ಆದರೂ ಈಗಲೂ ಕೊನೆಯ ಪಂದ್ಯದಲ್ಲಿನ ಸೋಲು ಕಾಡುತ್ತಿದೆ ಎಂದಿರುವ ಡುಪ್ಲೆಸಿಸ್, ಗೆಲುವಿಗಾಗಿ ನಾವು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೆವು. ಆದರೆ ಅಂತಿಮ ಹಂತದಲ್ಲಿ ಎಡವಿದ್ದೇವೆ. ಇದಾಗ್ಯೂ ಈ ಬಾರಿಯ ಟೂರ್ನಿಯ ಸಕಾರಾತ್ಮಕ ವಿಷಯಗಳೆಂದರೆ, ನನ್ನ, ವಿರಾಟ್ ಕೊಹ್ಲಿಯ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಅವರ ಉತ್ತಮ ಜೊತೆಯಾಟಗಳು. ಇನ್ನು ಬೌಲಿಂಗ್ನಲ್ಲಿ ಮೊಹಮ್ಮದ್ ಸಿರಾಜ್ ಕೂಡ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದ್ದಾರೆ.