Viral Video: ಅಭಿಮಾನಿಯ ಅಭಿಮಾನದ ವಿಡಿಯೋ ಹಂಚಿಕೊಂಡ ಸುರೇಶ್ ರೈನಾ
Suresh Raina: ಸುರೇಶ್ ರೈನಾ ಟೀಮ್ ಇಂಡಿಯಾ ಪರ 226 ಏಕದಿನ ಪಂದ್ಯಗಳಲ್ಲಿ 5615 ರನ್ ಗಳಿಸಿದ್ದಾರೆ. ಈ ವೇಳೆ 5 ಶತಕ ಮತ್ತು 36 ಅರ್ಧಶತಕಗಳನ್ನು ಬಾರಿಸಿದ್ದರು.

ಭಾರತ ಕ್ರಿಕೆಟ್ ತಂಡದ ಆಟಗಾರ ಸುರೇಶ್ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ ಇನ್ನೂ ಕೂಡ ಅವರ ಫ್ಯಾನ್ ಫಾಲೋಯಿಂಗ್ ಕಡಿಮೆಯಾಗಿಲ್ಲ ಎಂಬುದಕ್ಕೆ ಈ ವಿಡಿಯೋನೇ ಸಾಕ್ಷಿ. ಇತ್ತೀಚೆಗೆ ರೈನಾಗೆ ಸಂಬಂಧಿಸಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದರಲ್ಲಿ ಅಭಿಮಾನಿಯೊಬ್ಬರು ರೈನಾ ಫೋಟೋಗೆ ಆರತಿ ಎತ್ತುತ್ತಿರುವುದು ಕಾಣಬಹುದು. ವಿಶೇಷ ಎಂದರೆ ಅಭಿಮಾನಿಯ ಈ ವಿಡಿಯೋವನ್ನು ಖುದ್ದು ಸುರೇಶ್ ರೈನಾ ಟ್ವಿಟರ್‌ನಲ್ಲಿ ರಿಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ರೈನಾ ಅಭಿಮಾನಿಯ ವಿಡಿಯೋ ಇತರೆ ಅಭಿಮಾನಿಗಳ ಗಮನ ಸೆಳೆದಿದೆ.
ಅಭಿಮಾನಿಯು ಮೊದಲು ರೈನಾ ಅವರ ಚಿತ್ರಕ್ಕೆ ಆರತಿ ಬೆಳಗಿ ಆನಂತರ ಅದರ ಮೇಲೆ ಹಾಲಿನ ಅಭಿಷೇಕ ಮಾಡುತ್ತಿರುವುದು ಈ ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋವನ್ನು ರೈನಾ ಅವರ ಫ್ಯಾನ್ ಪೇಜ್ ಹಂಚಿಕೊಂಡಿದ್ದು, ಇದನ್ನು ಗಮನಿಸಿದ ಎಡಗೈ ದಾಂಡಿಗ ರಿಟ್ವೀಟ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಟ್ವಿಟರ್‌ನಲ್ಲಿ 800ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಸುಮಾರು 100 ಮಂದಿ ರಿಟ್ವೀಟ್ ಮಾಡಿದ್ದಾರೆ.
When it Comes To Him It’s More Than Worshipping ?
I Can’t Describe In Words How Much I Idolizing You Love U Mannn ?? @ImRaina ?#17YearsOfRaina | #SureshRaina@PriyankaCRaina @anandkanwar @abhishereporter @thisisRRG @Cricprabhu pic.twitter.com/xrzI8m8vR1
— RAINA Trends™ (@trendRaina) July 30, 2022
ಸುರೇಶ್ ರೈನಾ ಟೀಮ್ ಇಂಡಿಯಾ ಪರ 226 ಏಕದಿನ ಪಂದ್ಯಗಳಲ್ಲಿ 5615 ರನ್ ಗಳಿಸಿದ್ದಾರೆ. ಈ ವೇಳೆ 5 ಶತಕ ಮತ್ತು 36 ಅರ್ಧಶತಕಗಳನ್ನು ಬಾರಿಸಿದ್ದರು. ಹಾಗೆಯೇ 78 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 1604 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 5 ಅರ್ಧಶತಕಗಳನ್ನು ಗಳಿಸಿದ್ದಾರೆ. ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಹೊರಗುಳಿದಿರುವ ರೈನಾ ಲೀಗ್ ಕ್ರಿಕೆಟ್ನಲ್ಲಿ ಮುಂದುವರೆಯಲು ಬಯಸಿದ್ದಾರೆ. ಇದಾಗ್ಯೂ ಕಳೆದ ಐಪಿಎಲ್ನಲ್ಲಿ ಸುರೇಶ್ ರೈನಾ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಹೀಗಾಗಿ ಮುಂಬರುವ ಐಪಿಎಲ್ನಲ್ಲಿ ರೈನಾ ಅವರ ನಡೆಯೇನು ಎಂಬುದನ್ನು ಕಾದು ನೋಡಬೇಕಿದೆ.
Published On - 1:53 pm, Mon, 1 August 22




