AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GT vs LSG Highlights IPL 2023: ಲಕ್ನೋಗೆ ಸತತ ಸೋಲು; 56 ರನ್​​ಗಳಿಂದ ಗೆದ್ದ ಗುಜರಾತ್

Gujarat Titans vs Lucknow Super Giants Highlights In Kannada: ಐಪಿಎಲ್‌ನ 51ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 56 ರನ್​ಗಳಿಂದ ಸೋಲಿಸಿದ ಗುಜರಾತ್ ಟೈಟಾನ್ಸ್ ತಂಡ ಪ್ಲೇ ಆಫ್ ಸಮೀಪಕ್ಕೆ ಬಂದಿದೆ.

GT vs LSG Highlights IPL 2023: ಲಕ್ನೋಗೆ ಸತತ ಸೋಲು; 56 ರನ್​​ಗಳಿಂದ ಗೆದ್ದ ಗುಜರಾತ್
ಗುಜರಾತ್- ಲಕ್ನೋ ಮುಖಾಮುಖಿ
ಪೃಥ್ವಿಶಂಕರ
|

Updated on:May 07, 2023 | 7:29 PM

Share

ಐಪಿಎಲ್‌ನ 51ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 56 ರನ್​ಗಳಿಂದ ಸೋಲಿಸಿದ ಗುಜರಾತ್ ಟೈಟಾನ್ಸ್ ತಂಡ ಪ್ಲೇ ಆಫ್ ಸಮೀಪಕ್ಕೆ ಬಂದಿದೆ. ಈ ಪಂದ್ಯದಲ್ಲಿ ಲಕ್ನೋ ನಾಯಕ ಕೃನಾಲ್ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 227 ರನ್ ಗಳಿಸಿತು. ಗುಇದಕ್ಕೆ ಉತ್ತರವಾಗಿ ಲಕ್ನೋ ತಂಡ 20 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 171 ರನ್ ಗಳಿಸಲಷ್ಟೇ ಶಕ್ತವಾಯಿತು.

LIVE NEWS & UPDATES

The liveblog has ended.
  • 07 May 2023 07:18 PM (IST)

    ಬಧೋನಿ ಸಿಕ್ಸರ್

    ಆಯುಷ್ ಬದೋನಿ 19ನೇ ಓವರ್​ನ ಎರಡನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು

  • 07 May 2023 07:06 PM (IST)

    ಡಿ ಕಾಕ್ ಔಟ್

    ಕ್ವಿಂಟನ್ ಡಿ ಕಾಕ್ 41 ಎಸೆತಗಳಲ್ಲಿ 70 ರನ್ ಗಳಿಸಿ ಪೆವಿಲಿಯನ್​ಗೆ ಮರಳಿದ್ದಾರೆ.

  • 07 May 2023 07:05 PM (IST)

    ಡಿ ಕಾಕ್ ಸಿಕ್ಸರ್

    16ನೇ ಓವರ್‌ನ ಮೊದಲ ಎಸೆತದಲ್ಲಿ ಕ್ವಿಂಟನ್ ಡಿ ಕಾಕ್ ಸಿಕ್ಸರ್ ಬಾರಿಸಿದರು.

  • 07 May 2023 07:05 PM (IST)

    ಸ್ಟೊಯಿನಿಸ್ ಔಟ್

    ಲಕ್ನೋ ಸೂಪರ್ ಜೈಂಟ್ಸ್​ಗೆ ಮೂರನೇ ಹೊಡೆತ ಬಿದ್ದಿದೆ. ಮಾರ್ಕ್ವೆಸ್ ಸ್ಟೊಯಿನಿಸ್ 9 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.

  • 07 May 2023 06:49 PM (IST)

    13 ಓವರ್‌ಗಳಲ್ಲಿ 117/2

    ಲಕ್ನೋ ಸೂಪರ್ ಜೈಂಟ್ಸ್ 13 ಓವರ್‌ಗಳಲ್ಲಿ 2 ವಿಕೆಟ್‌ಗೆ 117 ರನ್ ಗಳಿಸಿದೆ. 10 ಓವರ್‌ಗಳಲ್ಲಿ ತಂಡ 102 ರನ್ ಗಳಿಸಿತು. ಕೊನೆಯ ಎರಡು ಓವರ್‌ಗಳಲ್ಲಿ ಕೇವಲ 11 ರನ್ ಗಳಿಸಲಾಗಿದೆ.

