DC vs SRH: ಡೆಲ್ಲಿ-ಹೈದರಾಬಾದ್ ಪಂದ್ಯದ ಮಧ್ಯೆ ಸ್ಟೇಡಿಯಂನಲ್ಲೇ ಹೊಡೆದಾಡಿಕೊಂಡ ಫ್ಯಾನ್ಸ್: ವೈರಲ್ ವಿಡಿಯೋ

Fans Fight DC vs SRH IPL 2023: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಮತ್ತು ಎಸ್​​ಆರ್​ಹೆಚ್ ಪಂದ್ಯ ನಡೆಯುತ್ತಿದ್ದರೆ ಇತ್ತ ಗ್ಯಾಲರಿಯಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ಯಾವ ಕಾರಣಕ್ಕೆ ಜಗಳ ಆಗಿದೆ ಎಂಬ ಬಗ್ಗೆ ವರದಿ ಆಗಿಲ್ಲ.

DC vs SRH: ಡೆಲ್ಲಿ-ಹೈದರಾಬಾದ್ ಪಂದ್ಯದ ಮಧ್ಯೆ ಸ್ಟೇಡಿಯಂನಲ್ಲೇ ಹೊಡೆದಾಡಿಕೊಂಡ ಫ್ಯಾನ್ಸ್: ವೈರಲ್ ವಿಡಿಯೋ
Fans Fight DC vs SRH IPL 2023
Follow us
Vinay Bhat
|

Updated on:Apr 30, 2023 | 12:25 PM

ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ (IPL 2023) ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ (DC vs SRH) ನಡುವಣ ಪಂದ್ಯ ರಣರೋಚಕವಾಗಿತ್ತು. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ (Delhi Stadium) ನಡೆದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಆ್ಯಡಂ ಮರ್ಕ್ರಮ್ ನಾಯಕತ್ವದ ಎಸ್​ಆರ್​ಹೆಚ್ 9 ರನ್​ಗಳ ರೋಚಕ ಗೆಲುವು ಸಾಧಿಸಿತು. ಈ ಕುತೂಹಲಕಾರಿ ಪಂದ್ಯ ವೀಕ್ಷಿಸಲು ಸ್ಟೇಡಿಯಂ ಸಂಪೂರ್ಣ ಭರ್ತಿ ಆಗಿತ್ತು. ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರು. ಇದರ ನಡುವೆ ಸ್ಟೇಡಿಯಂನಲ್ಲಿ ನಾಚಿಕೆಗೇಡಿನ ಘಟನೆ ನಡೆದಿದೆ. ಡೆಲ್ಲಿ ಹಾಗೂ ಹೈದರಾಬಾದ್ ತಂಡದ ಅಭಿಮಾನಿಗಳು ಪಂದ್ಯದ ಮಧ್ಯೆ ಸ್ಟೇಡಿಯಂನಲ್ಲೇ ಹೊಡೆದಾಡಿಕೊಂಡಿದ್ದಾರೆ.

ಮೈದಾನದಲ್ಲಿ ಡೆಲ್ಲಿ ಮತ್ತು ಎಸ್​​ಆರ್​ಹೆಚ್ ಪಂದ್ಯ ನಡೆಯುತ್ತಿದ್ದರೆ ಇತ್ತ ಗ್ಯಾಲರಿಯಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ಯಾವ ಕಾರಣಕ್ಕೆ ಜಗಳ ಆಗಿದೆ ಎಂಬ ಬಗ್ಗೆ ವರದಿ ಆಗಿಲ್ಲ. ಆದರೆ, ಕೈ-ಕೈ ಮಿಲಾಯಿಸಿಕೊಂಡು ಜಗಳವಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ದೆಹಲಿಯ ಕ್ರೀಡಾಂಗಣದಲ್ಲಿ ಪಂದ್ಯದ ಮಧ್ಯೆ ಈರೀತಿ ಜಗಳ ಆಗುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ನಡೆದ ಭಾರತ- ದಕ್ಷಿಣ ಆಫ್ರಿಕಾ ನಡುವಣ ಮೊದಲ ಟಿ20 ಪಂದ್ಯದ ವೇಳೆಯೂ ಅಭಿಮಾನಿಗಳು ಹೊಡೆದಾಡಿಕೊಂಡಿದ್ದರು.

