Shubman Gill: ಸಹ ಆಟಗಾರ ನೋವಿನಿಂದ ನರಳುತ್ತಿದ್ದರೂ ಕಿಶನ್ ಜೊತೆ ಹರಟೆ: ಗಿಲ್ ವಿರುದ್ಧ ಬೈಗುಳಗಳ ಸುರಿಮಳೆ

SRH vs GT, IPL 2025: ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ತಂಡ ಗ್ಲೆನ್ ಫಿಲಿಪ್ಸ್ ಅವರನ್ನು ಫೀಲ್ಡಿಂಗ್ ಮಾಡಲು ಇಳಿಸಲಾಗಿತ್ತು. ಈ ಸಂದರ್ಭ ಅವರು ಬಾಲ್ ತಡೆಯಲು ಹೋಗಿ ಇಂಜುರಿಗೆ ತುತ್ತಾಗಿದ್ದಾರೆ. ಫಿಲಿಪ್ಸ್ ಗಾಯಗೊಂಡಾಗ ಇಶಾನ್ ಮತ್ತು ಗಿಲ್ ವಿಕೆಟ್ ಪಕ್ಕ ನಿಂತು ತಮ್ಮತಮ್ಮಲ್ಲೇ ಜೋರಾಗಿ ನಗುತ್ತಿದ್ದರು. ಇದನ್ನ ಕಂಡ ಕ್ರಿಕೆಟ್ ಪ್ರಿಯರು ಗಿಲ್ ವಿರುದ್ಧ ಕಿಡಿ ಕಾರಿದ್ದಾರೆ.

Shubman Gill: ಸಹ ಆಟಗಾರ ನೋವಿನಿಂದ ನರಳುತ್ತಿದ್ದರೂ ಕಿಶನ್ ಜೊತೆ ಹರಟೆ: ಗಿಲ್ ವಿರುದ್ಧ ಬೈಗುಳಗಳ ಸುರಿಮಳೆ
Glenn Philips Shubman Gill And Ishan Kishan

Updated on: Apr 07, 2025 | 8:06 AM

ಬೆಂಗಳೂರು (ಏ. 07): ಗುಜರಾತ್ ಟೈಟಾನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad vs Gujarat Titans) ನಡುವಿನ ಐಪಿಎಲ್ 2025 ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ನ್ಯೂಝಿಲೆಂಡ್ ಆಲ್‌ರೌಂಡರ್ ಗ್ಲೆನ್ ಫಿಲಿಪ್ಸ್ ಗಾಯಗೊಂಡಿದ್ದಾರೆ. ಈ ಗಾಯ ಪ್ರಸಿದ್ಧ್ ಕೃಷ್ಣ ಅವರ ಓವರ್‌ನಲ್ಲಿ ಸಂಭವಿಸಿದೆ. ಪಂದ್ಯದ ಮಧ್ಯೆ, ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ರನ್​ಗೆಂದು ಓಡಲು ಪ್ರಯತ್ನಿಸಿದರು. ಈ ಸಮಯದಲ್ಲಿ, ಫಿಲಿಪ್ಸ್ ಓಟವನ್ನು ತಡೆಯಲು ತಮ್ಮ ಕೈಲಾದಷ್ಟು ಪ್ರಯತ್ನ ಮಾಡಿದರು, ಆದರೆ ಈ ಪ್ರಯತ್ನದಲ್ಲಿ ಅವರು ಗಾಯಗೊಂಡಿದ್ದಾರೆ. ವೈದ್ಯಕೀಯ ತಂಡ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ದಿತು. ಏತನ್ಮಧ್ಯೆ, ಗುಜರಾತ್ ನಾಯಕ ಶುಭ್​ಮನ್ ಗಿಲ್ ಮತ್ತು ಇಶಾನ್ ಕಿಶನ್ ಅವರ ನಡತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಫಿಲಿಪ್​ಗೆ ಗಂಭೀರ ಗಾಯ:

ಫಿಲಿಪ್ಸ್ ಇದುವರೆಗೆ ಗುಜರಾತ್ ಪರ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ. ಆದರೆ ಅವರು ಅತ್ಯುತ್ತಮ ಫೀಲ್ಡರ್ ಎಂಬುದು ಜಗತ್ತಿಗೆ ತಿಳಿದಿದೆ. ಹೀಗಾಗಿ ಜಿಟಿ ಇವರನ್ನು ಕೇವಲ ಕ್ಷೇತ್ರರಕ್ಷಣೆಗಾಗಿ ಮಾತ್ರ ಬಳಸುತ್ತಿದೆ. 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತವಾಗಿ ಫೀಲ್ಡಿಂಗ್ ಮಾಡಿದ್ದರು. ಬಳಿಕ ಗುಜರಾತ್ ಅವರನ್ನು ಐಪಿಎಲ್ 2025 ರ ಮೆಗಾ-ಹರಾಜಿನಲ್ಲಿ 2 ಕೋಟಿ ರೂ. ಗೆ ಖರೀದಿಸಿತು.