  • 07 May 2023 06:48 PM (IST)

    ಹೂಡಾ ಪೆವಿಲಿಯನ್‌ಗೆ

    ಲಕ್ನೋ ಸೂಪರ್ ಜೈಂಟ್ಸ್​ಗೆ ದೀಪಕ್ ಹೂಡಾ ರೂಪದಲ್ಲಿ ಮತ್ತೊಂದು ಆಘಾತ ಎದುರಾಗಿದೆ. ಹೂಡಾ 11 ಎಸೆತಗಳಲ್ಲಿ 11 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ್ದಾರೆ

  • 07 May 2023 06:47 PM (IST)

    ಡಿ ಕಾಕ್ ಅರ್ಧಶತಕ

    8 ಪಂದ್ಯಗಳ ಬಳಿಕ ಆಡುವ ಅವಕಾಶ ಪಡೆದ ಕ್ವಿಂಟನ್ ಡಿ ಕಾಕ್ 31 ಎಸೆತಗಳಲ್ಲಿ 50 ರನ್ ಪೂರೈಸಿದ್ದಾರೆ.

  • 07 May 2023 06:46 PM (IST)

    100 ರನ್ ಪೂರ್ಣ

    10 ಓವರ್‌ಗಳ ಅಂತ್ಯಕ್ಕೆ ಲಕ್ನೋ 1 ವಿಕೆಟ್‌ಗೆ 102 ರನ್ ಗಳಿಸಿದೆ. ಕ್ವಿಂಟನ್ ಡಿ ಕಾಕ್, ಸಿಕ್ಸರ್ ಬಾರಿಸಿ ಲಕ್ನೋ ಪರ ಶತಕ ಪೂರೈಸಿದರು. ಡಿ ಕಾಕ್ 24 ಎಸೆತಗಳಲ್ಲಿ 45 ಮತ್ತು ದೀಪಕ್ ಹೂಡಾ 5 ರನ್ ಗಳಿಸಿ ಆಡುತ್ತಿದ್ದಾರೆ.

  • 07 May 2023 06:45 PM (IST)

    ಮೊದಲ ವಿಕೆಟ್

    ಸ್ಟಾರ್ಮ್ ಬ್ಯಾಟ್ಸ್‌ಮನ್ ಕೈಲ್ ಮೇಯರ್ಸ್ ಔಟಾಗಿದ್ದಾರೆ. ಮೋಹಿತ್ ಶರ್ಮಾ ಬೌಲಿಂಗ್‌ನಲ್ಲಿ ರಶೀದ್ ಖಾನ್ ಅವರ ಅದ್ಭುತ ಕ್ಯಾಚ್ ಪಡೆದರು. ಮೇಯರ್ಸ್ 32 ಎಸೆತಗಳಲ್ಲಿ 48 ರನ್ ಗಳಿಸಿದರು. ಇದರಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ ಸೇರಿದ್ದವು.

  • 07 May 2023 06:44 PM (IST)

    8 ಓವರ್‌ಗಳ ನಂತರ

    8 ಓವರ್‌ಗಳ ಅಂತ್ಯಕ್ಕೆ ಲಕ್ನೋ ವಿಕೆಟ್ ನಷ್ಟವಿಲ್ಲದೆ 88 ರನ್ ಗಳಿಸಿದೆ. ಮೈಯರ್ಸ್ 48 ಮತ್ತು ಕ್ವಿಂಟನ್ ಡಿ ಕಾಕ್ 35 ರನ್ ಗಳಿಸಿ ಆಡುತ್ತಿದ್ದಾರೆ.

  • 07 May 2023 06:03 PM (IST)

    ಪವರ್ ಪ್ಲೇ ಅಂತ್ಯ

    ಪವರ್​ ಪ್ಲೇಯ 6 ಓವರ್​ಗಳಲ್ಲಿ ಲಕ್ನೋ ಯಾವುದೇ ವಿಕೆಟ್ ನಷ್ಟವಿಲ್ಲದೆ 68 ರನ್ ಬಾರಿಸಿದೆ. 6ನೇ ಓವರ್​ನಲ್ಲೂ ಮೇಯರ್ಸ್​ 2 ಬೌಂಡರಿ ಹೊಡೆದರು.

  • 07 May 2023 05:58 PM (IST)

    ಮೇಯರ್ಸ್​ ಸಿಕ್ಸರ್

    ರಶೀದ್ ಬೌಲ್ ಮಾಡಿದ 5ನೇ ಓವರ್​ನ 4ನೇ ಎಸೆತವನ್ನು ಮೇಯರ್ಸ್​ ಸಿಕ್ಸರ್​ಗಟ್ಟಿದರು. ಇದಲ್ಲದೆ ಇನ್ನೊಂದು ಬೌಂಡರಿ ಕೂಡ ಬಂತು.

