Forbes India 2021: 30 ವರ್ಷದೊಳಗಿನ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದ ಗಿಲ್​.. ಕ್ರಿಕೆಟ್‌ ದಿಗ್ಗಜರು ಗಿಲ್​ ಬಗ್ಗೆ ಹೇಳಿದ್ದು ಹೀಗೆ..!

Shubman Gill: ಫೋರ್ಬ್ಸ್ ಇಂಡಿಯಾ 30 ಜನ ಸಾಧಕರ ವಾರ್ಷಿಕ ಪಟ್ಟಿ ಪ್ರಕಟಿಸಿದ್ದು, ಇದರಲ್ಲಿ ಭಾರತೀಯ ಯುವ ಕ್ರಿಕೆಟರ್ ಹಾಗೂ ಆರಂಭಿಕ ಬ್ಯಾಟ್ಸ್​ಮನ್​ ಶುಭ್​​ಮನ್​ ಗಿಲ್ (Shubman Gill) ಹೆಸರು ಇರುವುದು ಕ್ರಿಕೆಟ್​ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

Forbes India 2021: 30 ವರ್ಷದೊಳಗಿನ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದ ಗಿಲ್​.. ಕ್ರಿಕೆಟ್‌ ದಿಗ್ಗಜರು ಗಿಲ್​ ಬಗ್ಗೆ ಹೇಳಿದ್ದು ಹೀಗೆ..!
ಶುಭ್​​ಮನ್​ ಗಿಲ್
Follow us
ಪೃಥ್ವಿಶಂಕರ
|

Updated on:Feb 04, 2021 | 11:47 AM

Forbes India 2021 ಫೋರ್ಬ್ಸ್ ಇಂಡಿಯಾ 30 ಮಂದಿ ಸಾಧಕರ ವಾರ್ಷಿಕ ಪಟ್ಟಿ ಪ್ರಕಟಿಸಿದ್ದು, ಇದರಲ್ಲಿ ಭಾರತೀಯ ಯುವ ಕ್ರಿಕೆಟರ್ ಹಾಗೂ ಆರಂಭಿಕ ಬ್ಯಾಟ್ಸ್​ಮನ್​ ಶುಭ್​ಮನ್ ಗಿಲ್ (Shubman Gill) ಹೆಸರು ಇರುವುದು ಕ್ರಿಕೆಟ್​ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಗಿಲ್ ಉತ್ತಮ ಪ್ರದರ್ಶನ ನೀಡಿದ್ದರು. ಜೊತೆಗೆ ಅಂತಿಮ ಹಾಗೂ ನಿರ್ಣಾಯಕ ಟೆಸ್ಟ್​ ಪಂದ್ಯದಲ್ಲಿ ಗಿಲ್​ ಆಡಿದ ಆಟ ಭಾರತ ತಂಡ ಸುಲಭವಾಗಿ ಜಯ ಗಳಿಸಲು ಸಾಧ್ಯವಾಯಿತು. ಹೀಗಾಗಿ ಯುವ ಸಾಧಕರ ಪಟ್ಟಿಯಲ್ಲಿ ಗಿಲ್ ಹೆಸರೂ ಇದೆ.

ಫೋರ್ಬ್ಸ್ ಇಂಡಿಯಾ (Forbes India) ಈಗ ಪ್ರಕಟಿಸಿರೋದು 30 ವರ್ಷದೊಳಗಿನ ವಯೋಮಾನದ 30 ಸಾಧಕರ ಪಟ್ಟಿ. ಇದರಲ್ಲಿ 21ರ ಹರೆಯದ ಶುಭ್​ಮನ್​​ ಗಿಲ್ ಇದ್ದಾರೆ. ಅಂದ್ಹಾಗೆ ಕ್ರೀಡಾಪಟುಗಳಲ್ಲಿ ಗಿಲ್ ಒಬ್ಬರೇ 30ರೊಳಗೆ ಸ್ಥಾನ ಪಡೆದುಕೊಂಡಿರುವುದು ಇನ್ನೂ ವಿಶೇಷವಾಗಿದೆ. ಸದ್ಯ ಮುಂಬರುವ ಭಾರತ-ಇಂಗ್ಲೆಂಡ್ ಸರಣಿಗಾಗಿ ಗಿಲ್ ತಯಾರಿ ನಡೆಸುತ್ತಿದ್ದು, ಈ ಸರಣಿ ಫೆಬ್ರವರಿ 5ರಿಂದ ಆರಂಭಗೊಳ್ಳಲಿದೆ.

ಶುಭ್​ಮನ್ ಗಿಲ್

ಗಿಲ್ ದಿಗ್ಗಜ ಬ್ಯಾಟ್ಸ್​ಮನ್! ಆಸ್ಟ್ರೇಲಿಯಾದಲ್ಲಿ ನೀಡಿದ ಬೊಂಬಾಟ್ ಪ್ರದರ್ಶನದಿಂದಲೇ ಗಿಲ್, ಫೋರ್ಬ್ಸ್ ಇಂಡಿಯಾ ಪ್ರಕಟಿಸಿದ 30 ವರ್ಷ ವಯಸ್ಸಿನೊಳಗಿನವರ ಸಾಧಕರ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. 21 ವರ್ಷದ ಗಿಲ್ ಸಾಧನೆಯನ್ನ ಅದ್ಭುತವಾಗಿ ವರ್ಣಿಸಿರುವ ಫೋರ್ಬ್ಸ್ ಮ್ಯಾಗಜೀನ್, ಗಿಲ್​​ ಭಾರತೀಯ ಕ್ರಿಕೆಟ್‌ನಲ್ಲಿ ಬೆಳಗುತ್ತಿರುವ ತಾರೆ ಎಂದು ಬಣ್ಣಿಸಿದೆ.

ಮತ್ತೊಂದೆಡೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಮತ್ತು ನ್ಯೂಜಿಲೆಂಡ್ ತಂಡದ ಮಾಜಿ ವೇಗಿ ಕೈಲ್ ಮಿಲ್ಸ್, ಗಿಲ್ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಗಿಲ್ ಮುಂದೊಂದು ದಿನ ದಿಗ್ಗಜ ಆಟಗಾರನಾಗುವ ಸೂಚನೆ ನೀಡಿದ್ದಾನೆ. ಆ ಸಾಮರ್ಥ್ಯ ಆತನಲ್ಲಿದೆ ಎಂದಿದ್ದಾರೆ. ಮತ್ತೊಂದೆಡೆ ಭಾರತೀಯ ಕ್ರಿಕೆಟ್​ನ ದಿಗ್ಗಜ ವಿವಿಎಸ್ ಲಕ್ಷಣ್, ಗಿಲ್ ನೆರವಿನಿಂದ ಭಾರತದ ಭವಿಷ್ಯದಲ್ಲಿ ಸಾಕಷ್ಟು ಪಂದ್ಯಗಳನ್ನ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಶುಭ್​ಮನ್ ಗಿಲ್

India vs Australia Test Series 2ನೇ ದಿನದಾಟ: ಗಿಲ್​ ಅರ್ಧ ಶತಕ.. ಭಾರತಕ್ಕೆ ಆರಂಭಿಕ ಆಘಾತ

Published On - 11:28 am, Thu, 4 February 21