Happy Birthday Rohit Sharma: 36ನೇ ವಸಂತಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ
Rohit Sharma Birthday: ಏಕದಿನ ಕ್ರಿಕೆಟ್‌ನಲ್ಲಿ 3 ಬಾರಿ ದ್ವಿಶತಕ ಬಾರಿಸಿದ ಜಗತ್ತಿನ ಏಕೈಕ ಬ್ಯಾಟರ್ ಎನ್ನುವ ದಾಖಲೆ ಬರೆದಿರುವ ರೋಹಿತ್ ಶರ್ಮಾಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕೂಡ ಟ್ವೀಟ್ ಮೂಲಕ ವಿನೂತನವಾಗಿ ಶುಭಕೋರಿದೆ.
ಭಾರತ ಕ್ರಿಕೆಟ್ ತಂಡದ ನಾಯಕ, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಕ್ಯಾಪ್ಟನ್ ಆಗಿರುವ ರೋಹಿತ್ ಶರ್ಮಾ (Rohit Sharma) ಅವರಿಗಿಂದು ಹುಟ್ಟು ಹಬ್ಬದ ಸಂಭ್ರಮ. 36ನೇ ವಸಂತಕ್ಕೆ ಕಾಲಿಟ್ಟಿರುವ ಹಿಟ್ಮ್ಯಾನ್, ಕುಟುಂಬ ಸದಸ್ಯರು ಹಾಗೂ ಮುಂಬೈ ಇಂಡಿಯನ್ಸ್ ತಂಡದ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ರೋಹಿತ್ ಹುಟ್ಟು ಹಬ್ಬಕ್ಕೆ ಟೀಮ್ ಇಂಡಿಯಾ ಮಾಜಿ ಹಾಗೂ ಹಾಲಿ, ಬಾಲಿವುಡ್ ಸೆಲೆಬ್ರೆಟಿಗಳು ಸೇರಿದದಂತೆ ಅನೇಕ ಅಭಿಮಾನಿಗಳು ಶುಭಕೋರಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 3 ಬಾರಿ ದ್ವಿಶತಕ ಬಾರಿಸಿದ ಜಗತ್ತಿನ ಏಕೈಕ ಬ್ಯಾಟರ್ ಎನ್ನುವ ದಾಖಲೆ ಬರೆದಿರುವ ರೋಹಿತ್ ಶರ್ಮಾಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕೂಡ ಟ್ವೀಟ್ ಮೂಲಕ ವಿನೂತನವಾಗಿ ಶುಭಕೋರಿದೆ.
ರೋಹಿತ್ 2007 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದರು. ಅಲ್ಲದೆ ಇದರಲ್ಲಿ ಭಾರತ ಚಾಂಪಿಯನ್ ಕೂಡ ಆಯಿತು. ಅಂದಿನಿಂದ, ಇವರು ವೈಟ್-ಬಾಲ್ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠರಲ್ಲಿ ತಮ್ಮ ಸ್ಥಾನವನ್ನು ಸ್ಥಿರವಾಗಿ ಭದ್ರಪಡಿಸಿಕೊಂಡಿದ್ದಾರೆ. 243 ಏಕದಿನ ಪಂದ್ಯಗಳನ್ನಾಡಿದ್ದು, ಅವರು 30 ಶತಕಗಳು ಮತ್ತು 48 ಅರ್ಧ ಶತಕಗಳನ್ನು ಒಳಗೊಂಡಂತೆ 9825 ರನ್ ಗಳಿಸಿದ್ದಾರೆ.
IPL 2023: 3 ವರ್ಷಗಳಿಂದ RCB ತಂಡದಲ್ಲಿದ್ದರೂ ಒಂದೇ ಒಂದು ಚಾನ್ಸ್ ನೀಡಿಲ್ಲ..!
4️⃣4️⃣0️⃣ intl. matches 1️⃣7️⃣0️⃣5️⃣7️⃣ intl. runs 4️⃣3️⃣ intl. hundreds ? Only cricketer to score Three ODI double hundreds ??