ಇದನ್ನೂ ಓದಿ
ಆರ್​ಸಿಬಿ- ಮುಂಬೈ ಕದನ; ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್ 11?
2,3,4...; ಆರ್​ಸಿಬಿ ಬಿಟ್ಟ ಬಳಿಕ ಬೌಲಿಂಗ್ ಕಲಿತ್ರಾ ಸಿರಾಜ್?
ಆರ್​ಸಿಬಿ- ಮುಂಬೈ ಮುಖಾಮುಖಿ; ಹೆಡ್ ಟು ಹೆಡ್ ದಾಖಲೆ ಹೇಗಿದೆ?
ಪವರ್​ ಪ್ಲೇನಲ್ಲಿ ಪವರ್​​ಫುಲ್ ಬೌಲಿಂಗ್; ಸಿರಾಜ್ ದಾಖಲೆ

ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೂಡ ಫಿಲಿಪ್ಸ್ ಅವರನ್ನು ಫೀಲ್ಡಿಂಗ್​ ಮಾಡಲು ಇಳಿಸಲಾಗಿತ್ತು. ಈ ಸಂದರ್ಭ ಅವರು ಬಾಲ್ ತಡೆಯಲು ಹೋಗಿ ಇಂಜುರಿಗೆ ತುತ್ತಾಗಿದ್ದಾರೆ. ತಕ್ಷಣವೇ ವಾಷಿಂಗ್ಟನ್ ಸುಂದರ್ ಇವರ ಸಹಾಯಕ್ಕೆ ಬಂದರು, ಬಳಿಕ ತಂಡದ ವೈದ್ಯರು ಕೂಡ ಮೈದಾನಕ್ಕೆ ಬಂದರು. ಫಿಲಿಪ್ಸ್​ಗೆ ಏಳಲೂ ಸಾಧ್ಯವಾಗುತ್ತಿರಲಿಲ್ಲ. ಆದರೆ, ಫಿಲಿಪ್ಸ್ ಗಾಯಗೊಂಡಾಗ ಇಶಾನ್ ಮತ್ತು ಗಿಲ್ ವಿಕೆಟ್ ಪಕ್ಕ ನಿಂತು ತಮ್ಮತಮ್ಮಲ್ಲೇ ಜೋರಾಗಿ ನಗುತ್ತಿದ್ದರು. ಇದನ್ನ ಕಂಡ ಕ್ರಿಕೆಟ್ ಪ್ರಿಯರು ಗಿಲ್ ವಿರುದ್ಧ ಕಿಡಿ ಕಾರಿದ್ದಾರೆ.

 

ಐಪಿಎಲ್‌ನಲ್ಲಿ 8 ಪಂದ್ಯಗಳನ್ನು ಆಡಿದ್ದಾರೆ:

ಗ್ಲೆನ್ ಫಿಲಿಪ್ಸ್ ಇದುವರೆಗೆ ಐಪಿಎಲ್‌ನಲ್ಲಿ ಒಟ್ಟು 8 ಪಂದ್ಯಗಳನ್ನು ಆಡಿದ್ದಾರೆ. ಅವರು ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ತಂಡಗಳಿಗಾಗಿ ಆಡಿದ್ದಾರೆ. ಪಂದ್ಯದ ಬಗ್ಗೆ ಹೇಳುವುದಾದರೆ, ಗುಜರಾತ್ ಹೈದರಾಬಾದ್ ತಂಡವನ್ನು 152 ರನ್‌ಗಳಿಗೆ ಸೀಮಿತಗೊಳಿಸಿತು. ನಿತೀಶ್ ಕುಮಾರ್ ರೆಡ್ಡಿ 34 ಎಸೆತಗಳಲ್ಲಿ 31 ರನ್ ಗಳಿಸಿದರು. ಅತ್ತ ಮೊಹಮ್ಮದ್ ಸಿರಾಜ್ ಗುಜರಾತ್‌ನ ಅತ್ಯಂತ ಯಶಸ್ವಿ ಬೌಲರ್ ಆಗಿದ್ದಾರೆ. ಅವರು 4 ಓವರ್‌ಗಳಲ್ಲಿ ಕೇವಲ 17 ರನ್ ನೀಡಿ 4 ವಿಕೆಟ್‌ಗಳನ್ನು ಪಡೆದರು.

IPL 2025: 17 ರನ್​ಗೆ ಪ್ರಮುಖ 4 ವಿಕೆಟ್..! ಸಿರಾಜ್ ದಾಳಿಗೆ ತತ್ತರಿಸಿದ ಹೈದರಾಬಾದ್‌; ವಿಡಿಯೋ

ಇದೇ ಮೈದಾನದಲ್ಲಿ ಸನ್‌ರೈಸರ್ಸ್ ಮೊದಲ ಪಂದ್ಯದಲ್ಲಿ 286 ರನ್ ಗಳಿಸಿತ್ತು ಎಂಬುದು ಗಮನಾರ್ಹ. ಈ ಪಂದ್ಯದಲ್ಲಿ ಹೈದರಾಬಾದ್ ತನ್ನ ಎರಡನೇ ಗೆಲುವನ್ನು ಎದುರು ನೋಡುತ್ತಿತ್ತು. ಆದರೆ, ಅವರು ನಾಲ್ಕು ಪಂದ್ಯಗಳಲ್ಲಿ ಸತತ ಮೂರು ಸೋಲುಗಳನ್ನು ಎದುರಿಸಿದ್ದಾರೆ. ಗ್ಲೆನ್ ಫಿಲಿಪ್ಸ್ ಯಾವಾಗ ಚೇತರಿಸಿಕೊಂಡು ಮೈದಾನಕ್ಕೆ ಮರಳುತ್ತಾರೆ ಎಂಬುದನ್ನು ಇನ್ನೂ ರಿವೀಲ್ ಆಗಿಲ್ಲ. ಗುಜರಾತ್ ಖಂಡಿತವಾಗಿಯೂ ಓರ್ವ ಅತ್ಯುತ್ತಮ ಫೀಲ್ಡಿಂಗ್ ಅನ್ನು ಮಿಸ್ ಮಾಡಿಕೊಳ್ಳುವುದು ಖಚಿತ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