ಇದನ್ನೂ ಓದಿ
Image
Rohit Sharma Birthday: ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿಟ್​ಮ್ಯಾನ್ ರೋಹಿತ್ ಶರ್ಮಾ: ಫೋಟೋ ನೋಡಿ
Image
Happy Birthday Rohit Sharma: 36ನೇ ವಸಂತಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ
Image
Andre Russell: ಕ್ಯಾಚ್ ಬಿಟ್ಟಿದ್ದಕ್ಕೆ ತನ್ನದೇ ತಂಡದ ಆಟಗಾರನಿಗೆ ಮನಬಂದಂತೆ ಬೈದ ಆಂಡ್ರೆ ರಸೆಲ್
Image
CSK vs PBKS, IPL 2023: ಐಪಿಎಲ್​ನಲ್ಲಿಂದು ಡಬಲ್ ಧಮಾಕ: ಚೆನ್ನೈ-ಪಂಜಾಬ್ ಮತ್ತು ಮುಂಬೈ-ರಾಜಸ್ಥಾನ್ ನಡುವೆ ಹೈವೋಲ್ಟೇಜ್ ಪಂದ್ಯ

IPL 2023: ಡಾಟ್ ಬಾಲ್​ನಲ್ಲಿ ಶತಕ ಪೂರೈಸಿದ ಮೊಹಮ್ಮದ್ ಸಿರಾಜ್

ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸನ್​ರೈಸರ್​ಸ್ ಹೈದರಾಬಾದ್ ತಂಡ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದತು. ಆದರೆ, ಅಭಿಷೇಕ್ ಶರ್ಮಾ ಬಿರುಸಿನ ಬ್ಯಾಟಿಂಗ್ ತಂಡದ ರನ್​ಗತಿಯನ್ನು ಏರಿಸಿತು. ಮಯಾಂಕ್ ಅಗರ್ವಾಲ್ 5, ರಾಹುಲ್ ತ್ರಿಪಾಠಿ 10, ಆ್ಯಡಂ ಮರ್ಕ್ರಮ್ 8 ಹಾಗೂ ಹ್ಯಾರಿ ಬ್ರೂಕ್ ಸೊನ್ನೆ ಸುತ್ತಿದರು. ಅಭಿಷೇಕ್ 36 ಎಸೆತಗಳಲ್ಲಿ 67 ರನ್ ಬಾರಿಸಿದರು. ಅಂತಿಮ ಹಂತದಲ್ಲಿ ಹೆನ್ರಿಚ್ ಕ್ಲಾಸೆನ್ ಕೇವಲ 27 ಎಸೆತಗಳಲ್ಲಿ 2 ಫೋರ್, 4 ಸಿಕ್ಸರ್ ಸಿಡಿಸಿ ಅಜೇಯ 53 ರನ್ ಹಾಗೂ ಅಬ್ದುಲ್ ಸಮದ್ ಅಜೇಯ 28 ರನ್ ಸಿಡಿಸಿದ ಪರಿಣಾಮ ಎಸ್​ಆರ್​ಹೆಚ್ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 197 ರನ್ ಕಲೆಹಾಕಿತು. ಡೆಲ್ಲಿ ಪರ ಮಿಚೆಲ್ ಮಾರ್ಶ್ 4 ವಿಕೆಟ್ ಪಡೆದರು.

ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಮೊದಲ ಓವರ್​ನಲ್ಲೇ ಡೇವಿಡ್ ವಾರ್ನರ್(0) ವಿಕೆಟ್ ಕಳೆದುಕೊಂಡಿತು. ಆದರೆ, 2ನೇ ವಿಕೆಟ್​ಗೆ ಪಿಲಿಪ್ ಸಾಲ್ಟ್ (59) ಹಾಗೂ ಮಿಚೆಲ್ ಮಾರ್ಶ್ (63) ಶತಕದ ಜೊತೆಯಾಟ ಆಡಿ ತಂಡಕ್ಕೆ ಗೆಲುವಿನ ಆಸೆ ತಂದಿಟ್ಟರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಂಡಿತು. ಮನೀಶ್ ಪಾಂಡೆ 1, ಪ್ರಿಯಂ ಗರ್ಗ್ 12, ಸರ್ಫರಾಜ್ ಖಾನ್ 9 ರನ್​ಗೆ ಬೇಗನೆ ಔಟಾದರು. ಅಕ್ಷರ್ ಪಟೇಲ್ ಅಜೇಯ 29 ರನ್ ಬಾರಿಸಿ ಹೋರಾಡಿದರೂ ಗೆಲುವು ಸಾಧ್ಯವಾಗಲಿಲ್ಲ. ಡೆಲ್ಲಿ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತಷ್ಟೆ. ಹೈದರಾಬಾದ್ ಪರ ಮಯಾಂಕ್ ಮಾರ್ಕಂಡೆ 2 ವಿಕೆಟ್ ಕಿತ್ತರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:25 pm, Sun, 30 April 23

