ಐಪಿಎಲ್​ನಲ್ಲಿ ಕಳ್ಳಾಟ, ಕ್ರಿಕೆಟ್​ನಿಂದ ನಿಷೇಧ; ಜೀವನ ನಿರ್ವಹಣೆಗಾಗಿ ಶೂ, ಬಟ್ಟೆ ಮಾರುತ್ತಿರುವ ಪಾಕ್ ಮೂಲದ ಅಂಪೈರ್

| Updated By: ಪೃಥ್ವಿಶಂಕರ

Updated on: Jun 24, 2022 | 4:25 PM

Asad Rauf: ರೂಪದರ್ಶಿಯೊಬ್ಬರು ರೌಫ್ ಮೇಲೆ ಲೈಂಗಿಕ ಕಿರುಕುಳದ ಆರೋಪವನ್ನೂ ಮಾಡಿದ್ದರು. ಮುಂಬೈನ ಈ ರೂಪದರ್ಶಿ ರೌಫ್ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ, ಈಗ ನನಗೆ ವಂಚಿಸಿದ್ದಾರೆ ಎಂದು ಆರೋಪಿಸಿದ್ದರು.

ಐಪಿಎಲ್​ನಲ್ಲಿ ಕಳ್ಳಾಟ, ಕ್ರಿಕೆಟ್​ನಿಂದ ನಿಷೇಧ; ಜೀವನ ನಿರ್ವಹಣೆಗಾಗಿ ಶೂ, ಬಟ್ಟೆ ಮಾರುತ್ತಿರುವ ಪಾಕ್ ಮೂಲದ ಅಂಪೈರ್
ಅಸದ್ ರೌಫ್
Follow us on

ಕೆಲವು ತಿಂಗಳುಗಳಿಂದ ಶ್ರೀಲಂಕಾ ದೇಶವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ 1996ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಶ್ರೀಲಂಕಾದ ಕ್ರಿಕೆಟಿಗ ರೋಷನ್ ಮಹಾನಾಮ (Roshan Mahanama) ಜನರ ನೆರವಾಗಲೆಂದು, ಪೆಟ್ರೋಲ್ ಪಂಪ್‌ನಲ್ಲಿ ಜನರಿಗೆ ಅಗತ್ಯ ವಸ್ತುಗಳನ್ನು ಒದಗಿಸುವ ಕಾಯಕದಲ್ಲಿ ನಿರತರಾಗಿದ್ದನ್ನು ನಾವೆಲ್ಲ ನೋಡಿದ್ದೇವು. ಆದರೀಗ ತನ್ನ ಜೀವನ ನಿರ್ವಹಣೆಗಾಗಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ್ದ ಖ್ಯಾತ ಅಂಪೈರೊಬ್ಬರು ಶೂ ಮತ್ತು ಬಟ್ಟೆ ಮಾರುವ ಹಂತಕ್ಕೆ ತಲುಪಿದ್ದಾರೆ. ಈ ಅಂಪೈರ್ ಹಲವು ದೊಡ್ಡ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ್ದು, ಇಂದು ಈ ಅಂಪೈರ್ ಜೀವನ ನಿರ್ವಹಣೆಗೆ ಅಂಗಡಿ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅಂಪೈರ್ ಬೇರ್ಯಾರು ಅಲ್ಲ, ಅವರೇ ಪಾಕಿಸ್ತಾನ ಮೂಲದ ಅಸದ್ ರೌಫ್ (Asad Rauf). ಅಸದ್ ರೌಫ್ ಪ್ರಸ್ತುತ ಪಾಕಿಸ್ತಾನದ ಪ್ರಸಿದ್ಧ ಲಾಂಡಾ ಮಾರುಕಟ್ಟೆಯಲ್ಲಿ ಶೂ ಮತ್ತು ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದಾರೆ. 2000 ರಿಂದ 2013 ರ ವರೆಗೆ 107 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿದ್ದ ಅಸಾದ್ ರೌಫ್ ಮೇಲೆ ನಿಷೇಧ ಹೇರಲಾಗಿತ್ತು. ಅಸಾದ್ ಅವರು ವಿಶ್ವಕಪ್, ಐಪಿಎಲ್‌ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಈ ಕೆಲಸ ನನಗಾಗಿ ಅಲ್ಲ