  • 07 May 2023 05:55 PM (IST)

    ಲಕ್ನೋ ಅರ್ಧಶತಕ

    ಲಕ್ನೋ ತಂಡ ಉತ್ತಮ ಆರಂಭ ಪಡೆದುಕೊಂಡಿದೆ ಕೇವಲ 4 ಓವರ್​​ಗಳಲ್ಲೇ ತಂಡದ ಅರ್ಧಶತಕ ಪೂರ್ಣಗೊಂಡಿದೆ.

  • 07 May 2023 05:53 PM (IST)

    ಪಾಂಡ್ಯ ದುಬಾರಿ

    4ನೇ ಓವರ್ ಬೌಲ್ ಮಾಡಿದ ಪಾಂಡ್ಯ 14 ರನ್​ ಬಿಟ್ಟುಕೊಟ್ಟರು. ಇದರಲ್ಲಿ ಡಿ ಕಾಕ್ 2 ಬೌಂಡರಿ ಹೊಡೆದರೆ, ಮೇಯರ್ಸ್​ ಕೂಡ 1 ಬೌಂಡರಿ ಹೊಡೆದರು

  • 07 May 2023 05:45 PM (IST)

    ಡಿ ಕಾಕ್ ಬೌಂಡರಿ

    ಶಮಿ ಎಸೆದ 3ನೇ ಓವರ್​ನ ಮೊದಲ ಎರಡು ಎಸೆತಗಳಲ್ಲಿ ಡಿ ಕಾಕ್ ಬೌಂಡರಿ ಹೊಡೆದರೆ, ಮೇಯರ್ಸ್​ ಸಿಕ್ಸರ್ ಸಿಡಿಸಿದರು.

  • 07 May 2023 05:40 PM (IST)

    ಹ್ಯಾಟ್ರಿಕ್ ಬೌಂಡರಿ

    ಲಕ್ನೋ ಚೇಸ್ ಆರಂಭವಾಗಿದ್ದು. ಪಾಂಡ್ಯ ಬೌಲ್ ಮಾಡಿದ 2ನೇ ಓವರ್​ನಲ್ಲಿ ಮೇಯರ್ಸ್​ ಹ್ಯಾಟ್ರಿಕ್ ಬೌಂಡರಿ ಹೊಡೆದರು.

  • 07 May 2023 05:11 PM (IST)

    228 ರನ್ ಟಾರ್ಗೆಟ್

    20 ಓವರ್​ಗಳ ಅಂತ್ಯಕ್ಕೆ ಗುಜರಾತ್ ಕೇವಲ 2 ವಿಕೆಟ್ ಕಳೆದುಕೊಂಡು 228 ರನ್ ಕಲೆಹಾಕಿದೆ.ತಂಡದ ಪರ ಸಹಾ ಹಾಗೂ ಗಿಲ್ ಅರ್ಧಶತಕ ಬಾರಿಸಿದರು. ಇದರಲ್ಲಿ ಗಿಲ್ ಅಜೇಯ 94 ರನ್ ಸಿಡಿಸಿದರು.

  • 07 May 2023 05:09 PM (IST)

    ಗಿಲ್ ಸಿಕ್ಸ್

    20ನೇ ಓವರ್​ನ ಮೊದಲ ಎಸೆತದಲ್ಲಿ ಗಿಲ್ ಸಿಕ್ಸರ್ ಬಾರಿಸುವ ಮೂಲಕ ಶತಕದ ಸನಿಹಕ್ಕೆ ಬಂದಿದ್ದಾರೆ.

  • 07 May 2023 05:05 PM (IST)

    ಮಿಲ್ಲರ್ ಸಿಕ್ಸ್

    19ನೇ ಓವರ್​​ನ 4ನೇ ಎಸೆತವನ್ನು ಮಿಲ್ಲರ್ ಮಿಡ್ ಆಫ್ ಮೇಲೆ ಸಿಕ್ಸರ್​ಗಟ್ಟಿದರು.

    ಜಿಟಿ 213/2

  • 07 May 2023 05:00 PM (IST)

    ಗುಜರಾತ್ 200 ರನ್ ಪೂರ್ಣ

    ಯಶ್ ಬೌಲ್ ಮಾಡಿದ 18ನೇ ಓವರ್​ನ 4ನೇ ಎಸೆತವನ್ನು ಬೌಂಡರಿಗಟ್ಟಿದ ಮಿಲ್ಲರ್ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

  • 07 May 2023 04:56 PM (IST)

    ಗಿಲ್ ಫೋರ್, ಜಿಟಿ 192/2

    ಆವೇಶ್ ಬೌಲ್ ಮಾಡಿದ 17ನೇ ಓವರ್​ನ 4ನೇ ಎಸೆತದಲ್ಲಿ ಗಿಲ್ ಮಿಡ್ ಆಫ್ ಕಡೆ ಬೌಂಡರಿ ಬಾರಿಸಿದರು.