ಪಾಸ್ ತೋರಿಸಿ ಎಂದಿದ್ದಕ್ಕೆ ಬಿಎಂಟಿಸಿ ಸಿಬ್ಬಂದಿಗೆ ಆವಾಜ್ ಹಾಕಿದ ಪ್ರಯಾಣಿಕ
ಪಾಸ್ ತೋರಿಸಿ ಎಂದಿದ್ದಕ್ಕೆ ಬಿಎಂಟಿಸಿ ಸಿಬ್ಬಂದಿಗೆ ಆವಾಜ್ ಹಾಕಿದ ಪ್ರಯಾಣಿಕ
‘ಪುಷ್ಪ 2’ ಟ್ರೇಲರ್​ ಲಾಂಚ್​ನಲ್ಲಿ ಜನಸಾಗರ; ಅಲ್ಲು ಅರ್ಜುನ್ ಕ್ರೇಜ್ ನೋಡಿ
‘ಪುಷ್ಪ 2’ ಟ್ರೇಲರ್​ ಲಾಂಚ್​ನಲ್ಲಿ ಜನಸಾಗರ; ಅಲ್ಲು ಅರ್ಜುನ್ ಕ್ರೇಜ್ ನೋಡಿ
ಮದ್ವೆ ಮನೆಯಲ್ಲಿ ಕಳ್ಳರ ಕೈಚಳಕ: ಚಿನ್ನ, ಹಣ ದೋಚಿದ ಖದೀಮರು!
ಮದ್ವೆ ಮನೆಯಲ್ಲಿ ಕಳ್ಳರ ಕೈಚಳಕ: ಚಿನ್ನ, ಹಣ ದೋಚಿದ ಖದೀಮರು!
BBK 11: ಕಾಂಟ್ರವರ್ಸಿ ಮೂಲಕವೇ ವೈಲ್ಡ್ ಕಾರ್ಡ್​ ಸ್ಪರ್ಧಿ ಎಂಟ್ರಿ
BBK 11: ಕಾಂಟ್ರವರ್ಸಿ ಮೂಲಕವೇ ವೈಲ್ಡ್ ಕಾರ್ಡ್​ ಸ್ಪರ್ಧಿ ಎಂಟ್ರಿ
ಸ್ವಿಮ್ಮಿಂಗ್ ಫುಲ್​ನಲ್ಲಿ ದುರಂತ ಅಂತ್ಯಕಂಡ ಯುವತಿಯರ ಕೊನೆ ಕ್ಷಣದ ವಿಡಿಯೋ!
ಸ್ವಿಮ್ಮಿಂಗ್ ಫುಲ್​ನಲ್ಲಿ ದುರಂತ ಅಂತ್ಯಕಂಡ ಯುವತಿಯರ ಕೊನೆ ಕ್ಷಣದ ವಿಡಿಯೋ!
ಸ್ಕೂಟಿ​ ಡಿಕ್ಕಿಯೊಳಗೆ ಹಾವು ಪ್ರತ್ಯಕ್ಷ, ಬೆಚ್ಚಿಬಿದ್ದ ಚಾಲಕ, ಮುಂದೇನಾಯ್ತು
ಸ್ಕೂಟಿ​ ಡಿಕ್ಕಿಯೊಳಗೆ ಹಾವು ಪ್ರತ್ಯಕ್ಷ, ಬೆಚ್ಚಿಬಿದ್ದ ಚಾಲಕ, ಮುಂದೇನಾಯ್ತು
ಬಿಪಿಎಲ್ ಕಾರ್ಡ್ ರದ್ದು: ಸರ್ಕಾರ ನಡೆ ಸ್ವಾಗತಿಸಿದ ಬಿಜೆಪಿ ಎಂಪಿ ರಾಘವೇಂದ್ರ
ಬಿಪಿಎಲ್ ಕಾರ್ಡ್ ರದ್ದು: ಸರ್ಕಾರ ನಡೆ ಸ್ವಾಗತಿಸಿದ ಬಿಜೆಪಿ ಎಂಪಿ ರಾಘವೇಂದ್ರ
ಬಾಲನಟ ರೋಹಿತ್​ಗೆ ಅಪಘಾತ ಆಗಿದ್ದು ಹೇಗೆ? ಈಗ ಆರೋಗ್ಯ ಹೇಗಿದೆ?
ಬಾಲನಟ ರೋಹಿತ್​ಗೆ ಅಪಘಾತ ಆಗಿದ್ದು ಹೇಗೆ? ಈಗ ಆರೋಗ್ಯ ಹೇಗಿದೆ?
PDO ಪರೀಕ್ಷೆಯಲ್ಲೂ ಎಡವಟ್ಟು, ಅರ್ಧಂಬರ್ಧ ಪ್ರಶ್ನೆ ಪತ್ರಿಕೆ ಕಳುಹಿಸಿದ KPSC
PDO ಪರೀಕ್ಷೆಯಲ್ಲೂ ಎಡವಟ್ಟು, ಅರ್ಧಂಬರ್ಧ ಪ್ರಶ್ನೆ ಪತ್ರಿಕೆ ಕಳುಹಿಸಿದ KPSC
ಎಸ್​ಎಸ್​ಎಲ್​ಸಿಯಲ್ಲಿ ಫೇಲ್ ಆಗಿದ್ದಕ್ಕೆ ವಿಗ್ರಹ ವಿರೂಪಗೊಳಿಸಿದ ಬಾಲಕ
ಎಸ್​ಎಸ್​ಎಲ್​ಸಿಯಲ್ಲಿ ಫೇಲ್ ಆಗಿದ್ದಕ್ಕೆ ವಿಗ್ರಹ ವಿರೂಪಗೊಳಿಸಿದ ಬಾಲಕ