ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ (T20 International century) ಅಬ್ಬರದ ಶತಕ ಸಿಡಿಸುವುದರೊಂದಿಗೆ ಅತಿ ಕಿರಿಯ ವಯಸ್ಸಿನಲ್ಲಿ ಶತಕ ಸಿಡಿಸಿದ ದಾಖಲೆ ಮಾಡಿದ್ದ ಫ್ರೆಂಚ್ ಬ್ಯಾಟ್ಸ್‌ಮನ್ ಗುಸ್ತಾವ್ ಮಾಕನ್ ಮತ್ತೊಮ್ಮೆ ಸಿಡಿದೆದ್ದಿದ್ದಾರೆ. ಯುರೋಪಿಯನ್ ಟಿ20 ವಿಶ್ವಕಪ್ (T20 World Cup) ಅರ್ಹತಾ ಪಂದ್ಯದಲ್ಲಿ ಬಲಗೈ ಬ್ಯಾಟ್ಸ್‌ಮನ್ ಮತ್ತೊಂದು ಶತಕ ಬಾರಿಸಿದ್ದಾರೆ. ಸ್ವಿಟ್ಜರ್ಲೆಂಡ್ ವಿರುದ್ಧ ವಾಂಟಾದಲ್ಲಿ ಶತಕ ಸಿಡಿಸಿದ ಆಟಗಾರ ಬುಧವಾರ ನಾರ್ವೆ ವಿರುದ್ಧವೂ ಶತಕ ಸಿಡಿಸಿದ್ದು, ಗುಸ್ತಾವ್ ಹೆಸರಲ್ಲಿ ಮತ್ತೊಂದು ವಿಶ್ವ ದಾಖಲೆ ಸೃಷ್ಟಿಯಾಗಿದೆ. ಮ್ಯಾಕನ್ ನಾರ್ವೆ ವಿರುದ್ಧ 101 ರನ್ ಗಳಿಸಿದರೆ, ಸ್ವಿಟ್ಜರ್ಲೆಂಡ್ ವಿರುದ್ಧ 109 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿದರು.
ಗುಸ್ತಾವ್ ಮ್ಯಾಕಾನ್ ವಿಶ್ವ ದಾಖಲೆ
ಗುಸ್ತಾವ್ ಮ್ಯಾಕನ್ ಸತತ ಎರಡು ಟಿ20 ಶತಕಗಳ ಮೂಲಕ ದೊಡ್ಡ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಟಿ20ಯಲ್ಲಿ ಸತತ ಎರಡು ಶತಕ ಸಿಡಿಸಿದ ಏಕೈಕ ಕ್ರಿಕೆಟಿಗ ಗುಸ್ತಾವ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗುಸ್ತಾವ್ ಮ್ಯಾಕನ್ ಎರಡು ಇನ್ನಿಂಗ್ಸ್‌ಗಳಲ್ಲಿ 210 ರನ್ ಗಳಿಸಿದ್ದಾರೆ. ಈ ವೇಳೆ ಅವರ ಬ್ಯಾಟ್‌ನಿಂದ ಒಟ್ಟು 17 ಸಿಕ್ಸರ್‌ಗಳು ಮತ್ತು 10 ಬೌಂಡರಿಗಳು ಕೂಡ ಹೊರಬಂದವು. ಈ ಬ್ಯಾಟ್ಸ್‌ಮನ್ ಸ್ವಿಟ್ಜರ್ಲೆಂಡ್ ವಿರುದ್ಧ 9 ಮತ್ತು ನಾರ್ವೆ ವಿರುದ್ಧ 8 ಸಿಕ್ಸರ್ ಬಾರಿಸಿದ್ದರು.
ಗುಸ್ತಾವ್ ಮತ್ತೊಮ್ಮೆ ಶತಕ ಬಾರಿಸಿ ತಂಡದ ಗೆಲುವಿಗೆ ಕಾರಣರಾದರು
ಸ್ವಿಟ್ಜರ್ಲೆಂಡ್ ವಿರುದ್ಧ ಶತಕ ಬಾರಿಸಿದ್ದರೂ, ಗುಸ್ತಾವ್ ತಮ್ಮ ತಂಡದ ಸೋಲಿಗೆ ಕಾರಣರಾದರು. ಗುಸ್ತಾವ್ ಬೌಲಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡುವ ಮೂಲಕ ಫ್ರಾನ್ಸ್ ಗೆಲುವಿಗೆ ತಣ್ಣೀರೆರಚ್ಚಿದ್ದರು. ಆ T20 ಪಂದ್ಯದಲ್ಲಿ, ಕೊನೆಯ ಓವರ್‌ನಲ್ಲಿ ಗುಸ್ತಾವ್ 16 ರನ್‌ಗಳನ್ನು ಉಳಿಸಬೇಕಾಗಿತ್ತು ಆದರೆ ಅವರಿಗೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಕೊನೆಯ ಎಸೆತದಲ್ಲಿ ಸ್ವಿಟ್ಜರ್ಲೆಂಡ್‌ಗೆ 4 ರನ್‌ಗಳ ಅಗತ್ಯವಿತ್ತು, ಆ ವೇಳೆ ಗುಸ್ತಾವ್ ತಮ್ಮ ಬೌಲಿಂಗ್‌ನಲ್ಲಿ ಬೌಂಡರಿ ಹೊಡೆಸಿಕೊಂಡಿದ್ದರು. ಇದರಿಂದಾಗಿ ಫ್ರಾನ್ಸ್ ಒಂದು ವಿಕೆಟ್‌ನಿಂದ ಪಂದ್ಯವನ್ನು ಕಳೆದುಕೊಂಡಿತು. ಆದಾಗ್ಯೂ, ನಾರ್ವೆ ವಿರುದ್ಧ ಇದು ಸಂಭವಿಸಲಿಲ್ಲ. ಮೊದಲು ಬ್ಯಾಟ್‌ನಿಂದ ಅಬ್ಬರಿಸಿದ ಗುಸ್ತಾವ್ ನಂತರ ಬೌಲಿಂಗ್‌ನಲ್ಲಿ 4 ಓವರ್‌ಗಳಲ್ಲಿ 27 ರನ್ ನೀಡಿ 3 ವಿಕೆಟ್ ಪಡೆದರು. ನಾರ್ವೆ ವಿರುದ್ಧ ಫ್ರಾನ್ಸ್ 11 ರನ್‌ಗಳ ಜಯ ಸಾಧಿಸಿತು.
ಗುಸ್ತಾವ್ ಮ್ಯಾಕನ್ ಬಗ್ಗೆ ಮಾತನಾಡುವುದಾದರೆ, ಈ ಆಟಗಾರ ಇದುವರೆಗೆ ಕೇವಲ ಮೂರು ಟಿ20 ಪಂದ್ಯಗಳನ್ನು ಆಡಿದ್ದಾರೆ. ಮೂರರಲ್ಲೂ ಅವರ ಬ್ಯಾಟ್ ಅರ್ಧಶತಕ ಅಥವಾ ಶತಕವನ್ನು ಗಳಿಸಿದೆ. ಈ ಆಟಗಾರ 3 ಪಂದ್ಯಗಳಲ್ಲಿ 95 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 286 ರನ್ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ ಕೂಡ 170 ಮೀರಿದೆ. ಈ ಆಟಗಾರ ನೇರವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಆಡುತ್ತಿರುವುದರಿಂದ, ಅವರ ಯಾವುದೇ ದೇಶೀಯ ಕ್ರಿಕೆಟ್ ದಾಖಲೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ.
Published On - 3:04 pm, Fri, 29 July 22