ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ನಿಧನ

|

Updated on: Aug 01, 2024 | 7:01 AM

Anshuman Gaekwad: 71 ವರ್ಷದ ಗಾಯಕ್ವಾಡ್ ಅವರು 80ರ ದಶಕದಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಭಾರತದ ಪರ 40 ಟೆಸ್ಟ್ ಪಂದ್ಯಗಳನ್ನಾಡಿದ್ದ ಅಂಶುಮಾನ್ 1 ದ್ವಿಶತಕ, 2 ಶತಕ ಹಾಗೂ 10 ಅರ್ಧಶತಕಗಳೊಂದಿಗೆ 1985 ರನ್ ಕಲೆಹಾಕಿದ್ದಾರೆ. ಹಾಗೆಯೇ ಏಕದಿನ 15 ಪಂದ್ಯಗಳನ್ನಾಡಿರುವ ಅಂಶುಮಾನ್ 1 ಅರ್ಧಶತಕದೊಂದಿಗೆ 269 ರನ್ ಗಳಿಸಿದ್ದಾರೆ.

ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ನಿಧನ
Anshuman Gaekwad
Follow us on

ಟೀಮ್ ಇಂಡಿಯಾದ ಮಾಜಿ‌ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ನಿಧನರಾಗಿದ್ದಾರೆ. ಮಾರಕ ಬ್ಲಡ್ ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ಅವರು ಕಳೆದ ಕೆಲ ವರ್ಷಗಳಿಂದ ಚಿಕಿತ್ಸೆಯಲ್ಲಿದ್ದರು. ಆದರೆ ಜುಲೈ 31 ರಂದು ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅದರಂತೆ ತಮ್ಮ 71ನೇ ವಯಸ್ಸಿನಲ್ಲಿ ಅಂಶುಮಾನ್ ಗಾಯಕ್ವಾಡ್ ಅವರು ಕೊನೆಯುಸಿರೆಳೆದಿದ್ದಾರೆ.

ಕೆಲ ವಾರಗಳ ಹಿಂದೆಯಷ್ಟೇ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್, ಅಂಶುಮಾನ್ ಗಾಯಕ್ವಾಡ್ ಅವರ ಚಿಕಿತ್ಸೆಗೆ ನೆರವಾಗುವಂತೆ ಬಿಸಿಸಿಐಗೆ ಮನವಿ ಮಾಡಿದ್ದರು. ಇದಾಗ್ಯೂ ಬಿಸಿಸಿಐ ಕಡೆಯಿಂದ ಸಕರಾತ್ಮಕ ಪ್ರತಿಕ್ರಿಯೆ ಮೂಡಿಬಂದಿರಲಿಲ್ಲ.  ಇದರಿಂದ ಬೇಸರಗೊಂಡಿದ್ದ ಕಪಿಲ್ ದೇವ್ ತಮ್ಮ ಪಿಂಚಣಿ ಮೊತ್ತವನ್ನು ಅಂಶುಮಾನ್ ಗಾಯಕ್ವಾಡ್ ಅವರಿಗೆ ಚಿಕಿತ್ಸೆಗೆ ನೀಡಲು ಸಿದ್ಧವಿರುವುದಾಗಿ ತಿಳಿಸಿದ್ದರು.

ಈ ಹೇಳಿಕೆಯು ವೈರಲ್ ಆಗುತ್ತಿದ್ದಂತೆ ಬಿಸಿಸಿಐ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಬಿಸಿಸಿಐ, ಮಾಜಿ ಆಟಗಾರನ ಚಿಕಿತ್ಸೆಗಾಗಿ 1 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಆದರೆ ಈ ಸಹಾಯಹಸ್ತದ ಹೊರತಾಗಿಯೂ ಮಹಾಮಾರಿಗೆ ಕ್ಯಾನ್ಸರ್​ ವಿರುದ್ಧದ ತಮ್ಮ ದೀರ್ಘಕಾಲದ ಹೋರಾಟವನ್ನು ಅಂಶುಮಾನ್ ಗಾಯಕ್ವಾಡ್ ಅಂತ್ಯಗೊಳಿಸಿದ್ದಾರೆ.

ಯಾರು ಈ ಅಂಶುಮಾನ್ ಗಾಯಕ್ವಾಡ್?

71 ವರ್ಷದ ಗಾಯಕ್ವಾಡ್ ಅವರು 80ರ ದಶಕದಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಭಾರತದ ಪರ 40 ಟೆಸ್ಟ್ ಪಂದ್ಯಗಳನ್ನಾಡಿದ್ದ ಅಂಶುಮಾನ್ 1 ದ್ವಿಶತಕ, 2 ಶತಕ ಹಾಗೂ 10 ಅರ್ಧಶತಕಗಳೊಂದಿಗೆ 1985 ರನ್ ಕಲೆಹಾಕಿದ್ದಾರೆ. ಹಾಗೆಯೇ ಏಕದಿನ 15 ಪಂದ್ಯಗಳನ್ನಾಡಿರುವ ಅಂಶುಮಾನ್ 1 ಅರ್ಧಶತಕದೊಂದಿಗೆ 269 ರನ್ ಗಳಿಸಿದ್ದಾರೆ.

ಇದನ್ನೂ ಓದಿ: IPL 2025: RCB ತಂಡದಿಂದ ಗ್ಲೆನ್ ಮ್ಯಾಕ್ಸ್​ವೆಲ್ ಔಟ್?

ಇದಾಗ್ಯೂ ಅಂಶುಮಾನ್ ಗಾಯಕ್ವಾಡ್ ಅವರಿಗೆ ಹೆಸರು ತಂದುಕೊಟ್ಟಿದ್ದು ಕೋಚಿಂಗ್ ಹುದ್ದೆ ಎಂಬುದು ವಿಶೇಷ. 1997 ರಿಂದ 2000ರವರೆಗೆ ಭಾರತ ತಂಡದ ಮುಖ್ಯ ಕೋಚ್ ಆಗಿ ಕಾಣಿಸಿಕೊಂಡಿದ್ದ ಅಂಶುಮಾನ್ ಬಲಿಷ್ಠ ಟೀಮ್ ಇಂಡಿಯಾವನ್ನು ಕಟ್ಟಿದ್ದರು. ಇದೇ ಅವಧಿಯಲ್ಲಿ ಭಾರತ ತಂಡವು ಶಾರ್ಜಾದಲ್ಲಿ ನಡೆದ ಪ್ರಸಿದ್ಧ ಕೋಕಾ-ಕೋಲಾ ಕಪ್ ಮತ್ತು ಪಾಕಿಸ್ತಾನದ ವಿರುದ್ಧ ದೆಹಲಿ ಟೆಸ್ಟ್ ಅನ್ನು ಗೆದ್ದುಕೊಂಡಿತ್ತು.

 

Published On - 6:50 am, Thu, 1 August 24