GT vs MI Highlights, IPL 2024: ನಾಯಕನಾಗಿ ಮೊದಲ ಪಂದ್ಯ ಗೆದ್ದ ಶುಭ್​ಮನ್ ಗಿಲ್

ಪೃಥ್ವಿಶಂಕರ
|

Updated on:Mar 24, 2024 | 11:43 PM

Gujarat Titans vs Mumbai Indians Highlights in Kannada: ಪಂದ್ಯದಲ್ಲಿ ಟಾಸ್ ಗೆದ್ದ ಹಾರ್ದಿಕ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 168 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 162 ರನ್ ಗಳಿಸಲಷ್ಟೇ ಶಕ್ತವಾಗಿ 6 ರನ್​ಗಳಿಂದ ಸೋಲೊಪ್ಪಿಕೊಂಡಿತು.

GT vs MI Highlights, IPL 2024: ನಾಯಕನಾಗಿ ಮೊದಲ ಪಂದ್ಯ ಗೆದ್ದ ಶುಭ್​ಮನ್ ಗಿಲ್
ಗುಜರಾತ್

ಮುಂಬೈ ಇಂಡಿಯನ್ಸ್ ತಂಡವನ್ನು ಆರು ರನ್‌ಗಳಿಂದ ಸೋಲಿಸುವ ಮೂಲಕ ಗುಜರಾತ್ ಟೈಟಾನ್ಸ್ ಗೆಲುವಿನೊಂದಿಗೆ ಪಂದ್ಯಾವಳಿಯನ್ನು ಆರಂಭಿಸಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಡೆವಾಲ್ಡ್ ಬ್ರೆವಿಸ್ ಉತ್ತಮ ಪ್ರದರ್ಶನ ನೀಡಿದರಾದರೂ, ಕೊನೆಯ ಓವರ್​ನಲ್ಲಿ ಉಮೇಶ್ ಯಾದವ್ ಹಾರ್ದಿಕ್ ಪಾಂಡ್ಯ ಹಾಗೂ ಪಿಯೂಷ್ ಚಾವ್ಲಾ ಅವರ ವಿಕೆಟ್ ಪಡೆಯುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರು. ಈ ಪಂದ್ಯದಲ್ಲಿ ಟಾಸ್ ಗೆದ್ದ ಹಾರ್ದಿಕ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 168 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 162 ರನ್ ಗಳಿಸಲಷ್ಟೇ ಶಕ್ತವಾಗಿ 6 ರನ್​ಗಳಿಂದ ಸೋಲೊಪ್ಪಿಕೊಂಡಿತು.

LIVE NEWS & UPDATES

The liveblog has ended.
  • 24 Mar 2024 11:23 PM (IST)

    ಹಾರ್ದಿಕ್ ಪಾಂಡ್ಯ ಔಟ್

    ಉಮೇಶ್ ಯಾದವ್ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದು ಪಂದ್ಯಕ್ಕೆ ರೋಚಕತೆ ಹೆಚ್ಚಿಸಿದರು. ಒಂದೇ ಓವರ್​ನಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಪಿಯೂಷ್ ಚಾವ್ಲಾ ಔಟಾದರು. ಮುಂಬೈ ಗೆಲುವಿಗೆ 2 ಎಸೆತಗಳಲ್ಲಿ 9 ರನ್‌ಗಳ ಅಗತ್ಯವಿದೆ.

  • 24 Mar 2024 11:14 PM (IST)

    ತಿಲಕ್ ಕೂಡ ಔಟ್

    ತಿಲಕ್ ವರ್ಮಾ ಔಟ್. ಮುಂಬೈ ಗೆಲ್ಲಲು 10 ಎಸೆತಗಳಲ್ಲಿ 21 ರನ್‌ಗಳ ಅಗತ್ಯವಿದೆ. ತಂಡದ ಸ್ಕೋರ್ 148/6

  • 24 Mar 2024 11:09 PM (IST)

    ಟಿಮ್ ಡೇವಿಡ್ ಔಟ್

    ಟಿಮ್ ಡೇವಿಡ್ ರೂಪದಲ್ಲಿ ಮುಂಬೈಗೆ ಐದನೇ ಹೊಡೆತ ಬಿದ್ದಿದೆ. 18ನೇ ಓವರ್‌ನ ಕೊನೆಯ ಎಸೆತದಲ್ಲಿ ಡೇವಿಡ್, ಮಿಲ್ಲರ್​ಗೆ ಕ್ಯಾಚ್ ನೀಡಿದರು. ಹಾರ್ದಿಕ್ ಪಾಂಡ್ಯ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.

