IPL 2024: ಮೊದಲ ಗೆಲುವಿನ ಸಂಭ್ರಮದಲ್ಲಿ ಜಿಟಿ ನಾಯಕ: ಭಾವನಾತ್ಮಕ ಕ್ಷಣ ಹಂಚಿಕೊಂಡ ಗಿಲ್

ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವ ಮೂಲಕ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್ ಅವರು ತಮ್ಮ ಮೊದಲ ಗೆಲುವನ್ನು ದಾಖಲಿಸಿದ್ದಾರೆ. ಆ ಮೂಲಕ ಶುಭಮನ್ ಗಿಲ್​ ಅವರ ನಾಯಕತ್ವವನ್ನು ಕ್ರಿಕೆಟ್​ ಪರಿಣಿತರು, ತಜ್ಞರು ಸೇರಿದಂತೆ ಸಾಕಷ್ಟು ಅಭಿಮಾನಿಗಳು ಹಾಡಿ ಹೊಗಳಿದ್ದಾರೆ. ಅವರ ತಂದೆ-ತಾಯಿ ಮತ್ತು ಸಹೋದರಿಯೊಂದಿಗೆ ಭಾವನಾತ್ಮಕ ಕ್ಷಣವನ್ನು ಹಂಚಿಕೊಂಡಿದ್ದಾರೆ.

IPL 2024: ಮೊದಲ ಗೆಲುವಿನ ಸಂಭ್ರಮದಲ್ಲಿ ಜಿಟಿ ನಾಯಕ: ಭಾವನಾತ್ಮಕ ಕ್ಷಣ ಹಂಚಿಕೊಂಡ ಗಿಲ್
ಕುಟುಂಬದವರೊಂದಿಗೆ ಶುಭಮನ್ ಗಿಲ್
Follow us
ಗಂಗಾಧರ​ ಬ. ಸಾಬೋಜಿ
|

Updated on:Mar 25, 2024 | 10:02 PM

2024ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ತಮ್ಮ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವ ಮೂಲಕ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್ ಅವರು ತಮ್ಮ ಮೊದಲ ಗೆಲುವನ್ನು ದಾಖಲಿಸಿದ್ದಾರೆ. ಆ ಮೂಲಕ ಶುಭಮನ್ ಗಿಲ್​ ಅವರ ನಾಯಕತ್ವವನ್ನು ಕ್ರಿಕೆಟ್​ ಪರಿಣಿತರು, ತಜ್ಞರು ಸೇರಿದಂತೆ ಸಾಕಷ್ಟು ಅಭಿಮಾನಿಗಳು ಹಾಡಿ ಹೊಗಳಿದ್ದಾರೆ. ಇದೆಲ್ಲದರ ಮಧ್ಯೆ ಶುಭಮನ್ ಗಿಲ್​ ಅವರ ತಂದೆ-ತಾಯಿ ಮತ್ತು ಸಹೋದರಿಯೊಂದಿಗೆ ಭಾವನಾತ್ಮಕ ಕ್ಷಣವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾರ್ದಿಕ್ ಪಾಂಡ್ಯ ಸಾರಥ್ಯದ ತಂಡ ಮುಂಬೈ ಇಂಡಿಯನ್ಸ್​ ವಿರುದ್ಧ​ ತಮ್ಮ ಆರಂಭಿಕ ಐಪಿಎಲ್ ಪಂದ್ಯದಲ್ಲಿ ಆರು ರನ್‌ಗಳ ರೋಚಕ ಜಯದೊಂದಿಗೆ ಶುಭಮನ್ ಗಿಲ್ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್​ ತಂಡವು ಶುಭಾರಂಭ ಮಾಡಿತ್ತು. ಜಸ್​ಪ್ರೀತ್ ಬುಮ್ರಾ (3/14) ಎರಡು ವರ್ಷಗಳಲ್ಲಿ ಅವರ ಮೊದಲ ಐಪಿಎಲ್​​ ಪಂದ್ಯದಲ್ಲಿ ತಮ್ಮ ಅತ್ಯುತ್ತಮ ಆಟವನ್ನು ಪ್ರದರ್ಶಿಸಿದರು. ಆ ಮೂಲಕ ಮುಂಬೈ ಇಂಡಿಯನ್ಸ್, ಗುಜರಾತ್ ಟೈಟಾನ್ಸ್ ಅನ್ನು 168 ರನ್​ಗಳ 6 ವಿಕೆಟ್​ ನಷ್ಟಕ್ಕೆ ಕಟ್ಟಿಹಾಕಲಾಯಿತು.

ಶುಭಮನ್ ಗಿಲ್ ಭಾವನಾತ್ಮಕ ವಿಡಿಯೋ

ಆದರೆ ತಿಲಕ್ ವರ್ಮ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಅವರಂತಹ ಬ್ಯಾಟರ್‌ಗಳ ಅದ್ಭುತ ಆಟಕ್ಕೆ ಪೂರಕವಾಗಿ ಬುಮ್ರಾ ಅವರ ಪ್ರಯತ್ನವು ಸಾಕಾಗಲಿಲ್ಲ. ಏಳು ವಿಕೆಟ್‌ಗಳಿರುವಾಗ ಕೊನೆಯ ಐದು ಓವರ್‌ಗಳಲ್ಲಿ 43 ರನ್‌ಗಳು ಬೇಕಾಗಿದ್ದಾಗ ಮುಂಬೈ ಇಂಡಿಯನ್ಸ್ ತಂಡವು 162/9 ನಷ್ಟಕ್ಕೆ ಕೊನೆಗೊಂಡಿತು. ಆ ಮೂಲಕ ಗೆಲುವು ಪಡೆದುಕೊಳ್ಳಲು ವಿಫಲವಾಯಿತು. ಈ ಹಿಂದೆ 2012 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತಮ್ಮ ಐಪಿಎಲ್ ಆರಂಭಿಕ ಪಂದ್ಯವನ್ನು ಮುಂಬೈ ಇಂಡಿಯನ್ಸ್ ತಂಡ ಗೆದ್ದುಕೊಂಡಿತ್ತು.

ಇದನ್ನೂ ಓದಿ: RCB IPL 2024 Full Schedule: ಆರ್​ಸಿಬಿ ಯಾವ ದಿನ ಯಾರನ್ನು ಎದುರಿಸಲಿದೆ? ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಸ್ಪಿನ್ನರ್‌ಗಳಾದ ರಶೀದ್ ಖಾನ್ (4 ಓವರ್‌ಗಳಲ್ಲಿ 0/23) ಮತ್ತು ಆರ್ ಸಾಯಿ ಕಿಶೋರ್ (1/24) ತಮ್ಮ ಆಟವನ್ನು ಪ್ರದರ್ಶಿಸಿದ್ದರು. ಅನುಭವಿ ಆಟಗಾರ ಮೋಹಿತ್ ಶರ್ಮಾ (2/32) ವಿಭಿನ್ನ ರೀತಿಯ ನಿಧಾನಗತಿಯ ಎಸೆತಗಳಿಂದ ಪಂದ್ಯದ ದಿಕ್ಕನ್ನು ಬದಲಾಯಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:01 pm, Mon, 25 March 24