IPL 2022: ಐಪಿಎಲ್ನ 43ನೇ ಪಂದ್ಯದಲ್ಲಿ ಆರ್ಸಿಬಿ ಹಾಗೂ ಗುಜರಾತ್ ಟೈಟನ್ಸ್ (RCB vs GT) ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಉಭಯ ತಂಡಗಳು ಇದೇ ಮೊದಲ ಬಾರಿ ಆಡುತ್ತಿರುವ ಕಾರಣ ಯಾರು ಬಲಿಷ್ಠ ಎಂದು ಹೇಳಲಾಗುವುದಿಲ್ಲ. ಹೀಗಾಗಿ ಎರಡೂ ತಂಡಗಳು ಮೊದಲ ಮುಖಾಮುಖಿಯಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ. ಇನ್ನು ಈ ಪಂದ್ಯದಲ್ಲಿ ಏನೇ ಮಾಡಿದ್ರೂ ಅದು ವಿಶೇಷ ದಾಖಲೆಯಾಗಲಿದೆ. ಏಕೆಂದರೆ ಎರಡೂ ತಂಡಗಳು ಮೊದಲ ಬಾರಿಗೆ ಆಡುತ್ತಿರುವ ಕಾರಣ, ಗುಜರಾತ್ ಟೈಟನ್ಸ್ ವಿರುದ್ದ ಮೊದಲ ಶತಕ ಅಥವಾ ಅರ್ಧಶತಕ ಬಾರಿಸುವ ಆರ್ಸಿಬಿ ಆಟಗಾರ ಯಾರು, ಹಾಗೆಯೇ ಬೌಲಿಂಗ್ನಲ್ಲಿ ದಾಖಲೆ ಬರೆಯುವ ಬೌಲರ್ ಯಾರು ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಆರ್ಸಿಬಿ ವಿರುದ್ದ ಗುಜರಾತ್ ಆಟಗಾರರು ಕೂಡ ಬ್ಯಾಟಿಂಗ್ ಮತ್ತು ಮೂಲಕ ಬೌಲಿಂಗ್ ಮೂಲಕ ದಾಖಲೆ ಬರೆಯಬಹುದು. ಹೀಗಾಗಿ ಈ ಪಂದ್ಯವು ಉಭಯ ತಂಡಗಳಿಗೂ ವಿಶೇಷ ಪಂದ್ಯವಾಗಿರಲಿದೆ.
ಇನ್ನು ಈ ಪಂದ್ಯಕ್ಕಾಗಿ ಗುಜರಾತ್ ಟೈಟನ್ಸ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ. ಯಶ್ ದಯಾಳ್ ಬದಲಿಗೆ ಪ್ರದೀಪ್ ಸಾಂಗ್ವಾನ್ ಹಾಗೂ ಅಭಿನವ್ ಮನೋಹರ್ ಜಾಗದಲ್ಲಿ ಸಾಯಿ ಸುದರ್ಶನ್ ಸ್ಥಾನ ಪಡೆದಿದ್ದಾರೆ. ಮತ್ತೊಂದೆಡೆ ಆರ್ಸಿಬಿ ತಂಡವು ಒಂದು ಬದಲಾವಣೆ ಮಾಡಿಕೊಂಡಿದೆ. ಅದರಂತೆ ಸುಯಶ್ ಪ್ರಭುದೇಸಾಯಿ ಬದಲಿಗೆ ಮಹಿಪಾಲ್ ಲೊಮ್ರೊರ್ ಅವಕಾಶ ಪಡೆದಿದ್ದಾರೆ.
ಆರ್ಸಿಬಿ ಪ್ಲೇಯಿಂಗ್ XI: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೊರ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್ವುಡ್, ಮೊಹಮ್ಮದ್ ಸಿರಾಜ್.
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ XI: ಶುಭಮನ್ ಗಿಲ್, ವೃದ್ಧಿಮಾನ್ ಸಹಾ, ಹಾರ್ದಿಕ್ ಪಾಂಡ್ಯ(ನಾಯಕ), ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಪ್ರದೀಪ್ ಸಾಂಗ್ವಾನ್, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.