  • 24 Mar 2024 10:58 PM (IST)

    ಮುಂಬೈನ ನಾಲ್ಕನೇ ವಿಕೆಟ್

    ಮುಂಬೈನ ನಾಲ್ಕನೇ ವಿಕೆಟ್ ಡೆವೋಲ್ಡ್ ಬ್ರೆವಿಸ್ ರೂಪದಲ್ಲಿ ಪತನವಾಯಿತು. 16ನೇ ಓವರ್‌ನ ಐದನೇ ಎಸೆತದಲ್ಲಿ ಮೋಹಿತ್ ಶರ್ಮಾ ಅವರನ್ನು ಬಲಿಪಶು ಮಾಡಿದರು. ಬ್ರೆವಿಸ್ ಗುಜರಾತ್ ವಿರುದ್ಧ ಎರಡು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 46 ರನ್ ಗಳಿಸಿದರು. ಇನ್ನು ತಂಡದ ಗೆಲುವಿಗೆ 25 ಎಸೆತಗಳಲ್ಲಿ 40 ರನ್‌ಗಳ ಅಗತ್ಯವಿದೆ.

  • 24 Mar 2024 10:44 PM (IST)

    ರೋಹಿತ್ ಶರ್ಮಾ ಔಟ್

    ರೋಹಿತ್ ಶರ್ಮಾ ರೂಪದಲ್ಲಿ ಮುಂಬೈನ ಮೂರನೇ ವಿಕೆಟ್ ಪತನವಾಗುದೆ. 13ನೇ ಓವರ್​ನ ಮೊದಲ ಎಸೆತದಲ್ಲಿ ಸಾಯಿ ಕಿಶೋರ್ ಎಸೆತದಲ್ಲಿ ರೋಹಿತ್ ಎಲ್ ಬಿಡಬ್ಲ್ಯೂ ಆಗಿ ಔಟಾದರು. ಹಿಟ್‌ಮನ್ 29 ಎಸೆತಗಳಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 43 ರನ್ ಗಳಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಡೆವೋಲ್ಡ್ ಬ್ರೂಯಿಸ್ ಮತ್ತು ರೋಹಿತ್ ನಡುವೆ 77 ರನ್‌ಗಳ ಜೊತೆಯಾಟವಿತ್ತು. ತಿಲಕ್ ವರ್ಮಾ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ತಂಡದ ಗೆಲುವಿಗೆ 41 ಎಸೆತಗಳಲ್ಲಿ 56 ರನ್‌ಗಳ ಅಗತ್ಯವಿದೆ.

  • 24 Mar 2024 10:28 PM (IST)

    ಮುಂಬೈಗೆ ರೋಹಿತ್- ಬ್ರೇವಿಸ್ ಆಸರೆ

    10 ಓವರ್‌ಗಳ ನಂತರ ಮುಂಬೈ ಸ್ಕೋರ್ 88/2 ತಲುಪಿದೆ. ನಮನ್ ಧೀರ್ ಔಟಾದ ನಂತರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಡೆವಾಲ್ಡ್ ಬ್ರೆವಿಸ್ ಸಹ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರೊಂದಿಗೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇವರಿಬ್ಬರ ನಡುವೆ 67* ರನ್‌ಗಳ ಜೊತೆಯಾಟವಿದೆ. ತಂಡದ ಗೆಲುವಿಗೆ 54 ಎಸೆತಗಳಲ್ಲಿ 72 ರನ್‌ಗಳ ಅಗತ್ಯವಿದೆ.