Here’s wishing #TeamIndia captain @ImRo45, a very happy birthday ? ?? pic.twitter.com/uNV9VbEUFb
— BCCI (@BCCI) April 30, 2023
Happy Birthday @ImRo45 . I wish you good luck and success. May you have another year filled with new achievements for yourself and Indian cricket. Stay blessed always brother.#HappyBirthdayRohit pic.twitter.com/GZbKK7BHQI
— Harbhajan Turbanator (@harbhajan_singh) April 30, 2023
ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿರುವ ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ತನ್ನದೇ ಆದ ಛಾಪು ಮೂಡಿಸಿದ್ದು, ನಾಯಕನಾಗಿ ಮುಂಬೈ ಇಂಡಿಯನ್ಸ್‌ಗೆ 5 ಐಪಿಎಲ್ ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದಾರೆ. ಸದ್ಯ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಹೇಳಿಕೊಳ್ಳಿವಂತಹ ಪ್ರದರ್ಶನ ನೀಡುತ್ತಿಲ್ಲ. ಆದರೂ ಸಹ ಇವರು ಐದು ಬಾರಿಯ ತಂಡವನ್ನ ಚಾಂಪಿಯನ್ ಮಟ್ಟಕ್ಕೆ ಕೊಂಡೊಯ್ದಿದ್ದು, ಅವರ ನಾಯಕತ್ವದ ಗುಣವನ್ನು ಎತ್ತಿಹಿಡಿಯುತ್ತದೆ.
2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನಲ್ಲಿ 203 ರನ್ ಗಳಿಸಿದ ರೋಹಿತ್ ತಾವೊಬ್ಬ ರನ್ ದಾಹ ಹೊಂದಿರುವ ಬ್ಯಾಟರ್ ಎಂಬುದನ್ನು ಸಾಬೀತುಪಡಿಸಿದ್ದರು. 158 ಎಸೆತಗಳಲ್ಲಿ 209 ರನ್ ಚಚ್ಚಿ ಭಾರತದ ಪರ ಒಡಿಐನಲ್ಲಿ ದ್ವಿಶತಕ ಬಾರಿಸಿದ ಮೂರನೇ ಬ್ಯಾಟ್ಸ್‌ಮನ್ ಎನಿಸಿದರು. 2014ರಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ಶ್ರೀಲಂಕಾ ವಿರುದ್ಧ 264 ರನ್ ಕಲೆಹಾಕಿದ ಮುಂಬೈ ಆಟಗಾರ, 173 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು. 2017ರಲ್ಲಿ ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ 208 ರನ್ ಸಿಡಿಸಿದ ರೋಹಿತ್, ಇದಕ್ಕಾಗಿ ಕೇವಲ 153 ಎಸೆತಗಳನ್ನು ಎದುರಿಸಿದ್ದರು. ಹೀಗೆ ಮೂರು ಬಾರಿ ಏಕದಿನದಲ್ಲಿ ದ್ವಿಶತಕ ಚಚ್ಚಿದ್ದಾರೆ.
ಸದ್ಯ ರೋಹಿತ್ ಶರ್ಮಾ ಮುಂದಿರುವ ಬಹುದೊಡ್ಡ ಸವಾಲೆಂದರೆ ಐಸಿಸಿ ಏಕದಿನ ವಿಶ್ವಕಪ್. ಭಾರತದಲ್ಲಿ ಇದೇ ವರ್ಷ ಅಕ್ಟೋಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾವನ್ನ ಯಶಸ್ವಿಯಾಗಿ ಮುನ್ನಡೆಸುವ ಸವಾಲು ರೋಹಿತ್ ಶರ್ಮಾ ಅವರಿಗಿದೆ. ರೋಹಿತ್ ಶರ್ಮಾ ಅವರ ಎಲ್ಲ ಕನಸು ನನಸಾಗಲಿ. ಕ್ರಿಕೆಟ್‌ನಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಎನಿಸಿಕೊಂಡಿರುವ ಇವರು ಇನ್ನಷ್ಟು ಉತ್ತುಂಗಕ್ಕೇರಲಿ ಎಂಬುದು ನಮ್ಮ ನಮ್ಮೆಲ್ಲರ ಆಶಯ. ಹ್ಯಾಪಿ ಬರ್ತ್ ಡೇ ರೋ’ಹಿಟ್’ ಶರ್ಮಾ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:30 am, Sun, 30 April 23