
ಅವೇಶ್ ಖಾನ್ ಎಸೆದ 19ನೇ ಓವರ್ನಲ್ಲಿ 2 ಭರ್ಜರಿ ಸಿಕ್ಸರ್ಗಳೊಂದಿಗೆ 15 ರನ್ ಕಲೆಹಾಕಿದ ಸ್ಯಾಮ್ ಕರನ್-ಅಶುತೋಷ್ ಶರ್ಮಾ.
ಈ ಮೂಲಕ 18.5 ಓವರ್ಗಳಲ್ಲಿ 145 ರನ್ ಬಾರಿಸಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ ಪಂಜಾಬ್ ಕಿಂಗ್ಸ್.
ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಬೇಕಿದ್ದ ಗುಜರಾತ್ ಟೈಟಾನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ.
ಹವಾಮಾನ ವೈಪರೀತ್ಯದಿಂದಾಗಿ ಗುಜರಾತ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ಟಾಸ್ ವಿಳಂಬವಾಗಿದೆ.
ಅಹಮದಾಬಾದ್‌ನಲ್ಲಿ ಭಾರೀ ಮಳೆಯಿಂದಾಗಿ ಐಪಿಎಲ್ 2024 ರ 63 ನೇ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಇದರೊಂದಿಗೆ ಗುಜರಾತ್ ಟೈಟಾನ್ಸ್ ತಂಡದ ಪ್ಲೇಆಫ್ ಕನಸು ಕೂಡ ಭಗ್ನಗೊಂಡಿದೆ. ಈ ಮೂಲಕ ಈ ಐಪಿಎಲ್‌ನಲ್ಲಿ ಪ್ಲೇಆಫ್ ರೇಸ್‌ನಿಂದ ಹೊರಗುಳಿದ ಮೂರನೇ ತಂಡ ಎನಿಸಿಕೊಂಡಿದೆ. ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ಪ್ಲೇ ಆಫ್ನಿಂದ ಹೊರಬಿದ್ದಿದ್ದವು. ಪಂದ್ಯ ರದ್ದಾದ ಕಾರಣ ಕೋಲ್ಕತ್ತಾ ಮತ್ತು ಗುಜರಾತ್ ತಂಡಗಳು ತಲಾ ಒಂದು ಅಂಕ ಪಡೆದವು. ಪ್ಲೇಆಫ್ ರೇಸ್ನಲ್ಲಿ ಉಳಿಯಲು ಗುಜರಾತ್‌ಗೆ ಎರಡು ಅಂಕಗಳ ಅಗತ್ಯವಿತ್ತು, ಆದರೆ ಈಗ ಪಂದ್ಯ ರದ್ದಾದ ನಂತರ ಒಂದು ಅಂಕ ಪಡೆದಿದೆ.
ಪ್ರಸ್ತುತ ಅಂಕಪಟ್ಟಿಯಲ್ಲಿ ಈಗಾಗಲೇ ನಾಲ್ಕು ತಂಡಗಳು 14 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಹೊಂದಿವೆ. ಕೋಲ್ಕತ್ತಾ ತಂಡ ಈಗಾಗಲೇ ಪ್ಲೇ ಆಫ್ ತಲುಪಿದೆ. ಈಗ ಪ್ಲೇಆಫ್ ತಲುಪಲು ಆರು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಇನ್ನೂ ಮೂರು ಸ್ಲಾಟ್‌ಗಳು ಖಾಲಿ ಇವೆ. ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಸ್ಪರ್ಧೆಯಲ್ಲಿವೆ.
Published On - 7:05 pm, Mon, 13 May 24