  • 24 Mar 2024 09:55 PM (IST)

    ನಮನ್ ಧೀರ್ ಔಟ್

    30 ರನ್‌ಗಳಾಗುವಷ್ಟರಲ್ಲಿ ಮುಂಬೈಗೆ ಎರಡನೇ ಹೊಡೆತ ಬಿದ್ದಿತು. ಇಶಾನ್ ಕಿಶನ್ ನಂತರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ನಮನ್ ಧೀರ್ 20 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಡೆವೋಲ್ಡ್ ಬ್ರೂಯಿಸ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ನಾಲ್ಕು ಓವರ್‌ಗಳ ನಂತರ ತಂಡದ ಸ್ಕೋರ್ 40/2.

  • 24 Mar 2024 09:39 PM (IST)

    ಇಶಾನ್ ಕಿಶನ್ ಔಟ್

    ಮುಂಬೈಗೆ ಮೊದಲ ಓವರ್‌ನಲ್ಲಿಯೇ ಮೊದಲ ಹೊಡೆತ ಬಿದ್ದಿದೆ. ಬ್ಯಾಟಿಂಗ್ ಆರಂಭಿಸಲು ಬಂದ ಇಶಾನ್ ಕಿಶನ್ ಖಾತೆ ತೆರೆಯದೆ ಪೆವಿಲಿಯನ್ ಗೆ ಮರಳಿದರು. ನಮನ್ ಧೀರ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ಈಗ ರೋಹಿತ್ ಶರ್ಮಾ ಮೇಲೆ ದೊಡ್ಡ ಜವಾಬ್ದಾರಿ ಇದೆ. ಮೊದಲ ಓವರ್‌ನಲ್ಲಿ ಮುಂಬೈ ಸ್ಕೋರ್ 2/1.

  • 24 Mar 2024 09:22 PM (IST)

    ಮುಂಬೈಗೆ 169 ರನ್ ಟಾರ್ಗೆಟ್

    ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ ಗಳಿಸಿತು. ಎಂಐ ಗೆಲುವಿಗೆ 169 ರನ್ ಗಳಿಸಬೇಕಿದೆ. ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅತ್ಯುತ್ತಮ ಪ್ರದರ್ಶನ ನೀಡಿ ನಾಲ್ಕು ಓವರ್‌ಗಳಲ್ಲಿ 14 ರನ್ ನೀಡಿ ಮೂರು ವಿಕೆಟ್ ಪಡೆದರು.

  • 24 Mar 2024 09:15 PM (IST)

    ತೆವಾಟಿಯಾ 22 ರನ್ ಗಳಿಸಿ ಔಟ್

    ರಾಹುಲ್ ತೆವಾಟಿಯಾ ರೂಪದಲ್ಲಿ ಗುಜರಾತ್​ನ 6ನೇ ವಿಕೆಟ್ ಪತನವಾಗಿದೆ. ತೆವಾಟಿಯಾ 22 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಸದ್ಯ ವಿಜಯ್ ಶಂಕರ್ ಮತ್ತು ರಶೀದ್ ಖಾನ್ ಕ್ರೀಸ್‌ನಲ್ಲಿದ್ದಾರೆ.

  • 24 Mar 2024 09:02 PM (IST)

    ಒಂದೇ ಓವರ್​ನಲ್ಲಿ 2 ವಿಕೆಟ್

    ಜಸ್ಪ್ರೀತ್ ಬುಮ್ರಾ 17 ನೇ ಓವರ್ನಲ್ಲಿ ಇಬ್ಬರು ಬಿಗ್ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ಮಿಲ್ಲರ್ ಮತ್ತು ಸಾಯಿ ಸುದರ್ಶನ್ ಅವರ ವಿಕೆಟ್ ಉರುಳಿಸಿದ್ದಾರೆ.

  • 24 Mar 2024 08:56 PM (IST)

    ಡೇವಿಡ್ ಮಿಲ್ಲರ್ ಔಟ್

    ಗುಜರಾತ್ ಟೈಟಾನ್ಸ್ 4ನೇ ವಿಕೆಟ್ ಕಳೆದುಕೊಂಡಿದೆ. ಡೇವಿಡ್ ಮಿಲ್ಲರ್ ಕೇವಲ 12 ರನ್ ಗಳಿಸಲಷ್ಟೇ ಶಕ್ತರಾದರು.