  • 07 May 2023 04:51 PM (IST)

    ಪಾಂಡ್ಯ ಔಟ್

    16ನೇ ಓವರ್​ನ ಕೊನೆಯ ಎಸೆತದಲ್ಲಿ ನಾಯಕ ಪಾಂಡ್ಯ ಕ್ಯಾಚಿತ್ತು ಔಟಾದರು. ಪಾಂಡ್ಯ 15 ಎಸೆತದಲ್ಲಿ 25 ರನ್ ಬಾರಿಸಿದರು.

  • 07 May 2023 04:46 PM (IST)

    ಗಿಲ್ ಸಿಕ್ಸರ್

    ಸ್ಟೋಯ್ನಿಸ್ ಬೌಲ್ ಮಾಡಿದ 15ನೇ ಓವರ್​​ನಲ್ಲಿ ಗಿಲ್ 1 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರೆ, ಪಾಂಡ್ಯ ಓವರ್​ನ 5ನೇ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಹೊಡೆದರು.

  • 07 May 2023 04:40 PM (IST)

    ನಿಧಾನವಾದ ಇನ್ನಿಂಗ್ಸ್

    ಸಹಾ ವಿಕೆಟ್ ಬಳಿಕ ಗುಜರಾತ್ ಇನ್ನಿಂಗ್ಸ್ ನಿಧಾನವಾಗಿದೆ. ಈಗಾಗಲೇ 14ನೇ ಓವರ್​ ಮುಗಿದಿದ್ದು 2 ಓವರ್​ಗಳಲ್ಲಿ ಯಾವುದೇ ಬೌಂಡರಿ ಬಂದಿಲ್ಲ. ಆದರೆ 14ನೇ ಓವರ್​ನ 5ನೇ ಎಸೆತದಲ್ಲಿ ಪಾಂಡ್ಯ ಸಿಕ್ಸರ್ ಹೊಡೆದರು.

  • 07 May 2023 04:30 PM (IST)

    ಸಹಾ ಔಟ್

    ಗುಜರಾತ್ ಮೊದಲ ವಿಕೆಟ್ ಪತನಗೊಂಡಿದೆ. 81 ರನ್ ಬಾರಿಸಿದ್ದ ಸಹಾ ಬಿಗ್ ಶಾಟ್ ಆಡುವ ಯತ್ನದಲ್ಲಿ ಕ್ಯಾಚಿತ್ತು ನಿರ್ಗಮಿಸಿದರು.

  • 07 May 2023 04:25 PM (IST)

    ಗಿಲ್ ಅರ್ಧ ಶತಕ ಪೂರ್ಣ

    12ನೇ ಓವರ್​ನ ಮೊದಲ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳುವ ಮೂಲಕ ಗಿಲ್ ತಮ್ಮ ಅರ್ಧಶತಕ ಪೂರೈಸಿದ್ದಾರೆ.

  • 07 May 2023 04:20 PM (IST)

    10 ಓವರ್ ಅಂತ್ಯ

    ಗುಜರಾತ್ ಇನ್ನಿಂಗ್ಸ್​​ನ 10 ಓವರ್ ಮುಗಿದಿದ್ದು ಇದರಲ್ಲಿ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೆ 121 ರನ್ ಕಲೆಹಾಕಿದೆ.

  • 07 May 2023 04:13 PM (IST)

    ಗುಜರಾತ್ ಶತಕ ಪೂರ್ಣ

    9ನೇ ಓವರ್​​ನ ಮೊದಲ ಎಸೆತವನ್ನು ಸಿಕ್ಸರ್​ಗಟ್ಟಿದ ಗಿಲ್, ಗುಜರಾತ್ ಮೊತ್ತವನ್ನು 100ರ ಗಡಿ ದಾಟಿಸಿದರು.