ಈ ಬಗ್ಗೆ ಪಾಕ್ ಟಿವಿಯಲ್ಲಿ ಮಾತನಾಡಿದ ಅಸದ್, ಈ ಕೆಲಸವನ್ನು ನಾನು ತನಗಾಗಿ ಮಾಡದೆ ತನ್ನ ಸಿಬ್ಬಂದಿಗಾಗಿ ಮಾಡುತ್ತಿದ್ದೇನೆ ಎಂದಿದ್ದಾರೆ. ನನ್ನ ಸಿಬ್ಬಂದಿಯ ದೈನಂದಿನ ವೇತನಕ್ಕಾಗಿ ನಾನು ಈ ಕೆಲಸ ಮಾಡುತ್ತಿದ್ದೇನೆ. ನಾನು ನನ್ನ ಜೀವನದಲ್ಲಿ ಅನೇಕ ಪಂದ್ಯಗಳಲ್ಲಿ ಅಂಪೈರ್ ಮಾಡಿದ್ದೇನೆ. ಅಲ್ಲದೆ 2013 ರಿಂದ ನಾನು ಕ್ರಿಕೆಟ್​ನಿಂದ ದೂರವಿದ್ದೇನೆ. ನಾನು ಒಮ್ಮೆ ಒಂದು ಕೆಲಸವನ್ನು ಬಿಟ್ಟರೆ, ಅದನ್ನು ಸಂಪೂರ್ಣವಾಗಿ ಬಿಟ್ಟು ಬಿಡುತ್ತೇನೆ. ಹಾಗಾಗಿ ನಾನು ಮತ್ತೆ ಕ್ರಿಕೆಟ್​ನತ್ತ ಗಮನಹರಿಸಲ್ಲ ಎಂದಿದ್ದಾರೆ.

ಇದನ್ನೂ ಓದಿ
Happy Birthday Lionel Messi: 35ನೇ ವಸಂತಕ್ಕೆ ಕಾಲಿಟ್ಟ ಕಾಲ್ಚೆಂಡಿನ ಚತುರ ಲಿಯೋನೆಲ್ ಮೆಸ್ಸಿ
1983 world cup final: 1983 ರ ವಿಶ್ವಕಪ್ ಫೈನಲ್‌ನ ಆ 5 ರೋಚಕ ಕ್ಷಣಗಳನ್ನು ಭಾರತ ಎಂದಿಗೂ ಮರೆಯುವುದಿಲ್ಲ

ಈ ಕಾರಣದಿಂದಾಗಿ ಕ್ರಿಕೆಟ್​ನಿಂದ ನಿಷೇಧ

2016ರಲ್ಲಿ ಅಸಾದ್ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಬಿಸಿಸಿಐ ನಿಷೇಧ ಹೇರಿತ್ತು. ಐಪಿಎಲ್ 2013ರ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಅವರ ಹೆಸರು ಕೇಳಿ ಬಂದಿತ್ತು. ಬುಕ್ಕಿಗಳಿಂದ ಉಡುಗೊರೆ ಪಡೆದ ಆರೋಪದ ಮೇರೆಗೆ ಅವರನ್ನು ಐಪಿಎಲ್​ನಿಂದ ನಿಷೇಧ ಹೇರಲಾಯಿತು. ಜತೆಗೆ ರೂಪದರ್ಶಿಯೊಬ್ಬರು ರೌಫ್ ಮೇಲೆ ಲೈಂಗಿಕ ಕಿರುಕುಳದ ಆರೋಪವನ್ನೂ ಮಾಡಿದ್ದರು. ಮುಂಬೈನ ಈ ರೂಪದರ್ಶಿ ರೌಫ್ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ, ಈಗ ನನಗೆ ವಂಚಿಸಿದ್ದಾರೆ ಎಂದು ಆರೋಪಿಸಿದ್ದರು.

ಅಂಗಡಿ ನಡೆಸಲು ಸಂತೋಷವಾಗಿದೆ

ಆ ಘಟನೆ ನಡೆದು ಈಗ 10 ವರ್ಷಗಳು ಕಳೆದರೂ ಅಸಾದ್​ಗೆ ಈ ಬಗ್ಗೆ ಬೇಸರವಿಲ್ಲ. ಜೊತೆಗೆ ಅಸಾದ್​ಗೆ ಈ ಅಂಗಡಿಯನ್ನು ನಡೆಸುತ್ತಿರುವುದು ತುಂಬಾ ಸಂತೋಷ ತಂದಿದೆಯಂತೆ. ಈ ಬಗ್ಗೆ ಮಾತನಾಡಿದ ಅಸಾದ್, ನಾನು ಏನೇ ಕೆಲಸ ಮಾಡಿದರೂ ಆ ಕೆಲಸದಲ್ಲಿ ಅಗ್ರಸ್ಥಾನಕ್ಕೆ ತಲುಪುವುದು ನನ್ನ ಅಭ್ಯಾಸವಾಗಿದೆ. ನಾನು ಈ ಅಂಗಡಿ ತೆರೆದು, ಇದರಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ಈ ಕೆಲಸದಲ್ಲಿ ನಾನು ಉತ್ತುಂಗಕ್ಕೇರಿದ್ದೇನೆ. ನಾನು ಕ್ರಿಕೆಟ್ ಆಡಿದ್ದೇನೆ, ಇಲ್ಲಿಯೂ ಚೆನ್ನಾಗಿ ಆಡಿದ್ದೇನೆ. ಆಮೇಲೆ ಅಂಪೈರ್ ಆಗಿ ಕೆರಿಯರ್ ಶುರು ಮಾಡಿದಾಗ ಇಲ್ಲೂ ಉತ್ತುಂಗಕ್ಕೇರಬೇಕು ಅಂತ ಅಂದುಕೊಂಡಿದ್ದೆ. ನನಗೆ ಯಾವುದೇ ರೀತಿಯ ದುರಾಸೆ ಇಲ್ಲ ಎಂದಿದ್ದಾರೆ.