  • 24 Mar 2024 08:42 PM (IST)

    14 ಓವರ್‌ ಅಂತ್ಯ

    14 ಓವರ್‌ಗಳಲ್ಲಿ ಗುಜರಾತ್ ಮೂರು ವಿಕೆಟ್ ಕಳೆದುಕೊಂಡು 114 ರನ್ ಗಳಿಸಿದೆ. ಗುಜರಾತ್ ತಂಡದ ಬ್ಯಾಟಿಂಗ್ ಕ್ರಮಾಂಕ ಉತ್ತಮ ಫಾರ್ಮ್ ನಲ್ಲಿದೆ. ಸದ್ಯ ಸಾಯಿ ಸುದರ್ಶನ್ 36 ರನ್ ಗಳಿಸಿ ಕ್ರೀಸ್ ನಲ್ಲಿ ಅಜೇಯರಾಗಿ ಆಡುತ್ತಿದ್ದು, ಡೇವಿಡ್ ಮಿಲ್ಲರ್ ಎರಡು ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ.

  • 24 Mar 2024 08:33 PM (IST)

    ಉಮರ್ಜಾಯ್ ಔಟ್

    ಅಜ್ಮತುಲ್ಲಾ ಉಮರ್ಜಾಯ್ ರೂಪದಲ್ಲಿ ಗುಜರಾತ್ ತನ್ನ ಮೂರನೇ ವಿಕೆಟ್ ಕಳೆದುಕೊಂಡಿದೆ. 12ನೇ ಓವರ್‌ನ ಕೊನೆಯ ಎಸೆತದಲ್ಲಿ ಉಮರ್ಜಾಯ್ ಕ್ಯಾಚ್ ನೀಡಿದರು. ಉಮರ್ಜಾಯ್ ಮೂರನೇ ವಿಕೆಟ್‌ಗೆ ಸಾಯಿ ಸುದರ್ಶನ್ ಅವರೊಂದಿಗೆ 40 ರನ್‌ಗಳ ಜೊತೆಯಾಟವನ್ನು ಮಾಡಿದರು. ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 17 ರನ್ ಗಳಿಸುವಲ್ಲಿ ಯಶಸ್ವಿಯಾದರು. 13 ಓವರ್‌ಗಳ ನಂತರ ತಂಡದ ಸ್ಕೋರ್ 106/3.

  • 24 Mar 2024 08:17 PM (IST)

    ಗಿಲ್ ಔಟ್

    ಗುಜರಾತ್ ಟೈಟಾನ್ಸ್ ಎರಡನೇ ವಿಕೆಟ್ ಪತನವಾಗಿದೆ. ಶುಭ್‌ಮನ್ ಗಿಲ್ 31 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಗಿಲ್ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 31 ರನ್ ಗಳಿಸುವಲ್ಲಿ ಯಶಸ್ವಿಯಾದರು. ಅಜ್ಮತುಲ್ಲಾ ಒಮರ್ಜಾಯ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ಒಂಬತ್ತು ಓವರ್‌ಗಳ ನಂತರ ತಂಡದ ಸ್ಕೋರ್ 69/2.

  • 24 Mar 2024 07:57 PM (IST)

    ಮೊದಲ ವಿಕೆಟ್ ಪತನ

    ಗುಜರಾತ್ ಟೈಟಾನ್ಸ್ ಗೆ ಉತ್ತಮ ಆರಂಭ ನೀಡಿದ ವೃದ್ಧಿಮಾನ್ ಸಹಾ 19 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ನಾಲ್ಕನೇ ಓವರ್‌ನ ಕೊನೆಯ ಎಸೆತದಲ್ಲಿ ಜಸ್ಪ್ರೀತ್ ಬುಮ್ರಾ ಅವರಿಂದ ಕ್ಲೀನ್ ಬೌಲ್ಡ್ ಆದರು. ಐದು ಓವರ್‌ಗಳ ನಂತರ ತಂಡದ ಸ್ಕೋರ್ 43/1.