  • 07 May 2023 04:12 PM (IST)

    ಸಹಾ ಬೌಂಡರಿ, ಜಿಟಿ 89/0

    ಮೇಯರ್ಸ್​ ಬೌಲ್ ಮಾಡಿದ 8ನೇ ಓವರ್​ನ 2ನೇ ಎಸೆತವನ್ನು ಬ್ಯಾಕ್ವರ್ಡ್​ ಪಾಯಿಂಟ್​​ನಲ್ಲಿ ಬೌಂಡರಿಗಟ್ಟಿದ ಸಹಾ, 4ನೇ ಎಸೆತದಲ್ಲಿ ಮತ್ತೊಂದು ಬೌಂಡರಿ ಹೊಡೆದರು. ಹಾಗೆಯೇ ಕೊನೆಯ ಎಸೆತದಲ್ಲೂ ಬೌಂಡರಿ ಬಂತು.

  • 07 May 2023 04:00 PM (IST)

    ಪವರ್ ಪ್ಲೇ ಅಂತ್ಯ

    ಪವರ್ ಪ್ಲೇಯ 6 ಓವರ್​​ಗಳಲ್ಲಿ ಗುಜರಾತ್ ಯಾವುದೇ ವಿಕೆಟ್ ಕಳೆದುಕೊಳ್ಳದೆ 78 ರನ್ ಬಾರಿಸಿದೆ. ಇದರಲ್ಲಿ ಸಿಂಹಪಾಲು ಸಹಾ ಅವರದ್ದಾಗಿದೆ.

  • 07 May 2023 03:56 PM (IST)

    ಸಹಾ ಅರ್ಧಶತಕ

    6ನೇ ಓವರ್​​ನ ಮೊದಲ ಎಸೆತವನ್ನು ಲಾಂಗ್​​ ಆನ್​​ನಲ್ಲಿ ಸಿಕ್ಸರ್​ಗಟ್ಟಿದ ಸಹಾ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

  • 07 May 2023 03:46 PM (IST)

    ಸಹಾ ಸಿಕ್ಸ್

    ಮೊಹ್ಸಿನ್ ಬೌಲ್ ಮಾಡಿದ 4ನೇ ಓವರ್​ನ ಮೊದಲ ಎಸೆತದಲ್ಲೇ ಸಹಾ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಹೊಡೆದರು. ಈ ಓವರ್​​ನಲ್ಲಿ ಮತ್ತೊಂದು ಸಿಕ್ಸರ್ ಹಾಗೂ ಬೌಂಡರಿ ಸೇರಿದಂತೆ 22 ರನ್ ಬಂದವು.

  • 07 May 2023 03:41 PM (IST)

    ಸಹಾ ಸಿಕ್ಸ್

    2ನೇ ಓವರ್ ಬೌಲ್ ಮಾಡಿದ ಆವೇಶ್ 1 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದಂತೆ ಒಟ್ಟು 11 ರನ್ ಬಿಟ್ಟುಕೊಟ್ಟರು. ಈ ಎರಡೂ ಬೌಂಡರಿಗಳನ್ನು ಸಹಾ ಬಾರಿಸಿದರು.

  • 07 May 2023 03:34 PM (IST)

    ಗುಜರಾತ್ ಬ್ಯಾಟಿಂಗ್

    ಗುಜರಾತ್ ಬ್ಯಾಟಿಂಗ್ ಆರಂಭಿಸಿದ್ದು, ಸಹಾ ಹಾಗೂ ಗಿಲ್ ಕ್ರೀಸ್​​ನಲ್ಲಿದ್ದಾರೆ. ಮೊಹ್ಸಿನ್ ಬೌಲ್ ಮಾಡಿದ ಮೊದಲ ಓವರ್​ನಲ್ಲಿ ಸಹಾ 2 ಬೌಂಡರಿ ಬಾರಿಸಿದರು.

  • 07 May 2023 03:18 PM (IST)

    ಗುಜರಾತ್ ಟೈಟಾನ್ಸ್

    ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ

  • 07 May 2023 03:17 PM (IST)

    ಲಕ್ನೋ ತಂಡ

    ಕ್ವಿಂಟನ್ ಡಿ ಕಾಕ್, ಕೈಲ್ ಮೇಯರ್ಸ್, ದೀಪಕ್ ಹೂಡಾ, ಕರಣ್ ಶರ್ಮಾ, ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೋನಿಸ್, ಸ್ವಪ್ನಿಲ್ ಸಿಂಗ್, ಯಶ್ ಠಾಕೂರ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಅವೇಶ್ ಖಾನ್

  • 07 May 2023 03:02 PM (IST)

    ಟಾಸ್ ಗೆದ್ದ ಲಕ್ನೋ

    ಟಾಸ್ ಗೆದ್ದ ಲಕ್ನೋ ನಾಯಕ ಕೃನಾಲ್ ಪಾಂಡ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

Published On - May 07,2023 3:01 PM

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್