕಿಂಗ್ಸ್ ತಂಡವು 17.5 ಓವರ್ಗಳಲ್ಲಿ 145 ರನ್ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಎಂಐ ಕೇಪ್ಟೌನ್ ತಂಡವು 98 ರನ್ಗಳ ಭರ್ಜರಿ ಜಯ ಸಾಧಿಸಿತು.
ಜೋಬರ್ಗ್ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11: ಫಾಫ್ ಡು ಪ್ಲೆಸಿಸ್ (ನಾಯಕ) , ರೀಝ ಹೆಂಡ್ರಿಕ್ಸ್ , ರೊನಾನ್ ಹರ್ಮನ್ (ವಿಕೆಟ್ ಕೀಪರ್) , ಲೆಯುಸ್ ಡು ಪ್ಲೂಯ್ , ಮೊಯೀನ್ ಅಲಿ , ಡೊನೊವನ್ ಫೆರೀರಾ , ರೊಮಾರಿಯೊ ಶೆಫರ್ಡ್ , ನಾಂಡ್ರೆ ಬರ್ಗರ್ , ಲಿಝಾರ್ಡ್ ವಿಲಿಯಮ್ಸ್ , ಝಹೀರ್ ಖಾನ್ , ಇಮ್ರಾನ್ ತಾಹಿರ್.
ಇದನ್ನೂ ಓದಿ: Kieron Pollard: ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಪೊಲಾರ್ಡ್
ಎಂಐ ಕೇಪ್ಟೌನ್ ಪ್ಲೇಯಿಂಗ್ 11: ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ , ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್) , ಡೆವಾಲ್ಡ್ ಬ್ರೆವಿಸ್ , ಕಾನರ್ ಎಸ್ಟರ್ಹ್ಯೂಜೆನ್ , ಲಿಯಾಮ್ ಲಿವಿಂಗ್ಸ್ಟೋನ್ , ಕೀರನ್ ಪೊಲಾರ್ಡ್ (ನಾಯಕ) , ಸ್ಯಾಮ್ ಕರನ್ , ಜಾರ್ಜ್ ಲಿಂಡೆ , ಕಗಿಸೊ ರಬಾಡಾ , ಬ್ಯೂರಾನ್ ಹೆಂಡ್ರಿಕ್ಸ್ , ಒಲ್ಲಿ ಸ್ಟೋನ್.