  • 24 Mar 2024 07:47 PM (IST)

    3 ಓವರ್‌ಗಳಲ್ಲಿ 27 ರನ್

    ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡ ಅತ್ಯಂತ ವೇಗದ ಆರಂಭವನ್ನು ಮಾಡಿದೆ. ಶುಭಮನ್ ಗಿಲ್ ಮತ್ತು ವೃದ್ಧಮಾನ್ ಸಹಾ ಮೊದಲ 3 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 27 ರನ್ ಬಾರಿಸಿದ್ದಾರೆ.

  • 24 Mar 2024 07:34 PM (IST)

    ಗುಜರಾತ್ ಬ್ಯಾಟಿಂಗ್ ಆರಂಭ

    ಗುಜರಾತ್ ಟೈಟಾನ್ಸ್ ಬ್ಯಾಟಿಂಗ್ ಆರಂಭವಾಗಿದೆ. ತಂಡದ ನೂತನ ನಾಯಕರಾದ ಶುಭ್‌ಮನ್ ಗಿಲ್ ಮತ್ತು ವೃದ್ಧಿಮಾನ್ ಶಾ ಕ್ರೀಸ್‌ನಲ್ಲಿದ್ದಾರೆ.

  • 24 Mar 2024 07:20 PM (IST)

    6 ಎಸೆತಗಳಲ್ಲಿ 27 ರನ್ ಬೇಕು

    ಲಕ್ನೋ ಗೆಲುವಿಗೆ 6 ಎಸೆತಗಳಲ್ಲಿ 27 ರನ್ ಬೇಕು. ತಂಡದ ಪರ ಪೂರನ್ ಹಾಗೂ ಕೃನಾಲ್ ಪಾಂಡ್ಯ ಕ್ರೀಸ್​ನಲ್ಲಿದ್ದಾರೆ.

  • 24 Mar 2024 07:17 PM (IST)

    ಗುಜರಾತ್ ಟೈಟಾನ್ಸ್‌

    ಶುಭಮನ್ ಗಿಲ್ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಜ್ಮತುಲ್ಲಾ ಒಮರ್ಜಾಯ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಉಮೇಶ್ ಯಾದವ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಸ್ಪೆನ್ಸರ್ ಜಾನ್ಸನ್.

  • 24 Mar 2024 07:16 PM (IST)

    ಮುಂಬೈ ಇಂಡಿಯನ್ಸ್

    ರೋಹಿತ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ನಮನ್ ಧೀರ್, ಹಾರ್ದಿಕ್ ಪಾಂಡ್ಯ, ಟಿಮ್ ಡೇವಿಡ್, ಶಮ್ಸ್ ಮುಲಾನಿ, ಪಿಯೂಷ್ ಚಾವ್ಲಾ, ಜೆರಾಲ್ಡ್ ಕೋಟ್ಜಿ, ಜಸ್ಪ್ರೀತ್ ಬುಮ್ರಾ, ಲ್ಯೂಕ್ ವುಡ್.

  • 24 Mar 2024 07:03 PM (IST)

    ಇಬ್ಬರೂ ಹೊಸ ನಾಯಕರು

    ಐಪಿಎಲ್‌ನಲ್ಲಿ ಒಂದು ಕಡೆ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ಗೆ ನಾಯಕರಾಗಿದ್ದರೆ, ಮತ್ತೊಂದೆಡೆ ಶುಭಮನ್ ಗಿಲ್ ಗುಜರಾತ್ ಟೈಟಾನ್ಸ್‌ಗೆ ಮೊದಲ ಬಾರಿಗೆ ನಾಯಕರಾಗಿದ್ದಾರೆ. ಪಂದ್ಯಾವಳಿಯನ್ನು ಗೆಲುವಿನೊಂದಿಗೆ ಪ್ರಾರಂಭಿಸಲು ಇಬ್ಬರೂ ನಾಯಕರು ಬಯಸುತ್ತಾರೆ.

  • 24 Mar 2024 07:01 PM (IST)

    ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ

    ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

  • Published On - Mar 24,2024 7:01 PM

    Follow us
    ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
    ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
    ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
    ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
    ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
    ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
    ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
    ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
    ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
    ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
    ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
    ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
    ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
    ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
    ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
    ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
    ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
    ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
    ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
    ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