FAKE Scorecard: ವಿರಾಟ್ ಕೊಹ್ಲಿ ಸ್ಪೋಟಕ ಶತಕ: ಪಾಕ್ ವಿರುದ್ಧ ಟೀಮ್ ಇಂಡಿಯಾಗೆ ಭರ್ಜರಿ ಜಯ
India vs Pakistan: ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೇಕ್ ಸ್ಕೋರ್ ಕಾರ್ಡ್ ಬಗ್ಗೆ ಪರ ವಿರೋಧಿ ಚರ್ಚೆಗಳು ಶುರುವಾಗಿದೆ. ಇದಾಗ್ಯೂ ಇಂತಹದೊಂದು ಭವಿಷ್ಯ ನುಡಿದಿರುವವರು ಯಾರು ಎಂಬುದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
T20 World Cup 2022: ಟಿ20 ವಿಶ್ವಕಪ್ ಇನ್ನೂ ಕೂಡ ಶುರುವಾಗಿಲ್ಲ. ಅದಕ್ಕೂ ಮುನ್ನವೇ ಟೀಮ್ ಇಂಡಿಯಾಗೆ (Team India) ಗೆಲುವೇ? ಇಂತಹದೊಂದು ಪ್ರಶ್ನೆ ಮೂಡಲುಲ ಮುಖ್ಯ ಕಾರಣ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ಪೋಸ್ಟ್. ಹೌದು, ಅಕ್ಟೋಬರ್ 23 ರಂದು ನಡೆಯಲಿರುವ ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಭವಿಷ್ಯವೊಂದು ಹೇಳಲಾಗಿದೆ. ಈ ಭವಿಷ್ಯವಾಣಿಯನ್ನು ಆಧರಿಸಿದ ಫೇಕ್ ಸ್ಕೋರ್ ಬೋರ್ಡ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ನಕಲಿ ಸ್ಕೋರ್ ಬೋರ್ಡ್ನಲ್ಲಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಲಿದೆ ಎಂದು ತಿಳಿಸಲಾಗಿದೆ. ಅಲ್ಲದೆ ಭಾರತದ ಪರ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಲಿದ್ದಾರೆ ಎಂದು ಭವಿಷ್ಯ ನುಡಿಯಲಾಗಿದೆ. 58 ಎಸೆತಗಳನ್ನು ಎದುರಿಸಲಿರುವ ಕೊಹ್ಲಿ 117 ರನ್ ಬಾರಿಸಲಿದ್ದು, ಕಿಂಗ್ ಕೊಹ್ಲಿಯ ಈ ಶತಕದ ನೆರವಿನಿಂದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 224 ರನ್ಗಳಿಸಲಿದೆ ಎಂದು ಹೇಳಲಾಗಿದೆ.
ಇನ್ನು 225 ರನ್ಗಳನ್ನು ಬೆನ್ನತ್ತಲಿರುವ ಪಾಕಿಸ್ತಾನ್ ತಂಡವು ಮೊಹಮ್ಮದ್ ರಿಜ್ವಾನ್ (75) ಅವರ ಅರ್ಧಶತಕದ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 171 ರನ್ಗಳಿಸಲಷ್ಟೇ ಶಕ್ತರಾಗಲಿದ್ದಾರೆ ಎಂದು ತಿಳಿಸಲಾಗಿದೆ. ಈ ಮೂಲಕ ಟೀಮ್ ಇಂಡಿಯಾ ಅಕ್ಟೋಬರ್ 23 ರಂದು 53 ರನ್ಗಳ ಭರ್ಜರಿ ಜಯ ಸಾಧಿಸಲಿದೆ.
ಅಚ್ಚರಿ ಎಂದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ದೀಪಕ್ ಚಹರ್ 4 ಓವರ್ಗಳಲ್ಲಿ 27 ರನ್ ನೀಡಿ 4 ವಿಕೆಟ್ ಕಬಳಿಸಲಿದ್ದಾರಂತೆ. ಆದರೆ ಚಹರ್ ಟೀಮ್ ಇಂಡಿಯಾ ಟಿ20 ವಿಶ್ವಕಪ್ ತಂಡದ ಭಾಗವಲ್ಲ. ಬದಲಾಗಿ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಇದೀಗ ಜಸ್ಪ್ರೀತ್ ಬುಮ್ರಾ ಅವರ ಸ್ಥಾನದಲ್ಲಿ ದೀಪಕ್ ಚಹರ್ ಆಯ್ಕೆಯಾಗಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
Ind vs pak 23 October match summary ? pic.twitter.com/Rpl8NdsYO9
— Suprvirat (@ishantraj51) October 9, 2022
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೇಕ್ ಸ್ಕೋರ್ ಕಾರ್ಡ್ ಬಗ್ಗೆ ಪರ ವಿರೋಧಿ ಚರ್ಚೆಗಳು ಶುರುವಾಗಿದೆ. ಇದಾಗ್ಯೂ ಇಂತಹದೊಂದು ಭವಿಷ್ಯ ನುಡಿದಿರುವವರು ಯಾರು ಎಂಬುದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಒಟ್ಟಿನಲ್ಲಿ ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಕದನಕ್ಕೆ ದಿನಗಳು ಮಾತ್ರ ಉಳಿದಿರುವಾಗ ನಾನಾ ರೀತಿಯ ಸುದ್ದಿಗಳು ಹರಿದಾಡಲಾರಂಭಿಸಿರುವುದೇ ಅಚ್ಚರಿ.
Published On - 12:05 pm, Mon, 10 October 22